Cult Movie: ದೂರು ಹಿಂಪಡೆದ ಡ್ರೋನ್ ತಂತ್ರಜ್ಞ, ಝೈದ್ ಖಾನ್ ನಟನೆಯ ಕಲ್ಟ್ ಸಿನಿಮಾ ಶೂಟಿಂಗ್ ನಿರಾತಂಕ
Cult Movie: ದೂರು ಹಿಂಪಡೆದ ಡ್ರೋನ್ ತಂತ್ರಜ್ಞ, ಝೈದ್ ಖಾನ್ ನಟನೆಯ ಕಲ್ಟ್ ಸಿನಿಮಾ ಶೂಟಿಂಗ್ ನಿರಾತಂಕ
ಹರೀಶ್ ಕೇರ
Dec 8, 2024 11:46 AM
ಬೆಂಗಳೂರು: ಶೂಟಿಂಗ್ (Film Shooting) ವೇಳೆ ಡ್ಯಾಮೇಜ್ ಆದ ಬಾಡಿಗೆ ಡ್ರೋನ್ ನಷ್ಟ ತುಂಬಿಕೊಡದ ʼಕಲ್ಟ್ʼ ಸಿನಿಮಾ (Cult movie) ತಂಡದ ವಿರುದ್ಧ ದೂರು ನೀಡಿದ್ದ ಹಾಗೂ ಆತ್ಮಹತ್ಯೆಗೆ (Self harming) ಯತ್ನಿಸಿದ್ದ ಡ್ರೋನ್ ಟೆಕ್ನಿಶಿಯನ್ (Drone Technician) ಇದೀಗ ದೂರು ಹಿಂಪಡೆದಿದ್ದಾರೆ. ಮಾತುಕತೆಯ ಮೂಲಕ ವಿವಾದ ಪರಿಹರಿಸಿಕೊಳ್ಳಲಾಗಿದ್ದು. ಝೈದ್ ಖಾನ್ (Zaid Khan) ನಟನೆಯ ಫಿಲಂ ಶೂಟಿಂಗ್ ನಿರಾತಂಕವಾಗಿದೆ.
ಕಲ್ಟ್ ಸಿನಿಮಾ ನಿರ್ಮಾಣ ಇತ್ತೀಚೆಗೆ ವಿವಾದಕ್ಕೆ ಸಿಲುಕಿಕೊಂಡಿತ್ತು. ಚಿತ್ರದ ಶೂಟಿಂಗ್ ವೇಳೆ ಬಾಡಿಗೆ ಪಡೆದ ಡ್ರೋನ್ ಸಂಪೂರ್ಣ ಡ್ಯಾಮೇಜ್ ಆಗಿತ್ತು. ಇದಕ್ಕೆ ಚಿತ್ರತಂಡ ಯಾವುದೇ ನಷ್ಟ ಪರಿಹಾರ ನೀಡದ ಕಾರಣ ಟೆಕ್ನಿಶಿಯನ್ ಸಂತೋಷ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದರು. ಹೀಗಾಗಿ ಕಲ್ಟ್ ಚಿತ್ರತಂಡ ವಿರುದ್ದ ಪ್ರಕರಣ ದಾಖಲಾಗಿತ್ತು. ಇದೀಗ ಕಲ್ಟ್ ಚಿತ್ರತಂಡ ಟೆಕ್ನಿಶಿಯನ್‌ಗೆ ನಷ್ಟ ಪರಿಹಾರ ನೀಡಿದ್ದು, ಸಂತೋಷ್ ದೂರು ವಾಪಸ್ ಪಡೆದಿದ್ದಾರೆ.
ವಕ್ಫ್ ಸಚಿವ ಜಮೀರ್ ಅಹಮ್ಮದ್ ಖಾನ್ ಅವರ ಪುತ್ರ ಝೈದ್ ಖಾನ್ ಅವರು ಕಲ್ಟ್ ಚಿತ್ರದ ಹೀರೋ ಆಗಿದ್ದಾರೆ. ಈಗಾಗಲೇ ಬನಾರಸ್ ಚಿತ್ರದ ಮೂಲಕ ನಾಯಕ ನಟನಾಗಿ ಗುರುತಿಸಿಕೊಂಡಿದ್ದಾರೆ. ಕರ್ನಾಟಕದ ಹಲವು ಭಾಗದಲ್ಲಿ ಕಲ್ಟ್ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಚಿತ್ರದುರ್ಗದಲ್ಲಿ ಶೂಟಿಂಗ್ ನಡೆಯುತ್ತಿದ್ದ ವೇಳೆ ಡ್ರೋನ್ ಡ್ಯಾಮೇಜ್ ಆಗಿತ್ತು.
ಚಿತ್ರದುರ್ಗದಲ್ಲಿನ ಭಾರಿ ಗಾಳಿ ನಡುವೆ ಡ್ರೋನ್ ಹಾರಿಸಲು ಚಿತ್ರತಂಡ ತಾಕೀತು ಮಾಡಿದೆ. ಬಾಡಿಗೆ ಪಡೆದು ಡ್ರೋನ್ ಪಡೆದಿದ್ದೇವೆ. ಇಲ್ಲಿ ಚಿತ್ರದ ಶೂಟಿಂಗ್ ಮಾಡಬೇಕಿದೆ. ಹೀಗಾಗಿ ಎತ್ತರಕ್ಕೆ ಡ್ರೋನ್ ಹಾರಿಸುವಂತೆ ಸಂತೋಷ್‌ಗೆ ಕಲ್ಟ್ ಚಿತ್ರತಂಡ ಎಚ್ಚರಿಸಿದೆ. ಅನಿವಾರ್ಯವಾಗಿ ಸಂತೋಷ್ ಭಾರಿ ಗಾಳಿ ನಡುವೆ ಡ್ರೋನ್ ಹಾರಿಸಿದ್ದಾರೆ. ಆದರೆ ಕೆಲವೇ ಹೊತ್ತಲ್ಲಿ ಡ್ರೋನ್ ಡ್ಯಾಮೇಜ್ ಆಗಿದೆ. ಕಲ್ಲು ಬಂಡೆಗಳಿಗೆ ಬಡಿದು ಡ್ರೋನ್ ಸಂಪೂರ್ಣವಾಗಿ ಹಾಳಾಗಿದೆ.
ಬರೋಬ್ಬರಿ 25 ಲಕ್ಷ ರೂಪಾಯಿ ಮೌಲ್ಯದ ಡ್ರೋನ್ ಕೆಲವೇ ನಿಮಿಷಗಳಲ್ಲಿ ಹಾಳಗಿದೆ. ಶೂಟಿಂಗ್ ಸೆಟ್‌ನಲ್ಲಿ ಗಳಗಳನೇ ಅತ್ತ ಸಂತೋಷ್, ಇಷ್ಟು ದೊಡ್ಡ ಮೊತ್ತದ ಹಾನಿ ಭರಿಸಲು ತನ್ನಲ್ಲಿ ಶಕ್ತಿ ಇಲ್ಲ ಎಂದಿದ್ದಾನೆ. ಇಷ್ಟೇ ಅಲ್ಲ ಚಿತ್ರತಂಡ ನಷ್ಟ ಭರಿಸುವಂತೆ ಮನವಿ ಮಾಡಿದ್ದಾನೆ. ಆದರೆ ಕಲ್ಟ್ ಚಿತ್ರತಂಡ ಇದಕ್ಕೆ ಸೊಪ್ಪು ಹಾಕಿಲ್ಲ. ನಾವು ಡ್ರೋನ್ ಬಾಡಿಗೆ ಪಡೆದಿದ್ದೇನೆ. ಡ್ರೋನ್ ಆಪರೇಟ್ ಕೂಡ ಮಾಡಿಲ್ಲ. ಹೀಗಾಗಿ ನಷ್ಟ ಭರಿಸುವ ಪ್ರಮೇಯ ಕಲ್ಟ್ ಚಿತ್ರತಂಡದ ಮುಂದಿಲ್ಲ ಎಂದಿದ್ದಾರೆ.
25 ಲಕ್ಷ ರೂಪಾಯಿ ಬಂಡವಾಳದ ಡ್ರೋನ್ ಡ್ಯಾಮೇಜ್ ಆದ ಕಾರಣ ಸಂತೋಷ್ ಕಂಗಾಲಾಗಿದ್ದಾರೆ. ಹೀಗಾಗಿ ಸಂತೋಷ್ ಬದುಕು ಅಂತ್ಯಗೊಳಿಸಲು ಪ್ರಯತ್ನಿಸಿದ್ದ. ಆದರೆ ಅದೃಷ್ಠವಶಾತ್ ಬಚಾವ್ ಆಗಿದ್ದ. ಇತ್ತ ಘಟನೆ ಗಂಭೀರವಾಗುತ್ತಿದ್ದಂತೆ ಪೊಲೀಸರು ರಂಗ ಪ್ರವೇಶಿಸಿದ್ದಾರೆ. ಕಲ್ಟ್ ಚಿತ್ರ ನಿರ್ದೇಶಕನ ವಿರುದ್ದ ಹಾಗೂ ನಾಯಕ ನಟ ಝೈದ್ ಖಾನ್ ವಿರುದ್ದ ಪ್ರಕರಣ ದಾಖಲಾಗಿತ್ತು. ಈ ಘಟನೆ ಹೊರಬರುತ್ತಿದ್ದಂತೆ ಸಚಿವ ಜಮೀರ್ ಅಹಮ್ಮದ್ ಮಾಧ್ಯಮಗಳಲ್ಲಿ ಸ್ಪಷ್ಟನೆ ನೀಡಿದ್ದರು. ತಾನು ಹಾಗೂ ಪುತ್ರ ಝೈದ್ ಖಾನ್ ಸಂತೋಷ್‌ಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು. ಇದರಿಂತ ಇದೀಗ ಪರಿಹಾರದ ಚೆಕ್‌ನ್ನು ಸಂತೋಷ್‌ಗೆ ಚಿತ್ರತಂಡ ಹಸ್ತಾಂತರಿಸಿದೆ. ಇದರ ಬೆನ್ನಲ್ಲೇ ಸಂತೋಷ್ ಕಲ್ಟ್ ವಿರುದ್ದ ದಾಖಲಿಸಿದ್ದ ದೂರನ್ನು ಹಿಂಪಡೆದಿದ್ದಾರೆ.
ಚಿತ್ರತಂಡ ಈ ಕುರಿತು ಸಂತಸ ಹಂಚಿಕೊಂಡಿದ್ದು, ಕೆಲ ಸಮಸ್ಯೆಗಳ ಕಾರಣ ಪರಿಹಾರ ಬಿಡುಗಡೆ ವಿಳಂಬವಾಗಿದೆ. ಝೈದ್ ಖಾನ್ ಹಾಗೂ ಜಮೀರ್ ಅಹಮ್ಮದ್ ಖಾನ್ ನೆರವಿನಿಂದ ಪರಿಹಾರ ನೀಡಲಾಗಿದೆ. ಇದೀಗ ಚಿತ್ರತಂದ ಶೂಟಿಂಗ್‌ನಲ್ಲಿ ತೊಡಗಿಸಿದೆ. ಶೀಘ್ರದಲ್ಲೇ ಚಿತ್ರದ ಶೂಟಿಂಗ್ ಪೂರ್ಣಗೊಳ್ಳಲಿದೆ. ಬಳಿಕ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ನಡೆಯಲಿದೆ ಎಂದಿದೆ.
ಇದನ್ನೂ ಓದಿ: Cult Movie: ಸಚಿವ ಜಮೀರ್ ಪುತ್ರನ ʼಕಲ್ಟ್ʼ ಫಿಲಂ ಡ್ರೋನ್ ತಂತ್ರಜ್ಞ ಆತ್ಮಹತ್ಯೆ ಯತ್ನ, ಚಿತ್ರತಂಡದ ಮೇಲೆ ದೂರು ದಾಖಲು