ಭೋಪಾಲ್: ಮಧ್ಯಪ್ರದೇಶದ ನರಸಿಂಗ್‌ಗಢ (ರಾಜ್‌ಗಢ)ದಲ್ಲಿ ಒಂದು ಅಪರೂಪದ ದುರ್ಘಟನೆಯೊಂದು ನಡೆದಿದೆ. ಸರಣಿ ಅತ್ಯಾಚಾರ ಹಾಗೂ ಹಲವು ಕೊಲೆಗಳಲ್ಲಿ ಭಾಗಿಯಾಗಿರುವ ಆರೋಪಿ ರಮೇಶ್ ಸಿಂಗ್ ರಾಜಾರೋಷವಾಗಿ ಓಡಾಡುತ್ತಿದ್ದಾನೆ. 10 ವರ್ಷ ಜೈಲು ಶಿಕ್ಷೆ ಅನುಭವಿಸಿದರೂ ಬುದ್ದಿ ಕಲಿಯದ ವಿಕೃತ ಮನಸಿನ ಆರೋಪಿ, ಮತ್ತೊಂದು ಅತ್ಯಾಚಾರ ನಡೆಸಿ ಮರಣ ದಂಡನೆ ಶಿಕ್ಷೆಗೂ ಗುರಿಯಾಗಿದ್ದ. ಆದರೆ ಅವನನ್ನು ನ್ಯಾಯಾಲವೇ ಮರಣ ದಂಡನೆ ಶಿಕ್ಷೆಯಿಂದ ಖುಲಾಸೆಗೊಳಿಸಿತ್ತು. ಇದೀಗ ಅವನಿಂದ ಮತ್ತೊಂದು ಕೊಲೆ ನಡೆದಿದ್ದು, ಹಲವು ದಿನಗಳ ಬಳಿಕ ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
2003ರಲ್ಲಿ ಶರ್ಜಾಪುರ್‌ರ ಜಿಲ್ಲೆಯ ಮುಬಾರಿಕ್‌ಪುರ ಗ್ರಾಮದಲ್ಲಿ 5 ವರ್ಷದ ಬಾಲಕಿಯನ್ನು ದಾಬ್ರಿಪುರ ನಿವಾಸಿ ರಮೇಶ್ ಸಿಂಗ್ ಅತ್ಯಾಚಾರ ಎಸಗಿದ್ದನು. ಅದರಂತೆ ಅಪರಾಧಿ ಎಂದು ಸಾಬೀತಾಗಿ ಆತನಿಗೆ 10 ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಲಾಗಿತ್ತು. 2013ರಲ್ಲಿ ಜೈಲಿನಿಂದ ಬಿಡುಗಡೆಯಾದ ಬಳಿಕ ಅವನು ಮತ್ತೆ ಅದೇ ಪ್ರಕರಣವನ್ನು ಎಸಗಿದ್ದನು.
Chikkaballapur News: ಅಪರಾಧ ಪ್ರಕರಣಗಳ ಪತ್ತೆಗೆ ಸಾರ್ವಜನಿಕರ ಸಹಕಾರ ಅಗತ್ಯ : ಎಸ್ಪಿ.ಕುಶಲ್ ಚೌಕ್ಸೆ
2014ರಲ್ಲಿ ಸೆಹೋರ್‌ಮ ಆಸ್ತಾದಲ್ಲಿ 8 ವರ್ಷದ ಬಾಲಕಿಯನ್ನು ಅಹಪಹರಿಸಿ ಅತ್ಯಾಚಾರ ಎಸಗಿದ್ದ. ಈ ವೇಳೆ ನ್ಯಾಯಾಲಯ ಆವನಿಗೆ ಮರಣ ದಂಡನೆ ಶಿಕ್ಷೆಯನ್ನು ಆದೇಶಿಸಿತ್ತು. 2019 ರಲ್ಲಿ ಹೈಕೋರ್ಟ್ ತಾಂತ್ರಿಕ ಅಂಶಗಳ ಆಧಾರದ ಮೇಲೆ ಮರಣ ದಂಡನೆಯ ತೀರ್ಪನ್ನು ರದ್ದುಗೊಳಿಸಿತ್ತು. ಕೃತ್ಯ ನಡೆಸಿದ್ದ ಆರೋಪಿಯನ್ನು ಗುರುತು ಹಿಡಿಯುವ ಪೆರೇಡ್‌ನಲ್ಲಿ ಸಂತ್ರಸ್ತೆಯ ತಂದೆ ಹಾಜರಿದ್ದರು ಹಾಗೂ ಅವರ ಮೇಲೆ ಪ್ರಬಾವ ಬೀರಿರುವ ಸಾಧ್ಯತೆ ಇದೆ.
ಇದರಿಂದ ಮತ್ತೆ ಖುಲಾಸೆಯಾಗಿದ್ದ ರಮೇಶ್ ಸಿಂಗ್, ಮತೊಂದು ಮುಗ್ದ ಮಗುವನ್ನು ಬಲಿ ಪಡೆಯಿತು. ಫೆಬ್ರವರಿ 1-2 ರಂದು ನರಸಿಂಗ್‌ಗಢದ ಮನೆಯಲ್ಲಿ 11 ವರ್ಷದ ಬಾಲಕಿ ನಾಪತ್ತೆಯಾಗಿದ್ದಳು. ಮರುದಿನ ಬೆಳಗ್ಗೆ ಬಾಲಕಿ ಪೊದೆಯಲ್ಲಿ ಪತ್ತೆಯಾಗಿದ್ದಳು ಮತ್ತು ಆಕೆಯ ದೇಹದಲ್ಲಿ ಹಲವು ಗಾಯಗಳು ಕಾಣಿಸಿಕೊಂಡಿದ್ದವು. ಆಕೆಯ ಮೇಲೆ ಹಲ್ಲೆ ನಡೆದಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿತು. ಆಕೆಯ ಆರೋಗ್ಯ ಸ್ಥಿತಿ ಹದಗೆಟ್ಟಾಗ, ಭೋಪಾಲ್‌ನ ಹಮೀದಿಯಾ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಕಾರಣ ಆಕೆ ಫೆಬ್ರವರಿ 8 ರಂದು ಮೃತಪಟ್ಟಿದ್ದಳು.
Goa Murder Case: ವಿದೇಶಿ ಯುವತಿ ಮೇಲೆ ಅತ್ಯಾಚಾರ-ಕೊಲೆ; ವ್ಯಕ್ತಿಗೆ ಜೀವಾವಧಿ ಶಿಕ್ಷೆ
ಈ ದುರ್ಘಟನೆ ನಡೆದ ಬಳಿಕ ಪ್ರಕರಣಕ್ಕೆ ತನಿಖೆ ನಡೆಸಿದ್ದ ಪೊಲೀಸರು, 46 ವಿವಿಧ ಸ್ಥಳಗಳಲ್ಲಿ ಸಿಸಿ ಟಿವಿ ತುಣಕುಗಳನ್ನು ತೆಗೆದುಕೊಂಡಿದ್ದಾರೆ ಹಾಗೂ ಪರಿಶೀಲಿಸಿದ್ದಾರೆ. ಕೆಂಪು ಶಾಲ್ ಮತ್ತು ನೀಲಿ-ಕಪ್ಪು ಬಣ್ನದ ಶೂಗಳನ್ನು ಧರಿಸಿದ್ದ ದುರ್ಘಟನೆ ನಡೆದಿದ್ದ ಸ್ಥಳದಲ್ಲಿ ಕಾಣಿಸಿಕೊಂಡಿರುವುದು ಪತ್ತೆಯಾಗಿತ್ತು. ತಡವಾಗಿ ಈತನನ್ನು ರಮೇಶ್ ಸಿಂಗ್ ಎಂದು ಗುರುತಿಸಲಾಗಿತ್ತು. ಆತ ಕುರುವಾರ್‌ನಿಂದ ನರಸಿಂಗ್‌ಗಢಕ್ಕೆ ಪ್ರಯಾಣ ಬೆಳೆಸಿದ್ದರು ಎಂಬುದನ್ನು ಆಟೋ ಚಲಾಕ ಮಾಹಿತಿ ನೀಡಿದ್ದರು.
ನರಸಿಂಗ್‌ಗಢದಲ್ಲಿ ತಪ್ಪಿಸಿಕೊಂಡಿದ್ದ ರಮೇಶ್ ಸಿಂಗ್, ಮಹಾಕುಂಭ ಮೇಳದಲ್ಲಿ ಪುಣ್ಯ ಸ್ನಾನ ಮಾಡುವ ಸಲುವಾಗಿ ಪ್ರಯಾಗ್‌ರಾಜ್‌ಗೆ ತಲುಪಿದ್ದ. ನಂತರ ಜೈಪುರಕ್ಕೆ ರೈಲಿನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಾನೆ. 9 ಸ್ಟೇಷನ್ ಇನ್‌ಚಾರ್ಜಸ್‌ನ 16 ಪೊಲೀಸ್ ತಂಡಗಳು ಸೇರಿದಮತೆ 75 ಪೇದೆಗಳು ಈ ತನಿಖೆಯಲ್ಲಿ ಭಾಗಿಯಾಗಿದ್ದರು.
ರಮೇಶ್ ಸಿಂಗ್‌ನನ್ನು ಹಿಡಿಯಲು ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ ಎಂದು ರಾಜ್‌ಗಢ ಎಸ್‌ಪಿ ಆದಿತ್ಯ ಮಿಶ್ರಾ ತಿಳಿಸಿದ್ದಾರೆ. "ಸಾಕ್ಷ್ಯಗಳನ್ನು ಸಂಪೂರ್ಣವಾಗಿ ಪರಿಶೀಲಿಸಲಾಗುತ್ತಿದೆ. ಅವರ ಕಾರ್ಯವೈಖರಿಯನ್ನು ಗಮನದಲ್ಲಿಟ್ಟುಕೊಂಡು, ಅವರು ಯಾವುದೇ ಬಗೆಹರಿಯದ ಪ್ರಕರಣಗಳೊಂದಿಗೆ ಸಂಬಂಧ ಹೊಂದಿದ್ದಾರೆಯೇ ಎಂದು ನಿರ್ಧರಿಸಲು ನಾವು ಡಿಎನ್‌ಎ ಪ್ರೊಫೈಲಿಂಗ್ ಮತ್ತು ಕ್ರಾಸ್-ಮ್ಯಾಚಿಂಗ್ ಅನ್ನು ನಡೆಸುತ್ತಿದ್ದೇವೆ. ಅಗತ್ಯವಿರುವ ಕಡೆಗಳಲ್ಲಿ ಕ್ರಾಸ್-ರೆಫರೆನ್ಸಿಂಗ್ ಅನ್ನು ಸಹ ಮಾಡಲಾಗುತ್ತದೆ," ಎಂದು ಅವರು ಮಾಹಿತಿ ನೀಡಿದ್ದಾರೆ.