ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಲಾರ್ಡ್ಸ್‌ನಲ್ಲಿ ಸವಾಲಿನ ಪಿಚ್‌

ಪಿಚ್‌ನಲ್ಲಿ ಹುಲ್ಲು ಸಾಕಷ್ಟು ಇರುವ ಕಾರಣ, ಲೀಡ್ಸ್‌ ಮತ್ತು ಬರ್ಮಿಂಗಮ್‌ನ ಪಿಚ್‌ಗಳಿಗೆ ಹೋಲಿಸಿದರೆ, ಲಾರ್ಡ್ಸ್‌ನ ಪಿಚ್‌ ಸವಾಲಿನಿಂದ ಕೂಡಲಿದೆ ಎಂಬುದು ಭಾರತ ತಂಡದ ಬ್ಯಾಟಿಂಗ್ ಕೋಚ್‌ ಸಿತಾಂಶು ಕೊಟಕ್‌ ಹೇಳಿದ್ದಾರೆ. ಅನುಭವಿ ವೇಗದ ಬೌಲರ್‌ ಜೋಫ್ರಾ ಆರ್ಚರ್‌ ನಾಲ್ಕು ವರ್ಷಗಳ ನಂತರ ಇಲ್ಲಿ ಮೊದಲ ಬಾರಿ ಟೆಸ್ಟ್‌ ಆಡಬಹುದು. ‘ಜೋಫ್ರಾ ಆಡಿದರೆ ಪಂದ್ಯ ಸವಾಲಿನಿಂದ ಕೂಡಲಿದೆ’ ಎಂದು ಕೊಟಕ್‌ ಹೇಳಿದರು.

ಲಾರ್ಡ್ಸ್‌ನಲ್ಲಿ ಸವಾಲಿನ ಪಿಚ್‌

Profile Abhilash BC Jul 9, 2025 8:29 AM

ಲಂಡನ್‌: ಭಾರತ ಮತ್ತು ಇಂಗ್ಲೆಂಡ್‌ ನಡುವಣ ಮೂರನೇ ಟೆಸ್ಟ್‌ ಪಂದ್ಯ ಗುರುವಾರದಿಂದ ಐತಿಹಾಸಿಕ ಲಾರ್ಡ್ಸ್‌ ಮೈದಾನದಲ್ಲಿ ಆರಂಭವಾಗಲಿದೆ. ಈ ಪಂದ್ಯಕ್ಕಾಗಿ ವೇಗಿಗಳಿಗೆ ಪೂರಕ ಪಿಚ್‌ ಸಿದ್ಧಪಡಿಲಾಗುತ್ತಿದೆ ಎಂದು ವರದಿಯಾಗಿದೆ. ಪಿಚ್‌ ಸಾಕಷ್ಟು ಹಸಿರಿನಿಂದ ಕೂಡಿದೆ. ಲಾರ್ಡ್ಸ್‌ನಲ್ಲಿ ವೇಗದ ಪಿಚ್‌ ನಿರ್ಮಿಸುವುದನ್ನೇ ಇಂಗ್ಲೆಂಡ್‌ ಬಯಸಿದೆ ಎನ್ನಲಾಗುತ್ತಿದೆ. ಕ್ಯುರೇಟರ್‌ಗಳು ನೀಡಿದ ಮಾಹತಿ ಪ್ರಕಾರ ಹಸಿರು ಉಳಿಸಿದಲ್ಲಿ ಎರಡೂ ತಂಡಗಳ ಬ್ಯಾಟರ್‌ಗಳಿಗೆ ಸವಾಲು ಎದುರಾಗಲಿದೆ ಎಂದಿದ್ದಾರೆ.

ಮಂಗಳವಾರ, ಲಾರ್ಡ್ಸ್‌ ಹಂಚಿಕೊಂಡಿರುವ ಮೈದಾನದ ಪಿಚ್‌ ಚಿತ್ರವನ್ನು ಗಮನಿಸಿದರೆ ಲೀಡ್ಸ್‌ ಮತ್ತು ಎಜ್‌ಬಾಸ್ಟನ್‌ಗಿಂತ ಹೆಚ್ಚೇ ಹಸಿರಾಗಿ ಕಾಣಿಸುತ್ತಿದೆ. ಸಾಕಷ್ಟು ನೀರು ಹರಿಸಿರುವ ಕಾರಣ ಇದು ವೇಗಿಗಳಿಗೆ ನೆರವು ನೀಡುವ ಸಾಧ್ಯತೆ ಹೆಚ್ಚಿದೆ ಎಂದೇ ಭಾವಿಸಬೇಕಾಗುತ್ತದೆ. ಇಂಗ್ಲೆಂಡ್‌ ಕೋಚ್‌ ಮೆಕಲಮ್‌ ಅವರು ತುಸು ಹೆಚ್ಚೇ ಬೌನ್ಸಿ ಆಗಿರುವ ಪಿಚ್‌ ನಿರ್ಮಿಸುವಂತೆ ಲಾರ್ಡ್ಸ್‌ನ ಗ್ರೌಂಡ್ಸ್‌ ಮನ್‌ ಕಾರ್ಲ್ ಮೆಕ್‌ಡರ್ಮಟ್‌ ಅವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಪಿಚ್‌ನಲ್ಲಿ ಹುಲ್ಲು ಸಾಕಷ್ಟು ಇರುವ ಕಾರಣ, ಲೀಡ್ಸ್‌ ಮತ್ತು ಬರ್ಮಿಂಗಮ್‌ನ ಪಿಚ್‌ಗಳಿಗೆ ಹೋಲಿಸಿದರೆ, ಲಾರ್ಡ್ಸ್‌ನ ಪಿಚ್‌ ಸವಾಲಿನಿಂದ ಕೂಡಲಿದೆ ಎಂಬುದು ಭಾರತ ತಂಡದ ಬ್ಯಾಟಿಂಗ್ ಕೋಚ್‌ ಸಿತಾಂಶು ಕೊಟಕ್‌ ಹೇಳಿದ್ದಾರೆ. ಅನುಭವಿ ವೇಗದ ಬೌಲರ್‌ ಜೋಫ್ರಾ ಆರ್ಚರ್‌ ನಾಲ್ಕು ವರ್ಷಗಳ ನಂತರ ಇಲ್ಲಿ ಮೊದಲ ಬಾರಿ ಟೆಸ್ಟ್‌ ಆಡಬಹುದು. ‘ಜೋಫ್ರಾ ಆಡಿದರೆ ಪಂದ್ಯ ಸವಾಲಿನಿಂದ ಕೂಡಲಿದೆ’ ಎಂದು ಕೊಟಕ್‌ ಹೇಳಿದರು.

ಇದನ್ನೂ ಓದಿ IND vs ENG: 3ನೇ ಪಂದ್ಯಕ್ಕೂ ಮುನ್ನ ಪಿಚ್ ಕ್ಯುರೇಟರ್​ಗೆ ವಿಶೇಷ ಮನವಿ ಮಾಡಿದ ಇಂಗ್ಲೆಂಡ್

ಲಾರ್ಡ್ಸ್‌ನಲ್ಲಿ ನಡೆದ ಕೊನೆಯ ಪಂದ್ಯ– ಅಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಣ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌. ಅಲ್ಲಿ ಬೌಲರ್‌ಗಳು ಮೇಲುಗೈ ಸಾಧಿಸಿದ್ದರು. ಮೊದಲ ಎರಡು ದಿನ ತಲಾ 14 ವಿಕೆಟ್‌ಗಳು ಉರುಳಿದ್ದವು.