ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Physical abuse: ಮಂಡ್ಯ ಬೆನ್ನಲ್ಲೇ ಗದಗದಲ್ಲಿ ಹೀನ ಕೃತ್ಯ; ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ವಿಡಿಯೊ ಮಾಡಿದ ದುಷ್ಟರು!

Physical abuse: ಗದಗ ಜಿಲ್ಲೆಯ ನರೇಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ನಡೆಸಿ, ಕೃತ್ಯವನ್ನು ಪಾಪಿಗಳು ವಿಡಿಯೊ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ಮಂಡ್ಯ ಬೆನ್ನಲ್ಲೇ ಗದಗದಲ್ಲಿ ಹೀನ ಕೃತ್ಯ; ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ವಿಡಿಯೊ ಮಾಡಿದ ದುಷ್ಟರು!

Profile Prabhakara R Feb 3, 2025 9:02 PM

ಗದಗ: ಮಂಡ್ಯದಲ್ಲಿ 8 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಘಟನೆ ಬೆನ್ನಲ್ಲೇ ಅಂತಹುದೇ ಮತ್ತೊಂದು ಗದಗದಲ್ಲಿ ನಡೆದಿದೆ. ಜಿಲ್ಲೆಯ ನರೇಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ನಡೆಸಿ, ಕೃತ್ಯವನ್ನು ಪಾಪಿಗಳು ವಿಡಿಯೊ ಮಾಡಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ನಡೆದಿರುವ ಘಟನೆ ತಡವಾಗಿದೆ ಬೆಳಕಿಗೆ ಬಂದಿದೆ.

ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿ ಸುಲೇಮಾನ್ ಹಾಗೂ ವಿಡಿಯೊ ಮಾಡಿದ ಅಲ್ತಾಫ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸುಲೇಮಾನ್ ಎನ್ನುವವ ಬಾಲಕಿಯನ್ನು ಕರೆದು ಅತ್ಯಾಚಾರ ಎಸಗಿದ್ದಾನೆ. ಈ ವೇಳೆ ಆತನ ಜತೆಗೆ ಇದ್ದ ಅಲ್ತಾಫ್ ದುಷ್ಕೃತ್ಯದ ವಿಡಿಯೊ ಚಿತ್ರೀಕರಣ ಮಾಡಿದ್ದಾನೆ.

ಈ ಘಟನೆ ಬಾಲಕಿ ಪಾಲಕರಿಗೆ ತಡವಾಗಿ ಗೊತ್ತಾಗಿದ್ದು, ಈ ಸಂಬಂಧ ಫೆ.3 ನರೇಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಲೈಂಗಿಕ ದೌರ್ಜನ್ಯ ಆರೋಪಿ ಸುಲೇಮಾನ್ ಹಾಗೂ ವಿಡಿಯೊ ಮಾಡಿದ ಅಲ್ತಾಫ್‌ನನ್ನು ಬಂಧಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Viral News: ಕೆಲ್ಸ ಕೊಡಿಸೋ ನೆಪದಲ್ಲಿ ನಡೆಯುತ್ತಿದೆ ಭಾರೀ ವಂಚನೆ-ಯುವಕರೇ ಎಚ್ಚರ...ಎಚ್ಚರ!

ಮಂಡ್ಯದಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಪೋಕ್ಸೊ ಪ್ರಕರಣ ದಾಖಲು

ಮಂಡ್ಯ: ನಗರದ ಸರ್ಕಾರಿ ಶಾಲೆಯ ಶೌಚಾಲಯದಲ್ಲಿ 8 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳ ವಿರುದ್ಧ ಸೋಮವಾರ ಪೋಕ್ಸೋ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

ಜನವರಿ 31 ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿತ್ತು. ಕೇಕ್ ಕೊಡಿಸಿ, ಚಾಕು ಹಾಕುವುದಾಗಿ ಬೆದರಿಸಿ ಸರ್ಕಾರಿ ಶಾಲೆಯ ಶೌಚಾಲಯದಲ್ಲಿ 8 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು ಎಂದು ಹೇಳಲಾಗಿದೆ.

ಈ ಸುದ್ದಿಯನ್ನೂ ಓದಿ | Drowned: ಈಜಲು ಕೆರೆಗೆ ತೆರಳಿದ ಇಬ್ಬರು ಯುವಕರು ಮುಳುಗಿ ಸಾವು

ತನ್ನ ಮೇಲಾದ ದುಷ್ಕೃತ್ಯವನ್ನು ಬಾಲಕಿ ಯಾರೊಂದಿಗೆ ಹೇಳಿಕೊಂಡಿರಲಿಲ್ಲ. ಬಾಲಕಿ ಋತುಮತಿಯಾಗಿ ಎರಡು ದಿನ ಕಳೆದರೂ ಆಕೆಗೆ ಹೊಟ್ಟೆ ನಾವು, ರಕ್ತಸ್ರಾವ ನಿಂತಿರಲಿಲ್ಲ. ಇದರಿಂದ ಅನುಮಾನಗೊಂಡ ಬಾಲಕಿ ಚಿಕ್ಕಮ್ಮ ಬಂದು ವಿಚಾರಿಸಿದಾಗ ಬಾಲಕಿ ನಡೆದ ಘಟನೆ ವಿವರಿಸಿದ್ದಳು. ಸದ್ಯ ಅಸ್ವಸ್ಥ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹೀಗಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.