ಹರ್ಬಲೈಫ್ ಸ್ಲೀಪ್ ಎನ್‌ಹಾನ್ಸ್ ನಿಂದ ನಿದ್ರೆಯ ಗುಣಮಟ್ಟ ಉತ್ತಮ ಎಂದು ಸಾಬೀತು
ಇಂದಿನ ವೇಗದ ಜಗತ್ತಿನಲ್ಲಿ ಗುಣಮಟ್ಟದ ನಿದ್ರೆ ಐಷಾರಾಮವಲ್ಲ, ಬಹಳ ಅಗತ್ಯವಾಗಿದೆ. ಆದರೆ, ಬಿಡುವಿಲ್ಲದ ಕೆಲಸದ ವೇಳಾಪಟ್ಟಿಗಳು, ಹೆಚ್ಚುತ್ತಿರುವ ಡಿಜಿಟಲ್ ಬಳಕೆ, ಮತ್ತು ಒತ್ತಡದಿಂದಾಗಿ ಗುಣಮಟ್ಟದ ನಿದ್ರೆ ಪಡೆಯಲು ಅನೇಕರು ಕಷ್ಟಪಡುತ್ತಿದ್ದಾರೆ. ಅಧ್ಯಯನಗಳ ಪ್ರಕಾರ, ಭಾರತ ದಲ್ಲಿ ಸುಮಾರು ಅರ್ಧದಷ್ಟು ಜನರು ಬೆಳಗ್ಗೆ ಎದ್ದಾಗ ಸುಸ್ತಾದಂತೆ ಭಾವಿಸುತ್ತಾರೆ.


ಪ್ರಮುಖ ಆರೋಗ್ಯ ಮತ್ತು ವೆಲ್ನೆಸ್ ಕಂಪನಿಯಾದ ಹರ್ಬಲೈಫ್ ಇಂಡಿಯಾ ಸಂಸ್ಥೆಯು ನಿದ್ರೆಯ ಗುಣಮಟ್ಟವನ್ನು ಉತ್ತಮಗೊಳಿಸುವ ಕೆಫೀನ್-ಮುಕ್ತ, ಸಸ್ಯಾಧಾರಿತ ಮತ್ತು ವೈಜ್ಞಾನಿಕವಾಗಿ ಅಧ್ಯಯನ ಮಾಡಲಾದ ಘಟಕಾಂಶದಿಂದ ತಯಾರಿಸಲಾಗಿರುವ ಸ್ಲೀಪ್ ಎನ್‌ಹಾನ್ಸ್ ಅನ್ನು ಬಿಡುಗಡೆ ಮಾಡಿದೆ. ಒತ್ತಡದ ಜೀವನಶೈಲಿಯಿಂದ, ಡಿಜಿಟಲ್ ಬಳಕೆ ಹೆಚ್ಚಳದಿಂದ, ಮತ್ತು ಒತ್ತಡ ಹೆಚ್ಚುತ್ತಿರುವು ದರಿಂದ ನಿದ್ರೆ ಕಾಯಿಲೆಗಳು ಅಥವಾ ಸ್ಲೀಪ್ ಡಿಸಾರ್ಡರ್ ಗಳು ಕೂಡ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಉತ್ತಮ ನಿದ್ರೆಯನ್ನು ಒದಗಿಸುವ ಉದ್ದೇಶದಿಂದ ಈ ಉತ್ಪನ್ನವನ್ನು ಬಿಡುಗಡೆ ಮಾಡಲಾಗಿದೆ.
ಇಂದಿನ ವೇಗದ ಜಗತ್ತಿನಲ್ಲಿ ಗುಣಮಟ್ಟದ ನಿದ್ರೆ ಐಷಾರಾಮವಲ್ಲ, ಬಹಳ ಅಗತ್ಯವಾಗಿದೆ. ಆದರೆ, ಬಿಡುವಿಲ್ಲದ ಕೆಲಸದ ವೇಳಾಪಟ್ಟಿಗಳು, ಹೆಚ್ಚುತ್ತಿರುವ ಡಿಜಿಟಲ್ ಬಳಕೆ, ಮತ್ತು ಒತ್ತಡದಿಂದಾಗಿ ಗುಣಮಟ್ಟದ ನಿದ್ರೆ ಪಡೆಯಲು ಅನೇಕರು ಕಷ್ಟಪಡುತ್ತಿದ್ದಾರೆ. ಅಧ್ಯಯನಗಳ ಪ್ರಕಾರ, ಭಾರತ ದಲ್ಲಿ ಸುಮಾರು ಅರ್ಧದಷ್ಟು ಜನರು ಬೆಳಗ್ಗೆ ಎದ್ದಾಗ ಸುಸ್ತಾದಂತೆ ಭಾವಿಸುತ್ತಾರೆ. ಅದರಲ್ಲೂ ಮಲಗುವ ಮುನ್ನ ಡಿಜಿಟಲ್ ಸಾಧನಗಳ ಬಳಕೆಯಿಂದ ನಿದ್ರೆಯ ಗುಣಮಟ್ಟವು ಇನ್ನಷ್ಟು ಕೆಳಮಟ್ಟಕ್ಕಿಳಿಯುತ್ತಿದೆ.
ಇದನ್ನೂ ಓದಿ: Bangalore News: ಸಾಯಿ ಬಾಬಾ ಪಾದುಕೆ ದರ್ಶನ ಪಡೆಯುತ್ತಿರುವ ಭಕ್ತರು
ಉತ್ತಮ ನಿದ್ರೆ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಅಗತ್ಯವನ್ನು ಗುರುತಿಸಿ ಹರ್ಬಲೈಫ್ ಭಾರತದ ಜನರ ನಿದ್ರೆಯನ್ನು ಉತ್ತಮಗೊಳಿಸಲು ಮುಂದಾಗಿದೆ. ಸ್ಲೀಪ್ ಎನ್‌ಹಾನ್ಸ್ ಅನ್ನು ಶುದ್ಧ ಕೇಸರಿಯ ಸಾರವಾಗಿರುವ ಆಫ್ರಾನ್ ಮೂಲಕ ರೂಪಿಸಲಾಗಿದ್ದು, ಇದನ್ನು ಕನಿಷ್ಠ 28 ದಿನಗಳ ಕಾಲ ಮಲಗುವ ಒಂದು ಗಂಟೆ ಮೊದಲು ತೆಗೆದುಕೊಂಡರೆ ನಿದ್ರೆಯ ಗುಣಮಟ್ಟ ಸುಧಾರಿಸುತ್ತದೆ ಎಂದು ಕಂಡುಹಿಡಿಯಲಾಗಿದೆ.
ಸ್ಲೀಪ್ ಎನ್‌ಹಾನ್ಸ್ ನಲ್ಲಿ ಯಾವುದೇ ಸೇರಿಸಿದ ಸಕ್ಕರೆ, ಕೃತಕ ಸುವಾಸನೆಗಳು, ಮತ್ತು ಕೆಫೀನ್ ಹೊಂದಿಲ್ಲ. ಹಾಗಾಗಿ ರಾತ್ರಿ ಹೊತ್ತಿನಲ್ಲಿ ಬಳಕೆ ಮಾಡಬಹುದಾಗಿದೆ. ಹಿಬಿಸ್ಕಸ್ ಸುವಾಸನೆಯನ್ನು ಹೊಂದಿದ್ದು, ಕೇಸರಿ ಸಾರವನ್ನು ಒಳಗೊಂಡಿದೆ ಮತ್ತು ವೈಜ್ಞಾನಿಕವಾಗಿ ನಿದ್ರೆಯ ಗುಣಮಟ್ಟ ವನ್ನು ಸುಧಾರಿಸುತ್ತದೆ. ಬೆಳಗ್ಗೆ ಎದ್ದಾಗ ಆಹ್ಲಾದಕರವಾಗಿರುವಂತೆ ನೋಡಿಕೊಳ್ಳುತ್ತದೆ ಮತ್ತು ಶಾಂತ ಭಾವದಿಂದ ಎದ್ದೇಳಲು ಸಹಾಯ ಮಾಡುತ್ತದೆ.
ಈ ಕುರಿತು ಮಾತನಾಡಿರುವ ಹರ್ಬಲೈಫ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅಜಯ್ ಖನ್ನಾ ಅವರು, “ನಿದ್ರೆಯು ಈಗ ವಿಶ್ರಾಂತಿ ಮಾತ್ರವೇ ಅಲ್ಲ, ದೇಹ ಮತ್ತು ಮನಸ್ಸನ್ನು ರೀಸೆಟ್ ಮಾಡುವುದು ಮತ್ತು ರೀಚಾರ್ಜ್ ಮಾಡುವ ಒಂದು ಉತ್ತಮ ಮಾರ್ಗವಾಗಿದೆ. ಗ್ರಾಹಕರ ವಿಕಸನಗೊಳ್ಳುತ್ತಿರುವ ಜೀವನಶೈಲಿಗೆ ಪೂರಕವಾದ ಉತ್ಪನ್ನ ಒದಗಿಸುವುದರಲ್ಲಿ ಹರ್ಬಲೈಫ್ ಇಂಡಿಯಾ ನಂಬಿಕೆ ಇಟ್ಟಿದೆ. ಈ ನಿಟ್ಟಿನಲ್ಲಿ ಸಿದ್ಧವಾಗಿರುವ ಸ್ಲೀಪ್ ಎನ್‌ಹಾನ್ಸ್ ಕೇಸರಿ ಸಾರವನ್ನು ಒಳಗೊಂಡಿದ್ದು, ವೈಜ್ಞಾನಿಕವಾಗಿ ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ಇಂದಿನ ವೇಗದ ಜಗತ್ತಿನಲ್ಲಿ, ನಿದ್ರೆಯ ಕೊರತೆ ಸಾಮಾನ್ಯವಾಗಿರುವಾಗ ಜನರು ಉತ್ತಮವಾಗಿ ನಿದ್ರೆ ಮಾಡಲು ಮತ್ತು ಉತ್ತಮ ಯೋಗಕ್ಷೇಮ ಹೊಂದಲು ನೆರವಾಗಲು ನಾವು ಬದ್ಧರಾಗಿದ್ದೇವೆ,” ಎಂದು ಹೇಳಿದರು.
ಪ್ರಸ್ತುತ ವೈಜ್ಞಾನಿಕವಾಗಿ ಸಿದ್ಧಗೊಂಡ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇದೆ. ಈ ಸಂದರ್ಭದಲ್ಲಿ ಹರ್ಬಲೈಫ್ ಈ ವಿಚಾರದಲ್ಲಿ ಮುಂಚೂಣಿಯಲ್ಲಿದ್ದು, ಗ್ರಾಹಕರು ತಮ್ಮ ನಿದ್ರೆಯ ಗುಣಮಟ್ಟ ವನ್ನು ಸುಧಾರಿಸುವಂತೆ ನೋಡಿಕೊಳ್ಳುತ್ತಿದೆ.