ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Imran Khan: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ಗೆ 14 ವರ್ಷ ಜೈಲು ಶಿಕ್ಷೆ

Imran Khan: ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನ ನ್ಯಾಯಾಲಯವು ಮಾಜಿ ಪ್ರಧಾನಿ ಇಮ್ರಾನ್​ ಖಾನ್ ಹಾಗೂ ಅವರ ಪತ್ನಿ ಬುಶ್ರಾ ಬೀಬಿ ಅವರನ್ನು ದೋಷಿ ಎಂದು ಕರೆದಿರುವ ಅಲ್ಲಿನ ನ್ಯಾಯಾಲಯ ಶಿಕ್ಷೆ ನೀಡಿದೆ. ಮ್ರಾನ್‌ ಖಾನ್‌ಗೆ 14 ವರ್ಷ ಮತ್ತು ಬುಶ್ರಾ ಬೀಬಿಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಮಾತ್ರವಲ್ಲ ಇಮ್ರಾನ್ ಖಾನ್‌ಗೆ 10 ಲಕ್ಷ ರೂ. ಮತ್ತು ಬುಶ್ರಾ ಬೀಬಿಗೆ 7 ಲಕ್ಷ ರೂ. ದಂಡವನ್ನೂ ಪ್ರಕಟಿಸಿದೆ.

ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ಗೆ, ಪತ್ನಿಗೆ ಜೈಲು ಶಿಕ್ಷೆ

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌

Profile Ramesh B Jan 17, 2025 2:32 PM

ಇಸ್ಲಾಮಾಬಾದ್‌: ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನ ನ್ಯಾಯಾಲಯವು ಮಾಜಿ ಪ್ರಧಾನಿ ಇಮ್ರಾನ್​ ಖಾನ್ (Imran Khan)​ ಹಾಗೂ ಅವರ ಪತ್ನಿ ಬುಶ್ರಾ ಬೀಬಿ (Bushra Bibi)ಯನ್ನು ದೋಷಿ ಎಂದು ತೀರ್ಪು ನೀಡಿದೆ. ಜತೆಗೆ ಇಮ್ರಾನ್‌ ಖಾನ್‌ಗೆ 14 ವರ್ಷ ಮತ್ತು ಬುಶ್ರಾ ಬೀಬಿಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಮಾತ್ರವಲ್ಲ ಇಮ್ರಾನ್ ಖಾನ್‌ಗೆ 10 ಲಕ್ಷ ರೂ. ಮತ್ತು ಬುಶ್ರಾ ಬೀಬಿಗೆ 7 ಲಕ್ಷ ರೂ. ದಂಡವನ್ನೂ ಪ್ರಕಟಿಸಿದೆ.

190 ಮಿಲಿಯನ್ ಪೌಂಡ್ (15,53,00,00,000 ಕೋಟಿ ರೂ.) ಮೊತ್ತದ ಅಲ್-ಖದಿರ್ ಟ್ರಸ್ಟ್ ಭ್ರಷ್ಟಾಚಾರ ಪ್ರಕರಣ (£190 million Al-Qadir Trust land corruption case)ದಲ್ಲಿ ಈ ತೀರ್ಪು ನೀಡಲಾಗಿದೆ. ಪಾಕಿಸ್ತಾನದ ನ್ಯಾಷನಲ್ ಅಕೌಂಟಬಿಲಿಟಿ ಬ್ಯೂರೋ (National Accountability Bureau-NAB) 2023ರ ಡಿಸೆಂಬರ್‌ನಲ್ಲಿ ಮಾಜಿ ಕ್ರಿಕೆಟಿಗ, ರಾಜಕಾರಣಿ ಇಮ್ರಾನ್‌ ಖಾನ್, ಬುಶ್ರಾ ಬೀಬಿ ಮತ್ತು ಇತರ ಆರು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿತ್ತು. ಜತೆಗೆ ಆರೋಪಿಗಳು ರಾಷ್ಟ್ರೀಯ ಬೊಕ್ಕಸಕ್ಕೆ 190 ಮಿಲಿಯನ್ ಪೌಂಡ್ (ಪಾಕಿಸ್ತಾನ ರೂಪಾಯಿಯಲ್ಲಿ 50 ಶತಕೋಟಿ ರೂ.) ನಷ್ಟವನ್ನುಂಟು ಮಾಡಿದ್ದಾರೆ ಎಂದು ಆರೋಪಿಸಿತ್ತು.

ಅದಾಗ್ಯೂ ಇತರ ಆರೋಪಿಗಳು ಪಾಕಿಸ್ತಾನದಿಂದ ಹೊರಗಿರುವುದರಿಂದ ಇಮ್ರಾನ್‌ ಖಾನ್ ಮತ್ತು ಬುಶ್ರಾ ಬೀಬಿ ಅವರನ್ನು ಮಾತ್ರ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಡಾನ್ ಸುದ್ದಿಸಂಸ್ಥೆ ವರದಿ ಮಾಡಿದೆ. ಇಂಗ್ಲೆಂಡ್‌ ಪಾಕಿಸ್ತಾನಕ್ಕೆ ಹಿಂದಿರುಗಿಸಿದ 50 ಬಿಲಿಯನ್ ರೂಪಾಯಿಗಳನ್ನು ಕಾನೂನುಬದ್ಧಗೊಳಿಸಲು ಪ್ರಧಾನಿಯಾಗಿದ್ದ ಇಮ್ರಾನ್‌ ಖಾನ್ ತಮ್ಮ ಪತ್ನಿ ಮತ್ತು ಇತರರೊಂದಿಗೆ ಸೇರಿ ಭ್ರಷ್ಟಾಚಾರ ಎಸಗಿದ್ದರು. ಝೀಲಂನಲ್ಲಿ ಅಲ್-ಖಾದಿರ್ ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದು ಸೇರಿದಂತೆ ವೈಯಕ್ತಿಕ ಲಾಭಕ್ಕಾಗಿ ಈ ಹಣವನ್ನು ಬಳಸಲಾಗಿದೆ ಎಂದು ಆರೋಪಿಸಲಾಗಿದೆ.



ಅಲ್-ಖಾದಿರ್ ಟ್ರಸ್ಟ್‌ನ ಟ್ರಸ್ಟಿಯಾಗಿ ಬುಶ್ರಾ ಬೀಬಿ ಇದರಿಂದ ನೇರವಾಗಿ ಲಾಭ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ವಿಶೇಷವಾಗಿ ವಿಶ್ವವಿದ್ಯಾಲಯಕ್ಕಾಗಿ 458 ಕನಾಲ್ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ: ವಿಶ್ವಾಸಮತ ಯಾಚನೆಯಲ್ಲಿ ಗೆದ್ದ ಇಮ್ರಾನ್‌ ಖಾನ್‌

ಇಮ್ರಾನ್​ ಖಾನ್​ ಅವರನ್ನು 2023ರಂದು ಬಂಧಿಸಲಾಗಿದ್ದು, ಪ್ರಸ್ತುತ ಜೈಲಿನಲ್ಲಿದ್ದಾರೆ. ಆದರೆ ಇಮ್ರಾನ್‌ ಖಾನ್ ಆರೋಪಗಳನ್ನು ನಿರಾಕರಿಸಿದ್ದು, ಅವುಗಳನ್ನು ರಾಜಕೀಯ ಪ್ರೇರಿತ ಎಂದು ಕರೆದಿದ್ದಾರೆ. ಖಾನ್‌ ಬಂಧನ ವಿರೋಧಿಸಿ ದೇಶಾದ್ಯಂತ ಭಾರೀ ಪ್ರತಿಭಟನೆ ನಡೆದಿತ್ತು.