ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಐಕಾನಿಕ್ 'ನಂಬರ್ 7' ಜೆರ್ಸಿ ಬದಲಿಸಲು ನಿರ್ಧರಿಸಿದರೇ ಧೋನಿ?

MS Dhoni change jersey No 7 : ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ತನ್ನ ಐಪಿಎಲ್ 2026 ರ ಋತುವನ್ನು ಉದ್ಘಾಟನಾ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸುವ ಮೂಲಕ ಪ್ರಾರಂಭಿಸುತ್ತದೆ. ಎರಡೂ ತಂಡಗಳು ಮಾರ್ಚ್ 30 ರಂದು ಗುವಾಹಟಿಯಲ್ಲಿ ಮುಖಾಮುಖಿಯಾಗಲಿವೆ.

ಐಕಾನಿಕ್ 'ನಂಬರ್ 7' ಜೆರ್ಸಿ ಬದಲಿಸಲು ನಿರ್ಧರಿಸಿದರೇ ಧೋನಿ?

MS Dhoni new jersey number -

Abhilash BC
Abhilash BC Mar 19, 2026 10:33 AM

ಚೆನ್ನೈ, ಮಾ.19: ನಂಬರ್ 7 ಹಲವಾರು ಕ್ರೀಡಾಪಟುಗಳ ಪಾಲಿಗೆ ಅದೃಷ್ಟ ಸಂಖ್ಯೆಯೆನಿಸಿದೆ. ಪೋರ್ಚುಗಲ್‌ನ ಪುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ, ಭಾರತದ ವಿಶ್ವಕಪ್ ವಿಜೇತ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ(MS Dhoni change jersey No 7) ಸಹ ತಮ್ಮ ಜೆರ್ಸಿಯಲ್ಲಿ ಏಳು ಅಂಕಿಯನ್ನು ಹೊಂದಿದ್ದಾರೆ. ಆದರೆ ಇದೀಗ ಧೋನಿ(MS Dhoni) ತಮ್ಮ ಐಕಾನಿಕ್ 'ನಂಬರ್ 7' ಜೆರ್ಸಿ ಕೈಬಿಟ್ಟು ಹೊಸ ಜೆರ್ಸಿ ನಂಬರ್‌ ಬಳಸಲಿದ್ದಾರೆ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದೆ.

ಹೌದು ಇದಕ್ಕೆ ಕಾರಣ ಧೋನಿಯ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಆದ ಒಂದು ವಿಡಿಯೊ. ಆ ವಿಡಿಯೋದಲ್ಲಿ, ಡ್ರೆಸ್ಸಿಂಗ್ ರೂಮ್‌ನಿಂದ ನಂ. 7 ಜೆರ್ಸಿಯನ್ನು ತೆಗೆದು, ಅದರ ಜಾಗದಲ್ಲಿ ನಂ. 8 ಇರುವ ಶರ್ಟ್ ಇಡುವುದನ್ನು ತೋರಿಸಲಾಗಿದೆ. ಜೊತೆಗೆ, 'ಕೆಲವು ನಂಬರ್‌ಗಳು ನಿಮ್ಮ ಜೊತೆಯೇ ಉಳಿಯುತ್ತವೆ. 7 ನನಗೆ ಯಾವಾಗಲೂ ವಿಶೇಷ. ಆದರೆ ಇಂದು ನಾನು 8ಕ್ಕೆ ಬದಲಾಗುತ್ತಿದ್ದೇನೆ. ಯಾಕೆಂದು ನಿಮಗೆ ಶೀಘ್ರದಲ್ಲೇ ತಿಳಿಯುತ್ತದೆ' ಎಂಬ ಕ್ಯಾಪ್ಶನ್ ಮತ್ತಷ್ಟು ಕುತೂಹಲ ಹೆಚ್ಚಿಸಿದೆ.

ಧೋನಿ ಅವರ ಐಕಾನಿಕ್ 'ನಂಬರ್ 7' ಜೆರ್ಸಿಯನ್ನು ಬಿಸಿಸಿಐ (BCCI) ಅಧಿಕೃತವಾಗಿ ನಿವೃತ್ತಿಗೊಳಿಸಿದೆ. ಜುಲೈ 7, 1981 ರಂದು ಜನಿಸಿದ ಧೋನಿ, ತಮ್ಮ ಜನ್ಮದಿನದ ನೆನಪಿಗಾಗಿ 2004 ರಿಂದ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಸಂಖ್ಯೆಯನ್ನು ಬಳಸುತ್ತಿದ್ದರು. ಸಚಿನ್ ತೆಂಡೂಲ್ಕರ್ ಅವರ ನಂ.10 ಜೆರ್ಸಿಯಂತೆ, ಧೋನಿ ಅವರ 7 ಸಂಖ್ಯೆಯ ಜೆರ್ಸಿಯನ್ನು ಗೌರವಾರ್ಥವಾಗಿ ಬೇರೆ ಆಟಗಾರರಿಗೆ ನೀಡದಿರಲು ನಿರ್ಧರಿಸಲಾಗಿದೆ. ಇದೀಗ ಧೋನಿ 8 ನಂಬರ್‌ ಜೆರ್ಸಿ ಬಳಸಲು ಮುಂದಾದ ಬಗ್ಗೆ ಅಭಿಮಾನಿಗಳಲ್ಲಿ ಸಹಜವಾಗಿಯೇ ಕುತೂಹಲ ಕೆರಳಿಸಿದೆ.



ಅಭಿಮಾನಿಗಳು ತಮ್ಮದೇ ಶೈಲಿಯಲ್ಲಿ ಈ ನಂಬರ್ 8ಕ್ಕೆ ಅರ್ಥ ಹುಡುಕುತ್ತಿದ್ದಾರೆ. ಕೆಲವರು ಇದು ಧೋನಿಯ 8ನೇ ಐಪಿಎಲ್ ಟ್ರೋಫಿ ಗೆಲ್ಲುವ ಗುರಿ ಎನ್ನುತ್ತಿದ್ದರೆ, ಇನ್ನು ಕೆಲವರು 7+1 ಅಂದರೆ ಇನ್ನೊಂದೇ ವರ್ಷ ಆಡುತ್ತೇನೆ ಎಂದು ಧೋನಿ ಸುಳಿವು ನೀಡುತ್ತಿದ್ದಾರೆ ಎನ್ನುತ್ತಾರೆ. ಆದರೆ, ಬಹುತೇಕರು ಇದೊಂದು ಜಾಹೀರಾತು ಅಷ್ಟೇ ಎಂದು ತಳ್ಳಿಹಾಕುತ್ತಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಜೇಮ್ಸ್ ಫೋಸ್ಟರ್ ನೂತನ ಫೀಲ್ಡಿಂಗ್ ಕೋಚ್

ಸಿಎಸ್‌ಕೆ ತಂಡವು ತನ್ನ ಐಪಿಎಲ್ 2026 ರ ಋತುವನ್ನು ಉದ್ಘಾಟನಾ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸುವ ಮೂಲಕ ಪ್ರಾರಂಭಿಸುತ್ತದೆ. ಎರಡೂ ತಂಡಗಳು ಮಾರ್ಚ್ 30 ರಂದು ಗುವಾಹಟಿಯಲ್ಲಿ ಮುಖಾಮುಖಿಯಾಗಲಿವೆ.