ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಭಾಗ್ಯನಗರ: ನಾಮಕಾವಸ್ತೆಗೆ ಫುಟ್ ಪಾತ್, ನಡುರಸ್ತೆಯಲ್ಲೇ ಜನರ ಓಡಾಟ

ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿಯವರ ಅವಧಿಯಲ್ಲಿ ಪಟ್ಟಣದಲ್ಲಿ ವಾಹನ ದಟ್ಟಣೆ ಮತ್ತು ಜನದಟ್ಟಣೆಯಿಂದ ಎದುರಾಗಿ ವಾಹನ ಸವಾರರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸುಮಾರು ಎರಡು ದಶಕಗಳ ಹಿಂದೆಯೇ ಸುಮಾರು 90 ಅಡಿಗಳಷ್ಟು ‌ಷ‌ಷಅಗಲೀಕರಣ ಮಾಡಿ ಸುಸಜ್ಜಿತ ರಸ್ತೆ ನಿರ್ಮಿಸಲಾಗಿದೆ. ಆದರೆ ಇತ್ತೀಚೆಗೆ ಜನದಟ್ಟಣೆ ಮತ್ತಷ್ಟು ಹೆಚ್ಚಾಗಿದ್ದು, ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ಓಡಾಡಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ.

ನಾಮಕಾವಸ್ತೆಗೆ ಫುಟ್ ಪಾತ್, ನಡುರಸ್ತೆಯಲ್ಲೇ ಜನರ ಓಡಾಟ

Ashok Nayak Ashok Nayak Aug 4, 2025 11:43 PM

ಬಾಗೇಪಲ್ಲಿ: ಪಟ್ಟಣದ ಮುಖ್ಯ ಡಿವಿಜಿ ರಸ್ತೆಯ ಇಕ್ಕೆಳಗಳಲ್ಲಿ ಫುಟ್ ಪಾತ್ ಇಲ್ಲದೆ ನಾಗರಿಕರು ನಡು ರಸ್ತೆಯಲ್ಲಿ ಓಡಾಡುವಂತಾಗಿದೆ. ಇದರಿಂದಾಗಿ ವಾಹನಸಂಚಾರಕ್ಕೆ ಅಡಚಣೆ ಮತ್ತು ಅಪಘಾತಗಳಿಗೆ ಅವಕಾಶಗಳು ಕಲ್ಪಿಸುವಂತಾಗಿದೆ.

ಅಗಲವಾದ ರಸ್ತೆ ಇದ್ದರೂ ಫುಟ್ ಪಾತ್ ಸಮಸ್ಯೆ

ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿಯವರ ಅವಧಿಯಲ್ಲಿ ಪಟ್ಟಣದಲ್ಲಿ ವಾಹನ ದಟ್ಟಣೆ ಮತ್ತು ಜನದಟ್ಟಣೆಯಿಂದ ಎದುರಾಗಿ ವಾಹನ ಸವಾರರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸುಮಾರು ಎರಡು ದಶಕಗಳ ಹಿಂದೆಯೇ ಸುಮಾರು 90 ಅಡಿಗಳಷ್ಟು ‌ಷ‌ಷಅಗಲೀಕರಣ ಮಾಡಿ ಸುಸಜ್ಜಿತ ರಸ್ತೆ ನಿರ್ಮಿಸಲಾಗಿದೆ. ಆದರೆ ಇತ್ತೀಚೆಗೆ ಜನದಟ್ಟಣೆ ಮತ್ತಷ್ಟು ಹೆಚ್ಚಾಗಿದ್ದು, ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ಓಡಾಡಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ: Chikkaballapur News: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿವಿಧ ಒಕ್ಕೂಟಗಳಿಂದ ಜಿಲ್ಲಾ ಪ್ರಜಾ ಸೌಧದ ಮುಂದೆ ಪ್ರತಿಭಟನೆ

ಹಲವೆಡೆ ಮಾತ್ರ ಫುಟ್ ಪಾತ್ ನಿರ್ಮಾಣ

ಪಟ್ಟಣದಲ್ಲಿ ಜೂನಿಯರ್ ಕಾಲೇಜ್, ಪುರಸಭೆ ಕಚೇರಿ, ಕಡೆಗಿರುವ ರಸ್ತೆ ಬದಿ ಫುಟ್ ಪಾತ್ ಮಾರ್ಗ ವನ್ನು  ನಿರ್ಮಿಸಲಾಗಿದೆ. ಬಹುತೇಕ ಅಂಗಡಿಗಳ ಮಾಲಿಕರಿಂದ ಒತ್ತುವರಿಯಾಗಿದ್ದು, ತಮ್ಮ ಸರಕು ಸರಂಜಾಮ ಇಡುವ ವೈಯಕ್ತಿಕ ಜಾಗದಂತಾಗಿದೆ. ಇದರಿಂದಾಗಿ ಯಾವೊಬ್ಬರೂ ಪಾದಚಾರಿ ಯೂ ಫುಟ್ ಪಾತ್ ಮೇಲೆ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಕೆಲವೆಡೆ ಸಂಚಾರ ನಿರ್ಬಂಧಿಸಲಾಗಿದೆ ಎಂಬ ಸೂಚನೆಗಳನ್ನು ನೀಡುವಂತೆ ಅಡ್ಡಲಾಗಿ ಸಾಮಗ್ರಿ ಇಡಲಾಗಿರುತ್ತದೆ.

ಇನ್ನೂ ಕೆಲ ಅಂಗಡಿಗಳ ಮಾಲಿಕರು ಫುಟ್ ಪಾತ್ ಮೇಲೆ ಶೀಟ್ಸ್ ಹಾಕಿಕೊಂಡು ರಸ್ತೆಯ ಮುಂಭಾಗಕ್ಕೆ ಬಂದಿದ್ದು,ವಾಹನ ನಿಲುಗಡೆಗೂ ಸಾಧ್ಯವಾಗದಂತಾಗಿದೆ. ರಸ್ತೆ ಇನ್ನೊಂದು ಕಡೆ ತಾಲೂಕು ಸಾರ್ವಜನಿಕ ಆಸ್ಪತ್ರೆ, ತಾಲೂಕು ಕಚೇರಿ,ಕೆಎಸ್ ಆರ್ ಟಿ ಬಸ್ ನಿಲ್ದಾಣ, ಪಶು ಆಸ್ಪತ್ರೆ, ಖಾಸಗಿ ಶಾಲಾ ಕಾಲೇಜುಗಳು ಸೇರಿದಂತೆ ಎರಡ್ಮೂರು ದೇವಾಲಯಗಳೂ ಇವೆ. ಆದರೆ ಇಂತಹ ಜನಸಂಪರ್ಕ ಕೇಂದ್ರಗಳಿಗೆ ನಾಗರೀಕರು ತಲುಪಲು ಫುಟ್ ಪಾತ್ ಇದ್ದು ಇಲ್ಲದಂತಾಗಿದೆ.

4cbpm3bhagyanagara (2)

ಈ ಬಗ್ಗೆ ಸಿಪಿಐಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಎಂ.ಪಿ ಮುನಿವೆಂಕಟಪ್ಪ ಮಾತನಾಡಿ ಕಾಲೇಜು ಹಾಗೂ ಶಾಲೆಯ  ವಿದ್ಯಾರ್ಥಿಗಳು ಮನೆ ತಲುಪಲು ‌ನಿತ್ಯವೂ ಆತಂಕ ಪಡುತ್ತಾರೆ. ಇದು ಏಕೆಂದರೆ ರಸ್ತೆಯಲ್ಲೆ ನಡೆದುಕೊಂಡು ಹೋಗಬೇಕಿದೆ. ಫುಟ್ ಪಾತ್ ಕೆಲವೆಡೆ ಇದೆಯಾದರೂ, ಅಲ್ಲಿ ತಳ್ಳುವಗಾಡಿಗಳು, ಅಂಗಡಿಗಳ ಸರಕುಗಳನ್ನು ಇಟ್ಟುಕೊಂಡಿರುತ್ತಾರೆ.

ಹಾಗಾಗಿ ರಸ್ತೆಯಲ್ಲಿ ನಡೆಯಬೇಕು. ವಾಹನಗಳು ಹಿಂಬಂದಿಯಿಂದ ಬಂದು ಡಿಕ್ಕಿ ಹೊಡೆಯುವ ಆತಂಕದಲ್ಲೆ ದಿನದೂಡವಂತಾಗಿದೆ. ಫುಟ್ ಪಾತ್ ವ್ಯವಸ್ಥೆ ಸಮರ್ಪಕವಾಗಿದ್ದರೆ ಜನರು ಅದನ್ನು ಬಳಸುತ್ತಾರೆ. ಆದರೆ ಪಟ್ಟಣದಲ್ಲಿ ಮೂರಡಿ,ನಾಲ್ಕಡಿ ಮಾತ್ರ ಕೆಲವೆಡೆ ನಿರ್ಮಿಸಿದ್ದು, ಅದನ್ನೂ ಅಂಗಡಿಗಳ ಮಾಲಿಕರು ತಮ್ಮ ಸರಕುಗಳನ್ನು ಇಟ್ಟಿಕೊಳ್ಳಲು ಬಳಸುತ್ತಿದ್ದಾರೆ. ಈ ಬಗ್ಗೆ ಕೆಲವು ದಿನಗಳ ಹಿಂದೆ ಪುರಸಭೆಯವರು ಕಡೆದು ಕಟ್ಟೆ ಹಾಕುತ್ತೇವೆಂದು ಅಮಾಯಕರ ಅಂಗಡಿಗಳ ಮುಂದೆ ತೆರವುಗೊಳಿಸಿದರು. ಆದರೆ ಈಗ ಯಥಾಸ್ಥಿತಿ ಇದೆ. ಇಲ್ಲಿ ಪುರಸಭೆಯವರು ನೆಟ್ಟಿಗೆ ಕೆಲಸ ಮಾಡಲ್ಲ, ನಾಗರೀಕರೂ ಅರ್ಥಮಾಡಿಕೊಳ್ಳದಂತಾಗಿದೆಎಂದು ತಿಳಿಸಿದರು.