Chikkaballapur News: ಅಪರಾಧ ಪ್ರಕರಣಗಳ ಪತ್ತೆಗೆ ಸಾರ್ವಜನಿಕರ ಸಹಕಾರ ಅಗತ್ಯ : ಎಸ್ಪಿ.ಕುಶಲ್ ಚೌಕ್ಸೆ
ದೇವಾಲಯ, ಮನೆಗಳ್ಳತನ, ವಿಗ್ರಹಗಳ ಕಳ್ಳತನ, ನಗದು ಹಾಗೂ ವಾಹನ ಕಳ್ಳತನ, ಡಕಾಯಿತಿ, ದರೋ ಡೆ ಪ್ರಕರಣಗಳನ್ನು ಪತ್ತೆ ಹಚ್ಚುವ ಸಮಯದಲ್ಲಿ ಪೊಲೀಸರು ತಮ್ಮ ಪ್ರಾಣದ ಹಂಗನ್ನು ತೊರೆದು ಕೆಲಸ ಮಾಡಬೇಕಾಗುತ್ತದೆ. ಬಾಗೇಪಲ್ಲಿ ಠಾಣೆ ಪೊಲೀಸರು ಸೂಕ್ಷ್ಮ, ಅತಿ ಸೂಕ್ಷ್ಮ ಅಪರಾಧ ಪ್ರಕರಣ ಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿ ಚಿನ್ನಾಭರಣ, ಹಣ, ವಿಗ್ರಹಗಳನ್ನು ವಶಕ್ಕೆ ಪಡೆದುಕೊಂಡು ವಾರಸುದಾರರಿಗೆ ಹಿಂತಿರುಗಿಸುತ್ತಿರುವ ವಿಚಾರ ಅತ್ಯಂತ ಶ್ಲಾಘನೀಯವಾಗಿದೆ

ಬಾಗೇಪಲ್ಲಿ ಪೊಲೀಸ್ ಠಾಣಾವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉತ್ತಮ ಸೇವೆ ಸಲ್ಲಿಸಿರುವ ಪೊಲೀಸ್ ಪೇದೆಗಳನ್ನು ಪೊಲೀಸ್ ಅಧೀಕ್ಷಕ ಕುಶಾಲ್ ಚೌಕ್ಸೆ ಸನ್ಮಾನಿಸಿದರು.

ಬಾಗೇಪಲ್ಲಿ: ಅಪರಾಧ ಪ್ರಕರಣಗಳ ಪತ್ತೆ ಸಮಯದಲ್ಲಿ ಪೋಲಿಸರಿಗೆ ಸಾರ್ವಜನಿಕರು ಅಗತ್ಯ ಸಹಕಾರ ನೀಡಿದರೆ ಅಪರಾಧ ಪ್ರಕರಣಗಳನ್ನು ತಡೆಗಟ್ಟುವುದರ ಜತೆಗೆ ಪೊಲೀಸರ ಕಾರ್ಯಾ ಚರಣೆಗೆ ಜಯ ಸಿಗುತ್ತದೆ. ಆದ್ದರಿಂದ ಪೊಲೀಸರು ನಾಗರೀಕರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಜನಸ್ನೇಹಿ ಪೊಲೀಸರಾಗಿ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಕುಶಾಲ್ ಚೌಕ್ಸೆ ಕರೆ ನೀಡಿದರು. ಬಾಗೇಪಲ್ಲಿ ಪಟ್ಟಣದಲ್ಲಿರುವ ಬಾಗೇಪಲ್ಲಿ ಪೊಲೀಸ್ ಠಾಣಾ ಆವರಣದಲ್ಲಿ ಅಯೋ ಜಿಸಿದ್ದ ಉತ್ತಮ ಕಾರ್ಯ ನಿರ್ವಹಿಸಿದ ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಅಭಿನಂದನಾ ಸಮಾರಂಭ ಮತ್ತು ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ ಸ್ವತ್ತುಗಳನ್ನು ವಾರಸು ದಾರರಿಗೆ ಹಿಂತಿರುಗಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇವಾಲಯ, ಮನೆಗಳ್ಳತನ, ವಿಗ್ರಹಗಳ ಕಳ್ಳತನ, ನಗದು ಹಾಗೂ ವಾಹನ ಕಳ್ಳತನ, ಡಕಾಯಿತಿ, ದರೋಡೆ ಪ್ರಕರಣಗಳನ್ನು ಪತ್ತೆ ಹಚ್ಚುವ ಸಮಯದಲ್ಲಿ ಪೊಲೀಸರು ತಮ್ಮ ಪ್ರಾಣದ ಹಂಗನ್ನು ತೊರೆದು ಕೆಲಸ ಮಾಡಬೇಕಾಗುತ್ತದೆ. ಬಾಗೇಪಲ್ಲಿ ಠಾಣೆ ಪೊಲೀಸರು ಸೂಕ್ಷ್ಮ, ಅತಿ ಸೂಕ್ಷ್ಮ ಅಪ ರಾಧ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿ ಚಿನ್ನಾಭರಣ, ಹಣ, ವಿಗ್ರಹಗಳನ್ನು ವಶಕ್ಕೆ ಪಡೆದುಕೊಂಡು ವಾರಸುದಾರರಿಗೆ ಹಿಂತಿರುಗಿಸುತ್ತಿರುವ ವಿಚಾರ ಅತ್ಯಂತ ಶ್ಲಾಘನೀಯವಾಗಿದೆ.
ಇದನ್ನೂ ಓದಿ: Chikkaballapur News: ನಾಡು ನುಡಿ ರಕ್ಷಣೆ ಸ್ವಾಭಿಮಾನಿ ಕನ್ನಡಿಗರ ಆದ್ಯ ಕರ್ತವ್ಯ : ಕಾಂಗ್ರೆಸ್ ಮುಖಂಡ ಪುಟ್ಟು ಆಂಜಿನಪ್ಪ
ಪೊಲೀಸರು ಕಷ್ಟಪಟ್ಟು ಎಷ್ಟೋ ಅಪರಾಧ ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ಸಫಲರಾದರೂ ಕೃತ್ಯದಲ್ಲಿ ಬಾಗಿಯಾಗಿರುವ ಆರೋಪಿಗಳಿಗೆ ಕಾನೂನಿಯಡಿಯಲ್ಲಿ ಶಿಕ್ಷೆ ಕೊಡಿಸುವಲ್ಲಿ ವಿಫಲ ರಾಗಬೇಕಾಗುತ್ತದೆ. ಅದರೂ ಕೆಲವೇ ತಿಂಗಳಲ್ಲಿ 8ಕ್ಕೂ ಹೆಚ್ಚು ಸೂಕ್ಷö?? ಪ್ರಕರಣಗಳನ್ನು ಪತ್ತೆ ಹಚ್ಚಿ ಸ್ವತ್ತುಗಳನ್ನು ವಾರಸುದಾರರಿಗೆ ಒಪ್ಪಿಸುತ್ತಿರುವುದರಿಂದ ಸಾರ್ವಜನಿಕರಲ್ಲಿ ಪೊಲೀಸರ ಮೇಲೆ ಮತ್ತಷ್ಟು ನಂಬಿಕೆ, ವಿಶ್ವಾಸ ಹೆಚ್ಚಾಗಲಿದ್ದು, ಈ ಕಾರ್ಯವನ್ನು ಮುಂದುವರೆಸುವಂತೆ ಪೊಲೀಸ್ ಸಿಬ್ಬಂದಿಗೆ ಸೂಚಿಸಿ ಅಭಿನಂಧಿಸಿದರು.
ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಪ್ರಶಾಂತ್ ವರ್ಣಿ ಮಾತನಾಡಿ, ಬಾಗೇಪಲ್ಲಿ ಪೊಲೀಸ್ ಠಾಣಾವತಿ ಯಿಂದ ಅಯೋಜಿಸಿರುವ ಪೊಲೀಸ್ ಬೀಟ್ ವ್ಯವಸ್ಥೆ, ಪಟ್ಟಣ ಹಾಗೂ ಹೊರವಲಯದ ಪ್ರದೇಶ ಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಗಳ ನೆರವಿನಿಂದ 2024ನೇ ಸಾಲಿನಲ್ಲಿ ಅಪರಾಧ, ಕಳ್ಳತನ ಪ್ರಕರಣಗಳ ಪ್ರಮಾಣವನ್ನು ಸಾಧ್ಯವಾದಷ್ಟು ಕಡಿಮೆ ಮಾಡಲಾಗಿದೆ. ಅಪರಾಧ ಪ್ರಕರಣಗಳನ್ನು ಪತ್ತೆಹಚ್ಚಲು ಸಾರ್ವಜನಿಕರು ಪೊಲೀಸರಿಗೆ ಉತ್ತಮ ಸಹಕಾರ ನೀಡುತ್ತಿರುವುದರಿಂದ ಬಹುತೇಕ ಪ್ರಕರಣಗಳನ್ನು ಪತ್ತೆಹಚ್ಚಿಸಿ ಸ್ವತ್ತುಗಳನ್ನು ವಾರಸುದಾರರಿಗೆ ಒಪ್ಪಿಸುತ್ತಿದ್ದೇವೆಂದು ಠಾಣಾ ಸಿಬ್ಬಂದಿಯ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಅಪರಾಧ ಪ್ರಕರಣಗಳ ಪತ್ತೆ ಕಾರ್ಯಾಚರಣೆಗೆ ಸಹಕರಿಸಿರುವ ಸಾರ್ವ ಜನಿಕರನ್ನು, ಅನಾಥ ಶವ ಸಂಸ್ಕಾರ ಕಾರ್ಯಕ್ಕೆ ಸಹಕಾರ ನೀಡುವ ಶವಗಾರ ಮೇಲ್ವಿಚಾರಕ, ಪುರಸಭೆ ಪೌರ ಕಾರ್ಮಿಕ, ಪೊಲೀಸ್ ಪೇದೆಗಳನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಐ.ಖಾಸಿಂ, ಡಿವೈಎಸ್ಪಿ ಶಿವಕುಮಾರ್, ಗುಡಿಬಂಡೆ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ನಯಾಜ್ ಬೇಗ್, ಇನ್ಸ್ಪೆಕ್ಟರ್‌ಗಳಾದ ನಾಗಮ್ಮ, ಮುನಿರತ್ನಂ ಮತ್ತಿತರರು ಇದ್ದರು.