ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಅಪರಿಚಿತರೊಡನೆ ಸ್ನೇಹ ಆಪತ್ತಿಗೆ ಆಹ್ವಾನ

ಸೂರ್ಯ ಮುಳುಗುತ್ತಿದ್ದಂತೆ ಜಿಂಕೆಯು ನರಿಯೊಂದಿಗೆ ಚಂಪಕ ಮರದ ಕೆಳಗಿರುವ ತನ್ನ ಮನೆಗೆ ಹಿಂದಿರುಗಿತು. ಮರದ ಮೇಲೆ ಜಿಂಕೆಯ ಸ್ನೇಹಿತ ಕಾಗೆ ವಾಸಿಸುತ್ತಿತ್ತು. ಜಿಂಕೆಯು ನರಿಯನ್ನು ತನ್ನ ಹೊಸ ಸ್ನೇಹಿತ ಎಂದು ಕಾಗೆಗೆ ಪರಿಚಯಿಸಿತು. ಕಾರಣವಿಲ್ಲದೆ ಬರುವ ಅಪರಿಚಿತರನ್ನು ನಂಬುವುದು ಸರಿಯಲ್ಲ ಎಂದು ಕಾಗೆ ಜಿಂಕೆಯನ್ನು ಪಕ್ಕಕ್ಕೆ ಕರೆದು ಹೇಳಿತು.

ಒಂದೊಳ್ಳೆ ಮಾತು

rgururaj628@gmail.com

ಅರಣ್ಯವೊಂದರಲ್ಲಿ ಜಿಂಕೆ ಮತ್ತು ಕಾಗೆ ಆತ್ಮೀಯ ಸ್ನೇಹಿತರಾಗಿ ವಾಸಿಸುತ್ತಾ ಇರುತ್ತವೆ. ಒಂದು ದಿನ, ಒಂದು ಗುಳ್ಳೆನರಿ ಕಾಡಿನಲ್ಲಿ ಜಿಂಕೆ ಮೇಯುವುದನ್ನು ನೋಡಿತು. ಈ ಜಿಂಕೆಯ ಮಾಂಸ ವನ್ನು ಹೇಗಾದರೂ ತಿನ್ನಬೇಕು ಎಂದು ಬಯಸಿತು. ಜಿಂಕೆಗೆ ಹತ್ತಿರ ವಾಗಲು ಅದರ ಸ್ನೇಹ ಮಾಡ ಬೇಕೆಂದು ನಿರ್ಧರಿಸಿತು. ಜಿಂಕೆ ಬಳಿ ಬಂದ ನರಿ ನಾನು ಇಲ್ಲಿಯವರೆಗೆ ಯಾವುದೇ ಸ್ನೇಹಿತರಿಲ್ಲದೆ ಬದುಕಿದ್ದೇನೆ, ಆದರೆ ಈಗ ನಾನು ನಿನ್ನನ್ನು ಭೇಟಿಯಾಗಿದ್ದೇನೆ, ಈಗ ನನಗೆ ನಾನು ಸಾಕಷ್ಟು ಸ್ನೇಹಿತರೊಂದಿಗೆ ಹೊಸ ಜೀವನವನ್ನು ಪ್ರಾರಂಭಿಸಬೇಕು ಎಂದೆನಿಸುತ್ತಿದೆ ಎಂದು ಹೇಳಿತು. ಜಿಂಕೆ ಹೆಚ್ಚು ಯೋಚಿಸದೆ ನರಿಯ ಸ್ನೇಹವನ್ನು ಒಪ್ಪಿಕೊಂಡಿತು.

ಸೂರ್ಯ ಮುಳುಗುತ್ತಿದ್ದಂತೆ ಜಿಂಕೆಯು ನರಿಯೊಂದಿಗೆ ಚಂಪಕ ಮರದ ಕೆಳಗಿರುವ ತನ್ನ ಮನೆಗೆ ಹಿಂದಿರುಗಿತು. ಮರದ ಮೇಲೆ ಜಿಂಕೆಯ ಸ್ನೇಹಿತ ಕಾಗೆ ವಾಸಿಸುತ್ತಿತ್ತು. ಜಿಂಕೆಯು ನರಿಯನ್ನು ತನ್ನ ಹೊಸ ಸ್ನೇಹಿತ ಎಂದು ಕಾಗೆಗೆ ಪರಿಚಯಿಸಿತು. ಕಾರಣವಿಲ್ಲದೆ ಬರುವ ಅಪರಿಚಿತರನ್ನು ನಂಬುವುದು ಸರಿಯಲ್ಲ ಎಂದು ಕಾಗೆ ಜಿಂಕೆಯನ್ನು ಪಕ್ಕಕ್ಕೆ ಕರೆದು ಹೇಳಿತು.

ಇದನ್ನೂ ಓದಿ: Roopa Gururaj Column: ಸಾವಿಲ್ಲದ ಮನೆಯ ಸಾಸಿವೆ ಉಂಟೇ ?

ಯಾರಲ್ಲೂ ಕೆಟ್ಟದ್ದನ್ನು ಕಾಣದ ಜಿಂಕೆ ಕಾಗೆಯ ಬುದ್ಧಿವಾದವನ್ನು ಲೆಕ್ಕಿಸಲಿಲ್ಲ. ಬದಲಾಗಿ ಕಾಗೆಗೆ ಬುದ್ಧಿ ಹೇಳುತ್ತಾ, ಎಲ್ಲರಲ್ಲೂ ಒಳ್ಳೆಯದನ್ನು ಕಾಣಬೇಕು ನಾವು ಮೂವರೂ ಒಳ್ಳೆ ಸ್ನೇಹಿತರಾಗಿ ಸುಖವಾಗಿ ಬಾಳೋಣವೆಂದು ಹೇಳಿತು.

ನರಿ ಈ ಇಬ್ಬರೂ ಹೊಸ ಸ್ನೇಹಿತರೊಂದಿಗೆ ವಾಸಿಸಲು ಪ್ರಾರಂಭಿಸಿತು. ನರಿಯು ಒಂದು ದಿನ ಜಿಂಕೆಗೆ ನಿನಗೆ ಸಾಕಷ್ಟು ರುಚಿರುಚಿಯಾದ ಆಹಾರ ಸಿಗುವ ಜಾಗ ತೋರಿಸುತ್ತೇನೆ ಎಂದು ಅದನ್ನು ಸ್ವಲ್ಪ ದೂರ ಕರೆದುಕೊಂಡು ಹೋಗಿ ಜೋಳದಿಂದ ತುಂಬಿದ ಹೊಲವೊಂದನ್ನು ತೋರಿಸಿತು. ಜೋಳದ ಹೊಲದಲ್ಲಿ ರೈತ ಹಾಕುವ ಬಲೆಗೆ ಜಿಂಕೆ ಸಿಕ್ಕಿಬಿದ್ದಲ್ಲಿ ರೈತನಿಗೆ ಸಿಗುವ ಜಿಂಕೆ ಮಾಂಸ ದಲ್ಲಿ ತಾನೂ ಪಾಲು ಕೇಳಬಹುದೆಂದು ಮೋಸಗಾರ ನರಿ ಈ ಉಪಾಯ ಮಾಡಿತ್ತು.

ಒಂದು ದಿನ ಜಿಂಕೆ ಅಲ್ಲಿ ಮೇಯುತ್ತಿದ್ದಾಗ ರೈತ ಹಾಕಿದ ಬಲೆಗೆ ಸಿಕ್ಕಿಬಿದ್ದಿತು. ಬಲೆಯನ್ನು ಕತ್ತರಿ ಸಲು ಜಿಂಕೆ ನರಿಯನ್ನು ವಿನಂತಿಸಿತು. ಆದರೆ ಇದನ್ನೇ ಬಹು ದಿನಗಳಿಂದ ಕಾಯುತ್ತಿದ್ದ ನರಿ ನಿರಾ ಕರಿಸಿತು. ಇಂದು ನನ್ನ ಉಪವಾಸದ ದಿನ, ಈ ದಿನ ನಾನು ಚರ್ಮದಿಂದ ಮಾಡಿದ ಬಲೆಯನ್ನು ಮುಟ್ಟುವಂತಿಲ್ಲ ಎಂದು ಸುಳ್ಳು ಹೇಳಿತು. ಜಿಂಕೆ ಮನೆಗೆ ಹಿಂತಿರುಗದಿದ್ದಾಗ ಆತಂಕಗೊಂಡ ಅದರ ಸ್ನೇಹಿತ ಕಾಗೆ ಅದನ್ನು ಹುಡುಕಲು ಆರಂಭಿಸಿತು. ಆದರೆ ಅಷ್ಟರಲ್ಲಾಗಲೇ ರೈತ ಹರಿತವಾದ ಆಯುಧವೊಂದನ್ನು ಹಿಡಿದು ಹೊಲದೆಡೆ ಬರುತ್ತಿದ್ದ.

ಮರದ ಮೇಲೆ ಕುಳಿತು ಅಷ್ಟು ದೂರದಿಂದಲೇ ರೈತನನ್ನು ನೋಡಿದ ಕಾಗೆ ಉಪಾಯ ವೊಂದನ್ನು ಮಾಡಿತು. ಹಾರಿ ಜಿಂಕೆಯ ಬಳಿ ಬಂದು, ‘ಸದ್ಯಕ್ಕೆ ನೀನು ಸತ್ತಂತೆ ವರ್ತಿಸು’ ಎಂದು ಹೇಳಿತು. ಜಿಂಕೆ ಸತ್ತಂತೆ ನೆಲದ ಮೇಲೆ ಮಲಗಿತು. ಜಿಂಕೆ ಮೃತಪಟ್ಟಿದೆ ಎಂದು ನಿರಾಳನಾದ ರೈತ ಬಲೆಯನ್ನು ಕತ್ತರಿಸುತ್ತಾನೆ. ಆಗ ಕಾಗೆ ಕೂಗಿತು ಅದೇ ಸಮಯಕ್ಕೆ ಕಾಯುತ್ತಿದ್ದ ಜಿಂಕೆ ಮಿಂಚಿನಂತೆ ಎದ್ದು ಓಡಿತು.

ಕೋಪಗೊಂಡ ರೈತ ಆಯುಧವನ್ನು ಜಿಂಕೆಯೆಡೆ ಎಸೆಯುತ್ತಾನೆ. ಆದರೆ ಅದು ಗುರಿ ತಪ್ಪಿ ಪೊದೆ ಯಲ್ಲಿ ಅಡಗಿಕೊಂಡಿದ್ದ ನರಿಗೆ ತಗುಲಿ ಬೆನ್ನ ಮೂಳೆ ಮುರಿಯುತ್ತದೆ. ಅಂತೂ ಕಾಗೆಯ ಜಾಣತನ ದಿಂದ ಜಿಂಕೆ ಪಾರಾಯಿತು. ಸಾಮಾಜಿಕ ಜಾಲದಲ್ಲಿ, ಡೇಟಿಂಗ್ ಆಪ್ ಗಳ ಮೂಲಕ ಸ್ನೇಹ ಬೆಳೆಸು ವಾಗ ದಯವಿಟ್ಟು ಜಾಗರೂಕರಾಗಿರಿ. ಅಲ್ಲಿ ಸಿಗುವ ಮಾಹಿತಿ ಕಾಣುವ ಚಿತ್ರಗಳೆಲ್ಲ ನಿಜವಲ್ಲ. ಜನ ನಮ್ಮನ್ನು ನಂಬಿಸಲೆಂದೇ ತಮ್ಮ ಜೀವನ ಶೈಲಿ ಯನ್ನು ಅದ್ಭುತವಾಗಿ ಅಲ್ಲಿ ಬಿಡಿಸಿಡುತ್ತಾರೆ. ಆದರೆ ಅವರ ಅಸಲಿಯತ್ತು ಬೇರೆಯದೇ ಇರುತ್ತದೆ. ಅಪರಿಚಿತರ ಜೊತೆ ಸ್ನೇಹ ಬೆಳೆಸುವಾಗ, ಅವರನ್ನು ಭೇಟಿಯಾಗಲು ಹೊರಟಾಗ ನಿಮ್ಮ ಮನೆಯವರಿಗೆ ಅಥವಾ ಆಪ್ತ ಸ್ನೇಹಿತರಿಗೆ, ಅದರ ಬಗ್ಗೆ ತಿಳಿಸಿರಿ. ಯಾರಿಗೋ ಒಬ್ಬರಿಗಾದರೂ ನಿಮ್ಮ ಚಲನವಲನದ ಬಗ್ಗೆ ತಿಳಿದಿರಬೇಕು. ಆಪತ್ತಿನಲ್ಲಿ ಇಂತಹ ವಿಷಯ ಗಳೇ ನೆರವಿಗೆ ಬರುವುದು. ಯಾರನ್ನೂ ಪೂರ್ತಿಯಾಗಿ ನಂಬುವ ಬದಲು ನಮ್ಮ ಹುಷಾರಿ ನಲ್ಲಿ ನಾವಿರೋಣ.

ರೂಪಾ ಗುರುರಾಜ್

View all posts by this author