ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಡಿಕೆಶಿ ಸಿಎಂ ಆಗಿರುವುದನ್ನು ಸಹಿಸಲಾಗದೇ ಬಿಡದಿ ಟೌನ್‌ಶಿಪ್‌ಗೆ ಜೆಡಿಎಸ್, ಬಿಜೆಪಿ ನಾಯಕರ ವಿರೋಧ: ಶಾಸಕ ಬಾಲಕೃಷ್ಣ ಕಿಡಿ

ಡಿಕೆಶಿ ಸಿಎಂ ಆಗಿರುವುದನ್ನು ಬಿಜೆಪಿ, ಜೆಡಿಎಸ್ ನಾಯಕರಿಗೆ ಸಹಿಸಲಾಗುತ್ತಿಲ್ಲ

ಬಿಜೆಪಿ ನಾಯಕರ ನಿಯೋಗ ಬಿಡದಿಗೆ ಭೇಟಿ ನೀಡಿ ಬಿಡದಿ ಟೌನ್ ಶಿಪ್ ವಿರುದ್ಧ ಹೋರಾಟ ಮಾಡಿರುವ ಬಗ್ಗೆ ಮಾಗಡಿ ಶಾಸಕ ಎಚ್‌.ಸಿ.ಬಾಲಕೃಷ್ಣ ಪ್ರತಿಕ್ರಿಯಿಸಿದ್ದಾರೆ. ಟೌನ್ ಶಿಪ್ ಯೋಜನೆಯನ್ನು ಡಿ.ಕೆ. ಶಿವಕುಮಾರ್ ಸಿಎಂ ಆದ ಬಳಿಕ ಕೈಗೊಂಡ ಯೋಜನೆಯಲ್ಲ. ಈ ವಿಚಾರವಾಗಿ ವಿಜಯೇಂದ್ರ ಅವರ ಜೊತೆಗೆ ಚರ್ಚೆ ಮಾಡಲು ನಾನು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.

American Red Globe grapes: ಅಮೆರಿಕನ್ ರೆಡ್ ಗ್ಲೋಬ್ ದ್ರಾಕ್ಷಿ ಬೆಳೆದು ಗಮನ ಸೆಳೆದ ಚಿಕ್ಕಬಳ್ಳಾಪುರ ರೈತ

ಸಾಂಪ್ರದಾಯಿಕ ಬೆಳೆಗಳ ನಡುವೆ ರೆಡ್ ಗ್ಲೋಬ್ ಸಂಚಲನ

ಕೆ.ಆರ್.ರೆಡ್ಡಿ ಅವರು ಆಧುನಿಕ ಕೃಷಿ ತಂತ್ರಜ್ಞಾನ, ಹನಿ ನೀರಾವರಿ ವ್ಯವಸ್ಥೆ, ಸಮರ್ಪಕ ಗೊಬ್ಬರ ನಿರ್ವಹಣೆ ಹಾಗೂ ವೈಜ್ಞಾನಿಕ ಕಟಾವು ಪದ್ಧತಿಗಳನ್ನು ಅಳವಡಿಸಿಕೊಂಡು ಗುಣಮಟ್ಟದ ದ್ರಾಕ್ಷಿ ಉತ್ಪಾದನೆಗೆ ಒತ್ತು ನೀಡಿದ್ದಾರೆ. ಇದರ ಫಲವಾಗಿ ತೋಟದಲ್ಲಿ ಬೆಳೆದಿರುವ ದ್ರಾಕ್ಷಿ ಗೊಂಚಲುಗಳು ಉತ್ತಮ ಗಾತ್ರ ಮತ್ತು ಗುಣಮಟ್ಟದಿಂದ ಗಮನ ಸೆಳೆಯುತ್ತಿವೆ

ಪಂಚ ದ್ರಾವಿಡ ಕವಿ ಸಂಗಮವು ಸಾಹಿತ್ಯ, ಭಾಷಾ ಸೌಹಾರ್ದತೆಗೆ ಹೊಸ ದಿಕ್ಕು ನೀಡುವ ವೇದಿಕೆ: ಎಚ್. ಡುಂಡಿರಾಜ್

ಪಂಚ ದ್ರಾವಿಡ ಕವಿ ಸಂಗಮ, ತೊದಲ್ನುಡಿ ವಾರ್ಷಿಕ ಸಂಚಿಕೆ ಬಿಡುಗಡೆ

Bengaluru News: ಬೆಂಗಳೂರಿನ ವೈಟ್‌ಫೀಲ್ಡ್‌ನ ಶ್ರೀ ಸರಸ್ವತಿ ಎಜುಕೇಶನ್ ಟ್ರಸ್ಟ್‌ನಲ್ಲಿ ಬುಧವಾರ ಪಂಚ ದ್ರಾವಿಡ ಕವಿ ಸಂಗಮ ಹಾಗೂ ತೊದಲ್ನುಡಿಯ 13ನೇ ವಾರ್ಷಿಕ ಸಂಚಿಕೆ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ದ್ರಾವಿಡ ಭಾಷಾ ಟ್ರಾನ್ಸ್‌ಲೇಟರ್ಸ್ ಅಸೋಸಿಯೇಷನ್ (DBTA) ಹಾಗೂ ತೊದಲ್ನುಡಿ ಕನ್ನಡ ಮಕ್ಕಳ ಸಾಹಿತ್ಯ ಮಾಸಪತ್ರಿಕೆಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

Scholarship Scheme: ಪ್ರತಿ ವಿದ್ಯಾರ್ಥಿಗೆ 5000 ; ಜೂ.27ರಂದು ವಿದ್ಯಾರ್ಥಿವೇತನ ವಿತರಣೆ : ಡಾ.ಕೆ.ಸುಧಾಕರ್

ಡಾ.ಕೆ.ಸುಧಾಕರ್ ಫೌಂಡೇಶನ್‌ನಿಂದ ಜ್ಞಾನಸುಧಾ ವಿದ್ಯಾರ್ಥಿವೇತನ ಯೋಜನೆ

ಡಾ.ಕೆ.ಸುಧಾಕರ್ ಫೌಂಡೇಶನ್ ಮತ್ತು ಶ್ರೀ ಸಾಯಿಕೃಷ್ಣ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಜೂ.27 ರಂದು ನಾಡಪ್ರಭು ಕೆಂಪೇಗೌಡ ಜಯಂತಿಯ ದಿನದಂದು ಸಂಜೆ 4 ಗಂಟೆಗೆ ಹೂ ಮಾರುಕಟ್ಟೆಯ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ವಿದ್ಯಾರ್ಥಿಗಳಿಗೆ 'ಜ್ಞಾನಸುಧಾ' ಹೆಸರಿನಲ್ಲಿ ವಿದ್ಯಾರ್ಥಿವೇತನ ವಿತರಿಸಲಾಗುತ್ತಿದೆ ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ʼಹಸಿರು ಹೈಡ್ರೋಜನ್ ಪ್ರಮಾಣೀಕರಣ ಪೋರ್ಟಲ್ʼ ಆರಂಭ; ದೆಹಲಿಯಲ್ಲಿ ಸಚಿವ ಪ್ರಲ್ಹಾದ್‌ ಜೋಶಿ ಚಾಲನೆ

ʼಹಸಿರು ಹೈಡ್ರೋಜನ್ ಪ್ರಮಾಣೀಕರಣ ಪೋರ್ಟಲ್ʼ ಆರಂಭ

Pralhad Joshi: MNRE ಅಭಿವೃದ್ಧಿಪಡಿಸಿದ ʼಹಸಿರು ಹೈಡ್ರೋಜನ್ ಪ್ರಮಾಣೀಕರಣ ಪೋರ್ಟಲ್ʼ ಭಾರತದ ಹಸಿರು ಹೈಡ್ರೋಜನ್ ಪ್ರಮಾಣೀಕರಣ ಯೋಜನೆಯಡಿ ಪಾರದರ್ಶಕ, ಪ್ರಮಾಣೀಕರಣ ಮತ್ತು ನಿಯಂತ್ರಣವನ್ನು ಸುಗಮಗೊಳಿಸುತ್ತದೆ. ಇದಕ್ಕೆ ಅನುಗುಣವಾಗಿ ಈಗಾಗಲೇ 6 ರಾಜ್ಯಗಳು ಹಸಿರು ಹೈಡ್ರೋಜನ್ ನೀತಿಗಳನ್ನು ಪ್ರಕಟಿಸಿವೆ.

MP Dr K Sudhakar: ಚಿಕ್ಕಬಳ್ಳಾಪುರದಲ್ಲಿ ನಬಾರ್ಡ್ ಬ್ಯಾಂಕ್ ಶಾಖೆ ಉದ್ಘಾಟಿಸಿದ ಸಂಸದ ಡಾ.ಕೆ.ಸುಧಾಕರ್

ನಬಾರ್ಡ್ ಬ್ಯಾಂಕ್ ಶಾಖೆ ಉದ್ಘಾಟಿಸಿದ ಸಂಸದ ಡಾ.ಕೆ.ಸುಧಾಕರ್

ಮಹಿಳೆಯರ ಸಬಲೀಕರಣ, ಸ್ತ್ರೀ ಶಕ್ತಿ ಸಂಘಗಳು, ಸಣ್ಣ ಮಧ್ಯಮ ರೈತರು, ಬೀದಿ ಬದಿ ವ್ಯಾಪಾರಿ ಗಳು ಹಾಗೂ ಆಹಾರ ಸಂಸ್ಕರಣಾ ಘಟಕಗಳಿಗೆ ಅನುಕೂಲವಾಗಲಿದೆ. ಜಿಲ್ಲೆಯ ರೈತರು ನಬಾರ್ಡ್ ಬ್ಯಾಂಕ್ ನ ಪ್ರಯೋಜನ ಪಡೆಯಬೇಕು. ನಬಾರ್ಡ್ ನಿಂದ ಕೃಷಿ ಮತ್ತಿತರ ಚಟುವಟಿಕೆಗಳಿಗೆ ಅತಿಕಡಿಮೆ ಬಡ್ಡಿದರದಲ್ಲಿ ಸಾಲಸೌಲಭ್ಯ ದೊರೆಯಲಿದೆ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ಬೀದಿ ನಾಟಕದ ಮೂಲಕ ನೀರು ನೈರ್ಮಲ್ಯದ ಬಗ್ಗೆ ಜಾನ ಜಾಗೃತಿ

ಬೀದಿ ನಾಟಕದ ಮೂಲಕ ನೀರು ನೈರ್ಮಲ್ಯದ ಬಗ್ಗೆ ಜಾನ ಜಾಗೃತಿ

ತಾಲೂಕಿನ ತೊಂಡೆಬಾವಿ ಹೋಬಳಿಯ ಅಲ್ಲಿಪುರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದ ವತಿಯಿಂದ ಬೀದಿ ನಾಟಕ ಕಾರ್ಯಕ್ರಮವನ್ನು ನೆರವೇರಿಸ ಲಾಯಿತು. ಬೀದಿ ನಾಟಕವನ್ನು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ನಾಗರತ್ನಮ್ಮ ಹಾಗೂ ವೈದ್ಯರಾದ ಡಾ.ಮಮತಾ ಅವರುಗಳು ತಮಟೆ ಬಾರಿಸುವ ಮೂಲಕ ಬೀದಿ ನಾಟಕಕ್ಕೆ ಚಾಲನೆ ನೀಡಿದರು.

KIADB: ಜಿಲ್ಲೆಯಲ್ಲಿ ಬಂಧನ ಖಂಡಿಸಿ ಬೀದಿಗಿಳಿದ ಕೋಡಿಹಳ್ಳಿ ಚಂದ್ರಶೇಖರ್ ಬಣದ ರೈತರು

ಕೆಐಎಡಿಬಿ ಭೂ-ಸ್ವಾಧೀನ ಚರ್ಚೆಗೆ ತೆರಳಿದ್ದ ರೈತ ಸಂಘದ ಮುಖಂಡರ ಬಂಧನ

ನಮ್ಮ ರಾಜ್ಯ ನಾಯಕರಾದ ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಭಕ್ತರಹಳ್ಳಿ ಬೈರೇಗೌಡರನ್ನು ಕೂಡಲೇ ಬಿಡುಗಡೆ ಮಾಡಬೇಕು. ನಮ್ಮ ನಾಯಕರನ್ನು ಬಿಡುಗಡೆ ಮಾಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ರೈತರ ಹಕ್ಕುಗಳಿ ಗಾಗಿ ನಡೆಸುತ್ತಿರುವ ಹೋರಾಟವನ್ನು ಯಾವುದೇ ಕಾರಣಕ್ಕೂ ಹತ್ತಿಕ್ಕಲು ಸಾಧ್ಯವಿಲ್ಲ

Shidlaghatta News: ದೇವಾಲಯಗಳ ಅಭಿವೃದ್ಧಿಗೆ ಆದ್ಯತೆ: ಅರ್ಚಕರ ಸಮಸ್ಯೆಗಳಿಗೆ ಹಂತ ಹಂತವಾಗಿ ಪರಿಹಾರ: ತಹಶೀಲ್ದಾರ್ ಗಗನ ಸಿಂಧು

ಅರ್ಚಕರ ಸಮಸ್ಯೆಗಳಿಗೆ ಹಂತ ಹಂತವಾಗಿ ಪರಿಹಾರ

ನಗರದ ಕೋಟೆ ವೃತ್ತದಲ್ಲಿರುವ ಶ್ರೀ ಸೋಮೇಶ್ವರಸ್ವಾಮಿ ದೇವಾಲಯದಲ್ಲಿ ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ–ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದ ಶಿಡ್ಲಘಟ್ಟ ತಾಲ್ಲೂಕು ಶಾಖೆ ವತಿಯಿಂದ ಆಯೋಜಿಸಿದ್ದ ಮುಜರಾಯಿ ಇಲಾಖೆಯ ದೇವಾಲಯಗಳ ಅರ್ಚಕರು ಹಾಗೂ ಪುರೋಹಿತರ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು

ತಾತಯ್ಯನವರು ತಪಸ್ಸನ್ನು ಆಚರಿಸಿ ಪಡೆದ ಜ್ಞಾನವನ್ನು ಮಾನವರಿಗೆ ತತ್ವಬೋಧನೆಯ ರೂಪದಲ್ಲಿ ಧಾರೆಯೆರೆದಿದ್ದಾರೆ : ಡಾ.ಎಂ.ಆರ್.ಜಯರಾಮ್

ಕೈವಾರದಲ್ಲಿ ತಾತಯ್ಯನವರ 191ನೇ ಆರಾಧನಾ ಮಹೋತ್ಸವ

ವಿಶ್ವವು ಇಂದು ಭಯಂಕರವಾದ ಅನೇಕ ಗಂಡಾಂತರಗಳನ್ನು ಎದುರಿಸುತ್ತಿದೆ. ರಾಷ್ಟ್ರಗಳ ನಡುವೆ ವೈಷಮ್ಯ, ಭಯಂಕರ ಯುದ್ಧಗಳು ಸಂಭವಿಸುತ್ತಿದೆ. ನೈತಿಕ ಪತನದಿಂದಾಗಿ ಮಾನವರಲ್ಲಿ ಕ್ರೌರ್ಯ, ನಿರ್ದಯೆ ತಾಂಡವವಾಡುತ್ತಿದೆ. ವಿನಾಶದ ಅಂಚಿನಲ್ಲಿರುವ ಈ ವಿಶ್ವವು ಮಾನವ ರೂಪಿನಲ್ಲಿರುವ ದೈತ್ಯದ ದುರ್ಬುದ್ಧಿಯಿಂದ ನಿರ್ಣಾಮವಾಗಿ ಬಿಡುವುದೋ ಎಂಬ ಭೀತಿಯಿಂದ ಇಡೀ ವಿಶ್ವದ ಪ್ರಜೆಗಳು ತಲ್ಲಣಿಸುತ್ತಿದ್ದಾರೆ

ಚಿಕ್ಕಬಳ್ಳಾಪುರ ಜಿಲ್ಲಾಡಳಿತವನ್ನು ತರಾಟೆಗೆ ತೆಗೆದುಕೊಂಡ ಸಂಸದ ಡಾ.ಕೆ.ಸುಧಾಕರ್, ನಬಾರ್ಡ್ ಕಾರ್ಯಕ್ರಮಕ್ಕೆ ಅಧಿಕಾರಿಗಳು ಗೈರಾಗಿದ್ದಕ್ಕೆ ತೀವ್ರ ಖಂಡನೆ

ಬೇಜವಾಬ್ದಾರಿ ತೋರಿದ ಜಿಲ್ಲಾಡಳಿತದ ಅಧಿಕಾರಿಗಳು, ನಾಚಿಕೆಗೇಡು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನೂತನವಾಗಿ ನಿರ್ಮಾಣವಾದ ನಬಾರ್ಡ್ ಶಾಖೆಯ ಉದ್ಘಾಟನಾ ಸಮಾ ರಂಭದಲ್ಲಿ ಸಂಸದ ಡಾ.ಕೆ.ಸುಧಾಕರ್ ಜಿಲ್ಲಾಡಳಿತದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಾರ್ಯಕ್ರಮಕ್ಕೆ ಹೆಚ್ಚಿನ ಪ್ರಚಾರ ನೀಡದಿರುವುದು ಹಾಗೂ ಜಿಲ್ಲಾಡಳಿತದ ವತಿಯಿಂದ ಅಧಿಕಾರಿಗಳು ಭಾಗವಹಿಸದೇ ಇರುವುದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದರು.

Dharwad News: ಪಿಎಚ್‌ಡಿ ವಿದ್ಯಾರ್ಥಿನಿ ಜತೆ ಅನೈತಿಕ ಸಂಬಂಧ; ಕರ್ನಾಟಕ ವಿವಿ ಪ್ರೊ. ದೇವರಾಜನ್ ತಂಗುದೊರೈ ಅಮಾನತು

ಅನೈತಿಕ ಸಂಬಂಧ; ಕರ್ನಾಟಕ ವಿವಿ ಪ್ರೊ. ದೇವರಾಜನ್ ತಂಗುದೊರೈ ಅಮಾನತು

ಪಿಎಚ್‌ಡಿ ಕೊಡಿಸುವ ಆಮಿಷ ತೋರಿ ಸಂಶೋಧನಾ ವಿದ್ಯಾರ್ಥಿನಿಯನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡ ಆರೋಪ ಕರ್ನಾಟಕ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ದೇವರಾಜನ್ ತಂಗುದೊರೈ ವಿರುದ್ಧ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ವಿವಿ ಆಡಳಿತ ಶಿಸ್ತುಕ್ರಮ ಕೈಗೊಂಡಿದೆ.

Belgaum News: ಗೊಡಚಿಯಲ್ಲಿ ಪರಿಸರ ಜಾಗೃತಿ ಶಿಬಿರ: 50 ಗಿಡಗಳ ವಿತರಣೆ

ಗೊಡಚಿಯಲ್ಲಿ ಪರಿಸರ ಜಾಗೃತಿ ಶಿಬಿರ: 50 ಗಿಡಗಳ ವಿತರಣೆ

ಗಿಡ ನೆಡುವುದು, ಸಾವಯವ ಕೃಷಿ ಅಳವಡಿಸಿಕೊಳ್ಳುವುದು, ಮನೆ ತೋಟ ಬೆಳೆಸುವುದು, ಸಾರ್ವಜನಿಕ ಸಾರಿಗೆ ಬಳಕೆ, ವಾಹನಗಳ ಮಾಲಿನ್ಯ ನಿಯಂತ್ರಣ ಹಾಗೂ ಶಬ್ದ ಮಾಲಿನ್ಯ ತಡೆಗಟ್ಟುವ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. “ಇಂದು ನಾವು ಪರಿಸರವನ್ನು ರಕ್ಷಿಸಿದರೆ, ನಾಳೆ ಪರಿಸರ ನಮ್ಮನ್ನು ರಕ್ಷಿಸುತ್ತದೆ

ವಂಡರ್‌ ಲಾದಲ್ಲಿ ಮಜಾ ಮಾಡುತ್ತಿರುವ ಕಾಂಗ್ರೆಸ್ ಶಾಸಕರೇ ಒಮ್ಮೆ ಬನ್ನಿಗಿರಿ ನೋಡಲು ಬನ್ನಿ: ನಿಖಿಲ್ ಕುಮಾರಸ್ವಾಮಿ

ರೈತರನ್ನು ಸಿಎಂ ಡಿಕೆಶಿ ಸಂಪೂರ್ಣವಾಗಿ ಕಡೆಗಣಿಸಿದ್ದಾರೆ: ನಿಖಿಲ್

Nikhil Kumaraswamy: 'ಇಂಟಿಗ್ರೇಟೆಡ್ ಟೌನ್‌ಶಿಪ್' ಹೆಸರಿನಲ್ಲಿ ಬಡವರ ಭೂಮಿಯನ್ನು ರಿಯಲ್ ಎಸ್ಟೇಟ್ ದಂಧೆಗೆ ಒಪ್ಪಿಸಿ, 'ಪ್ರೀಮಿಯಂ' ಹೆಸರಿನಲ್ಲಿ ಬರೋಬ್ಬರಿ ₹33,562 ಕೋಟಿ ಆದಾಯ ಲೂಟಿ ಮಾಡಲು ನಡೆಸುತ್ತಿರುವ ಸಂಚುʼ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದ್ದಾರೆ.

MLC Election: ನಾಳೆ ವಿಧಾನ ಪರಿಷತ್‌ ಚುನಾವಣೆ; ಕ್ರಾಸ್‌ ವೋಟಿಂಗ್‌ ಭೀತಿ ಹಿನ್ನೆಲೆ ಸಿಎಂ ಡಿಕೆಶಿ ನೇತೃತ್ವದಲ್ಲಿ ಅಣಕು ಮತದಾನ

ನಾಳೆ ಎಂಎಲ್‌ಸಿ ಚುನಾವಣೆ ಹಿನ್ನೆಲೆ ಡಿಕೆಶಿ ನೇತೃತ್ವದಲ್ಲಿ ಅಣಕು ಮತದಾನ

ವಿಧಾನಸಭೆಯಿಂದ ವಿಧಾನಪರಿಷತ್‌ನ ಏಳು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ 5 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಬಿಜೆಪಿ 2 ಹಾಗೂ ಜೆಡಿಎಸ್ ಓರ್ವ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್‌ನ ನಾಲ್ವರು ಹಾಗೂ ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಸರಾಗವಾಗಿ ಗೆಲುವು ಸಾಧಿಸಲಿದ್ದಾರೆ. ಆದರೆ ಏಳನೇ ಸ್ಥಾನಕ್ಕೆ ಜಟಾಪಟಿ ಶುರುವಾಗಿದೆ.

Mango prices drop: ಮಾವು ಬೆಲೆ ಕುಸಿತ; ರೈತರ ನೆರವಿಗೆ ಧಾವಿಸಲು ಕೇಂದ್ರ ಕೃಷಿ ಸಚಿವರಿಗೆ ಎಚ್‍.ಡಿ.ಕುಮಾರಸ್ವಾಮಿ ಪತ್ರ

ಮಾವು ಬೆಲೆ ಕುಸಿತ; ರೈತರ ನೆರವಿಗೆ ಧಾವಿಸಲು ಕೇಂದ್ರಕ್ಕೆ ಎಚ್‌ಡಿಕೆ ಮನವಿ

ಕರ್ನಾಟಕವು ಅತಿಹೆಚ್ಚು ಮಾವು ಬೆಳೆಯುವ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ. ಪ್ರಸಕ್ತ ಋತುವಿನಲ್ಲಿ ಸುಮಾರು 10 ಲಕ್ಷ ಮೆಟ್ರಿಕ್ ಟನ್ ಮಾವು ಬೆಳೆಯಲಾಗಿದೆ. ಆದರೆ, ಬೆಲೆ ಕುಸಿತ ಹಾಗೂ ಪ್ರತಿಕೂಲಕರ ಹವಾಮಾನದಿಂದ ರೈತರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ರೈತರ ನೆರವಿಗೆ ಧಾವಿಸಬೇಕು ಎಂದು ಎಚ್‌.ಡಿ.ಕುಮಾರಸ್ವಾಮಿ ಅವರು ಕೇಂದ್ರ ಕೃಷಿ ಸಚಿವರ ಗಮನ ಸೆಳೆದಿದ್ದಾರೆ.

U T Khader: ಆಂಧ್ರದಲ್ಲಿಯೂ ಯು.ಟಿ.ಖಾದರ್ ಖದರ್

U T Khader: ಆಂಧ್ರದಲ್ಲಿಯೂ ಯು.ಟಿ.ಖಾದರ್ ಖದರ್

ಕಾರ್ಯಕ್ರಮ ಸ್ಥಳಕ್ಕೆ ಆಗಮಿಸಿದ ಸಚಿವರನ್ನು ಸ್ಥಳೀಯ ಮುಖಂಡರು, ಸಾಮಾಜಿಕ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಅಭಿಮಾನಿಗಳು ಹೂಗುಚ್ಛ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು. ಕರ್ನಾಟಕದಲ್ಲಿ ಜನಸ್ನೇಹಿ ನಾಯಕನಾಗಿ ಗುರುತಿಸಿಕೊಂಡಿರುವ ಯು.ಟಿ. ಖಾದರ್ ಅವರಿಗೆ ಆಂಧ್ರ ಪ್ರದೇಶದಲ್ಲಿಯೂ ಉತ್ತಮ ಅಭಿಮಾನಿ ಬಳಗವಿರುವುದು ಈ ಸಂದರ್ಭದಲ್ಲಿ ಮತ್ತೊಮ್ಮೆ ಸಾಬೀತಾಯಿತು.

ಗುಂಡ್ಲುಪೇಟೆಯಲ್ಲಿ ಗ್ರೈಂಡರ್‌ನಿಂದ ವಿದ್ಯುತ್‌ ಹರಿದು 4 ವರ್ಷದ ಮಗು ಸಾವು

ಗ್ರೈಂಡರ್‌ನಿಂದ ವಿದ್ಯುತ್‌ ಹರಿದು 4 ವರ್ಷದ ಮಗು ಸಾವು

Chamarajanagar News: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಲೀಗೌಡನಹಳ್ಳಿಯಲ್ಲಿ ಘಟನೆ ನಡೆದಿದೆ. ಆಟವಾಡುತ್ತಿದ್ದ ಬಾಲಕಿ ನೀರು ಕುಡಿಯಲು ಅಡುಗೆ ಮನೆಗೆ ಹೋಗಿದ್ದಾಳೆ. ಈ ವೇಳೆ ಗ್ರೈಂಡರ್‌ನಿಂದ ವಿದ್ಯುತ್ ಹರಿದು ಬಾಲಕಿ ಮೃತಪಟ್ಟಿದ್ದಾಳೆ. ಘಟನೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಸತತ ಮೂರು ಬಾರಿ ಗರ್ಭಪಾತದ ಬಳಿಕ ಜನಿಸಿದ್ದ 0.6 ಕೆಜಿ ಶಿಶುವಿನ ಯಶಸ್ವಿ ಆರೈಕೆ

ಮೂರು ಬಾರಿ ಗರ್ಭಪಾತ: 0.6 ಕೆಜಿ ಶಿಶುವಿನ ಯಶಸ್ವಿ ಆರೈಕೆ

ಜನನದ ವೇಳೆ 0.6 ಕೆಜಿ ತೂಕವಿದ್ದ ಮಗು ಈಗ 1.6 ಕೆಜಿ ತೂಕ ಹೊಂದಿದ್ದು, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಮಹಿಳೆ ಸ್ಪರ್ಶ್‌ ಆಸ್ಪತ್ರೆಗೆ ಬಂದಾಗ, ತಾಯಿ ಮತ್ತು ಮಗುವಿನ ಜೀವಕ್ಕೂ ಅಪಾಯ ಉಂಟಾಗಬಹುದಾದ ಗಂಭೀರ ಆರೋಗ್ಯ ಸ್ಥಿತಿ ಪತ್ತೆಯಾಯಿತು. ಅವರು ದೀರ್ಘಕಾಲದ ಸ್ವಯಂಪ್ರತಿರೋಧಕ ಕಾಯಿಲೆಯಾದ ಸಿಸ್ಟಮಿಕ್‌ ಲೂಪಸ್‌ ಎರಿಥೆಮಾಟೋಸಸ್‌ (ಎಸ್‌ಎಲ್‌ಇ) ಮತ್ತು ಇಮ್ಯೂನ್‌ ಥ್ರೋಬೋ ಸೈಟೋಪೆನಿಕ್‌ ಪರ್ಪುರಾ (ಐಟಿಪಿ) ಸಮಸ್ಯೆಯಿಂದ ಬಳಲುತ್ತಿದ್ದರು

ಬಿಡದಿ ಟೌನ್‍ಶಿಫ್; ಗೂಂಡಾಗಳನ್ನು ಬಿಟ್ಟು ರೈತರನ್ನು ಬೆದರಿಸಬೇಡಿ ಎಂದು ಬಿ.ವೈ. ವಿಜಯೇಂದ್ರ ಕಿಡಿ

ಬಿಡದಿ ಟೌನ್‍ಶಿಪ್; ಸರ್ಕಾರ ರಾಜಕೀಯ ಮಾಡುವುದು ಬೇಡ: ಬಿವೈವಿ

BY Vijayendra: ರಾತ್ರೋ ರಾತ್ರಿ ಗೂಂಡಗಳು ಮನೆಗಳಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಕೆಲವು ರೈತರು ಹೇಳಿದ್ದಾರೆ. ಆದರೆ ನಮ್ಮ ಪ್ರಾಣ ಕೊಡ್ತೇವೆ ಜಮೀನು ಬಿಟ್ಟು ಕೊಡಲ್ಲ ಎಂದು ರೈತರು ಹೇಳಿದ್ದಾರೆ. ಅನ್ನಕೊಡುವ ರೈತರ ಪರವಾಗಿ ನಿಲ್ಲಬೇಕಾದ ಮುಖ್ಯಮಂತ್ರಿಗಳು ರಿಯಲ್ ಎಸ್ಟೇಟ್ ಪರವಾಗಿ ಇದ್ದಾರೆ. ಸರ್ಕಾರ ಯಾವುದೇ ಕಾರಣಕ್ಕೂ ರೈತರ ಜತೆ ಚೆಲ್ಲಾಟ ಮಾಡಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

ಬಿಡದಿ ಟೌನ್‌ಶಿಪ್‌ಗೆ ಬಲವಂತವಾಗಿ ರೈತರ ಜಮೀನು ಸ್ವಾಧೀನ: ವಿಜಯೇಂದ್ರ ಆಕ್ರೋಶ

ರಾಜ್ಯ ಸರ್ಕಾರದ ಆದ್ಯತೆ ರಿಯಲ್ ಎಸ್ಟೇಟ್ ಹೊರತು ರೈತರಲ್ಲ: ಬಿವೈವಿ

B.Y. Vijayendra: ಡಿ.ಕೆ. ಶಿವಕುಮಾರ್ ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ತಮ್ಮ ಸರ್ಕಾರದ ಆದ್ಯತೆ ರಿಯಲ್ ಎಸ್ಟೇಟ್ ಎಂಬುದನ್ನು ತೋರಿಸಿದ್ದಾರೆ. ಈ ಸರ್ಕಾರಕ್ಕೆ ರೈತರ ಮೇಲೆ ಕಾಳಜಿಯಿಲ್ಲ. ಬಿಡದಿಯಲ್ಲಿ ಟೌನ್‍ಶಿಪ್ ಮಾಡಲು ಮುಂದಾಗಿರುವ ಸರ್ಕಾರ ಬಲಾತ್ಕಾರವಾಗಿ, ಅಕ್ರಮವಾಗಿ ರೈತರ ಜಮೀನು ಕಸಿಯಲು ಮುಂದಾಗಿದೆ. ಇದನ್ನು ಬಿಜೆಪಿ ವಿರೋಧಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

ಜೀವ ಬೆದರಿಕೆ ಹಿನ್ನೆಲೆ ಶ್ರೀ ಪ್ರಣವಾನಂದರಾಮ್ ಸ್ವಾಮೀಜಿಗೆ ಭದ್ರತೆ ನೀಡಿ: ಸ್ವಾಮೀಜಿಗಳಿಂದ ಸಿಎಂಗೆ ಮನವಿ

ಶ್ರೀ ಪ್ರಣವಾನಂದರಾಮ್ ಸ್ವಾಮೀಜಿಗೆ ಭದ್ರತೆ ನೀಡಲು ಸಿಎಂಗೆ ಮನವಿ

ಶ್ರೀ ಪ್ರಣಾವಾನಂದರಾಮ್ ಮಹಾಸ್ವಾಮಿಗಳು ಈಡಿಗ ಹಾಗೂ ಹಿಂದುಳಿದ ಸಮಾಜಕ್ಕೆ ಆಗಿರುವ ಅನ್ಯಾಯಗಳ ಬಗ್ಗೆ ಗೋಕರ್ಣದಲ್ಲಿ ನಡೆದ ಸಮಾಜ ಸಭೆಯಲ್ಲಿ ಧ್ವನಿ ಎತ್ತಿದ್ದರು. ಹೀಗಾಗಿ ಸ್ವಾಮೀಜಿಗೆ ಜೀವ ಬೆದರಿಕೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಭದ್ರತೆ ಒದಗಿಸಬೇಕು ಎಂದು ವಿವಿಧ ಸ್ವಾಮೀಜಿಗಳು ಮನವಿ ಮಾಡಿದ್ದಾರೆ.

ಸಿಎಂ ಆದ ಮೇಲೂ ಆತ ಬ್ಲೂ ಫಿಲ್ಮ್ ‌ಮಾಡಿಸುವುದು, ಪೋಸ್ಟರ್ ಅಂಟಿಸುವುದು ಬಿಟ್ಟಿಲ್ಲ: ಡಿಕೆಶಿ ವಿರುದ್ಧ ಎಚ್‌ಡಿಕೆ ಆಕ್ರೋಶ

ಸಿಎಂ ಆದ ಮೇಲೆಯೂ ಹಳೇ ಚಾಳಿ ಬಿಟ್ಟಿಲ್ಲ: ಡಿಕೆಶಿ ವಿರುದ್ಧ ಎಚ್‌ಡಿಕೆ ಆಕ್ರೋಶ

HD Kumaraswamy: ನನ್ನ ಬದುಕು ತೆರೆದ ಪುಸ್ತಕ. ನನ್ನ ಬಗ್ಗೆ ನನ್ನ ಕಾರ್ಯಕರ್ತರಿಗೆ, ಜನತೆಗೆ ಗೊತ್ತು. ಇಂತಹ ಬೆದರಿಕೆ, ಅಪಪ್ರಚಾರಕ್ಕೆ ಹೆದರುವ ಪ್ರಶ್ನೆ ಇಲ್ಲ. ಈ ಪೋಸ್ಟರ್‌ಗಳಿಗೆ ಬೆದರುವ ಪ್ರಶ್ನೆಯೇ ಇಲ್ಲ. ಜನರಿಗಾಗಿ, ರೈತರಿಗಾಗಿ ನಮ್ಮ ಪಕ್ಷದ ಹೋರಾಟ ಮುಂದುವರಿಯುತ್ತದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

Actor Prakash raj: ಮಾಸ್ಕ್‌ ಮ್ಯಾನ್‌ ಚಿನ್ನಯ್ಯ ನನಗೆ ಫೋನ್‌ ಮಾಡಿದ್ದು ನಿಜ: ಧರ್ಮಸ್ಥಳ ಕೇಸ್‌ ಬಗ್ಗೆ ನಟ ಪ್ರಕಾಶ್‌ ರಾಜ್‌ ಸ್ಪಷ್ಟನೆ

ಮಾಸ್ಕ್‌ ಮ್ಯಾನ್‌ ಚಿನ್ನಯ್ಯ ನನಗೆ ಫೋನ್‌ ಮಾಡಿದ್ದು ನಿಜ: ಪ್ರಕಾಶ್‌ ರಾಜ್‌

ಧರ್ಮಸ್ಥಳ ಪ್ರಕರಣದ ಮಾಸ್ಕ್‌ ಮ್ಯಾನ್‌ ಚಿನ್ನಯ್ಯ ನನಗೆ ಫೋನ್‌ ಮಾಡಿದ್ದು ನಿಜ. ಆತ ನನ್ನನ್ನು ಭೇಟಿಯಾಗಬೇಕು ಎಂದು ಕೇಳಿದ್ದ. ಆದರೆ, ನಾನು ನಿರಾಕರಿಸಿದ್ದೆ. ಈ ಬಗ್ಗೆ ಎಸ್‌ಐಟಿಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೆ. ಈ ವಿವಾದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ನಟ ಪ್ರಕಾಶ್‌ ರಾಜ್‌ ತಿಳಿಸಿದ್ದಾರೆ.

Loading...