#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Hanumantha Lamani: ಚಿಕ್ಕಪ್ಪ ನಿಧನ; ಬಿಗ್ ಬಾಸ್ ವಿನ್ನರ್ ಹನುಮಂತನ ಮನೆಯಲ್ಲಿ ನೀರವ ಮೌನ

Haveri News:

ಚಿಕ್ಕಪ್ಪ ನಿಧನ; ಬಿಗ್ ಬಾಸ್ ವಿನ್ನರ್ ಹನುಮಂತನ ಮನೆಯಲ್ಲಿ ನೀರವ ಮೌನ

Profile Prabhakara R Jan 27, 2025 3:34 PM

ಹಾವೇರಿ: ಬಿಗ್‌ ಬಾಸ್‌ ಸೀಸನ್‌ 11ರ (Bigg Boss Kannada 11 ) ವಿನ್ನರ್‌ ಆಗಿ ಸಂತಸದಲ್ಲಿದ್ದ ಹನುಮಂತು ಮನೆಯಲ್ಲಿ ನೀರವ ಮೌನ ಆವರಿಸಿದೆ. ಹನುಮಂತನ ಚಿಕ್ಕಪ್ಪ ದೇವಪ್ಪ ಅವರು ನಿಧನರಾದ ಹಿನ್ನೆಲೆಯಲ್ಲಿ ಕುಟುಂಬಸ್ಥರು ದುಃಖದಲ್ಲಿದ್ದು, ಇದರಿಂದ ಯಾವುದೇ ಸಂಭ್ರಮಾಚರಣೆ ಮಾಡದಿರಲು ನಿರ್ಧರಿಸಲಾಗಿದೆ. ಹೀಗಾಗಿ ಹನುಮಂತನ (Hanumantha Lamani) ನೋಡಲು ಊರಿಗೆ ಬಂದ ಅಭಿಮಾನಿಗಳಿಗೆ ನಿರಾಸೆ ಉಂಟಾಗಿದೆ.

ಜಿಲ್ಲೆಯ ಸವಣೂರು ತಾಲೂಕಿನ ಚಿಲ್ಲೂರುಬಡ್ನಿ ಗ್ರಾಮದ ಹನುಮಂತು ಅವರ ಚಿಕ್ಕಪ್ಪ ದೇವಪ್ಪ ನಿಧನರಾಗಿದ್ದಾರೆ. ಹೀಗಾಗಿ ಮೂರು ದಿನದ ಕಾರ್ಯ ಮುಗಿದ ನಂತರ ಸಂಭ್ರಮಾಚರಣೆ ಮಾಡಲು ನಿರ್ಧಾರ ಮಾಡಲಾಗಿದೆ. ಈ ನಡುವೆ ಹನುಮಂತನ ನೋಡಲು ಊರಿಗೆ ಬಂದ ಅಭಿಮಾನಿಗಳಿಗೆ ನಿರಾಸೆ ಎದುರಾಗಿದೆ. ಸದ್ಯ ಬೆಂಗಳೂರಿನಲ್ಲಿ ಇರುವ ಹನುಮಂತನ ಕುಟುಂಬಸ್ಥರು ಇದ್ದು, ಹನುಮಂತನ ನೋಡಲು ಸ್ನೇಹಿತರು ಮತ್ತು ಅಭಿಮಾನಿಗಳು ಕಾದು ಕುಳಿತಿದ್ದಾರೆ.



ಈ ಸುದ್ದಿಯನ್ನೂ ಓದಿ | Bigg Boss 11 Runner up Prize Money: ಬಿಗ್ ಬಾಸ್ ಸೀಸನ್ 11ರ ರನ್ನರ್ ಅಪ್ ತ್ರಿವಿಕ್ರಮ್​ಗೆ ಸಿಕ್ಕ ಹಣವೆಷ್ಟು ಗೊತ್ತೇ?



ಬಿಗ್ ಬಾಸ್ ಕನ್ನಡ ಸೀಸನ್ 11ರ ಟ್ರೋಫಿ ಎತ್ತಿ ಹಿಡಿದ ಹನುಮಂತ: ತ್ರಿವಿಕ್ರಮ್ ರನ್ನರ್-ಅಪ್

Hanumantha BBK 11 Winner (1)

ಬಿಗ್ ಬಾಸ್ ಕನ್ನಡ ಸೀಸನ್ 11ರ (Bigg Boss Kannada 11) ವಿನ್ನರ್ ಆಗಿ ಹನುಮಂತ ಹೊರಹೊಮ್ಮಿದ್ದಾರೆ. ಎಲ್ಲರೂ ತ್ರಿವಿಕ್ರಮ್ ಜಯಶಾಲಿಯಾಗಲಿದ್ದಾರೆ ಎನ್ನಲಾಗಿತ್ತು. ಆದರೆ, ವೇದಿಕೆ ಮೇಲೆ ಕಿಚ್ಚ ಸುದೀಪ್ ಅವರು ಹನುಮಂತು ಅವರ ಕೈ ಎತ್ತುವ ಮೂಲಕ ಬಿಗ್ ಬಾಸ್ ಕನ್ನಡ ಸೀಸನ್ 11ರ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಇವರು 50 ಲಕ್ಷ ಹಣವನ್ನು ಗೆದ್ದು ಟ್ರೋಫಿ ಎತ್ತಿ ಹಿಡಿದಿದ್ದಾರೆ. ಬಿಬಿಕೆ 11ನ ವಿಕಿಪೀಡಿಯಾ ಪೇಜ್​ನಲ್ಲಿ ಕೂಡ ಅಧಿಕೃತ ಘೋಷಣೆಗು ಮುನ್ನವೇ ಹನುಮಂತ ಹೆಸರೇ ವಿನ್ನರ್ ಎಂದಿತ್ತು.

ಬಿಬಿಕೆ 11 ಫಿನಾಲೆಗೆ ಆರು ಜನರ ಕಂಟೆಸ್ಟೆಂಟ್ ಇದ್ದರು. ಭವ್ಯಾ ಗೌಡ, ತ್ರಿವಿಕ್ರಮ್, ಹನುಮಂತ, ಉಗ್ರಂ ಮಂಜು, ರಜತ್ ಕಿಶನ್ ಹಾಗೂ ಮೋಕ್ಷಿತಾ ಫಿನಾಲೆ ಸ್ಪರ್ಧಿಗಳಾಗಿದ್ದರು. ಇವರಲ್ಲಿ ಶನಿವಾರ ಭವ್ಯಾ ಗೌಡ ಮೊದಲಿಗರಾಗಿ ಹೊರಬಂದರು. ಬಳಿಕ ಉಗ್ರಂ ಮಂಜು 4ನೇ ರನ್ನರ್ ಅಪ್​ ಆಗಿ ಆಚೆ ಬಂದರು. 3ನೇ ರನ್ನರ್ ಅಪ್ ಆಗಿ ಮೋಕ್ಷಿತಾ ಹೊರಬಂದರು.

ಕೊನೆಯಲ್ಲಿ ರಜತ್ ಕಿಶನ್, ಹನುಮಂತ ಹಾಗೂ ತ್ರಿವಿಕ್ರಮ್ ಉಳಿದುಕೊಂಡರು. ಇವರನ್ನು ಕಿಚ್ಚ ಸುದೀಪ್ ಮನೆಯೊಳಗೆ ಹೋಗಿ ಸ್ಟೇಜ್ ಮೇಲೆ ಕರೆದುಕೊಂಡು ಬಂದರು. ಸ್ಟೇಜ್​ಗೆ ಬರುವ ಮುನ್ನ ಸುದೀಪ್ ಅವರು ಬಿಗ್ ಬಾಸ್ ಮನೆಯ ಮೈನ್-ಸ್ವಿಚ್ ಆಫ್ ಮಾಡಿ ಎಲ್ಲ ಲೈಟ್​ಗಳನ್ನು ನಂದಿಸಿ ಹೊರಟರು.



ಸ್ಟೇಜ್ ಮೇಲೆ ನಡೆದ ರೆಡ್ ಲೈಟ್ - ಗ್ರೀನ್ ಲೈಟ್ ಚಟುವಟಿಕೆಯಲ್ಲಿ ರೆಡ್ ಲೈಟ್ ಪಡೆದುಕೊಂಡು 2ನೇ ರನ್ನರ್ ಅಪ್ ಆಗಿ ರಜತ್ ಕಿಶನ್ ಹೊರಗುಳಿದರು. ಅಂತಿಮವಾಗಿ ಹನುಮಂತ ತ್ರಿವಿಕ್ರಮ್ ಪೈಕಿ ಕಿಚ್ಚ ಸುದೀಪ್ ಅವರು ಹಳ್ಳಿ ಹೈದನ್ ಕೈ ಎತ್ತುವ ಮೂಲಕ ವಿನ್ನರ್ ಘೋಷಣೆ ಮಾಡಿದ್ದಾರೆ. ತ್ರಿವಿಕ್ರಮ್ ರನ್ನರ್-ಅಪ್ ಆಗಿದ್ದಾರೆ. ಟ್ರೋಫಿ ಗೆಲ್ಲ ಬೇಕು ಎಂಬುದು ಹನುಮಂತ ಅವರ ದೊಡ್ಡ ಕನಸು ಆಗಿರಲಿಲ್ಲ. ನನಗೆ ಕಿಚ್ಚನ ಚಪ್ಪಾಳೆ ಸಿಕ್ಕಿದ್ದೆ ದೊಡ್ಡ ಗೆಲುವು ಎಂದಿದ್ದರು. ಅತ್ತ ತ್ರಿವಿಕ್ರಮ್ ಅವರಿಗೆ ಟ್ರೋಫಿ ಗೆಲ್ಲುವುದು ದೊಡ್ಡ ಕನಸಾಗಿತ್ತು. ಇದೀಗ ಆ ಕನಸು ನುಚ್ಚುನೂರಾಗಿದೆ. ಹನುಮಂತ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.

ಸೀಸನ್ 11ರ ಮೊದಲ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಸಿಂಗರ್ ಹನುಮಂತ ತಮ್ಮ ನಡತೆ, ಮಾತಿನ ಶೈಲಿಗಳಿಂದಲೇ ಕೇವಲ ಸ್ಪರ್ಧಿಗಳನ್ನು ಮಾತ್ರವಲ್ಲದೆ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಷ್ಟು ನಗಿಸಿದ್ದಾರೆ. ಇವರ ಗ್ರಾಮೀಣ ಸೊಗಡಿನ ಭಾಷೆ, ಹಾಡುಗಳಿಗೆ ಎಲ್ಲರೂ ಫಿದಾ ಆಗಿದ್ದಾರೆ. ಉತ್ತರ ಕರ್ನಾಟಕದವರಾದ ಇವರು ಫಿಕ್ಟರ್ ಇಲ್ಲದೇ ಆಡುವ ಕೆಲವು ಮಾತುಗಳು ಕೂಡ ನಗು ಉಕ್ಕಿಸಿವೆ. ಹೀಗಾಗಿಯೆ ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಗೆಲ್ಲಬಹುದು ಎನ್ನಲಾಗಿತ್ತು, ಅದೀಗ ನಿಜವಾಗಿದೆ.

ಹನುಮಂತ ಅವರು ಇಡೀ ಸೀಸನ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಒಳ್ಳೆಯ ಪ್ಲೇಯರ್ ಎನಿಸಿಕೊಂಡಿರುವ ಇವರು ಅನೇಕ ಬಾರಿ ಟಾಸ್ಕ್​ನಲ್ಲಿ ತಮ್ಮನ್ನು ತಾವು ಸಾಬೀತು ಮಾಡಿಕೊಂಡಿದ್ದಾರೆ. ಈ ಕಾರಣಕ್ಕೆ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಫಿನಾಲೆ ವೀಕ್​ನಲ್ಲಿ ಬಿಗ್ ಬಾಸ್ ಕೂಡ ಇವರನ್ನು ಹಾಡಿಹೊಗಳಿದ್ದರು. ‘‘ಬಿಗ್ ಬಾಸ್​ನ ಈ ಸೀಸನ್​ನ ಒಂದು ಹೊಸ ಸ್ವರವನ್ನು ತಂದುಕೊಟ್ಟ ಗ್ರಾಮೀಣ ತ್ರತಿಭೆ ಹನುಮಂತ.. ದೋಸ್ತಾ ನಿನಗೆ ಮನದಾಳದ ಅಭಿನಂದನೆಗಳು’’ ಎಂದಿದ್ದರು.

BBK 11 Final: ಬಿಗ್‌ ಬಾಸ್‌ ಟೈಟಲ್‌ ಗೆಲ್ಲುವ ಮೋಕ್ಷಿತಾ ಕನಸು ಭಗ್ನ; 4ನೇ ಸ್ಥಾನಕ್ಕೆ ತೃಪ್ತಿ