ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ENG vs IND: ನೆಟ್ಸ್‌ನಲ್ಲಿ ಬೆಂಕಿ ಬೌಲಿಂಗ್‌ ಅಭ್ಯಾಸ ನಡೆಸಿದ ಬುಮ್ರಾ; 3ನೇ ಪಂದ್ಯಕ್ಕೆ ಲಭ್ಯ

Jasprit Bumrah: ಪಿಟಿಐ ವರದಿಯ ಪ್ರಕಾರ, ಬುಮ್ರಾ ಮಂಗಳವಾರ ಲಾರ್ಡ್ಸ್ ಟೆಸ್ಟ್‌ಗೆ ಮುಂಚಿತವಾಗಿ ವ್ಯಾಪಕವಾದ ನೆಟ್ ಸೆಷನ್ ನಡೆಸಿದ್ದಾರೆ. ಸುಮಾರು 45 ನಿಮಿಷಗಳ ಕಾಲ ಬೌಲಿಂಗ್ ಮಾಡಿದ ಬುಮ್ರಾ ಭಾರತೀಯ ಬ್ಯಾಟರ್‌ಗಳನ್ನು ಕಾಡಿದ್ದಾರೆ ಎನ್ನಲಾಗಿದೆ. ಬೌಲಿಂಗ್‌ ಮಾತ್ರವಲ್ಲದೆ ಎಡಗೈ ಸ್ಪಿನ್ ಮತ್ತು ಥ್ರೋಡೌನ್‌ಗಳನ್ನು ಎದುರಿ ಬ್ಯಾಟಿಂಗ್‌ ಅಭ್ಯಾಸ ಕೂಡ ನಡೆಸಿದ್ದಾರೆ.

ನೆಟ್ಸ್‌ನಲ್ಲಿ ಬೆಂಕಿ ಬೌಲಿಂಗ್‌ ಅಭ್ಯಾಸ ನಡೆಸಿದ ಬುಮ್ರಾ

Profile Abhilash BC Jul 9, 2025 9:23 AM

ಲಂಡನ್:‌ ಕೆಲಸದ ಒತ್ತಡವನ್ನು ನಿಭಾಯಿಸಲು ಎಜ್‌ಬಾಸ್ಟನ್‌ ಟೆಸ್ಟ್‌(IND vs ENG) ಪಂದ್ಯಕ್ಕೆ ವಿಶ್ರಾಂತಿ ಪಡೆದಿದ್ದ ಟೀಮ್‌ ಇಂಡಿಯಾದ ಸ್ಟಾರ್‌ ವೇಗಿ ಜಸ್‌ಪ್ರಿತ್ ಬುಮ್ರಾ(Jasprit Bumrah) ಅವರು ಗುರುವಾರ ಲಾರ್ಡ್ಸ್(Lord's Test) ಕ್ರೀಡಾಂಗಣದಲ್ಲಿ ಆರಂಭವಾಗಲಿರುವ 3ನೇ ಟೆಸ್ಟ್ ಪಂದ್ಯಕ್ಕೆ ಲಭ್ಯವಾಗುವುದು ಖಚಿತವಾಗಿದೆ. ಬುಮ್ರಾ ನೆಟ್ಸ್‌ನಲ್ಲಿ ಕಠಿಣ ಬೌಲಿಂಗ್‌ ಅಭ್ಯಾಸ ಆರಂಭಿಸಿದ್ದಾರೆ. ತಂಡದ ನಾಯಕ ಶುಭಮನ್ ಗಿಲ್(Shubman Gill) ಭಾನುವಾರ ಬುಮ್ರಾ ಲಭ್ಯತೆ ಬಗ್ಗೆ ದೃಢಪಡಿಸಿದ್ದರು.

ಪಿಟಿಐ ವರದಿಯ ಪ್ರಕಾರ, ಬುಮ್ರಾ ಮಂಗಳವಾರ ಲಾರ್ಡ್ಸ್ ಟೆಸ್ಟ್‌ಗೆ ಮುಂಚಿತವಾಗಿ ವ್ಯಾಪಕವಾದ ನೆಟ್ ಸೆಷನ್ ನಡೆಸಿದ್ದಾರೆ. ಸುಮಾರು 45 ನಿಮಿಷಗಳ ಕಾಲ ಬೌಲಿಂಗ್ ಮಾಡಿದ ಬುಮ್ರಾ ಭಾರತೀಯ ಬ್ಯಾಟರ್‌ಗಳನ್ನು ಕಾಡಿದ್ದಾರೆ ಎನ್ನಲಾಗಿದೆ. ಬೌಲಿಂಗ್‌ ಮಾತ್ರವಲ್ಲದೆ ಎಡಗೈ ಸ್ಪಿನ್ ಮತ್ತು ಥ್ರೋಡೌನ್‌ಗಳನ್ನು ಎದುರಿ ಬ್ಯಾಟಿಂಗ್‌ ಅಭ್ಯಾಸ ಕೂಡ ನಡೆಸಿದ್ದಾರೆ.

ಪ್ರಸಿದ್ಧ್ ಕೃಷ್ಣ ಅವರ ಬದಲಿಗೆ ಬುಮ್ರಾ ಆಡುವ ಆಡುವ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ. ಏಕೆಂದರೆ ಪ್ರಸಿದ್ಧ್‌ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ. ಬುಮ್ರಾ ಜತೆಗೆ, ಎಡಗೈ ಸೀಮರ್ ಅರ್ಶ್‌ದೀಪ್ ಸಿಂಗ್ ಕೂಡ ನೆಟ್ಸ್‌ನಲ್ಲಿ ತೀವ್ರವಾಗಿ ಬೆವರು ಸುರಿಸಿ ಸುಮಾರು ಒಂದು ಗಂಟೆ ಅಭ್ಯಾಸ ನಡೆಸಿದರು. ಬುಮ್ರಾ ಅವರು ಪ್ರಸಕ್ತ 5 ಪಂದ್ಯಗಳ ಸರಣಿಯಲ್ಲಿ ಕೇವಲ 3ರಲ್ಲಿ ಮಾತ್ರ ಆಡುವ ಸಾಧ್ಯತೆಯಿದೆ. ನಾಯಕ ಶುಭಮನ್ ಗಿಲ್, ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ರಿಷಭ್ ಪಂತ್, ಆಕಾಶ್ ದೀಪ್ ಮತ್ತು ಮೊಹಮ್ಮದ್ ಸಿರಾಜ್ ಅಭ್ಯಾಸದಲ್ಲಿ ಭಾಗಿಯಾಗದೆ ವಿಶ್ರಾಂತಿ ಪಡೆದಿದ್ದರು.

ಇದನ್ನೂ ಓದಿ IND vs ENG: ಲಾರ್ಡ್ಸ್‌ನಲ್ಲಿ ಸವಾಲಿನ ಪಿಚ್‌

ಮೂರನೇ ಪಂದ್ಯಕ್ಕೆ ವೇಗಿಗಳಿಗೆ ಪೂರಕ ಪಿಚ್‌ ಸಿದ್ಧಪಡಿಲಾಗುತ್ತಿದೆ ಎಂದು ವರದಿಯಾಗಿದೆ. ಪಿಚ್‌ ಸಾಕಷ್ಟು ಹಸಿರಿನಿಂದ ಕೂಡಿದೆ. ಮೈದಾನದ ಪಿಚ್‌ ಚಿತ್ರವನ್ನು ಗಮನಿಸಿದರೆ ಲೀಡ್ಸ್‌ ಮತ್ತು ಎಜ್‌ಬಾಸ್ಟನ್‌ಗಿಂತ ಹೆಚ್ಚೇ ಹಸಿರಾಗಿ ಕಾಣಿಸುತ್ತಿದೆ. ಕ್ಯುರೇಟರ್‌ಗಳು ನೀಡಿದ ಮಾಹತಿ ಪ್ರಕಾರ ಹಸಿರು ಉಳಿಸಿದಲ್ಲಿ ಎರಡೂ ತಂಡಗಳ ಬ್ಯಾಟರ್‌ಗಳಿಗೆ ಸವಾಲು ಎದುರಾಗಲಿದೆ ಎಂದಿದ್ದಾರೆ.