Physical Abuse: ಕೋಲಾರದಲ್ಲಿ ಹೀನ ಕೃತ್ಯ; ಮಗಳ ಮೇಲೆಯೇ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ ತಂದೆ!
Physical Abuse: 20 ವರ್ಷದ ಮಗಳ ಮೇಲೆ 5 ತಿಂಗಳ ಕಾಲ ತಂದೆ ನಿರಂತರವಾಗಿ ಅತ್ಯಾಚಾರ ಎಸಗಿದ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನಲ್ಲಿ ನಡೆದಿದೆ. ಮಗಳ ದೂರಿನ ಮೇರೆಗೆ ಪೊಲೀಸರು ತಂದೆಯನ್ನು ಪೊಲೀಸ್ ಅರೆಸ್ಟ್ ಮಾಡಿದ್ದಾರೆ. ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕೋಲಾರ: ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, ಕಾಮುಕ ತಂದೆಯೊಬ್ಬ ಮಗಳ ಮೇಲೆಯೇ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿರುವ ಘಟನೆ (Physical Abuse) ಕೋಲಾರ ಜಿಲ್ಲೆಯ (Kolar News) ಬಂಗಾರಪೇಟೆ ತಾಲೂಕಿನಲ್ಲಿ ನಡೆದಿದೆ. ಹೌದು, ಕಾಮುಕ ತಂದೆಯೊಬ್ಬ ತನ್ನ 20 ವರ್ಷದ ಮಗಳ ಮೇಲೆ 5 ತಿಂಗಳ ಕಾಲ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. ಮಗಳ ದೂರಿನ ಮೇರೆಗೆ ಪೊಲೀಸರು ತಂದೆಯನ್ನು ಪೊಲೀಸ್ ಅರೆಸ್ಟ್ ಮಾಡಿದ್ದಾರೆ. ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗೆ ಮೂವರು ಹೆಣ್ಣು ಮಕ್ಕಳು ಹಾಗೂ ಒಬ್ಬ ಪುತ್ರನಿದ್ದಾನೆ. ತಾಯಿ ಇಲ್ಲದ ಹೆಣ್ಣು ಮಕ್ಕಳನ್ನು ತಂದೆ ನೋಡಿಕೊಳ್ಳುತ್ತಿದ್ದ. ಅಲ್ಲದೇ ಈಗಾಗಲೇ ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಆಗಿದೆ. 20 ವರ್ಷದ ಮಗಳ ಮೇಲೆ ನಿರಂತರವಾಗಿ 5 ತಿಂಗಳಿನಿಂದ ತಂದೆ ಅತ್ಯಾಚಾರ ಎಸಗಿದ್ದ. ಯುವತಿ ಹೊಟ್ಟೆನೋವು ಎಂದು ಆಸ್ಪತ್ರೆಗೆ ಹೋದಾಗ ಕೃತ್ಯ ಬೆಳಕಿಗೆ ಬಂದಿದೆ. ಮಗಳ ದೂರಿನ ಮೇರೆಗೆ ಪೊಲೀಸರು ತಂದೆಯನ್ನು ಅರೆಸ್ಟ್ ಮಾಡಿದ್ದಾರೆ. ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸುದ್ದಿಯನ್ನೂ ಓದಿ | Assembly session: ಹೆತ್ತವರನ್ನು ನೋಡಿಕೊಳ್ಳದಿದ್ದರೆ ಆಸ್ತಿಯಲ್ಲಿ ಮಕ್ಕಳಿಗೆ ಪಾಲಿಲ್ಲ: ಸಚಿವ ಕೃಷ್ಣಬೈರೇಗೌಡ
ಪಪಂ ಮಾಜಿ ಅಧ್ಯಕ್ಷನಿಗೆ ಹನಿಟ್ರ್ಯಾಪ್ ಖೆಡ್ಡಾ, 20 ಲಕ್ಷಕ್ಕೆ ಬೇಡಿಕೆ; ಇಬ್ಬರು ಯುವತಿಯರು ವಶಕ್ಕೆ

ಗುಬ್ಬಿ: ಸುಂದರಿಯೊಬ್ಬಳ ಮೋಸದ ಜಾಲಕ್ಕೆ ಹನಿಟ್ರ್ಯಾಪ್‌ಗೆ (Honey Trap Case) ಒಳಗಾದ ಗುಬ್ಬಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಎನ್.ಅಣ್ಣಪ್ಪಸ್ವಾಮಿ, ಬ್ಲ್ಯಾಕ್‌ಮೇಲ್‌ಗೆ ಹೆದರಿ ಲಕ್ಷಾಂತರ ರೂ.ಗಳ ದಂಡ ತೆತ್ತುವ ಮುನ್ನ ಗುಬ್ಬಿ ಪೊಲೀಸ್ ಠಾಣೆಗೆ (Gubbi Police Station) ದೂರು ನೀಡಿದ್ದಾರೆ. ಈ ಸಂಬಂಧ ತನಿಖೆ ನಡೆಸಿದ ಪೊಲೀಸರು, ತುಮಕೂರಿನ ಕ್ಯಾತ್ಸಂದ್ರ ನಿವಾಸಿಯಾದ ನಿಶಾ, ಆಕೆಯ ಸ್ನೇಹಿತೆ ಜ್ಯೋತಿಯನ್ನು ಬಂಧಿಸಿದ್ದಾರೆ. ಆಕೆಯ ಗ್ಯಾಂಗ್‌ನ ಬಸವರಾಜು, ಭರತ್ ಎಂಬುವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಕಳೆದ 45 ದಿನಗಳಿಂದ ನಡೆದ ಈ ಹೈಡ್ರಾಮಾ ಫೇಸ್‌ಬುಕ್ ಮೂಲಕ ಲಲನೆಯೊಬ್ಬಳ ಸ್ನೇಹ ಬೆಳೆಸಿ ದಿನ ಕಳೆದಂತೆ ಹನಿ ಟ್ರ್ಯಾಪ್‌ಗೆ ಸಿಲುಕಿದ ಪಟ್ಟಣ ಪಂಚಾಯಿತಿ ನಿಕಟ ಪೂರ್ವ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಜಿ.ಎನ್.ಅಣ್ಣಪ್ಪಸ್ವಾಮಿ ಬರೋಬ್ಬರಿ 20 ಲಕ್ಷ ರೂಗಳ ಹಣದ ಬೇಡಿಕೆಗೆ ಹೆದರಿ ಗುಬ್ಬಿ ಪೊಲೀಸರ ಮೊರೆ ಹೋಗಿದ್ದಾರೆ.
ಫೇಸ್‌ಬುಕ್‌ನಲ್ಲಿ ಸ್ನೇಹ ಬೆಳೆದ ನಂತರ ಹಾಯ್, ಬಾಯ್, ಗುಡ್ ಮಾರ್ನಿಂಗ್, ಅಂತೆಲ್ಲ ಬೆಳೆದ ಸ್ನೇಹ ಸಲುಗೆ ಮಿತಿ ಮೀರಿ ವಿಡಿಯೋ ಕಾಲಿಂಗ್ ಮಾಡಿ, ಮಾತನಾಡುವ ಘಟ್ಟ ತಲುಪಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಆ ಯುವತಿ ಹಲವು ಕಡೆ ಬಲವಂತವಾಗಿ ಕರೆಸಿಕೊಂಡು ಮದುವೆಯಾಗುವಂತೆ ಒತ್ತಾಯಿಸುತ್ತಿದಳು ಎನ್ನಲಾಗಿದೆ.
ತಿಪಟೂರು, ದೊಡ್ಡಬಳ್ಳಾಪುರ, ನೆಲಮಂಗಲ ಹೀಗೆ ನಾನಾ ಕಡೆ ಕರೆದು ಪ್ರೀತಿಸುತ್ತಿದ್ದೇನೆ ನನ್ನನ್ನು ಮದುವೆ ಮಾಡಿಕೊಳ್ಳಿ ಎಂದು ಒತ್ತಡ ಹಾಕಿ, ಇದಕ್ಕೆ ಒಪ್ಪದಿದ್ದ ಕಾರಣ ಸ್ನೇಹಿತರೊಂದಿಗೆ ಸೇರಿ ಅವಳ ಜತೆಗಿನ ಫೋಟೊ, ವಿಡಿಯೊ ವೈರಲ್ ಮಾಡುವುದಾಗಿ ಹೆದರಿಸಿ ಹಣದ ಬೇಡಿಕೆ ಇಟ್ಟಿದ್ದಾಳೆ ಎಂಬುದು ಮಾಜಿ ಅಧ್ಯಕ್ಷ ಆರೋಪಿಸಿದ್ದಾರೆ.
ದೂರು ಅರ್ಜಿ ಹೊರತಾಗಿ ಕೆಲ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಹಲವು ಬಿಸಿ ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ ಮುಖಂಡ ಅಣ್ಣಪ್ಪಸ್ವಾಮಿ ಬ್ಲ್ಯಾಕ್ ಮೇಲರ್ ಮಹಿಳೆಯ ಗೆಳೆತನ ನಂತರ ಭೇಟಿ, ದಿಢೀರ್ ಪ್ರೇಮ, ಆಮೇಲೆ ಅಲ್ಲಲ್ಲಿ ಮೀಟಿಂಗ್ ಮಾಡಿಕೊಂಡು ಒಂದು ಕಡೆ ಸೇರೋದು ಈಗೆಲ್ಲಾ ನಡೆಯುತ್ತಿದ್ದ ಸಲುಗೆ, ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಈ ಪ್ರಕರಣದಲ್ಲಿ ಮತ್ತೊಬ್ಬ ಮಹಿಳೆಯ ಹೆಸರು ತಳುಕು ಹಾಕಿಕೊಂಡಿದೆ.
ಬೆಂಗಳೂರು ಕಡೆಗೆ ತೆರಳಲು ಹೇಳಿ ದೊಡ್ಡಬಳ್ಳಾಪುರ ಕಡೆ ಕರೆದುಕೊಂಡು ಹೋದ ಮಹಿಳೆ ದಾರಿಯುದ್ಧಕ್ಕೂ ಬೆದರಿಕೆ ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಪೋಟೊ ವಿಡಿಯೊ ವೈರಲ್ ಮಾಡಿ ಮಾನ ಮರ್ಯಾದೆ ತೆಗೆಯುವ ಬೆದರಿಕೆಯಲ್ಲೇ ಹೊಟೇಲ್ ರೂಂ ನಲ್ಲಿ ಇಬ್ಬರು ಯುವಕರನ್ನು ಕರೆಸಿ ಬೆದರಿಕೆ ಹಾಕಿ ಕೊನೆಗೆ ಹಣಕ್ಕೆ ಬೇಡಿಕೆ ಇಡಲಾಗಿದೆ ಎಂದು ದೂರು ಉಲ್ಲೇಖ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ | Murder Case: ದೃಶ್ಯ ಸಿನಿಮಾದಂತೆ ಪ್ಲಾನ್ ಮಾಡಿ ಕೊಲೆ ಮಾಡಿದ ಖತರ್‌ನಾಕ್ ಆರೋಪಿ 4 ತಿಂಗಳ ಬಳಿಕ ಸೆರೆ!
ದೂರು ಆಧರಿಸಿ ಗುಬ್ಬಿ ಪೊಲೀಸರು ಪ್ರಕರಣ ದಾಖಲಾಗಿಸಿ ಈ ಸಂಬಂಧ ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಸಾಂತ್ವನ ಕೇಂದ್ರದಲ್ಲಿ ಇರಿಸಿದ್ದಾರೆ. ಮಹಿಳೆಯರ ಜೊತೆ ಸೇರಿಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾದ ಗುಬ್ಬಿ ಪಟ್ಟಣದ ಯುವಕ ಭರತ್ ಮತ್ತು ಬಿಲ್ಲೇಪಾಳ್ಯ ಬಸವರಾಜು ಎಂಬುವರ ಸೆರೆಗೆ ತಂಡ ರಚಿಸಿದ್ದಾರೆ.