ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ನಾಲ್ಕೇ ವರ್ಷಕ್ಕೆ ಮುರಿದುಬಿತ್ತು ನಟಿ ಹನ್ಸಿಕಾ ಮೋಟ್ವಾನಿ ದಾಂಪತ್ಯ; ಪತಿಯಿಂದ ಸಿಕ್ಕ ಜೀವನಾಂಶ ಎಷ್ಟು?

Hansika Motwani Divorce: ನಟಿ ಹನ್ಸಿಕಾ ಮೋಟ್ವಾನಿ ಮತ್ತು ಉದ್ಯಮಿ ಸೊಹೈಲ್ ಕಥುರಿಯಾ ಅವರ ಮದುವೆ ನಾಲ್ಕು ವರ್ಷಗಳಲ್ಲೇ ಅಂತ್ಯಗೊಂಡಿದೆ. ಮುಂಬೈನ ಬಾಂದ್ರಾ ಕೌಟುಂಬಿಕ ನ್ಯಾಯಾಲಯವು ಬುಧವಾರ (ಮಾ. 11) ಇವರ ವಿಚ್ಛೇದನ ಅರ್ಜಿಯನ್ನು ಪುರಸ್ಕರಿಸಿದೆ.

ಹನ್ಸಿಕಾ ದಾಂಪತ್ಯಕ್ಕೆ ಅಂತ್ಯ; 4 ವರ್ಷಕ್ಕೆ ಮದುವೆ ಮುರಿದುಬಿದ್ದಿದ್ದು ಏಕೆ?

-

Avinash GR
Avinash GR Mar 11, 2026 6:36 PM

ನಟಿ ಹನ್ಸಿಕಾ ಮೋಟ್ವಾನಿ ಅವರು ತಮ್ಮ ಆಪ್ತ ಸ್ನೇಹಿತ ಮತ್ತು ಉದ್ಯಮಿ ಸೊಹೈಲ್ ಕಥುರಿಯಾ ಅವರನ್ನು 2022ರ ಡಿಸೆಂಬರ್ 4 ರಂದು ವಿವಾಹವಾಗಿದ್ದರು. ಆದರೆ ಈ ಮದುವೆಗೆ ನಾಲ್ಕು ವರ್ಷ ತುಂಬುವುದರೊಳಗೆ ಮುರಿದುಬಿದ್ದಿದೆ. ಹೌದು, ಮುಂಬೈನ ಬಾಂದ್ರಾ ಕೌಟುಂಬಿಕ ನ್ಯಾಯಾಲಯವು ಬುಧವಾರ (ಮಾ.11) ಈ ದಂಪತಿಯ ಪರಸ್ಪರ ಒಪ್ಪಿಗೆ ಮೇರೆಗೆ ಸಲ್ಲಿಸಿದ್ದ ವಿಚ್ಛೇನದ ಅರ್ಜಿಯನ್ನು ಪುರಸ್ಕರಿಸಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಪ್ರತ್ಯೇಕವಾಗಿ ವಾಸ ಮಾಡ್ತಿದ್ದ ಜೋಡಿ

ಹೌದು, ಬಹಳ ಹಿಂದಿನಿಂದಲೇ ಇವರಿಬ್ಬರು ಜೊತೆಯಾಗಿ ವಾಸಿಸುತ್ತಿಲ್ಲ ಎಂಬ ವದಂತಿಗಳು ಹರಿದಾಡುತ್ತಿದ್ದವು. ಹನ್ಸಿಕಾ ತಮ್ಮ ತಾಯಿಯ ಮನೆಗೆ ಮರಳಿದ್ದರೆ, ಸೊಹೈಲ್ ತಮ್ಮ ಕುಟುಂಬದೊಂದಿಗೆ ವಾಸ ಮಾಡುತ್ತಿದ್ದರು. ಮದುವೆಯ ನಂತರ ಸೊಹೈಲ್ ಅವರ ಕುಟುಂಬದ ಜೊತೆಗೆ ಹನ್ಸಿಕಾ ವಾಸಿಸುತ್ತಿದ್ದರು. ಕೊನೆಗೆ ಅದೇ ಅಪಾರ್ಟ್‌ಮೆಂಟ್‌ನ ಮತ್ತೊಂದು ಫ್ಲಾಟ್‌ಗೆ ವಾಸ್ತವ್ಯವನ್ನು ಹನ್ಸಿಕಾ ಬದಲಿಸಿದ್ದರು. ಆರಂಭದಲ್ಲಿ ಇಬ್ಬರು ಬೇರೆಯಾಗಿರುವ ಸುದ್ದಿಯನ್ನು ಸೊಹೈಲ್ ನಿರಾಕರಿಸಿದ್ದರು. ಹನ್ಸಿಕಾ ಅವರಿಂದಲೂ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.

Hansika Motwani: ಹನ್ಸಿಕಾ ಮೋಟ್ವಾನಿ ದಾಂಪತ್ಯ ಜೀವನ ಅಂತ್ಯ? ʼಬಿಂದಾಸ್‌ʼ ನಟಿಯ ಪತಿ ಕೊಟ್ರು ಸ್ಪಷ್ಟನೆ

ಪೋಟೋ ಡಿಲೀಟ್‌ ಮಾಡಿದ್ದ ನಟಿ

ಇನ್ನು, ಇವರ ದಾಂಪತ್ಯದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ವದಂತಿ ಇರುವಾಗಲೇ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಿಂದ ಮದುವೆಯ ಎಲ್ಲಾ ಫೋಟೋಗಳನ್ನು ಹನ್ಸಿಕಾ ಡಿಲೀಟ್‌ ಮಾಡಿದ್ದರು. ಪತಿ ಸೊಹೈಲ್ ಅವರನ್ನು ಕೂಡ ಅನ್‌ಫಾಲೋ ಮಾಡಿದ್ದರು. ಅತ್ತ ಸೊಹೈಲ್ ಕೂಡ ಹನ್ಸಿಕಾ ಅವರನ್ನು ಅನ್‌ಫಾಲೋ ಮಾಡಿ ತಮ್ಮ ಖಾತೆಯನ್ನು ಪ್ರೈವೇಟ್ ಮಾಡಿಕೊಂಡಿದ್ದರು. ಕಳೆದ ವರ್ಷ ಹನ್ಸಿಕಾ ಅವರು ತಮ್ಮ ಹುಟ್ಟುಹಬ್ಬದಂದು ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದರು. "ಈ ವರ್ಷ ನಾನು ಕೇಳದ ಪಾಠಗಳನ್ನು ಮತ್ತು ನನಗೇ ತಿಳಿಯದ ಶಕ್ತಿಯನ್ನು ನೀಡಿದೆ, ಈಗ ನನ್ನ ಮನಸ್ಸು ಶಾಂತವಾಗಿದೆ" ಎಂದು ಬರೆದುಕೊಂಡಿದ್ದರು. ಆಗಲೇ ಪರೋಕ್ಷವಾಗಿ ದಾಂಪತ್ಯದಲ್ಲಿ ವಿರಸ ಉಂಟಾಗಿರುವ ಸುಳಿವು ಸಿಕ್ಕಿತ್ತು.

ಇಬ್ಬರ ಮದುವೆ ಆಗಿದ್ದು ಯಾವಾಗ?

2022 ರ ಡಿಸೆಂಬರ್ 4 ರಂದು ಜೈಪುರದ ಮುಂಡೋಟಾ ಕೋಟೆಯಲ್ಲಿ ಹನ್ಸಿಕಾ ಮತ್ತು ಸೊಹೈಲ್‌ ಅದ್ಧೂರಿಯಾಗಿ ವಿವಾಹವಾಗಿದ್ದರು. ಅವರ ಮದುವೆಯ ಸಂಭ್ರಮವನ್ನು ಒಂದು ರಿಯಾಲಿಟಿ ಡಾಕ್ಯುಮೆಂಟರಿ ಸರಣಿಯಾಗಿ ಬಿಡುಗಡೆ ಮಾಡಲಾಗಿತ್ತು. ಅದಕ್ಕೂ ಮುನ್ನ ಪ್ಯಾರಿಸ್‌ನ ಐಫೆಲ್ ಟವರ್ ಮುಂದೆ ಹನ್ಸಿಕಾಗೆ ಸೊಹೈಲ್ ಪ್ರಪೋಸ್ ಮಾಡಿದ್ದರು. ಅದು ಕೂಡ ಸಾಕಷ್ಟು ವೈರಲ್‌ ಆಗಿತ್ತು. ಅಂದಹಾಗೆ, ಹನ್ಸಿಕಾ ಜೊತೆ ಮದುವೆ ಆಗುವುದಕ್ಕೂ ಮುನ್ನ ರಿಂಕಿ ಬಜಾಜ್ ಎಂಬುವವರ ಜೊತೆಗೆ ಸೊಹೈಲ್‌ಗೆ ಮದುವೆ ಆಗಿತ್ತು. ವಿಶೇಷವೆಂದರೆ, ಈ ರಿಂಕಿ ಬಜಾಜ್‌ ಅವರು ಹನ್ಸಿಕಾಗೆ ಆಪ್ತ ಸ್ನೇಹಿತೆ. ಅಲ್ಲದೆ, ರಿಂಕಿ ಮತ್ತು ಸೊಹೈಲ್‌ ಮದುವೆ ಹನ್ಸಿಕಾ ಹೋಗಿದ್ದರು. ಆ ವಿಡಿಯೋಗಳು ಕೂಡ ವೈರಲ್‌ ಆಗಿದ್ದವು. ಆದರೆ ಸೊಹೈಲ್‌ - ಹನ್ಸಿಕಾ ಮದುವೆಯಾದಾಗ, ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆ ವ್ಯಕ್ತವಾಗಿತ್ತು

ಜೀವನಾಂಶ ಇಲ್ಲ!

ಉದ್ಯಮಿ ಸೊಹೇಲ್ ಅರಂದ ವಿಚ್ಛೇದನ ಪಡೆದಿರುವ ಹನ್ಸಿಕಾ ಮೋಟ್ವಾನಿ, ಯಾವುದೇ ಜೀವನಾಂಶ ಅಥವಾ ಆರ್ಥಿಕ ಪರಿಹಾರವನ್ನು ಕೇಳಿಲ್ಲ ಎಂದು ವರದಿಯಾಗಿದೆ. ಇಬ್ಬರ ನಡುವೆ ಹೊಂದಾಣಿಕೆ ಇಲ್ಲದೇ ಇರುವುದರಿಂದ ಶಾಂತಿಯುತವಾಗಿ ಇಬ್ಬರು ಬೇರೆಯಾಗಲು ನಿರ್ಧರಿಸಿದ್ದರಂತೆ.