ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mylara Lingeshwara Karnika: ತುಂಬಿದ ಕೊಡ ತುಳುಕಿತಲೇ ಪರಾಕ್; ಮೈಲಾರದಲ್ಲಿ ಕಾರ್ಣಿಕ ನುಡಿದ ಗೊರವಯ್ಯ

Mylara Lingeshwara Karnika: ಮೈಲಾರದ ಮೈಲಾರ ಲಿಂಗೇಶ್ವರ ಜಾತ್ರೆ ಪ್ರಯುಕ್ತ ಡಂಕನಮರಡಿಯಲ್ಲಿ ಗೊರವಪ್ಪ ಕಾರ್ಣಿಕ ನುಡಿದಿದ್ದಾನೆ. 15 ಅಡಿ ಎತ್ತರದ ಬಿಲ್ಲನ್ನೇರಿದ ಗೊರವಯ್ಯ ರಾಮಪ್ಪ ಸದ್ದಲೇ ಎಂದು ಅಲ್ಲಿ ನೆರೆದಿದ್ದ ಜನರನ್ನು ಸುಮ್ಮನಾಗಿಸಿ, ತುಂಬಿದಕೊಡ ತುಳುಕಿತಲೇ ಪರಾಕ್ ಎಂದು ಕಾರ್ಣಿಕ ನುಡಿದಿದ್ದಾನೆ.

ತುಂಬಿದ ಕೊಡ ತುಳುಕಿತಲೇ ಪರಾಕ್; ಮೈಲಾರ ಲಿಂಗೇಶ್ವರ ಕಾರ್ಣಿಕ

Profile Prabhakara R Feb 14, 2025 8:03 PM

ಹಾವೇರಿ: ಐತಿಹಾಸಿಕ ಸುಕ್ಷೇತ್ರವಾಗಿರುವ ಮೈಲಾರದ ಮೈಲಾರ ಲಿಂಗೇಶ್ವರ ಜಾತ್ರಾಮಹೋತ್ಸವ‌ ವಿಶೇಷವೆಂದರೆ ಅದು ಗೊರವಯ್ಯನ ಕಾರ್ಣಿಕ. ಈ ಬಾರಿ ರಾಜ್ಯ ಹಾಗೂ ಹೊರರಾಜ್ಯಗಳ ಜನ ಕುತೂಹಲದಿಂದ ಕಾಯುತ್ತಿದ್ದ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರದ ಐತಿಹಾಸಿಕ ಮೈಲಾರಲಿಂಗ ಕಾರ್ಣಿಕದ ಭವಿಷ್ಯವಾಣಿ ಶುಕ್ರವಾರ ಸಂಜೆ ಹೊರಬಿದ್ದಿದೆ. “ತುಂಬಿದಕೊಡ ತುಳುಕಿತಲೇ ಪರಾಕ್” ಎಂಬ ಕಾರ್ಣಿಕವನ್ನು ಗೊರವಪ್ಪ ರಾಮಪ್ಪ ನುಡಿದಿದ್ದು, ಈ ವರ್ಷ ರಾಜ್ಯದಲ್ಲಿ ಮಳೆ – ಬೆಳೆ ಸಮೃದ್ಧವಾಗಿರಲಿದೆ ಎಂದು ಕಾರ್ಣಿಕದ ಭವಿಷ್ಯವಾಣಿಯನ್ನು ವಿಶ್ಲೇಷಣೆ ಮಾಡಲಾಗುತ್ತಿದೆ. ಗೊರವಪ್ಪಜ್ಜ ಕಾರ್ಣಿಕ ನುಡಿಯುತ್ತಿದ್ದಂತೆ ಭಕ್ತರು ಕಾರ್ಣಿಕ ವಿಶ್ಲೇಷಣೆ ಮಾಡಲಾರಂಭಿಸಿದ್ದಾರೆ. ಶ್ರೀಮೈಲಾರಲಿಂಗೇಶ್ವರ ದೇಗುಲದ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಈ ವರ್ಷದ ಕಾರ್ಣಿಕವನ್ನು ಶುಭ ಸೂಚಕವಾಗಿದೆ ಎಂದು ತಿಳಿಸಿದ್ದಾರೆ.

ಮೈಲಾರದ ಮೈಲಾರ ಲಿಂಗೇಶ್ವರ ಜಾತ್ರೆ ಪ್ರಯುಕ್ತ ಡಂಕನಮರಡಿಯಲ್ಲಿ ಗೊರವಪ್ಪ ಕಾರ್ಣಿಕ ನುಡಿದಿದ್ದಾನೆ. 15 ಅಡಿ ಎತ್ತರದ ಬಿಲ್ಲನ್ನೇರಿದ ಗೊರವಯ್ಯ ರಾಮಪ್ಪ ಸದ್ದಲೇ ಎಂದು ಅಲ್ಲಿ ನೆರೆದಿದ್ದ ಜನರನ್ನು ಸುಮ್ಮನಾಗಿಸಿ, ತುಂಬಿದಕೊಡ ತುಳುಕಿತಲೇ ಪರಾಕ್ ಎಂದು ಕಾರ್ಣಿಕ ನುಡಿದಿದ್ದಾನೆ. ಮೈಲಾರ ಲಿಂಗೇಶ್ವರನ ಕಾರ್ಣಿಕ ಕೇಳಿ ಲಕ್ಷಾಂತರ ಭಕ್ತರು ಪುನೀತರಾಗಿದ್ದಾರೆ.

ಅತಿವೃಷ್ಟಿಯಿಂದ ಕಂಗೆಟ್ಟಿದ್ದ ನಾಡಿನ ಜನತೆಗೆ ಮೈಲಾರ ಕಾರ್ಣಿಕ ಸಿಹಿ ಸುದ್ದಿ ನೀಡಿದ್ದು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗಿ, ಬೆಳೆ ಸಮೃದ್ಧಿಯಾಗಿ ಬರಲಿದೆ. ಇದರಿಂದ ನಾಡಿನ ರೈತರ ಮುಖದಲ್ಲಿ ನಗುವಿನ ಸಿಂಚನ ಮೂಡಿಸುವ ಭರವಸೆ ಸಿಕ್ಕಂತಾಗಿದೆ. ಈ ಹಿನ್ನೆಲೆ ಮೈಲಾರ ಲಿಂಗದ ಕಾರ್ಣಿಕ ರಾಜ್ಯದಲ್ಲಿ ಗಮನ ಸೆಳೆದಿದೆ. ಕಳೆದ ಬಾರಿ “ಸಂಪಾಯಿತಲೇ ಪರಾಕ್” ಎಂಬ ಕಾರ್ಣಿಕವನ್ನು ಗೊರವಪ್ಪ ನುಡಿದಿದ್ದ. ಕೇವಲ ಮಳೆ-ಬೆಳೆಗೆ ಸಂಬಂಧಿಸಿದಂತೆ ಕಾರ್ಣಿಕವನ್ನು ನುಡಿಯಲಾಗಿತ್ತು. ಈ ಬಾರಿ “ತುಂಬಿದಕೊಡ ತುಳುಕಿತಲೇ ಪರಾಕ್” ಎಂಬ ಕಾರ್ಣಿಕ ನುಡಿ ಕೇಳಿ ಲಕ್ಷಾಂತರ ಭಕ್ತರು ಸಂತಸಗೊಂಡಿದ್ದಾರೆ.



ಮುತ್ತಿನ ರಾಶಿಗೆ ಮಂಜು ಮುಸುಕಿತಲೆ ಪರಾಕ್

Karnikothsava

ಹರಪನಹಳ್ಳಿ: ಹರಪನಹಳ್ಳಿ ಪಟ್ಟಣದ ಹೊರವಲಯದಲ್ಲಿರುವ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ (Mylaralingeshwara Karnikotsava) ಭರತ ಹುಣ್ಣಿಮೆ ಹಿನ್ನೆಲೆಯಲ್ಲಿ ಬುಧವಾರ ಸಂಜೆ ಅದ್ಧೂರಿಯಾಗಿ ಮೈಲಾರ ಕಾರ್ಣಿಕೋತ್ಸವ ನಡೆಯಿತು. ಸಾವಿರಾರು ಭಕ್ತರ ಸಮ್ಮುಖದಲ್ಲಿ ಗೊರವಪ್ಪ ಕೋಟೆಪ್ಪ ಬಿಲ್ಲನ್ನು ಏರಿ, "ಮುತ್ತಿನ ರಾಶಿಗೆ ಮಂಜು ಮುಸುಕೀತಲೆ ಪರಾಕ್" ಎಂದು ಕಾರ್ಣಿಕ ಭವಿಷ್ಯವಾಣಿ ನುಡಿದಿದ್ದಾರೆ. ಗೊರವಪ್ಪ ಕೋಟೆಪ್ಪ ಬಿಲ್ಲನ್ನು ಏರಿ ಸದ್ದಲೇ ಎಂದ ಕೂಡಲೇ ಇಲ್ಲಿ ಸೇರಿದ್ದ ಸಹಸ್ರಾರು ಭಕ್ತರು ಮೌನಕ್ಕೆ ಶರಣಾದರು. ಆಗ ಗೊರವಪ್ಪ ಆಕಾಶವನ್ನೊಮ್ಮೆ ಸುತ್ತಲು ನೋಡಿ ಕಾರ್ಣಿಕ ನುಡಿದು ಕೆಳಕ್ಕೆ ಬೀಳುತ್ತಿದ್ದಂತೆ, ಉಳಿದ ಗೊರವರು ಅವರನ್ನು ನೆಲಕ್ಕೆ ಬೀಳದಂತೆ ಎತ್ತಿ ಹಿಡಿದರು.

ಈ ಕಾರ್ಣಿಕದ ನುಡಿಯ ರೈತರಿಗೆ ಆಪತ್ತಿನ ಮುನ್ಸೂಚನೆ ನೀಡಿದೆ. ಇದು ರಾಜ್ಯದ ಹೊಟ್ಟೆ ತುಂಬಿಸುವ ರೈತರ ಕುರಿತಾಗಿದ್ದು, ಈ ವರ್ಷದ ಮಳೆ-ಬೆಳೆಯ ಭವಿಷ್ಯ ಹೇಳಲಾಗಿದೆ. ರಾಜ್ಯದಲ್ಲಿ ರೈತರು ಮಳೆಗಾಲದಲ್ಲಿ ಬೆಳೆದ ಬೆಳೆಗಳು ಕೊಯ್ಲಿನ ಹಂತದಲ್ಲಿರುವಾಗ ಅನ್ನದಾತರಿಗೆ ಬಾಯಿಗೆ ಬಂದ ತುತ್ತು ಕೈಗೆ ಬಾರದಂತಾಗಬಹುದು ಎಂದು ವಿಶ್ಲೇಷಿಸಲಾಗಿದೆ.

ಈ ವೇಳೆ ಧರ್ಮಕರ್ತ ನಿಚ್ಚವ್ವನಹಳ್ಳಿ ದತ್ತಾತ್ರೇಯ, ಮುಖಂಡರಾದ ನಾಗೇಶ್ವರರಾವ್, ಮಾರ್ತಾಂಡೇಶ್ವರ ರಾವ್, ವಿಶ್ವನಾಥರಾವ್, ಪುರಸಭಾ ಸದಸ್ಯ ಕಿರಣ್ ಶಾನ್ ಬಾಗ್, ಅಗಡಿ ವಿಶ್ವನಾಥ ಚಕ್ರವರ್ತಿ, ಆನಂದವನ ಸೇರಿದಂತೆ ಸಹಸ್ರಾರು ಭಕ್ತರು ಕಾರ್ಣಿಕೋತ್ಸವವನ್ನು ಕುಣ್ತುಂಬಿಕೊಂಡರು.