Education Loan: ಶಿಕ್ಷಕರ- ಉಪನ್ಯಾಸಕರ ಮಕ್ಕಳಿಗೆ ಸಿಹಿ ಸುದ್ದಿ, ಧನಸಹಾಯಕ್ಕೆ ಅರ್ಜಿ ಆಹ್ವಾನ
ಪ್ರೋತ್ಸಾಹ ನೀಡುವ ಮತ್ತು ವ್ಯಾಸಂಗಕ್ಕೆ ತಗಲುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಹಾಗೂ ಶಿಕ್ಷಕರ ಮಕ್ಕಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುವ ಸಲುವಾಗಿ ನಿಧಿಗಳ ವತಿಯಿಂದ ಈ ಸೌಲಭ್ಯ ಒದಗಿಸಲಾಗಿದೆ.
ಬೆಂಗಳೂರು: 2024-2025ನೇ ಸಾಲಿನಲ್ಲಿ ವೈದ್ಯಕೀಯ (Medical) ಹಾಗೂ ಇಂಜಿನಿಯರಿಂಗ್ (Engineering) ವೃತ್ತಿಪರ ಶಿಕ್ಷಣ ಕೋರ್ಸ್ (ಸ್ನಾತಕೋತ್ತರ ಪದವಿ ಒಳಗೊಂಡಂತೆ) ವ್ಯಾಸಂಗ ಪೂರ್ಣಗೊಳಿಸಿದ್ದು, ರಾಷ್ಟ್ರೀಕೃತ ಬ್ಯಾಂಕ್‌ನಿಂದ ಶೈಕ್ಷಣಿಕ ಸಾಲ (Education loan) ಪಡೆದ ಶಿಕ್ಷಕರ/ಉಪನ್ಯಾಸಕರ (Teachers, lecturers) ಮಕ್ಕಳಿಗೆ ಧನಸಹಾಯವನ್ನು (Financial assistance) ಮಂಜೂರು ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ 01.02.2018ರಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ನಿಧಿಗಳ ವತಿಯಿಂದ ಆಜೀವ ಸದಸ್ಯತ್ವ ಹೊಂದಿರುವ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ, ಪ್ರೌಢ, ಪದವಿ ಹಾಗೂ ಸ್ನಾತಕೋತ್ತರ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರ/ಉಪನ್ಯಾಸಕರ ಮಕ್ಕಳಿಗೆ (1 ರಿಂದ 10ನೇ ತರಗತಿಯವರೆಗೆ ಸರ್ಕಾರಿ ಅಥವಾ ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡಿರುವ ಮಕ್ಕಳಿಗೆ ಮಾತ್ರ) ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಸಂಬಂಧಿಸಿದ ವೃತ್ತಿಪರ ಶಿಕ್ಷಣ ಕೋರ್ಸ್‌ಗಳ (ಸ್ನಾತಕೋತ್ತರ ಪದವಿ ಒಳಗೊಂಡಂತೆ) ಉನ್ನತ ವ್ಯಾಸಂಗಕ್ಕೆ ಶಿಕ್ಷಕರು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಶೈಕ್ಷಣಿಕ ಸಾಲ ಪಡೆದಿದ್ದಲ್ಲಿ ಮಾತ್ರ ಅಂತಹ ಶಿಕ್ಷಕರ ಮಕ್ಕಳಿಗೆ ಧನಸಹಾಯ ನೀಡಲು ತೀರ್ಮಾನಿಸಲಾಗಿದೆ.
ಇವರಿಗೆ ಪ್ರೋತ್ಸಾಹ ನೀಡುವ ಮತ್ತು ವ್ಯಾಸಂಗಕ್ಕೆ ತಗಲುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಹಾಗೂ ಶಿಕ್ಷಕರ ಮಕ್ಕಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುವ ಸಲುವಾಗಿ ನಿಧಿಗಳ ವತಿಯಿಂದ ಈ ಸೌಲಭ್ಯ ಒದಗಸಲಾಗಿದೆ. ಈ ಧನಸಹಾಯ ಪಡೆಯಲು ಅರ್ಜಿ ಸಲ್ಲಿಸುವವರು ಕೆಳಕಂಡ ಷರತ್ತುಗಳನ್ನು ಕಡ್ಡಾಯವಾಗಿ ಪೂರೈಸಿರಬೇಕು.
- ನಿಧಿಗಳ ಕಚೇರಿಯಿಂದ ಅಜೀವ ಸದಸ್ಯತ್ವ ಹೊಂದಿರುವ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ, ಪದವಿ ಮತ್ತು ಸ್ನಾತಕೋತ್ತರ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕ/ಉಪನ್ಯಾಸಕರ/ಪ್ರಾದ್ಯಾಪಕರ/ಪ್ರಾಚಾರ್ಯರ/ನೀಡರ್‌ಗಳ ಮಕ್ಕಳಿಗೆ ಮಾತ್ರ ಧನಸಹಾಯ ನೀಡಲಾಗುವುದು. (ನಿವೃತ್ತ ಶಿಕ್ಷಕರಿಗೆ ಈ ಧನಸಹಾಯ ಅನ್ವಯಿಸುವುದಿಲ್ಲ) ಆಜೀವ ಸದಸ್ಯತ್ವ ಕಾರ್ಡ್ (LMS) ದೃಢೀಕರಿಸಿ ಲಗತ್ತಿಸುವುದು. ಅನುದಾನಿತ ಶಿಕ್ಷಕರು/ಉಪನ್ಯಾಸಕರಾಗಿದ್ದಲ್ಲಿ, HRMS ಪ್ರತಿ ಅಥವಾ ನೇಮಕಾತಿ ಅನುಮೋದನೆ ಪ್ರತಿಯನ್ನು ಸಂಬಂಧಿಸಿದ ಶಾಲಾ ಕಾಲೇಜು ಮುಖ್ಯಸ್ಥರಿಂದ ದೃಢೀಕರಿಸಿ ಸಲ್ಲಿಸುವುದು.
- ವೃತ್ತಿಪರ ಶಿಕ್ಷಣದಲ್ಲಿ ಪ್ರತಿ ವರ್ಷ/ಪ್ರತಿ ಸೆಮಿಸ್ಟನರ್‌ನಲ್ಲಿ ಪ್ರಥಮ ಪ್ರಯತ್ನದಲ್ಲೇ ಉತ್ತೀರ್ಣರಾಗಿರುವುದು ಕಡ್ಡಾಯವಾಗಿರುತ್ತದೆ.
- ಅಂಕಪಟ್ಟಿಗಳನ್ನು ಸಂಬಂಧಿಸಿದ ಸಂಸ್ಥೆಗಳ ಮುಖ್ಯಸ್ಥರಿಂದ ದೃಢೀಕರಿಸಿ ಸಲ್ಲಿಸಬೇಕು.
- ವಿದ್ಯಾರ್ಥಿಗಳ ವೈದ್ಯಕೀಯ, ಇಂಜಿನಿಯರಿಂಗ್ ಹಾಗೂ ಸ್ನಾತಕೋತ್ತರ ಪದವಿಗಳಿಗೆ ಸಂಬಂಧಿಸಿದಂತೆ, ಭಾರತದ ಯಾವುದೇ ರಾಜ್ಯದಲ್ಲಿ ವ್ಯಾಸಂಗ ಮಾಡಲು ಯಾವುದೇ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಶೈಕ್ಷಣಿಕ ಸಾಲ ಪಡೆದಿದ್ದಲ್ಲಿ ಅಂತಹ ವಿದ್ಯಾರ್ಥಿಗಳು ಧನಸಹಾಯಕ್ಕೆ ಅರ್ಹರೆಂದು ಪರಿಗಣಿಸಲಾಗುವುದು.
- ಬ್ಯಾಂಕ್‌ಗಳಲ್ಲಿ ಎಷ್ಟೇ ಮೊತ್ತದ ಶೈಕ್ಷಣಿಕ ಸಾಲ ಪಡೆದಿದ್ದರೂ ನಿಧಿಗಳ ಕಚೇರಿಯಿಂದ ಬ್ಯಾಂಕ್ ವಿಧಿಸಿದ ಬಡ್ಡಿ ಹಣಕ್ಕೆ ಮಾತ್ರ ಗರಿಷ್ಠ ರೂ. 50.000/-ಗಳ ಧನಸಹಾಯವನ್ನು ಒಂದು ಬಾರಿಗೆ ಮಾತ್ರ ನೀಡಲಾಗುವುದು. (ಈಗಾಗಲೇ ಭಾಗಶಃ ಬಡ್ಡಿ ಪಾವತಿಸಿದ್ದರೂ ಸಹ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.)