Donald Trump: ಅಧಿಕಾರ ಸ್ವೀಕರಿಸುತ್ತಿದ್ದಂತೆ ಟ್ರಂಪ್‌ ಜಾರಿಗೆ ತರುವ ಯೋಜನೆಗಳಾವುವು ಗೊತ್ತಾ?

ವಿಶ್ವದ ದೊಡ್ಡಣ್ಣ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ವಿಕ್ಷಿಪ್ತ ನಿರ್ಧಾರಗಳಿಂದಲೇ ಹೆಸರುವಾಸಿಯಾಗಿದ್ದಾರೆ. ಇದೀಗ ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವಿಕರಿಸಲಿರುವ ಟ್ರಂಪ್ ಅವರ ಆಡಳಿತಾವಧಿಯಲ್ಲಿ ಯಾವೆಲ್ಲಾ ಪ್ರಮುಖ ನಿರ್ಧಾರಗಳು,ಯೋಜನೆಗಳು ಜಾರಿಗೆ ಬರಲಿವೆ?

ಟ್ರಂಪ್ ಅಧಿಕಾರ ಸ್ವೀಕರಿಸಿದ ತಕ್ಷಣ ಜಾರಿಗೆ ಬರುತ್ತಾ ಈ ಎಲ್ಲಾ ಯೋಜನೆಗಳು?
Profile Sushmitha Jain January 20, 2025

ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ (Donald Trump) ಅವರು ಅಮೆರಿಕಾದ (USA) ಅಧ್ಯಕ್ಷರಾಗಿ ಎರಡನೇ ಬಾರಿಗೆ ಪದ ಸ್ವೀಕಾರ ಮಾಡಲು ಸಿದ್ಧತೆಗಳ ನಡೆಯುತ್ತಿವೆ. ಅಮೆರಿಕಾವೂ ಸೇರಿದಂತೆ ವಿಶ್ವದ ನಾನಾ ಕಡೆಗಳಲ್ಲಿ ರಾಜಕಿಯ ಸ್ಥಿತ್ಯಂತರ ಮತ್ತು ವಿಪ್ಲವಗಳು ಸಂಭವಿಸುತ್ತಿರುವ ಈ ಸಂಕ್ರಮಣ ಕಾಲಘಟ್ಟದಲ್ಲೇ ಟ್ರಂಪ್ ಅವರು ವಿಶ್ವದ ದೊಡ್ಡಣ್ಣನೆಂದೇ ಕರೆಯಿಸಿಕೊಳ್ಳುತ್ತಿರುವ ಅಮೆರಿಕಾದ 47ನೇ ಅಧ್ಯಕ್ಷರಾಗಿ ಎರಡನೇ ಬಾರಿಗೆ ಅಧಿಕಾರ ಸ್ವೀಕರಿಸಲಿದ್ದಾರೆ.

ಟ್ರಂಪ್ ಅವರು ತಮ್ಮ ಪ್ರಥಮ ಅವಧಿಯ ಮೊದಲನೇ ದಿನದಂದಿ ಕೇವಲ ಒಂದು ಎಕ್ಸಿಕ್ಯೂಟಿವ್ ಆದೇಶಕ್ಕೆ ಸಹಿ ಮಾಡಿದ್ದರು, ಇದು ಹಿಂದಿನ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ (Barack Obama) ಅವರ ಮಹತ್ವಾಕಾಂಕ್ಷಿ ಯೊಜನೆಯಾಗಿದ್ದ ಒಬಮಾಕೇರ್ ನ್ನು ಗುರಿಯಾಗಿಸಿಕೊಂಡು ಜಾರಿಗೊಳಿಸಿದ್ದ ಆದೇಶವಾಗಿತ್ತು.

ಈ ಬಾರಿ ಡೊನಾಲ್ಡ್ ಟ್ರಂಪ್ ಅವರು ತಮ್ಮ ಅಧಿಕಾರ ಸ್ವೀಕಾರದ ಮೊದಲ ದಿನವೇ ಕೆಲವೊಂದು ಮಹತ್ವದ ಆದೇಶಗಳಿಗೆ ಸಹಿ ಹಾಕುವ ನಿರೀಕ್ಷೆಯಿದ್ದು, ಅವುಗಳ ವಿವರ ಇಲ್ಲಿದೆ:

ಅಕ್ರಮ ವಲಸಿಗರ ಹೊರಕಾಕುವಿಕೆ ಕಾರ್ಯಕ್ರಮ: ಟ್ರಂಪ್ ಅವರ ವಲಸೆ ನೀತಿ ಅವರ ಎರಡನೇ ಅಧಿಕಾರವಧಿಯ ಪ್ರಥಮ ಆದ್ಯತೆಯಾಗಿರಲಿದೆ ಎಂದೇ ಹೇಳಲಾಗುತ್ತಿದೆ. ಅಕ್ರಮ ವಲಸಿಗರನ್ನು ಗುರಿಯಾಗಿಸಿಕೊಂಡು ಟ್ರಂಪ್ ಅವರು ಸಾಮೂಹಿಕ ಹೊರದಬ್ಬುವಿಕೆ ನಡೆಸಲಿದ್ದಾರೆ. ‘ನನ್ನ ಅಧಿಕಾರವಧಿಯ ಮೊದಲ ದಿನವೇ, ಕ್ರಿಮಿನಲ್ ಗಳನ್ನು ಹೊರಹಾಕಲು ಅಮೆರಿಕಾದ ಇತಿಹಾಸದಲ್ಲೇ ಮೈಲುಗಲ್ಲಾಗಬಹುದಂತಹ ಬೃಹತ್ ಹೊರದಬ್ಬುವಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದೇನೆ’ ಎಂದು ಟ್ರಂಪ್ ಈಗಾಗಲೇ ಘೋಷಿಸಿದ್ದಾರೆ.

ಜನನ ಆಧಾರಿತ ನಾಗರಿಕ ಹಕ್ಕನ್ನು ಕೊನೆಗೊಳಿಸುವುದು: ಜನನ ಆಧಾರಿತ ನಾಗರಿಕ ಹಕ್ಕನ್ನು ಕೊನೆಗೊಳಿಸುವುದಾಗಿ ಟ್ರಂಪ್ ಈಗಾಗಲೇ ಭರವಸೆ ನೀಡಿದ್ದಾರೆ. ಇದು 14ನೇ ತಿದ್ದುಪಡಿ ಪ್ರಕಾರ ಅಮೆರಿಕಾದಲ್ಲಿ ಜನಿಸುವವರಿಗೆ ಸ್ವಾಭಾವಿಕವಾಗಿ ಅಲ್ಲಿನ ನಾಗರಿಕರಾಗುವ ಹಕ್ಕನ್ನು ನೀಡುತ್ತದೆ. ಟ್ರಂಪ್ ಅವರ ಈ ವಿವಾದಾತ್ಮಕ ನಡೆ ಪ್ರಮುಖ ಕಾನೂನು ಮತ್ತು ಸಾಂಸ್ಥಿಕ ಸವಾಲುಗಲನ್ನು ಹುಟ್ಟುಹಾಕುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇದು ಮಾತ್ರವಲ್ಲದೇ ಬಿಡೇನ್ ಸರಕಾರ ಜಾರಿಗೆ ತಂದಿದ್ದ ಎಲ್ಲಾ ಗಡಿಗಳನನ್ಉ ಮುಕ್ತಗೊಳಿಸುವಿಕೆ ನೀತಿಯನ್ನೂ ಸಹ ತೆಗೆದುಹಾಕಲು ಟ್ರಂಪ್ ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಸುದ್ದಿಯನ್ನೂ ಓದಿ: Donald Trump Inauguration: ಟ್ರಂಪ್‌ ಪಟ್ಟಾಭಿಷೇಕಕ್ಕೆ ಕ್ಷಣಗಣನೆ... ಜೈ ಶಂಕರ್‌, ಮೆಲೋನಿ, ಅಂಬಾನಿ ದಂಪತಿ ಹಲವರು ಭಾಗಿ

ಕ್ಯಾಪಿಟಲ್ ಹಿಲ್ ದಂಗೆಕೋರರಿಗೆ ಕ್ಷಮಾದಾನ: ಇನ್ನು ಕ್ಷಮಾದಾನದ ವಿಚಾರಕ್ಕೆ ಬಂದರೆ, 2021ರ ಜ.06ರಂದು ಅಮೆರಿಕಾ ರಾಜಧಾನಿ ಮೇಲೆ ನಡೆಸಿದ ದಾಳಿಯ ಸೂತ್ರಧಾರರಿಗ ನೀಡಲಾಗಿರುವ ಶಿಕ್ಷೆಯಿಂದ ಅವರಿಗೆ ವಿನಾಯಿತಿ ನೀಡಿ ಅವರಿಗೆ ಕ್ಷಮಾದಾನ ನೀಡುವ ವಿಚಾರಕ್ಕೆ ಟ್ರಂಪ್ ಸಮ್ಮತಿ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಇದಕ್ಕೆ ಈಗಾಗಲೇ ಅಪಸ್ವರಗಳು ಕೇಳಿಬಂದಿದ್ದು, ಇದು ಈ ನೆಲದ ಕಾನೂನಿನ ಮೇಲಿನ ಭಯವನ್ನು ಕಡಿಮೆಗೊಳಿಸುತ್ತದೆ ಎಂಬ ಆತಂಕವನ್ನೂ ಸಹ ಹಲವರು ವ್ಯಕ್ತಪಡಿಸುತ್ತಿದ್ದಾರೆ.

ರಷ್ಯಾ-ಉಕ್ರೇನ್ ಯುದ್ಧಕ್ಕೆ ಅಂತ್ಯ ಹಾಡುವುದು: ಇನ್ನು ಟ್ರಂಪ್ ಅವರ ದ್ವಿತೀಯ ಅವಧಿಯ ವಿದೇಶಿ ನೀತಿಗಳಲ್ಲಿ ಪ್ರಥಮ ಆದ್ಯತೆಯಾಗಿರುವುದು ಯುರೋಪ್ ಮಾತ್ರವಲ್ಲದೇ ವಿಶ್ಚದ ಆರ್ಥಿಕತೆಗೆ ಕಂಟಕವಾಗಿರುವ ರಷ್ಯಾ-ಉಕ್ರೇನ್ ಯುದ‍್ದಕ್ಕೊಂದು ಅಂತ್ಯ ಹಾಡುವುದಾಗಿದೆ. ತಾನು ಅಧಿಕಾರ ಸ್ವಿಕರಿಸಿದ 24 ಗಂಟೆಗಳೊಳಗಾಗಿ ಈ ಕಾರ್ಯವನ್ನು ಸಾಧಿಸುವುದಾಗಿ ಟ್ರಂಪ್ ಈಗಾಗಲೇ ಭರವಸೆ ನೀಡಿದ್ದಾರೆ. ‘ನಾನು ಉಕ್ರೇನ್ ಅಧ್ಯಕ್ಷ ಝೆಲೆಂಕ್ಸಿ ಮತ್ತು ರಷ್ಯಾ ಅಧ್ಯಕ್ಷ ಪುತಿನ್ ಇಬ್ಬರನ್ನೂ ಸಹ ಚೆನ್ನಾಗಿ ತಿಳಿದಿದ್ದೇನೆ. ಅವರಿಬ್ಬರೂ ನನ್ನನ್ನು ಗೌರವಿಸುತ್ತಾರೆ.’ ಎಂದು ಟ್ರಂಪ್ ಚುನಾವಣಾ ಸಂದರ್ಭದ ಚರ್ಚೆಯಲ್ಲಿ ಹೇಳಿಕೊಂಡಿದ್ದರು.

ಆಮದು ಸುಂಕ ಹೇರುವುದು: ಮೆಕ್ಸಿಕೋ ಮತ್ತು ಕೆನಡಾದಿಂದ ಅಮೆರಿಕಾಕ್ಕೆ ಆಮದು ಮಾಡಿಕೊಳ್ಳುವ ಉತ್ಪನ್ನಗಳ ಮೇಲೆ ಆಮದು ಸುಂಕ ಹೇರುವ ಭರವಸೆಯನ್ನು ಟ್ರಂಪ್ ಈಗಾಗಲೇ ನೀಡಿದ್ದಾರೆ. ಈ ಎರಡೂ ದೇಶಗಳು ಅಮೆರಿಕಾದ ಅತಿದೊಡ್ಡ ವ್ಯಾಪಾರ ಸಹಭಾಗಿಗಳಾಗಿವೆ. ಟ್ರಂಪ್ ಅವರ ಈ ನಿರ್ಧಾರದ ಬಗ್ಗೆ ಆರ್ಥಿಕ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಇದರಿಂದ ಅಮೆರಿಕಾದ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬ ಆತಂಕವನ್ನು ಅವರು ವ್ಯಕ್ತಪಡಿಸುತ್ತಿದ್ದಾರೆ.

ಬಿಡೇನ್ ಅವರ ‘ಎಲೆಕ್ಟ್ರಿಕ್ ವಾಹನ ಕಡ್ಡಾಯ’ ನೀತಿಗೆ ಅಂತ್ಯ: ಆರ್ಥಿಕತೆ ವಿಚಾರವನ್ನು ಗಮನದಲ್ಲಿರಿಸಿಕೊಂಡು, ಬಿಡೇನ್ ಆಡಳಿತ ಜಾರಿಗೆ ತಂದಿದ್ದ ಎಲೆಕ್ಟ್ರಿಕ್ ವಾಹನ ಕಡ್ಡಾಯ ನೀತಿಗೆ ಅಂತ್ಯ ಹಾಡಲು ಟ್ರಂಪ್ ನಿರ್ಧರಿಸಿದ್ದಾರೆ. ‘ನಾನು ಅಧಿಕಾರ ವಹಿಸಿಕೊಂಡ ದಿನವೇ, ಜೋ ಜಾರಿಗೆ ತಂದಿರುವ ಎಲೆಕ್ಟ್ರಿಕ್ ವಾಹನ ಕಡ್ಡಾಯ ನೀತಿಗೊಂದು ಅಂತ್ಯ ಹಾಡಲಿದ್ದೇನೆ’ ಎಂದು ಟ್ರಂಪ್ ಹೂಸ್ಟನ್ ನಲ್ಲಿ ನಡೆದಿದ್ದ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಭರವಸೆ ನೀಡಿದ್ದರು.

ಡ್ರಿಲ್, ಡ್ರಿಲ್, ಡ್ರಿಲ್..! ಟ್ರಂಪ್ ತಾನು ಮರಳಿ ಅಧಿಕಾರಕ್ಕೆ ಬಂದಲ್ಲಿ ಅಮೆರಿಕದಾದ್ಯಂತ ತೈಲ ನಿಕ್ಷೇಪಗಳ ಕೊರೆಯುವಿಕೆಗೆ ಅನುಮತಿ ನೀಡುವ ಭರವಸೆಯನ್ನು ನೀಡಿದ್ದರು. ಟ್ರಂಪ್ ಪ್ರಕಾರ ದೇಶದೊಳಗೆ ತೈಲ ಉತ್ಪಾದನೆಯನ್ನು ಹೆಚ್ಚಿಸುವುದರಿಂದ ಇಂಧನ ವೆಚ್ಚವನ್ನು ಕಡಿಮೆಗೊಳಿಸಬುದಾಗಿದೆಯಂತೆ. ಟ್ರಂಪ್ ಅವರ ಈ ನಿರ್ಧಾರ ಪರಿಸರ ತಜ್ಞರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಮಹಿಳಾ ಕ್ರೀಡೆಗಳಲ್ಲಿ ತೃತೀಯ ಲಿಂಗಿ ಕ್ರೀಡಾಳುಗಳ ಭಾಗವಹಿಸುವಿಕೆಗೆ ನಿಷೇಧ: ತೃತೀಯ ಲಿಂಗಿಗಳ ಕುರಿತಾಗಿ ಟ್ರಂಪ್ ಅವರ ನಿಲುವು ಪ್ರತೀಬಾರಿ ವಿವಾದಾತ್ಮಕವಾಗಿಯೇ ಇರುತ್ತದೆ. ಟ್ರಂಪ್ ಅವರು ತೃತೀಯ ಲಿಂಗಿ ಮಹಿಳೆಯರನ್ನು ಪುರುಷರೆಂದೇ ಪರಿಗಣಿಸುತ್ತಾರೆ ಮತ್ತು ಮಹಿಳಾ ಕ್ರೀಡೆಗಳಲ್ಲಿ ಅವರ ಭಾಗವಹಿಸುವಿಕೆಯನ್ನು ಸೀಮಿತಗೊಳಿಸುವ ಭರವಸೆಯನ್ನು ನೀಡಿದ್ದಾರೆ. ‘ಮಹಿಳಾ ಕ್ರೀಡೆಗಳಿಂದ ಪುರುಷರನ್ನು, ಪ್ರಥಮ ದಿನದಿಂದಲೇ ತಕ್ಷಣವೇ 100% ಹೊರಗಿಡುತ್ತೇನೆ’ ಎಂದು ಭರವಸೆ ನೀಡುತ್ತೇನೆ’ ಎಂದು ಹೇಳಿದ್ದರು.

ಮೇಡ್ ಇನ್ ಅಮೆರಿಕಾ ಆಟೋ ಇಂಡಸ್ಟ್ರಿ: ಅಮೆರಿಕಾದ ವಾಹನ ಉತ್ಪಾದನಾ ಕ್ಷೇತ್ರಕ್ಕೆ ಕಾಯಕಲ್ಪ ನೀಡುವ ಭರವಸೆಯನ್ನು ಟ್ರಂಪ್ ನೀಡಿದ್ದಾರೆ. ‘ಟ್ರಂಪ್ ಗೆ ಒಂದು ಮತ ಹಾಕುವುದೆಂದರೆ ಭವಿಷ್ಯದಲ್ಲಿ ಅಟೊಮೊಬೈಲ್ ಗಳ ಉತ್ಪಾದನೆ ಅಮೆರಿಕಾದಲ್ಲಿ ಆಗುವುದೆಂದು ಅರ್ಥ’ ಎಂದು ಅವರು ತಮ್ಮ ಚುನಾವಣಾ ಭಾಷಣದ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ.

ಒಟ್ಟಿನಲ್ಲಿ ಚುನಾವಣೆಗೂ ಮುಂಚೆ ಈ ಎಲ್ಲಾ ಅಂಶಗಳನ್ನೇ ತನ್ನ ಪ್ರಚಾರ ಭಾಷಣಗಳಲ್ಲಿ ಹೈಲೈಟ್ ಮಾಡಿಕೊಂಡು ಬಂದಿದ್ದ ಡೊನಾಲ್ಡ್ ಟ್ರಂಪ್ ಅವರು ಮತ್ತೆ ಅಮೆರಿಕಾದ ಅಧ್ಯಕ್ಷರಾಗುವ ಹಾದಿಯಲ್ಲಿದ್ದಾರೆ. ಆದರೆ ಅವರು ಅಧಿಕಾರ ಸ್ವೀಕರಿಸಿದ ತಕ್ಷಣ ಈ ಮೇಲಿನವುಗಳಲ್ಲಿ ಯಾವುದಕ್ಕೆ ಪ್ರಥಮ ಆದ್ಯತೆ ನೀಡಲಿದ್ದಾರೆ ಎಂಬುದನ್ನು ಕಾದುನೋಡಬೇಕಾಗಿದೆ.

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ