#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Job Guide: ಹಿಂದುಸ್ತಾನ್‌ ಕಾಪರ್‌ ಲಿಮಿಟೆಡ್‌ನಲ್ಲಿದೆ 103 ಹುದ್ದೆ; 10ನೇ ತರಗತಿ ಪಾಸಾದವರು ಅಪ್ಲೈ ಮಾಡಿ

ಹಿಂದುಸ್ತಾನ್‌ ಕಾಪರ್‌ ಲಿಮಿಟೆಡ್‌ ಖಾಲಿ ಇರುವ 103 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಉದ್ಯೋಗ ಸ್ಥಳ: ರಾಜಸ್ಥಾನದ ಝುಂಜುನು. 10ನೇ ತರಗತಿ, ಐಟಿಐ, ಡಿಪ್ಲೊಮಾ, ಪದವಿ ತೇರ್ಗಡೆ ಹೊಂದಿದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಫೆ. 25.

10ನೇ ತರಗತಿ ಪಾಸಾದವರಿಗೆ ಗುಡ್‌ನ್ಯೂಸ್‌;  ಹಿಂದುಸ್ತಾನ್‌ ಕಾಪರ್‌ ಲಿಮಿಟೆಡ್‌ನಲ್ಲಿದೆ 103 ಹುದ್ದೆ

ಸಾಂದರ್ಭಿಕ ಚಿತ್ರ

Profile Ramesh B Jan 28, 2025 6:22 PM

ಬೆಂಗಳೂರು: ಒಂದೊಳ್ಳೆ ಉದ್ಯೋಗಕ್ಕಾಗಿ ಹುಡುಕಾಟ ನಡೆಸುವವರಿಗೆ ಹಿಂದುಸ್ತಾನ್‌ ಕಾಪರ್‌ ಲಿಮಿಟೆಡ್‌ (Hindustan Copper Limited) ಗುಡ್‌ನ್ಯೂಸ್‌ ನೀಡಿದೆ (Hindustan Copper Recruitment 2025). ಚಾರ್ಜ್‌ಮ್ಯಾನ್‌, ಎಲೆಕ್ಟ್ರಿಶಿಯನ್‌ ಸೇರಿ ಒಟ್ಟು 103 ಹುದ್ದೆಗಳಿವೆ. ಉದ್ಯೋಗ ಸ್ಥಳ: ರಾಜಸ್ಥಾನದ ಝುಂಜುನು. 10ನೇ ತರಗತಿ, ಐಟಿಐ, ಡಿಪ್ಲೊಮಾ, ಪದವಿ ತೇರ್ಗಡೆ ಹೊಂದಿದವರು ಅರ್ಜಿ ಸಲ್ಲಿಸಬಹುದು (Job Guide). ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಫೆ. 25.

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಚಾರ್ಜ್‌ಮ್ಯಾನ್ (ಎಲೆಕ್ಟ್ರಿಕಲ್) - 24 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, ಎಲೆಕ್ಟ್ರಿಕಲ್‌ ಐಟಿಐ, ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ಡಿಪ್ಲೊಮಾ

ಎಲೆಕ್ಟ್ರಿಷಿಯನ್ ಎ 36 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, ಎಲೆಕ್ಟ್ರಿಕಲ್‌ ಐಟಿಐ

ಎಲೆಕ್ಟ್ರಿಷಿಯನ್ ಬಿ 36 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, ಎಲೆಕ್ಟ್ರಿಕಲ್‌ ಐಟಿಐ

ಡಬ್ಲ್ಯುಇಡಿ ಬಿ (WED B) 7 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, ಡಿಪ್ಲೊಮಾ, ಬಿ.ಎ, ಬಿ.ಎಸ್‌ಸಿ, ಬಿ.ಕಾಂ, ಬಿಬಿಎ, ಪದವಿ. ಜತೆಗೆ ಸರ್ಟಿಫಿಕೆಟ್‌ ಕೋರ್ಸ್‌ ಮಾಡಿರಬೇಕು.

ವಯೋಮಿತಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಠ ವಯಸ್ಸು 40 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ರಿಯಾಯಿತಿ ಇದೆ ಎಂದು ಅಧಿಸೂಚನೆ ತಿಳಿಸಿದೆ.

ಅರ್ಜಿ ಶುಲ್ಕ

ಅರ್ಜಿ ಶುಲ್ಕವಾಗಿ ಸಾಮಾನ್ಯ/ಒಬಿಸಿ/ಇಡಬ್ಲ್ಯುಎಸ್‌ ಅಭ್ಯರ್ಥಿಗಳು 500 ರೂ. ಪಾವತಿಸಬೇಕು. ಇತರ ಎಲ್ಲ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ. ಪಾವತಿ ವಿಧಾನ: ಆನ್‌ಲೈನ್‌.

ಆಯ್ಕೆ ವಿಧಾನ

ಲಿಖಿತ ಪರೀಕ್ಷೆ, ಟ್ರೇಡ್‌ ಟೆಸ್ಟ್‌ ಮತ್ತು ರೈಟಿಂಗ್‌ ಎಬಿಲಿಟಿ ಟೆಸ್ಟ್‌ ಹಾಗೂ ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾದವರಿಗೆ ವಿವಿಧ ಹುದ್ದೆಗಳಿಗೆ ಅನುಗುಣವಾಗಿ 28,740 ರೂ. - 72,110 ರೂ. ಮಾಸಿಕ ವೇತನ ದೊರೆಯಲಿದೆ.

Hindustan Copper Recruitment 2025 ಅಧಿಸೂಚನೆ ಓದಲು ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸಲು ವಿಧಾನ

* ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ (https://hindustancopper.com/RecruitmentNew/CandidateLogin/123)

* ಹೆಸರು ನೋಂದಾಯಿಸಿ.

* ಎಚ್ಚರಿಕೆಯಿಂದ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.

* ಅಗತ್ಯ ಡಾಕ್ಯುಮೆಂಟ್‌, ಸರಿಯಾದ ಅಳತೆಯಲ್ಲಿ ಫೋಟೊ ಅಪ್‌ಲೋಡ್‌ ಮಾಡಿ.

* ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಿ (ಅಗತ್ಯವಿದ್ದವರು ಮಾತ್ರ)

* ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್‌ ಕ್ಲಿಕ್‌ ಮಾಡಿ.

* ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್‌ ಫಾರಂ ಡೌನ್‌ಲೋಡ್‌ ಮಾಡಿಟ್ಟುಕೊಳ್ಳಿ.

ಹೆಚ್ಚಿನ ವಿವರಗಳಿಗೆ ವೆಬ್‌ಸೈಟ್‌ ವಿಳಾಸ: hindustancopper.comಗೆ ಭೇಟಿ ನೀಡಿ ಅಥವಾ ಫೋನ್‌ ನಂಬರ್‌: 01593 – 220128ಕ್ಕೆ ಕರೆ ಮಾಡಿ.

ಈ ಸುದ್ದಿಯನ್ನೂ ಓದಿ: Job Guide: ನ್ಯಾಶನಲ್‌ ಅಲ್ಯುಮಿನಿಯಂ ಕಂಪೆನಿ ಲಿಮಿಟೆಡ್‌ನಲ್ಲಿದೆ 518 ಹುದ್ದೆ; ಹೀಗೆ ಅಪ್ಲೈ ಮಾಡಿ