RRB Recruitment 2025: ಬರೋಬ್ಬರಿ 32 ಸಾವಿರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ರೈಲ್ವೆ ನೇಮಕಾತಿ ಮಂಡಳಿ: 10ನೇ ತರಗತಿ ಪಾಸಾದವರು ಅಪ್ಲೈ ಮಾಡಿ
RRB Recruitment 2025: ರೈಲ್ವೆ ಸಚಿವಾಲಯದ ರೈಲ್ವೆ ನೇಮಕಾತಿ ಮಂಡಳಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಅಸಿಸ್ಟಂಟ್, ಟ್ರ್ಯಾಕ್ ಮೈಂಟೈನರ್ ಸೇರಿ ದೇಶಾದ್ಯಂತ ಬರೋಬ್ಬರಿ 32,438 ಹುದ್ದೆಗಳಿದ್ದು, 10ನೇ ತರಗತಿ ಪಅಸಾದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್ ಮೂಲಕ ಜ. 23ರಿಂದ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಫೆ. 22.
ಬೆಂಗಳೂರು: ಭಾರತೀಯ ರೈಲ್ವೆಯಲ್ಲಿ ಉದ್ಯೋಗ ಹೊಂದಬೇಕು ಎನ್ನುವುದು ಬಹುತೇಕರ ಕನಸು. ಈ ಕನಸು ನನಸಾಗುವ ದಿನ ಬಂದೇ ಬಿಟ್ಟಿದೆ. ರೈಲ್ವೆ ಸಚಿವಾಲಯದ ರೈಲ್ವೆ ನೇಮಕಾತಿ ಮಂಡಳಿ (Railway Recruitment Board) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ (RRB Recruitment 2025). ಅಸಿಸ್ಟಂಟ್, ಟ್ರ್ಯಾಕ್ ಮೈಂಟೈನರ್ ಸೇರಿ ದೇಶಾದ್ಯಂತ ಬರೋಬ್ಬರಿ 32,438 ಹುದ್ದೆಗಳಿದ್ದು, 10ನೇ ತರಗತಿ ಪಅಸಾದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್ ಮೂಲಕ ಜ. 23ರಿಂದ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಫೆ. 22 (Job Guide).
ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ
ಪಾಯಿಂಟ್ಸ್‌ಮ್ಯಾನ್-ಬಿ (Pointsman-B)- 5,058 ಹುದ್ದೆ
ಅಸಿಸ್ಟಂಟ್ (ಟ್ರ್ಯಾಕ್ ಮೆಷಿನ್) - 799 ಹುದ್ದೆ
ಸಹಾಯಕ (ಬ್ರಿಡ್ಜ್) - 301 ಹುದ್ದೆ
ಟ್ರ್ಯಾಕ್ ನಿರ್ವಹಣೆ ಗ್ರೇಡ್-IV - 13,187 ಹುದ್ದೆ
ಅಸಿಸ್ಟಂಟ್ ಪಿ-ವೇ - 257 ಹುದ್ದೆ
ಅಸಿಸ್ಟಂಟ್ (ಸಿ & ಡಬ್ಲ್ಯು) - 2,587 ಹುದ್ದೆ
ಅಸಿಸ್ಟಂಟ್ ಟಿಆರ್‌ಡಿ - 1,381 ಹುದ್ದೆ
ಅಸಿಸ್ಟಂಟ್ ಲೋಕೋ ಶೆಡ್ (ಡೀಸೆಲ್) - 2,012 ಹುದ್ದೆ
ಅಸಿಸ್ಟಂಟ್ ಲೋಕೋ ಶೆಡ್ (ಎಲೆಕ್ಟ್ರಿಕಲ್) - 420 ಹುದ್ದೆ
ಅಸಿಸ್ಟಂಟ್ ಆಪರೇಷನ್ಸ್ (ಎಲೆಕ್ಟ್ರಿಕಲ್) - 950 ಹುದ್ದೆ
ಅಸಿಸ್ಟಂಟ್ (ಎಸ್ & ಟಿ) 744 ಹುದ್ದೆ
ಅಸಿಸ್ಟಂಟ್ ಟಿಎಲ್ & ಎಸಿ 1,041 ಹುದ್ದೆ
ಅಸಿಸ್ಟಂಟ್ ಟಿಎಲ್ &ಎಸಿ (ವರ್ಕ್ ಶಾಪ್) 624 ಹುದ್ದೆ
ಅಸಿಸ್ಟಂಟ್ (ವರ್ಕ್‌ಶಾಪ್) (ಮೆಕ್) 3,077 ಹುದ್ದೆ
ಅಧಿಸೂಚನೆ ಪ್ರಕಾರ 10ನೇ ತರಗತಿ ಮತ್ತು ಐಟಿಐ ತೇರ್ಗಡೆಯಾದವರು ಅರ್ಜಿ ಸಲ್ಲಿಸಲು ಅರ್ಹರು.
ವಯೋಮಿತಿ
ಅರ್ಜಿ ಸಲ್ಲಿಸುವವರ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 36 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ (ಎನ್‌ಸಿಎಸ್) ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ.
ಅರ್ಜಿ ಶುಲ್ಕ
ಎಸ್‌ಸಿ/ಎಸ್‌ಟಿ/ಇಬಿಸಿ/ಪಿಡಬ್ಲ್ಯುಬಿಡಿ/ಮಾಜಿ ಸೈನಿಕರು/ಮಹಿಳಾ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 250 ರೂ. ಪಾವತಿಸಬೇಕು. ಇತರ ಎಲ್ಲ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 500 ರೂ. ಪಾವತಿಸಬೇಕು. ಪಾವತಿ ವಿಧಾನ: ಆನ್‌ಲೈನ್.
ಆಯ್ಕೆ ವಿಧಾನ
ಕಂಪ್ಯೂಟರ್ ಬೇಸ್ಡ್ ಟೆಸ್ಟ್ (CBT), ಫಿಸಿಕಲ್ ಎಫಿಶ್ಯೆನ್ಸಿ ಟೆಸ್ಟ್ (PET), ದಾಖಲಾತಿ ಪರಿಶೀಲನೆ (Document Verification), ವೈದ್ಯಕೀಯ ಪರೀಕ್ಷೆ (Medical Examination) ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಸಿಬಿಟಿ ತಲಾ 1 ಅಂಕದ 100 ಪ್ರಶ್ನೆಯನ್ನು ಒಳಗೊಂಡಿರುತ್ತದೆ.
RRB Recruitment 2025 ಅಧಿಸೂಚನೆ ಓದಲು ಇಲ್ಲಿ ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಸುವ ವಿಧಾನ
* ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
(https://www.rrbapply.gov.in/#/auth/landing).
* ಹೆಸರು ನೋಂದಾಯಿಸಿ.
* ಹೊಸ ಪಾಸ್‌ವರ್ಡ್ ಬಳಸಿ ಲಾಗಿನ್ ಆಗಿ.
* ಈಗ ಕಂಡುಬರುವ ಅಪ್ಲಿಕೇಷನ್ ಫಾರಂ ಭರ್ತಿ ಮಾಡಿ.
* ಅಗತ್ಯ ಡಾಕ್ಯುಮೆಂಟ್ ಅಪ್‌ಲೋಡ್ ಮಾಡಿ.
* ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಿ.
* ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್ ಕ್ಲಿಕ್ ಮಾಡಿ.
* ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್ ಫಾರಂ ಡೌನ್‌ಲೋಡ್ ಮಾಡಿಟ್ಟುಕೊಳ್ಳಿ.
ಹೆಚ್ಚಿನ ವಿವರಗಳಿಗೆ ವೆಬ್‌ಸೈಟ್ ವಿಳಾಸ: indianrailways.gov.inಗೆ ಭೇಟಿ ನೀಡಿ.
ಈ ಸುದ್ದಿಯನ್ನೂ ಓದಿ: RRB Recruitment 2025: 1,036 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ರೈಲ್ವೆ ನೇಮಕಾತಿ ಮಂಡಳಿ; ಹೀಗೆ ಅಪ್ಲೈ ಮಾಡಿ