ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Credit Card: ಕ್ರೆಡಿಟ್ ಕಾರ್ಡ್ ರದ್ದುಗೊಳಿಸುವ ಮುನ್ನ ಈ ಸಂಗತಿ ತಿಳಿದಿರಲಿ!

ಕ್ರೆಡಿಟ್ ಕಾರ್ಡ್ (Credit Card) ಮುಚ್ಚುವ ಮುನ್ನ ಖಾತೆಯನ್ನು ಸರಿಯಾಗಿ ಮುಚ್ಚುವುದು ಬಹುಮುಖ್ಯ. ಇದನ್ನು ಖಚಿತಪಡಿಸಿಕೊಳ್ಳಲು ಅನುಸರಿಸಬೇಕಾದ ಹಲವಾರು ಹಂತಗಳಿವೆ. ಇದನ್ನು ಪಾಲಿಸುವುದರಿಂದ ಯಾವುದೇ ಶುಲ್ಕ ಬೀಳುವುದಿಲ್ಲ. ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್ ಅನ್ನು ರದ್ದು ಮಾಡಬಾರದು. ಯಾಕೆಂದರೆ ಇದು ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಆರ್ಥಿಕ ತಜ್ಞರು.

ಕ್ರೆಡಿಟ್ ಕಾರ್ಡ್ (Credit Card) ರದ್ದುಗೊಳಿಸಬೇಕು ಎಂದು ಯೋಚಿಸುತ್ತಿದ್ದರೆ ಅದನ್ನು ಕತ್ತರಿಸಿ ಬಿಸಾಡುವುದು ಸುಲಭ ದಾರಿಯಲ್ಲ ಎಂಬುದು ತಿಳಿದಿರಲಿ. ಕ್ರೆಡಿಟ್ ಕಾರ್ಡ್ ರದ್ದುಗೊಳಿಸುವ (Closing a credit card) ಮೊದಲು ಅದನ್ನು ಹೇಗೆ ರದ್ದುಗೊಳಿಸುವುದು, ಖಾತೆಯನ್ನು ಹೇಗೆ ಸರಿಯಾಗಿ ಮುಚ್ಚುವುದು ಎಂಬುದನ್ನು ತಿಳಿದುಕೊಂಡಿರಬೇಕು.
ಕ್ರೆಡಿಟ್ ಕಾರ್ಡ್ ಮುಚ್ಚುವ (cancel a credit card) ಮುನ್ನ ಖಾತೆಯನ್ನು ಸರಿಯಾಗಿ ಮುಚ್ಚುವುದು ಬಹುಮುಖ್ಯ. ಇದನ್ನು ಖಚಿತಪಡಿಸಿಕೊಳ್ಳಲು ಅನುಸರಿಸಬೇಕಾದ ಹಲವಾರು ಹಂತಗಳಿವೆ. ಇದನ್ನು ಪಾಲಿಸುವುದರಿಂದ ಯಾವುದೇ ಶುಲ್ಕ ಬೀಳುವುದಿಲ್ಲ. ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್ ಅನ್ನು ರದ್ದು ಮಾಡಬಾರದು. ಯಾಕೆಂದರೆ ಇದು ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಆರ್ಥಿಕ ತಜ್ಞರು.
ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್ ಅನ್ನು ರದ್ದು ಮಾಡುವುದರಿಂದ ಅದು ಕ್ರೆಡಿಟ್ ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದರೆ ಹೆಚ್ಚಿನ ವಾರ್ಷಿಕ ಶುಲ್ಕ ಅಥವಾ ಬಡ್ಡಿ ದರವನ್ನು ವಿಧಿಸಲಾಗುತ್ತಿದ್ದರೆ ಕ್ರೆಡಿಟ್ ಕಾರ್ಡ್ ಅನ್ನು ಮುಚ್ಚುವುದು ಒಳ್ಳೆಯದು. ಹಳೆಯ ಕ್ರೆಡಿಟ್ ಕಾರ್ಡ್ ಮುಚ್ಚುವ ಮೊದಲು ಅದರ ಕುರಿತು ಮೊದಲು ಮೌಲ್ಯಮಾಪನ ಮಾಡಿಕೊಳ್ಳಿ.
ಕ್ರೆಡಿಟ್ ಕಾರ್ಡ್‌ಗೆ ಯಾವುದೇ ವಾರ್ಷಿಕ ಶುಲ್ಕ ಇಲ್ಲದೇ ಇದ್ದರೆ ಅದನ್ನು ಇಟ್ಟುಕೊಳ್ಳಬಹುದು. ಇದರಿಂದ ಯಾವುದೇ ನಷ್ಟವಿಲ್ಲ. ಆದರೆ ಕಾರ್ಡ್‌ಗೆ ದುಬಾರಿ ಶುಲ್ಕ ವಿಧಿಸಲಾಗುತ್ತಿದ್ದರೆ ವಾರ್ಷಿಕ ಶುಲ್ಕವಿಲ್ಲದ ಕ್ರೆಡಿಟ್ ಕಾರ್ಡ್‌ಗೆ ಅದನ್ನು ಬದಲಾಯಿಸಿಕೊಳ್ಳಬಹುದಾದ ಅವಕಾಶವಿದೆ.ಒಂದು ವೇಳೆ ಕ್ರೆಡಿಟ್ ಕಾರ್ಡ್ ಅನ್ನು ರದ್ದುಗೊಳಿಸಲು ಬಯಸಿದರೆ ಕೆಲವೊಂದು ನಿಯಮವನ್ನು ಪಾಲಿಸುವುದು ಬಹುಮುಖ್ಯ.
ಬಾಕಿಯನ್ನು ಪಾವತಿಸಿ
ಕಾರ್ಡ್ ಅನ್ನು ರದ್ದುಗೊಳಿಸುವ ಮೊದಲು ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ಅನ್ನು ಪೂರ್ಣವಾಗಿ ಪಾವತಿಸಿ. ಬ್ಯಾಲೆನ್ಸ್‌ನೊಂದಿಗೆ ಖಾತೆಮುಚ್ಚಲು ಅವಕಾಶವಿದ್ದರೂ ಇದು ದುಬಾರಿ ಶುಲ್ಕ ಪಾವತಿಗೆ ಕಾರಣವಾಗಬಹುದು. ಹೀಗಾಗಿ ಕಾರ್ಡ್ ಮುಚ್ಚುವ ಮೊದಲು ವಿತರಕರು ಬ್ಯಾಲೆನ್ಸ್ ಅನ್ನು ಪೂರ್ಣವಾಗಿ ಪಾವತಿಸಲು ಶಿಫಾರಸು ಮಾಡುತ್ತಾರೆ. ಇದರಿಂದ ಬ್ಯಾಲೆನ್ಸ್‌ಗಳ ಮೇಲೆ ಯಾವುದೇ ಶುಲ್ಕ ಬೀಳುವುದಿಲ್ಲ.
ಕಾರ್ಡ್ ಅನ್ನು ಮುಚ್ಚುವ ಮೊದಲು ಬ್ಯಾಲೆನ್ಸ್ ವರ್ಗಾವಣೆಯನ್ನು ಪೂರ್ಣಗೊಳಿಸುವುದನ್ನು ನೀವು ಪರಿಗಣಿಸಬಹುದು. ಬ್ಯಾಲೆನ್ಸ್ ಅನ್ನು ಪಾವತಿಸಿದ ಅನಂತರ ಹೊಸ ಕಾರ್ಡ್‌ ಪಡೆಯುವುದು ಸುಲಭವಾಗುತ್ತದೆ. ಹಳೆಯ ಪಾವತಿಗಳು ಯಾವುದು ಕೂಡ ಇದರಲ್ಲಿ ಸೇರುವುದಿಲ್ಲ.
ರಿವಾರ್ಡ್‌ಗಳನ್ನು ವರ್ಗಾಯಿಸಿಕೊಳ್ಳಿ
ರಿವಾರ್ಡ್ ಕ್ರೆಡಿಟ್ ಕಾರ್ಡ್ ಅನ್ನು ರದ್ದುಗೊಳಿಸಿದರೆ ಖಾತೆಯನ್ನು ಮುಚ್ಚಿದಾಗ ಯಾವುದೇ ಬಳಕೆಯಾಗದ ಕ್ಯಾಶ್ ಬ್ಯಾಕ್, ಪಾಯಿಂಟ್‌ಗಳಿದ್ದರೆ ನಷ್ಟವಾಗಿ ಹೋಗಬಹುದು. ಹೀಗಾಗಿ ಖಾತೆಯನ್ನು ಮುಚ್ಚುವ ಮೊದಲು ರಿವಾರ್ಡ್‌ಗಳನ್ನು ರಿಡೀಮ್ ಮಾಡುವುದು ಅಥವಾ ವರ್ಗಾಯಿಸುವುದು ಒಳ್ಳೆಯದು. ಇದರಿಂದ ಗಳಿಸಿದ ಬಹುಮಾನಗಳನ್ನು ಕಳೆದುಕೊಳ್ಳುವುದಿಲ್ಲ.ಬ್ಯಾಂಕ್‌ಗೆ ಕರೆ ಮಾಡಿ
ಬ್ಯಾಲೆನ್ಸ್ ಅನ್ನು ನೀವು ಪಾವತಿಸಿದ ಬಳಿಕ, ರಿವಾರ್ಡ್ ಗಳನ್ನು ವರ್ಗಾಯಿಸಿದ ಬಳಿಕ ಕಾರ್ಡ್ ರದ್ದತಿ ಪ್ರಕ್ರಿಯೆಯನ್ನು ಪ್ರಾರಂಭಿಸುವ ಮೊದಲು ಒಮ್ಮೆ ಬ್ಯಾಂಕ್ ಪ್ರತಿನಿಧಿಯೊಂದಿಗೆ ಮಾತನಾಡಿ. ಇದಕ್ಕಾಗಿ ಕ್ರೆಡಿಟ್ ಕಾರ್ಡ್‌ನ ಹಿಂಭಾಗದಲ್ಲಿರುವ ಸಂಖ್ಯೆಗೆ ಕರೆ ಮಾಡಿ. ಖಾತೆಯನ್ನು ಮುಚ್ಚುವ ಮೊದಲು ಕಾರ್ಡ್ ನಲ್ಲಿ ಯಾವುದೇ ಬ್ಯಾಲೆನ್ಸ್ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಕಾರ್ಡ್ ರದ್ದು ಪತ್ರ ಕಳುಹಿಸಿ
ಬ್ಯಾಂಕ್ ಗೆ ಕರೆ ಮಾಡಿದ ಅನಂತರ ಕಾರ್ಡ್ ರದ್ದು ಪತ್ರವನ್ನು ಇ-ಮೇಲ್ ಮಾಡಿ. ಇದು ಪ್ರಮುಖ ಹಂತವಾಗಿದ್ದು ಇದನ್ನು ಕಡೆಗಣಿಸಬಾರದು. ಕ್ರೆಡಿಟ್ ಕಾರ್ಡ್ ಅನ್ನು ಮುಚ್ಚುವ ಬಯಕೆಯನ್ನು ಕಾರ್ಡ್ ವಿತರಕರಿಗೆ ಸಂಕ್ಷಿಪ್ತ ಪತ್ರದ ಮೂಲಕ ತಿಳಿಸಿ. ಇದರಲ್ಲಿ ಯಾವ ಖಾತೆ, ನಿಮ್ಮ ಹೆಸರು, ವಿಳಾಸ, ಫೋನ್ ಸಂಖ್ಯೆ ಮೊದಲಾದ ವಿವರಗಳು ಇರಲಿ. ಅಲ್ಲದೇ ಬ್ಯಾಂಕ್ ನಿಂದ ದೃಢೀಕರಣ ಪತ್ರವನ್ನು ಪಡೆಯಿರಿ.
ಕ್ರೆಡಿಟ್ ವರದಿಯನ್ನು ಪರಿಶೀಲಿಸಿ
ಕಾರ್ಡ್ ರದ್ದು ಪ್ರಕ್ರಿಯೆ ಒಂದು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಇದಕ್ಕಾಗಿ ತಾಳ್ಮೆಯಿಂದಿರಿ. ಕ್ರೆಡಿಟ್ ವರದಿಯಲ್ಲಿ ಖಾತೆ ಮುಚ್ಚಿದೆ ಎಂದು ತಿಳಿದ ಬಳಿಕ ಅದಕ್ಕೆ ಕಾರಣವನ್ನು ಪರಿಶೀಲಿಸಿ.
ಇದನ್ನೂ ಓದಿ: Gold Price Today: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ; ಇಂದಿನ ರೇಟ್‌ ಚೆಕ್‌ ಮಾಡಿ
ಹಳೆಯ ಕಾರ್ಡ್ ನಾಶಮಾಡಿ
ಕ್ರೆಡಿಟ್ ಕಾರ್ಡ್ ಖಾತೆ ಮುಚ್ಚಿದ ಬಳಿಕ ಕಾರ್ಡ್ ಅನ್ನು ನಾಶಪಡಿಸಬಹುದು. ಇದನ್ನು ಮಾಡಲು ಸರಳವಾದ ಮಾರ್ಗವೆಂದರೆ ಕಾರ್ಡ್ ಸಣ್ಣ ತುಂಡುಗಳಾಗಿ ಕತ್ತರಿಸಬಹುದು. ಕಾರ್ಡ್ ಅನ್ನು ಪ್ಲಾಸ್ಟಿಕ್ ಬದಲಿಗೆ ಲೋಹದಿಂದ ಮಾಡಿದ್ದರೆ ಬ್ಯಾಂಕ್ ಅನ್ನು ಸಂಪರ್ಕಿಸಿ, ಬ್ಯಾಂಕ್ ಗೆ ಒಪ್ಪಿಸಿ. ಬ್ಯಾಂಕ್ ಅದನ್ನು ಸುರಕ್ಷಿತವಾಗಿ ವಿಲೇವಾರಿ ಮಾಡುತ್ತದೆ.