ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hima Das: ಮಹಾ ಕುಂಭಮೇಳದಲ್ಲಿ ಸ್ಪ್ರಿಂಟರ್‌ ಹಿಮಾ ದಾಸ್‌ ಪವಿತ್ರ ಸ್ನಾನ

Hima Das: 16 ತಿಂಗಳ ನಿಷೇಧದಿಂದ ಮುಕ್ತವಾಗಿರುವ ಯುವ ಸ್ಪ್ರಿಂಟರ್‌ ಹಿಮಾ ದಾಸ್‌ ಪ್ರಸ್ತುತ ತರಬೇತಿ ಪಡೆಯುತ್ತಿದ್ದಾರೆ. ಈ ವರ್ಷ ನಡೆಯುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸ್ಪರ್ಧಿಸುವ ನಿರೀಕ್ಷೆಯಲ್ಲಿದ್ದಾರೆ.

Hima Das

ಪ್ರಯಾಗ್‌ರಾಜ್‌: ಭಾರತದ ಯುವ ಸ್ಪ್ರಿಂಟರ್‌ ಹಿಮಾ ದಾಸ್‌(Hima Das) ಅವರು ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಭೇಟಿ ನೀಡಿ ಗಂಗಾನದಿಯಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಧಿಂಗ್‌ ಎಕ್ಸ್‌ಪ್ರೆಸ್‌ ಖ್ಯಾತಿಯ ಹಿಮಾ ದಾಸ್‌ ವಿರುದ್ಧ ನಾಡಾ 16 ತಿಂಗಳು ನಿಷೇಧ ಹೇರಿತ್ತು. 2023 ಜುಲೈ 22ರಿಂದ 2024ರ ನವೆಂಬರ್‌ 21ರವರೆಗೆ ಅಮಾನತು ಮಾಡಿತ್ತು. ನಿಷೇಧದಿಂದ ಮುಕ್ತವಾಗಿರುವ ಅವರು ಪ್ರಸ್ತುತ ತರಬೇತಿ ಪಡೆಯುತ್ತಿದ್ದಾರೆ. ಈ ವರ್ಷ ನಡೆಯುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸ್ಪರ್ಧಿಸುವ ನಿರೀಕ್ಷೆಯಲ್ಲಿದ್ದಾರೆ. 2018 ರಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು.

ಆರ್‌ಸಿಬಿ ಕಪ್‌ ಗೆಲ್ಲಲು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಅಭಿಮಾನಿ

18ನೇ ಆವೃತ್ತಿಯ ಐಪಿಎಲ್‌(IPL 2025) ಟೂರ್ನಿ ಆರಂಭಕ್ಕೆ ಇನ್ನು ಕೇವಲ 2 ತಿಂಗಳು ಬಾಕಿ ಇದೆ. ಅಷ್ಟರಲ್ಲೇ ಆರ್‌ಸಿಬಿ(RCB) ಅಭಿಮಾನಿಯೊಬ್ಬ ಈ ಸಲವಾದರೂ ತಂಡ ಕಪ್‌ ಗೆಲ್ಲುವಂತಾಗಿ ಎಂದು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಆರ್‌ಸಿಬಿ ಜರ್ಸಿ ತೊಟ್ಟು ತ್ರಿವೇಣಿ ಸಂಗಮದಲ್ಲಿ 7 ಬಾರಿ ಮಿಂದೆದ್ದಿದ್ದಾನೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(viral video) ಆಗಿದೆ.



17 ಆವೃತ್ತಿ ಕಳೆದರೂ ಐಪಿಎಲ್‌ನಲ್ಲಿ ಆರ್‌ಸಿಬಿ ಇದುವರೆಗೂ ಒಂದೇ ಒಂದು ಕಪ್‌ ಗೆದಿಲ್ಲ. ಆದರೆ ತಂಡದ ಮೇಲೆ ಅಭಿಮಾನಿಗಳಿರುವ ಪ್ರೀತಿ ಮಾತ್ರ ಕಿಂಚಿತ್ತು ಕಡಿಮೆಯಾಗಿಲ್ಲ. ಇಂದಲ್ಲದಿದ್ದರೂ ನಾಳೆ ಕಪ್‌ ಗೆದ್ದೇ ಗೆಲ್ಲುತ್ತೇವೆ ಎಂಬ ಆತ್ಮವಿಶ್ವಾಸದಲ್ಲಿ ಪ್ರತಿ ಬಾರಿಯ ಆವೃತ್ತಿಯಲ್ಲಿಯೂ 'ಈ ಸಲ ಕಪ್‌ ನಮ್ದೇ' ಎಂಬ ಘೋಷಣೆಯೊಂದಿಗೆ ತಂಡಕ್ಕೆ ದೊಡ್ಡ ಮಟ್ಟದಲ್ಲಿ ಬೆಂಬಲ ಸೂಚಿಸುತ್ತಾರೆ. ಬೆಂಗಳೂರು ಮೂಲದ ಅಭಿಮಾನಿಯೊಬ್ಬ ಆರ್‌ಸಿಬಿ ತಂಡಕ್ಕೆ ಒಳಿತಾಗಲಿ, ಈ ಬಾರಿ ತಂಡ ಕಪ್‌ ಗೆಲ್ಲುವಂತಾಗಲಿ ಎಂದು ಪ್ರಾರ್ಥಿಸಿ ಆರ್‌ಸಿಬಿ ಜೆರ್ಸಿಯನ್ನು ತ್ರಿವೇಣಿ ಸಂಗಮದಲ್ಲಿ 7 ಬಾರಿ ಮುಳುಗಿಸಿದ್ದಾರೆ.