ಫ್ಯಾಷನ್ ಮೌಲ್ಯವನ್ನು ಮರು ವ್ಯಾಖ್ಯಾನಿಸುವ ಫ್ಯಾಬ್ನ್ಯೂ ಹೊಸ ಶ್ರೇಣಿ ಬಿಡುಗಡೆ
ಅನುಕೂಲಕರ ಉಡುಪಿಗೆ ಆದ್ಯತೆಯೊಂದಿಗೆ ಫ್ಯಾಬ್ನ್ಯೂ ವೈವಿಧ್ಯತೆ ಮತ್ತು ಸೌಂದರ್ಯಪ್ರಜ್ಞೆಯ ಸ್ಪಷ್ಟತೆಯನ್ನು ಸಮತೋಲನಗೊಳಿಸುವ ಕೊಡುಗೆ ನೀಡುತ್ತಿದೆ. ಪ್ರತಿಯೊಂದು ಉತ್ಪನ್ನವನ್ನೂ ದೀರ್ಘಬಾಳಿಕೆಯ ಸ್ಟೈಲ್ ಬಿಂಬಿಸುವಂತೆ ವಿನ್ಯಾಸಗೊಳಿಸಲಾಗಿದ್ದು ಇಂದಿನ ಮೌಲ್ಯ ಆದರೆ ವಿನ್ಯಾ ಸದ ಅರಿವಿನ ಗ್ರಾಹಕರಿಗೆ ಇಷ್ಟವಾಗುವಂತೆ ಸ್ವಚ್ಛ, ವೈವಿಧ್ಯತೆಯ ವಿನ್ಯಾಸದ ಸಂವೇದನೆಗಳಿಗೆ ಒತ್ತು ನೀಡಲಾಗಿದೆ.


ದಾವಣಗೆರೆ: ಭಾರತದ ಅತ್ಯಂತ ಪ್ರೀತಿಪಾತ್ರ ಜೀವನಶೈಲಿ ಬ್ರಾಂಡ್ ಫ್ಯಾಬ್ಇಂಡಿಯಾ ತನ್ನ ವ್ಯಾಪ್ತಿಯಲ್ಲಿ ಹೊಸ ಬ್ರಾಂಡ್ “ಫ್ಯಾಬ್ನ್ಯೂ” ಬಿಡುಗಡೆ ಮಾಡಿದೆ. ಇದು ಕೈಗೆಟುಕುವ ಬೆಲೆಗಳಲ್ಲಿ ಸಮಕಾಲೀನ ಶ್ರೇಣಿಯನ್ನು ಒದಗಿಸುತ್ತಿದ್ದು ಸಮಯರಹಿತ ನೋಟ ಮತ್ತು ವಿಶ್ವಾಸಾರ್ಹ ಗುಣ ಮಟ್ಟ ಹೊಂದಿದೆ. ವಿನ್ಯಾಸ ತತ್ವ ಮತ್ತು ಸೌಂದರ್ಯಪ್ರಜ್ಞೆಗೆ ಬ್ರಾಂಡ್ ಬದ್ಧತೆಗೆ ಅನುಗುಣವಾಗಿ ಫ್ಯಾಬ್ನ್ಯೂ ಪುರುಷರು ಹಾಗೂ ಮಹಿಳೆಯರಿಗೆ ವೆಸ್ಟ್ರನ್ ವೇರ್, ಇಂಡಿಯನ್ ವೇರ್, ಪಾದರಕ್ಷೆ ಗಳಲ್ಲಿ ಆಧುನಿಕ ಸ್ಟೈಲ್ ಗಳನ್ನು ತರುತ್ತಿದ್ದು ಅದರೊಂದಿಗೆ ಮಹಿಳೆಯರ ಆಭರಣಗಳು ಹೊಂದಿದ್ದು ಪ್ರತಿನಿತ್ಯದ ಬಳಕೆ, ವರ್ಕ್ ವೇರ್ ಮತ್ತು ಹಬ್ಬದ ಉಡುಗೆಗಳಿವೆ.
ಅನುಕೂಲಕರ ಉಡುಪಿಗೆ ಆದ್ಯತೆಯೊಂದಿಗೆ ಫ್ಯಾಬ್ನ್ಯೂ ವೈವಿಧ್ಯತೆ ಮತ್ತು ಸೌಂದರ್ಯಪ್ರಜ್ಞೆಯ ಸ್ಪಷ್ಟತೆಯನ್ನು ಸಮತೋಲನಗೊಳಿಸುವ ಕೊಡುಗೆ ನೀಡುತ್ತಿದೆ. ಪ್ರತಿಯೊಂದು ಉತ್ಪನ್ನವನ್ನೂ ದೀರ್ಘಬಾಳಿಕೆಯ ಸ್ಟೈಲ್ ಬಿಂಬಿಸುವಂತೆ ವಿನ್ಯಾಸಗೊಳಿಸಲಾಗಿದ್ದು ಇಂದಿನ ಮೌಲ್ಯ ಆದರೆ ವಿನ್ಯಾಸದ ಅರಿವಿನ ಗ್ರಾಹಕರಿಗೆ ಇಷ್ಟವಾಗುವಂತೆ ಸ್ವಚ್ಛ, ವೈವಿಧ್ಯತೆಯ ವಿನ್ಯಾಸದ ಸಂವೇದನೆ ಗಳಿಗೆ ಒತ್ತು ನೀಡಲಾಗಿದೆ.
ಇದನ್ನೂ ಓದಿ: Davanagere News: ಕನಕನ ಮಕ್ಕಳು ಕೀಳರಿಮೆಯಿಂದ ಹೊರಬರಬೇಕಿದೆ: ಕೆ.ವಿ. ಪ್ರಭಾಕರ್
ಈ ಬಿಡುಗಡೆ ಕುರಿತು ಫ್ಯಾಬ್ ಇಂಡಿಯಾ ವಕ್ತಾರರು, “ಫ್ಯಾಬ್ನ್ಯೂವನ್ನು ಆಲೋಚನಾಪೂರ್ವಕ ವಿನ್ಯಾಸ, ವಿಶ್ವಾಸಾರ್ಹ ಗುಣಮಟ್ಟ ಮತ್ತು ಕೈಗೆಟುಕಬಲ್ಲತೆಯನ್ನು ಮೆಚ್ಚುವ ಮಾರುಕಟ್ಟೆಗಾಗಿ ಸೃಷ್ಟಿಸಲಾಗಿದೆ. ನಮ್ಮ ಬೇರುಗಳಿಗೆ ಬದ್ಧವಾಗಿ ನಾವು ಗುಣಮಟ್ಟದ ವಸ್ತ್ರಗಳನ್ನು ಬಳಸುವುದನ್ನು ಮುಂದುವರಿಸುತ್ತೇವೆ ಮತ್ತು ನಾವು ವಿಶ್ವಾಸವಿರಿಸಿದ ಮಾನದಂಡಗಳನ್ನು ಎತ್ತಿ ಹಿಡಿಯುತ್ತೇವೆ. ಎಥ್ನಿಕ್ ಮತ್ತು ವೆಸ್ಟ್ರನ್ ವೇರ್ ಎರಡೂ ಒಳಗೊಂಡ, ಮಹಿಳೆಯರಿಗೆ ಆಭರಣ ಒಳಗೊಂಡ ಫ್ಯಾಬ್ನ್ಯೂ ನಮಗೆ ನಮ್ಮ ಗ್ರಾಹಕರೊಂದಿಗೆ ಹೆಚ್ಚು ಆಳವಾಗಿ ಸಂಪರ್ಕ ಹೊಂದಲು, ನಾವು ನಂಬಿರುವುದಕ್ಕೆ ಬದ್ಧವಾಗಿ ಮಹತ್ತರ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡುತ್ತದೆ” ಎಂದರು.
ಫ್ಯಾಬ್ನ್ಯೂ ಪ್ರಾರಂಭಿಕವಾಗಿ ಪುಣೆ (ಚಿಂಚವಾಡ), ರಾಜಸ್ಥಾನ (ಭಿವಾಡಿ), ಗೋವಾ(ಮೊರ್ಜಿಮ್), ಕರ್ನಾಟಕ (ದಾವಣಗೆರೆ) ಮತ್ತು ಕೇರಳ (ತಿರುವನಂತಪುರಂ)ಗಳಲ್ಲಿ ವಿಶೇಷ ಮಳಿಗೆಗಳಲ್ಲಿ ಬಿಡುಗಡೆ ಮಾಡಲಾಗುತ್ತಿದ್ದು ನಂತರ ಸದ್ಯದಲ್ಲೇ ಫ್ಯಾಬ್ನ್ಯೂ ಮಳಿಗೆಗಳನ್ನು ತೆರೆಯಲಾಗುತ್ತದೆ. ಈ ಸಂಗ್ರಹವನ್ನು www.fabnu.in ಇಲ್ಲಿ ಕಾಣಬಹುದು.