ಐಪಿಎಲ್​ ಸುನಿತಾ ವಿಲಿಯಮ್ಸ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Facebook, Instagram Down: ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಸ್ಥಗಿತ; ಬಳಕೆದಾರರ ಪರದಾಟ

ಜನಪ್ರಿಯ ಸೋಶಿಯಲ್‌ ಮೀಡಿಯಾದ ಫ್ಲಾಟ್‌ಫಾರ್ಮ್‌ಗಳಾದ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂ ಜಾಗತಿಕವಾಗಿ ಸ್ಥಗಿತಗೊಂಡಿದ್ದು, ಬಳಕೆದಾರರು ಪರದಾಡುತ್ತಿದ್ದಾರೆ. ಆ್ಯಪ್‌ ಮತ್ತು ವೆಬ್‌ಸೈಟ್‌ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಭಾರತ ಸೇರಿದಂತೆ ಪ್ರಪಂಚದಾದ್ಯಂತದ ಬಳಕೆದಾರರು ದೂರಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಕಾಮೆಂಟ್‌ ಲೋಡ್‌ ಆಗುತ್ತಿಲ್ಲ ಮತ್ತು ಪೋಸ್ಟ್‌ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹಲವರು ದೂರಿದ್ದಾರೆ.

ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಸ್ಥಗಿತ; ಬಳಕೆದಾರರ ಪರದಾಟ

Profile Ramesh B Mar 25, 2025 9:28 PM

ಹೊಸದಿಲ್ಲಿ: ಮೆಟಾ (Meta)ದ ಬಹು ಜನಪ್ರಿಯ ಸೋಶಿಯಲ್‌ ಮೀಡಿಯಾದ ಫ್ಲಾಟ್‌ಫಾರ್ಮ್‌ಗಳಾದ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂ ಜಾಗತಿಕವಾಗಿ ಸ್ಥಗಿತಗೊಂಡಿದ್ದು (Facebook, Instagram Outage), ಬಳಕೆದಾರರು ಪರದಾಡುತ್ತಿದ್ದಾರೆ. ಆ್ಯಪ್‌ ಮತ್ತು ವೆಬ್‌ಸೈಟ್‌ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಭಾರತ ಸೇರಿದಂತೆ ಪ್ರಪಂಚದಾದ್ಯಂತದ ಬಳಕೆದಾರರು ದೂರಿದ್ದಾರೆ. ಪೋಸ್ಟ್‌ ಹಂಚಿಕೊಳ್ಳಲು, ಕಾಮೆಂಟ್‌ ಓದಲು ಸಾಧ್ಯವಾಗದೆ ಪರದಾಡುತ್ತಿರುವುದಾಗಿ ಹಲವರು ದೂರಿದ್ದಾರೆ. ಸಮಸ್ಯೆಗಳ ಪತ್ತೆ ಹಚ್ಚುವ ಡೌನ್‌ಡಿಟೆಕ್ಟರ್‌ (Downdetector)ಗೆ ಈ ಬಗ್ಗೆ ನೂರಾರು ದೂರುಗಳು ಹರಿದು ಬರುತ್ತಿವೆ ಎಂದು ಮೂಲಗಳು ತಿಳಿಸಿವೆ.

ಇನ್‌ಸ್ಟಾಗ್ರಾಮ್‌ನಲ್ಲಿ ಕಾಮೆಂಟ್‌ ಲೋಡ್‌ ಆಗುತ್ತಿಲ್ಲ ಮತ್ತು ಪೋಸ್ಟ್‌ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹಲವರು ದೂರಿದ್ದಾರೆ. ಸದ್ಯ ಸಮಸ್ಯೆಯ ಮೂಲ ಕಂಡುಹಿಡಿಯುವ ಪ್ರಯತ್ನ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.



ಮಂಗಳವಾರ ಸಂಜೆ 6.30ರ ವೇಳೆಗೆ ಈ ಸಮಸ್ಯೆ ಕಂಡು ಬಂದಿದೆ. ನೂರಾರು ಫೇಸ್‌ಬುಕ್‌ ಬಳಕೆದಾರರು ಈ ಬಗ್ಗೆ ದೂರು ನೀಡಲು ಆರಂಭಿಸಿದಾಗ ಇದು ಬೆಳಕಿಗೆ ಬಂದಿದೆ. ʼʼಕಾಮೆಂಟ್‌ ಲೋಡ್‌ ಆಗುತ್ತಿರಲೇ ಇಲ್ಲ ಎಂದು ಹಲವು ಬಳಕೆದಾರರು ದೂರಿದ್ದರುʼʼ ಎಂದು ಮೂಲಗಳು ತಿಳಿಸಿವೆ. ಜತೆಗೆ ತಮ್ಮ ಪೋಸ್ಟ್‌ನ ಬಂದಿರುವ ಕಾಮೆಂಟ್‌ ಓದಲು ಸಾಧ್ಯವಾಗುತ್ತಿಲ್ಲ ಎಂದು ಕೆಲವರು ತಿಳಿಸಿದ್ದಾರೆ.

ʼʼನನಗೆ ಕಾಮೆಂಟ್‌ ಕಾಣಿಸುತ್ತಿದೆ. ಆದರೆ ಅದರ ಮೇಲೆ ಕ್ಲಿಕ್‌ ಮಾಡಿದಾಗ ಕಾಮೆಂಟ್‌ ಮಾಯವಾಗಿ ಬಿಡುತ್ತದೆʼʼ ಎಂದು ಮತ್ತಷ್ಟು ಬಳಕೆದಾರರು ತಿಳಿಸಿದ್ದಾರೆ. ಸದ್ಯ ಮೆಟಾ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂ ಜಾಗತಿಕವಾಗಿ ಸ್ಥಗಿತಗೊಂಡಿರುವ ಬಗ್ಗೆ ಸಾಕಷ್ಟು ಮೀಮ್ಸ್‌ ಹರಿದಾಡುತ್ತಿದೆ.

ಕಳೆದ ತಿಂಗಳು ವಿಶ್ವಾದ್ಯಂತ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಡೌನ್‌ ಆಗಿತ್ತು

ಭಾರತ, ಅಮೆರಿಕ ಸೇರಿದಂತೆ ವಿಶ್ವಾದ್ಯಂತ ವಾಟ್ಸ್‌ಆ್ಯಪ್‌ ಮತ್ತು ಫೇಸ್‌ಬುಕ್‌ ಮೆಸೇಂಜರ್‌ ಸೇವೆಯಲ್ಲಿ ಕಳೆದ ತಿಂಗಳೂ ವ್ಯತ್ಯಯವಾಗಿತ್ತು. ಹಲವು ಮಂದಿ ಬಳಕೆದಾರರು ವಾಟ್ಸ್‌ಆ್ಯಪ್‌ನಲ್ಲಿ ಮೆಸೇಜ್‌ ಕಳುಹಿಸಲು ಸಾಧ್ಯವಾಗುತ್ತಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದು ಪೋಸ್ಟ್‌ ಮಾಡಿದ್ದರು. ಕೂಡಲೇ ಸಮಸ್ಯೆ ನಿವಾರಣೆಯಾಗಿತ್ತು.