ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ದಿನ ಭವಿಷ್ಯ, ಮಾರ್ಚ್ 17, 2026: ಇಂದು ಜೇಬಿಗೆ ಕತ್ತರಿ ಬೀಳಬಹುದು; ಎಚ್ಚರ

Horoscope Today March 17: ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಶರದೃತು, ಫಾಲ್ಗುಣ ಮಾಸ, ಕೃಷ್ಣೆ ಪಕ್ಷ, ತ್ರಯೋದಶಿ ತಿಥಿ, ಶತಭಿಷಾ ನಕ್ಷತ್ರದ ಮಾರ್ಚ್ 17ನೇ ತಾರೀಕಿನ ಈ ದಿನದ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಈ ರಾಶಿಗೆ ಇಂದು ಧನ ವ್ಯಯ ಸಾಧ್ಯತೆ

ಇಂಟರ್‌ನೆಟ್ ಚಿತ್ರ -

Profile
Pushpa Kumari Mar 17, 2026 6:00 AM

ಬೆಂಗಳೂರು, ಮಾ. 17: ಇಂದು ವಿಶ್ವಾವಸು ನಾಮ ಸಂವತ್ಸರದ ಉತ್ತರಾಯಣ, ಶರದೃತು, ಫಾಲ್ಗುಣ ಮಾಸೆ, ಶತಭಿಷಾ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿಗಳ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.

ಮೇಷ ರಾಶಿ: ಶತಭಿಷಾ ನಕ್ಷತ್ರದ ಅಧಿಪತಿ ರಾಹು. ಹಾಗಾಗಿ ಹೆಚ್ಚಿನವರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಮೇಷ ರಾಶಿಯವರಿಗೆ ಉತ್ತಮವಾಗಿದ್ದು ಇಷ್ಟಾರ್ಥ ಸಿದ್ಧಿಯಾಗುತ್ತದೆ.‌ ಅತೀ ಹೆಚ್ಚಿನ ಧನ ಲಾಭ ಕೂಡ ನಿಮಗೆ ಆಗುತ್ತದೆ.

ವೃಷಭ ರಾಶಿ: ಇಂದು ವೃಷಭ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಲಾಭ ಸಿಗುತ್ತದೆ. ಪ್ರಮೋಷನ್, ಬಡ್ತಿ ಸಿಗುವ ಸಾಧ್ಯ ಇದೆ.

ಮಿಥುನ ರಾಶಿ: ಮಿಥುನ ರಾಶಿಯವರು ಭವಿಷ್ಯಕ್ಕೆ ಸಂಬಂಧಿಸಿದ ಅತೀ ಮುಖ್ಯವಾದ ನಿರ್ಧಾರವನ್ನು ತೆಗೆದುಕೊಳ್ಳಲಿದ್ದೀರಿ. ಇದು ನಿಮಗೆ ಮುಂದಿನ ದಿನದಲ್ಲಿ ಒಳ್ಳೆಯದಾಗಿ ಪರಿಣಮಿಸುತ್ತದೆ.

ಕಟಕ ರಾಶಿ: ಕಟಕ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯವಾದ ನಿರ್ಧಾರವನ್ನು ನೀವು ಕೈಗೊಳ್ಳುತ್ತೀರಿ.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ವ್ಯವಹಾರದಲ್ಲಿ ಮುಖ್ಯ ಬದಲಾವಣೆ ಕಂಡು ಬರಬಹುದು. ಆದರೆ ಯಾವುದೇ ನಿರ್ಧಾರ ಕೈಗೊಳ್ಳುವಾಗ ಅತಿಯಾಗಿ ಯೋಚಿಸಬೇಕಾಗುತ್ತದೆ.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಮನಸ್ಸಿನಲ್ಲಿ ಕಿರಿ ಕಿರಿ ಉಂಟಾಗುವ ಸಾಧ್ಯತೆ ಇದೆ.‌ ಮಿತ್ರರು ಕೂಡ ಶತ್ರುಗಳಾಗಲಿದ್ದು, ಎಚ್ಚರ.

ಮನೆ ಗುಡಿಸುವುದಕ್ಕೆ ಮಾತ್ರವಲ್ಲ ಒರೆಸುವುದಕ್ಕೂ ಇದೆ ವಾಸ್ತು ನಿಯಮ!

ತುಲಾ ರಾಶಿ: ತುಲಾ ರಾಶಿಯವರಿಗೆ ಪ್ರೀತಿ-ಪ್ರೇಮ ದಾಂಪತ್ಯದ ವಿಚಾರದಲ್ಲಿ ಒಳಿತು ಆಗುತ್ತದೆ. ಯಾವುದೋ ಮುಖ್ಯ ನಿರ್ಧಾರಗಳನ್ನು ಇಂದು ನೀವು ಕೈಗೊಳ್ಳಬಹುದು.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರು ಆಸ್ತಿ ಪಾಸ್ತಿ ವಿಚಾರಕ್ಕೆ ಸಂಬಂಧಿಸಿ ಮುಖ್ಯ ನಿರ್ಧಾರ ತೆಗೆದುಕೊಳ್ಳಬಹುದು. ಕೋರ್ಟ್, ಕಚೇರಿ ವ್ಯವಹಾರ ಇಂದು ಮಾಡುವುದು ಒಳ್ಳೆಯದಲ್ಲ.

ಧನಸ್ಸು ರಾಶಿ: ಧನಸ್ಸು ರಾಶಿಯವರು ಮುಖ್ಯವಾದ ಕೆಲಸ ಮಾಡುತ್ತಿರಿ‌. ಕಾರ್ಯಕ್ಷೇತ್ರದಲ್ಲಿ ಯಶಸ್ಸು ಕಾಣುತ್ತೀರಿ.

ಮಕರ ರಾಶಿ: ಮಕರ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಕುಟುಂಬದ ಜತೆ ನೀವು ಇಂದು ಹೆಚ್ಚಿನ ಸಮಯವನ್ನು ಕಳೆಯಲಿದ್ದೀರಿ. ಹಣಕಾಸಿನ ವಿಚಾರವಾಗಿ ನಷ್ಟ ಆಗುತ್ತದೆ.

ಕುಂಭರಾಶಿ: ಈ ರಾಶಿಯವರು ವೈಯಕ್ತಿಕವಾಗಿ ಕೆಲವು ಬದಲಾವಣೆ ಮಾಡಿಕೊಳ್ಳಬೇಕು. ಇದರಿಂದ ನಿಮಗೆ ಮುಂದೆ ಒಳ್ಳೆಯದಾಗಬಹುದು.

ಮೀನ ರಾಶಿ: ಮೀನ ರಾಶಿಗೆ ಕಷ್ಟದ ದಿನವಾಗಲಿದೆ. ಸ್ನೇಹದಲ್ಲಿ ಕಲಹ ಉಂಟಾಗಬಹುದು. ಮುಂದಿನ ದಿನದಲ್ಲಿ ನಿಮಗೆ ಒಳಿತು ಆಗುವ ಸಾಧ್ಯತೆ ಇದೆ.