ಬರ್ಮಿಂಗ್‌ಹ್ಯಾಮ್: ಲೀಡ್ಸ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್‌ನಲ್ಲಿ ಸೋಲು ಕಂಡಿರುವ ಭಾರತ ಇದೀಗ ದ್ವಿತೀಯ ಪಂದ್ಯವನ್ನಾಡಲು ಸಜ್ಜಾಗಿದ್ದು ಮತ್ತೆ ಪುಟಿದೇಳುವ ಗುರಿಯನ್ನು ಹೊಂದಿದೆ. ಭಾರತ-ಇಂಗ್ಲೆಂಡ್(ENG vs IND) ನಡುವಿನ ಈ ಟೆಸ್ಟ್ ಪಂದ್ಯ ಜುಲೈ 2 ರಿಂದ ಬರ್ಮಿಂಗ್‌ಹ್ಯಾಮ್‌ನ(Birmingham) ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ(Edgbaston) ನಡೆಯಲಿದೆ. ಈ ಮೈದಾನದಲ್ಲಿ ಭಾರತ ಅತ್ಯಂತ ಕಳಪೆ ದಾಖಲೆ ಹೊಂದಿದೆ.
ಭಾರತ ತಂಡವು ಎಡ್ಜ್‌ಬಾಸ್ಟನ್‌ನಲ್ಲಿ ಮೊದಲ ಬಾರಿಗೆ ಆಡಿದ್ದು,1967 ರಲ್ಲಿ. ಈವರೆಗೆ ಈ ಸ್ಥಳದಲ್ಲಿ ಏಳು ಪಂದ್ಯಗಳನ್ನು ಆಡಿದ್ದು ಎಲ್ಲ ಪಂದ್ಯಗಳಲ್ಲಿಯೂ ಸೋಲು ಕಂಡಿದೆ. ಈ ಬಾರಿಯದ್ದು 8ನೇ ಟೆಸ್ಟ್ ಪಂದ್ಯವಾಗಿದೆ. ಗೆದ್ದರೆ 58 ವರ್ಷಗಳ ಸೋಲಿನ ಕೊಂಡಿ ಕಳಚಿ ಐತಿಹಾಸಿಕ ಗೆಲುವು ಕಂಡ ಸಾಧನೆ ಮಾಡಲಿದೆ. ಪ್ರಸ್ತುತ ಐದು ಟೆಸ್ಟ್‌ಗಳ ಸರಣಿಯಲ್ಲಿ ಭಾರತ 0-1 ಹಿನ್ನಡೆಯಲ್ಲಿದೆ.
ಎಡ್ಜ್‌ಬಾಸ್ಟನ್ ಜತೆಗೆ, ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಮತ್ತು ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿಯೂ ಭಾರತ ತಲಾ ಒಂಬತ್ತು ಟೆಸ್ಟ್ ಪಂದ್ಯಗಳಲ್ಲಿ ಗೆಲುವು ಸಾಧಿಸಿಲ್ಲ. ಭಾರತ ಇನ್ನೂ ಟೆಸ್ಟ್ ಗೆಲುವು ದಾಖಲಿಸದ ಸ್ಥಳಗಳ ಪಟ್ಟಿಯಲ್ಲಿ ಎಡ್ಜ್‌ಬಾಸ್ಟನ್ ಎರಡನೇ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಲಾಹೋರ್‌ನ ಗಡಾಫಿ ಕ್ರೀಡಾಂಗಣವಿದೆ. ಅಲ್ಲಿ ಭಾರತ ಏಳು ಪಂದ್ಯಗಳನ್ನು ಆಡಿದ್ದು ಒಂದೂ ಗೆಲುವು ಸಾಧಿಸಿಲ್ಲ. ನಂತರ ಗಯಾನಾದ ಬೌರ್ಡಾ ಮತ್ತು ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣವಿದೆ.
ಭಾರತ ಟೆಸ್ಟ್ ಪಂದ್ಯ ಗೆಲುವು ಸಾಧಿಸಿದ ತಾಣಗಳು
ಓಲ್ಡ್ ಟ್ರಾಫರ್ಡ್, ಮ್ಯಾಂಚೆಸ್ಟರ್; 9 ಪಂದ್ಯ
ಕೆನ್ಸಿಂಗ್ಟನ್ ಓವಲ್, ಬಾರ್ಬಡೋಸ್: 9 ಪಂದ್ಯ
ಎಡ್ಜ್‌ಬಾಸ್ಟನ್, ಬರ್ಮಿಂಗ್‌ಹ್ಯಾಮ್: 7 ಪಂದ್ಯ
ಗಡಾಫಿ ಕ್ರೀಡಾಂಗಣ, ಲಾಹೋರ್: 7 ಪಂದ್ಯ
ಬೌರ್ಡಾ, ಗಯಾನಾ: 6 ಪಂದ್ಯ
ರಾಷ್ಟ್ರೀಯ ಕ್ರೀಡಾಂಗಣ, ಕರಾಚಿ: 6 ಪಂದ್ಯ
ಇದನ್ನೂ ಓದಿ IND vs ENG 2nd Test: ಅಭ್ಯಾಸ ಆರಂಭಿಸಿದ ಟೀಮ್ ಇಂಡಿಯಾ; ಮೊದಲ ದಿನ ಬುಮ್ರಾ, ಪ್ರಸಿದ್ಧ್ ಗೈರು