ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rudrappa Lamani: ರೇಡಿಂಗ್‌ ಮೂಲಕ ಕಬಡ್ಡಿ ಟೂರ್ನಿಗೆ ಚಾಲನೆ ನೀಡಲು ಹೋಗಿ ಬಿದ್ದ ಉಪ ಸಭಾಪತಿ; ಕಾಲಿಗೆ ಪೆಟ್ಟು

Rudrappa Lamani: ಸೇವಾಲಾಲ್‌ ಜಯಂತೋತ್ಸವದ ಕಬಡ್ಡಿ ಪಂದ್ಯಾವಳಿ ಚಾಲನೆಗೆ ತೆರಳಿದ್ದಂತ ಉಪ ಸಭಾಪತಿ ರುದ್ರಪ್ಪ ಲಮಾಣಿಯವರು ಸ್ವತಃ ರೇಡಿಂಗ್ ಮಾಡಿ ಚಾಲನೆ ನೀಡಲು ಹೋಗಿದ್ದಾರೆ. ಈ ವೇಳೆ ಆಯತಪ್ಪಿ ಬಿದ್ದಾಗ ಅವರ ಕಾಲಿಗೆ ಗಾಯವಾಗಿದೆ.

ಕಬಡ್ಡಿ ಆಡುವ ವೇಳೆ ಬಿದ್ದು ಉಪ ಸಭಾಪತಿ ಕಾಲಿಗೆ ಪೆಟ್ಟು

Profile Prabhakara R Feb 15, 2025 6:29 PM

ದಾವಣಗೆರೆ: ಕಬಡ್ಡಿ ಪಂದ್ಯಾವಳಿಗೆ ಸ್ವತಃ ರೇಡಿಂಗ್ ಮಾಡಿ ಚಾಲನೆ ನೀಡಲು ಹೋಗಿ ಆಯತಪ್ಪಿ ಬಿದ್ದು ಉಪ ಸಭಾಪತಿ ರುದ್ರಪ್ಪ ಲಮಾಣಿ (deputy speaker rudrappa lamani) ಗಾಯಗೊಂಡಿರುವ ಘಟನೆ ನಡೆದಿದೆ. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಸೂರಗೊಂಡನ ಕೊಪ್ಪದಲ್ಲಿ ಸೇವಾಲಾಲ್ ಜಯಂತೋತ್ಸವದ ಪ್ರಯುಕ್ತ ಕಬ್ಬಡಿ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.ಈ ಪಂದ್ಯಾವಳಿಗೆ ಚಾಲನೆ ನೀಡಲು ಉಪ ಸಭಾಪತಿ ಅವರನ್ನು ಆಹ್ವಾನಿಸಲಾಗಿತ್ತು. ಈ ವೇಳೆ ರೇಡಿಂಗ್ ಮಾಡುವ ಮೂಲಕ ಕಬಡ್ಡಿ ಪಂದ್ಯಾವಳಿ ಚಾಲನೆ ನೀಡಲು ಹೋಗಿ, ಆಯತಪ್ಪಿ ಬಿದ್ದಾಗ ಉಪ ಸಭಾಪತಿ ರುದ್ರಪ್ಪ ಲಮಾಣಿ ಅವರ ಕಾಲಿಗೆ ಗಾಯವಾಗಿದೆ.

ಸೇವಾಲಾಲ್‌ ಜಯಂತೋತ್ಸವದ ಕಬಡ್ಡಿ ಪಂದ್ಯಾವಳಿ ಚಾಲನೆಗೆ ತೆರಳಿದ್ದಂತ ಉಪ ಸಭಾಪತಿ ರುದ್ರಪ್ಪ ಲಮಾಣಿಯವರು ಸ್ವತಃ ರೇಡಿಂಗ್ ಮಾಡಿ ಚಾಲನೆ ನೀಡಲು ಹೋಗಿದ್ದಾರೆ. ಈ ವೇಳೆ ಆಯತಪ್ಪಿ ಬಿದ್ದಾಗ ಅವರ ಕಾಲಿಗೆ ಗಾಯವಾಗಿದೆ. ಅವರನ್ನು ಕೂಡಲೇ ಸ್ಥಳದಲ್ಲಿದ್ದಂತ ಕ್ರೀಡಾಪಟುಗಳು ಹಿಡಿದು ಮೇಲೆತ್ತಿದರು. ಘಟನೆಯಲ್ಲಿ ರುದ್ರಪ್ಪ ಲಮಾಣಿ ಅವರ ಕಾಲಿಗೆ ಪೆಟ್ಟಾಗಿದೆ. ಹೀಗಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು, ಮನೆಗೆ ತೆರಳಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಈ ಸುದ್ದಿಯನ್ನೂ ಓದಿ | Love Jihad: ಲವ್‌ ಜಿಹಾದ್‌ ವಿರುದ್ಧ ಶೀಘ್ರವೇ ಕಠಿಣ ಕಾನೂನು? ಸಪ್ತ ಸದಸ್ಯ ಸಮಿತಿ ರಚನೆ

ಬೆಳಗಾವಿಯಲ್ಲಿ ಆಟೋ ಚಾಲಕನ ಹಲ್ಲೆಯಿಂದ ಗೋವಾ ಮಾಜಿ‌ ಶಾಸಕ ಸಾವು

Ex-Goa MLA dies

ಬೆಳಗಾವಿ: ಕ್ಷುಲ್ಲಕ ಕಾರಣಕ್ಕೆ ಆಟೋ ಚಾಲಕ ಮಾರಣಾಂತಿಕ ಹಲ್ಲೆ ಮಾಡಿದ ಪರಿಣಾಮ ಸ್ಥಳದಲ್ಲೇ ಗೋವಾದ ಮಾಜಿ ಶಾಸಕ ಲಾವೋ ಮಾಮಲೇದಾರ್ (69) (Lavoo Mamledar) ಮೃತಪಟ್ಟ ಘಟನೆ ಶನಿವಾರ ಶ್ರೀನಿವಾಸ್ ಲಾಡ್ಜ್‌ನಲ್ಲಿ ನಡೆದಿದೆ. ಬೆಳಗಾವಿ ನಗರದ ಶ್ರೀನಿವಾಸ ಲಾಡ್ಜ್ ಎದುರು ಆಟೋಗೆ ಲಾವೋ ಕಾರು ಡಿಕ್ಕಿಯಾದ ಹಿನ್ನೆಲೆಯಲ್ಲಿ ಚಾಲಕ, ಗೋವಾದ ಮಾಜಿ ಶಾಸಕ ಲಾವೋ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಇದರಿಂದ ಸ್ಥಳದಲ್ಲಿಯೇ ಕುಸಿದ ಬಿದ್ದು ಲಾವೋ (Ex-Goa MLA dies) ಮೃತಪಟ್ಟಿದ್ದಾರೆ. ಸ್ಥಳಕ್ಕೆ ಬೆಳಗಾವಿ ನಗರದ ಮಾರ್ಕೆಟ್ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಆರೋಪಿಯನ್ನು ಸುಭಾಷ್‌ ನಗರದ ನಿವಾಸಿ ಮುಜಾಹಿದಿಲ್ ಶಕೀಲ್ ಜಮಾದಾರ್ (28) ಎಂಬ ಗುರುತಿಸಲಾಗಿದೆ. ಖಡೇಬಜಾರ್ ಬಳಿ ಆಟೋಗೆ ಮಾಜಿ ಶಾಸಕರ ಕಾರು ಟಚ್ ಆದ ಬಳಿಕ ಶ್ರೀನಿವಾಸ ಲಾಡ್ಜ್ ಕಡೆಗೆ ಲಾವೋ ಮಾಮಲೇದಾರ್ ಬಂದಿದ್ದರು. ಆಗ ಲಾಡ್ಜ್ ಎದುರು ಬಂದು ಮಾಜಿ ಶಾಸಕನ ಮೇಲೆ ಚಾಲಕ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಹಲ್ಲೆಯಿಂದ ಸ್ಥಳದಲ್ಲೇ ಮೃತಪಟ್ಟ ಲಾವೋ ಮಾಮಲೇದಾರ್ ಮೃತ ದೇಹ ಬೆಳಗಾವಿ ಬೀಮ್ಸ್‌ಗೆ ರವಾನೆ ಮಾಡಲಾಗಿದೆ. ತಕ್ಷಣವೇ ಆರೋಪಿಯನ್ನು ಮಾರ್ಕೆಟ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Mujahidil Shakeel Jamadar

ಈ ಸುದ್ದಿಯನ್ನೂ ಓದಿ | Gruha Lakshmi Scheme: ಮಹಿಳೆಯರಿಗೆ ಸಿಹಿ ಸುದ್ದಿ, ಶೀಘ್ರದಲ್ಲೇ ಗೃಹ ಲಕ್ಷ್ಮೀ ಹಣ: ಲಕ್ಷ್ಮೀ ಹೆಬ್ಬಾಳ್ಕರ್‌ ಮಾಹಿತಿ



ಈ ಬಗ್ಗೆ ಶ್ರೀನಿವಾಸ ಲಾಡ್ಜ್ ಸಿಬ್ಬಂದಿಯೊಬ್ಬರು ಪ್ರತಿಕ್ರಿಯಿಸಿ, ಗೋವಾದ ಮಾಜಿ ಶಾಸಕ ಲಾವೋ ಮಾಮಲೇದಾರ್ ನಮ್ಮ ಹೋಟೆಲ್‌ಗೆ ಆಗಾಗ ಬರುತ್ತಿದ್ದರು. ಅವರು ನಮ್ಮ ರೆಗ್ಯುಲರ್ ಕಸ್ಟಮರ್‌ ಆಗಿದ್ದು, ಖಡೇಬಜಾರ್ ಬಳಿ ಆಟೋಗೆ ಅವರ ಟಚ್‌ ಆಗಿತ್ತು ಎನ್ನಲಾಗಿದೆ. ಹೀಗಾಗಿ ಆಟೋ ಚಾಲಕ ಹೋಟೆಲ್‌ ಬಳಿ ಬಂದು ಮಾಜಿ ಶಾಸಕನ ಮೇಲೆ ಹಲ್ಲೆ ನಡೆಸಿದ್ದಾನೆ. ನಾವು ಆತನನ್ನು ತಡೆಯಲು ಯತ್ನಿಸಿದೆವು, ಆದರೆ ತೀವ್ರ ಹಲ್ಲೆಯಿಂದ ಮಾಜಿ ಶಾಸಕ ಲಾವೋ ಮಾಮಲೇದಾರ್ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.