ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Cristiano Ronaldo: ರೊನಾಲ್ಡೊ ಮೊದಲ ಬಾರಿ ಭಾರತಕ್ಕೆ ಭೇಟಿ ಸಾಧ್ಯತೆ; ಅಭಿಮಾನಿಗಳಲ್ಲಿ ಕಾತರ

ಮೆಸ್ಸಿ ಡಿ.13ರಿಂದ ಡಿ.15ರವರೆಗೆ ಮೆಸ್ಸಿ ಕೋಲ್ಕತಾ, ಅಹಮದಾಬಾದ್‌, ಮುಂಬೈ ಹಾಗೂ ನವದೆಹಲಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಇದು 2011ರ ಬಳಿಕ ಮೆಸ್ಸಿಯ ಭಾರತದ ಮೊದಲ ಭೇಟಿಯಾಗಿರಲಿದೆ. ಡಿ.15ರಂದು ಮೆಸ್ಸಿ, ಪ್ರಧಾನಿ ನರೇಂದ್ರ ಮೋದಿಯನ್ನು ಅವರ ನಿವಾಸದಲ್ಲೇ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.

ನವದೆಹಲಿ: ಅರ್ಜೆಂಟೀನಾದ ಸ್ಟಾರ್‌ ಫುಟ್ಬಾಲ್‌ ಆಟಗಾರ ಲಿಯೋನಲ್‌ ಮೆಸ್ಸಿ(Lionel Messi) ಭಾರತಕ್ಕೆ ಆಗಮಿಸುವುದು ಈಗಾಗಲೇ ಖಚಿತವಾಗಿದೆ. ಇದೀಗ ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್‌ ಆಟಗಾರ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ(Cristiano Ronaldo) ಕೂಡ ಭಾರತಕ್ಕೆ ಆಗಮಿಸುವುದು ಖಚಿತವಾಗಿದ್ದು, ರೊನಾಲ್ಡೊ ಕೂಡಾ ಭಾರತದಲ್ಲಿ ಫುಟ್ಬಾಲ್‌ ಆಡುವ ನಿರೀಕ್ಷೆಯಿದೆ.

ರೊನಾಲ್ಡೊ ಇದೇ ಮೊದಲ ಬಾರಿ ಭಾರತಕ್ಕೆ ಆಗಮಿಸಿ, ಫುಟ್ಬಾಲ್‌ ಆಡುವ ನಿರೀಕ್ಷೆಯಿದೆ. ಎಎಫ್‌ಸಿ ಚಾಂಪಿಯನ್ಸ್‌ ಲೀಗ್‌ 2 ಫುಟ್ಬಾಲ್‌ ಟೂರ್ನಿಯ ಡ್ರಾ ಬಿಡುಗಡೆಗೊಂಡಿದ್ದು ಇದರಲ್ಲಿ ರೊನಾಲ್ಡೊ ತಂಡ ಅಲ್‌ ನಸ್ರ್‌ ಹಾಗೂ ಭಾರತದ ಎಫ್‌ಸಿ ಗೋವಾ ತಂಡಗಳು ಒಂದೇ ಗುಂಪಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ.

ಲೀಗ್‌ನಲ್ಲಿ ಪ್ರತಿ ತಂಡ ತನ್ನ ತವರಿನಲ್ಲಿ ಒಂದು ಪಂದ್ಯ, ಎದುರಾಳಿ ಕ್ಲಬ್‌ನ ತವರಿನಲ್ಲಿ ಒಂದ್ಯ ಪಂದ್ಯವನ್ನಾಡಲಿವೆ. ಹೀಗಾಗಿ ಅಲ್‌ ನಸ್ರ್‌ ಭಾರತಕ್ಕೆ ಆಗಮಿಸಿ ಗೋವಾ ವಿರುದ್ಧ ಆಡಬೇಕಿದೆ. ಆದರೆ ಈ ಪಂದ್ಯದಲ್ಲಿ ರೊನಾಲ್ಡೊ ಆಡಲಿದ್ದಾರೊ ಇಲ್ಲವೊ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಟೂರ್ನಿ ಸೆ.16ರಿಂದ ಡಿ.10ರ ವರೆಗೆ ನಡೆಯಲಿದೆ. ಮೂಲಗಳ ಪ್ರಕಾರ ರೊನಾಲ್ಡೊ ಕೂಡ ಭಾಗಿಯಾಗಲಿದಾರೆ ಎನ್ನಲಾಗಿದೆ.

ಮೆಸ್ಸಿ ಡಿ.13ರಿಂದ ಡಿ.15ರವರೆಗೆ ಮೆಸ್ಸಿ ಕೋಲ್ಕತಾ, ಅಹಮದಾಬಾದ್‌, ಮುಂಬೈ ಹಾಗೂ ನವದೆಹಲಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಇದು 2011ರ ಬಳಿಕ ಮೆಸ್ಸಿಯ ಭಾರತದ ಮೊದಲ ಭೇಟಿಯಾಗಿರಲಿದೆ. ಡಿ.15ರಂದು ಮೆಸ್ಸಿ, ಪ್ರಧಾನಿ ನರೇಂದ್ರ ಮೋದಿಯನ್ನು ಅವರ ನಿವಾಸದಲ್ಲೇ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಮೋದಿ ಜೊತೆ ಔತಣ ಕೂಟದಲ್ಲೂ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಇದನ್ನೂ ಓದಿ ವಿಶ್ವದ ಫುಟ್ಬಾಲ್‌ ಸ್ಟಾರ್‌ ಲಿಯೊನೆಲ್‌ ಮೆಸ್ಸಿಯ ಭಾರತದ ಪ್ರವಾಸಕ್ಕೆ ಗ್ರೀನ್‌ ಸಿಗ್ನಲ್‌!