Alamatti News: ಕೆ.ಪಿ.ಮೋಹನ ರಾಜ ಅವರಿಗೆ ಪುನರ್ವಸತಿ ಇಲಾಖೆಯ ಆಯುಕ್ತರ ಹೆಚ್ಚುವರಿ ಅಧಿಕಾರ
ಯುಕೆಪಿ ಯೋಜನೆಯ ಮೂರನೇ ಹಂತಕ್ಕೆ 1.30 ಲಕ್ಷ ಎಕರೆ ಜಮೀನು ಭೂಸ್ವಾಧೀನ ಅಗತ್ಯತೆ ಯಿದ್ದು, ಅದಕ್ಕಾಗಿ ಈ ಹುದ್ದೆಗೆ ಮೋಹನರಾಜ್ ಅವರನ್ನು ನೇಮಿಸಿರುವುದು ಹೊಸ ಬೆಳವಣಿಗೆ ಎನ್ನಲಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೆಯ ಹಂತದ ಜಾರಿಗೆ ಸಂಬಂಧಿಸಿದಂತೆ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡ ಭೂಮಿಗಳ ಬೆಲೆ ಕುರಿತು ನ್ಯಾಯಾಲಯಗಳಲ್ಲಿ ಪ್ರಕರಣ ಗಳು ದಾಖಲಾಗಿದ್ದು ಇದರಿಂದ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ

-

ಆಲಮಟ್ಟಿ: ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಇಲಾಖೆಯ ಆಯುಕ್ತರಾಗಿ ಕೆಬಿಜೆಎನ್ ಎಲ್ ಎಂಡಿ ಕೆ.ಪಿ.ಮೋಹನರಾಜ್ ಅವರಿಗೆ ಹೆಚ್ಚುವರಿ ಅಧಿಕಾರ ನೀಡಿ ರಾಜ್ಯ ಸರ್ಕಾರ ಆದೇಶಿಸಿದೆ.
ಯುಕೆಪಿ ಯೋಜನೆಯ ಮೂರನೇ ಹಂತಕ್ಕೆ 1.30 ಲಕ್ಷ ಎಕರೆ ಜಮೀನು ಭೂಸ್ವಾಧೀನ ಅಗತ್ಯತೆ ಯಿದ್ದು, ಅದಕ್ಕಾಗಿ ಈ ಹುದ್ದೆಗೆ ಮೋಹನರಾಜ್ ಅವರನ್ನು ನೇಮಿಸಿರುವುದು ಹೊಸ ಬೆಳವಣಿಗೆ ಎನ್ನಲಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೆಯ ಹಂತದ ಜಾರಿಗೆ ಸಂಬಂಧಿಸಿದಂತೆ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡ ಭೂಮಿಗಳ ಬೆಲೆ ಕುರಿತು ನ್ಯಾಯಾಲಯಗಳಲ್ಲಿ ಪ್ರಕರಣ ಗಳು ದಾಖಲಾಗಿದ್ದು ಇದರಿಂದ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ.
ಇದನ್ನೂ ಓದಿ: Vijayapura (Indi) news: ಅಂಗನವಾಡಿ ಕಾರ್ಯಕರ್ತರಿಗೆ ಚುನಾವಣೆ ಕಾರ್ಯ: ಆದೇಶಕ್ಕೆ ಖಂಡನೆ
ಅದೇ ರೀತಿ ಈಗಾಗಲೆ ನಿರ್ಮಿಸಲಾದ ಪುನರ್ವಸತಿ ಕೇಂದ್ರಗಳಲ್ಲಿ ನಕಲಿ ದಾಖಲೆ ಸೃಷ್ಟಿಸಿ ಬಹಳಷ್ಟು ನಿವೇಶನಗಳನ್ನು ಗ್ರಾಮ ಪಂಚಾಯತಿಯಲ್ಲಿ ಇಸ್ವತ್ತು ಮಾಡಿಸಿ, ನಿವೇಶನಗಳ ಮಾರಾಟ ಮತ್ತು ಅಕ್ರಮ ಖಾತಾ ಮಾಡಿಸಿಕೊಂಡಿದ್ದು ಈ ಕುರಿತು ಪುನರ್ವಸತಿ ಇಲಾಖೆಗೆ ದೂರುಗಳು ಬಂದಿವೆ.
ಇವೆಲ್ಲವುಗಳ ತನಿಖೆಗೆ ವಿಶೇಷ ತಂಡ ರಚಿಸಲಾಗಿದ್ದು ಇದುವರೆಗೆ ತನಿಖೆ ಮಾತ್ರ ಮುಕ್ತಾಯ ಗೊಂಡಿಲ್ಲ ಇವೆಲ್ಲ ಅಂಶಗಳನ್ನು ಮನಗಂಡು ಸರ್ಕಾರ ಹಿರಿಯ ಆಯ್.ಎಸ್.ಅಧಿಕಾರಿ ಕೆ.ಪಿ. ಮೋಹನ ರಾಜ್ ಅವರಿಗೆ ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಇಲಾಖೆಯ ಆಯುಕ್ತರ ಹುದ್ದೆಗೆ ಹೆಚ್ಚುವರಿ ಅಧಿಕಾರ ನೀಡಿ ಆದೇಶ ಮಾಡಿದೆ.
ಅದೇ ರೀತಿ, ಇವರ ನೇಮಕದಿಂದ ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೆಯ ಹಂತದ ಕಾಮಗಾರಿಗಳು ಚುರುಕಾಗಲಿವೆ ಎಂದು ಹೇಳಲಾಗುತ್ತಿದೆ.