ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Honor Killing: ರಾಜ್ಯದಲ್ಲೊಂದು ಮರ್ಯಾದೆಗೇಡು ಹತ್ಯೆ: ಪ್ರೀತಿಸಿದ ಮಗಳಿಗೆ ಹಗ್ಗ ಬಿಗಿದು ಕೊಲೆಗೈದ ತಂದೆ

ಲವ್‌ ಗಿವ್‌ ಎಲ್ಲಾ ಮಾಡಬೇಡ ಎಂದು ತಂದೆ ಸಾಕಷ್ಟು ಬುದ್ದಿಮಾತು ಹೇಳಿದರೂ ಕೇಳದೆ ಯುವಕನೊಬ್ಬನನ್ನು ಪ್ರೀತಿಸಿದ ಹಿನ್ನೆಲೆಯಲ್ಲಿ ಕೋಪಗೊಂಡ ಮೋತಿರಾಮ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಅಡುಗೆ ಮಾಡುತ್ತಿದ್ದ ಮಗಳ ಕುತ್ತಿಗೆಗೆ ಹಗ್ಗ ಬಿಗಿದು ಹತ್ಯೆಗೈದಿದ್ದಾನೆ.

ಕೊಲೆಯಾದ ಮೋನಿಕಾ

ಬೀದರ್: ರಾಜ್ಯದಲ್ಲಿ ಮತ್ತೊಂದು ಬರ್ಬರ ಕೃತ್ಯ (Murder case) ನಡೆದಿದ್ದು, ಲವ್‌ ಮಾಡಿದ್ದಕ್ಕಾಗಿ ಮಗಳನ್ನೇ ಹತ್ಯೆ (Honor killing) ಮಾಡಿರುವ ಘಟನೆ ಬೀದರ್ ಜಿಲ್ಲೆಯಲ್ಲಿ ನಡೆದಿದೆ. ಬೀದರ್ (Bidar news) ಜಿಲ್ಲೆಯ ಔರಾದ್ ತಾಲೂಕಿನ ಬರಗೇನ್ ತಾಂಡಾದಲ್ಲಿ ಯುವಕನೊಬ್ಬನ್ನು ಪ್ರೀತಿ ಮಾಡಿದ್ದಕ್ಕೆ ರೊಚ್ಚಿಗೆದ್ದು ತಂದೆಯೇ ಕುತ್ತಿಗೆಗೆ ಹಗ್ಗ ಬಿಗಿದು ಬರ್ಬರ ಹತ್ಯೆ ಮಾಡಿದ್ದಾನೆ. ಕೊಲೆಯಾದವಳನ್ನು ಮೋನಿಕಾ ಮೋತಿರಾಮ ಜಾಧವ್ ಎಂದು ಗುರುತಿಸಲಾಗಿದೆ.

ಮೋನಿಕಾ ಒಬ್ಬ ಹುಡುಗನನ್ನು ಪ್ರೀತಿ ಮಾಡುತ್ತಿದ್ದಳು. ಪ್ರೀತಿಯ ವಿಷಯವನ್ನು ತನ್ನ ತಂದೆಯ ಎದುರು ಪ್ರಸ್ತಾಪ ಮಾಡಿದ್ದಳು. ಆದರೆ ಮೋತಿರಾಮ ಪ್ರೀತಿ -ಪ್ರೇಮದಿಂದ ದೂರವಿರುವಂತೆ ಮಗಳಿಗೆ ಹೇಳಿ, ನಿನಗೆ ಒಳ್ಳೆಯ ಹುಡುಗನನ್ನು ನೋಡಿ ಮದುವೆ ಮಾಡುತ್ತೇನೆ ಎಂದು ತಿಳಿವಳಿಕೆ ಹೇಳಿದ್ದ. ಮೋತಿರಾಮ ಬುದ್ದಿಮಾತು ಹೇಳಿದ್ದರೂ ಸಹ ಮೋನಿಕಾ ನಾನು ಅವನನ್ನೇ ಮದುವೆ ಆಗುತ್ತೇನೆ ಎಂದು ಹಠ ಹಿಡಿದಿದ್ದಳು.

ತಂದೆ ಏನೇ ಬುದ್ದಿಮಾತು ಹೇಳಿದ್ರೂ ಕೇಳದ ಹಿನ್ನೆಲೆಯಲ್ಲಿ ಕೋಪಗೊಂಡ ಮೋತಿರಾಮ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಅಡುಗೆ ಮಾಡುತ್ತಿದ್ದ ಮಗಳ ಕುತ್ತಿಗೆಗೆ ಹಗ್ಗ ಬಿಗಿದು ಹತ್ಯೆಗೈದಿದ್ದಾನೆ. ತೀವ್ರ ರಕ್ತಸ್ರಾವದಿಂದ ಮೋನಿಕಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಈ ಕುರಿತು ಸಂತಪೂರ ಪೊಲೀಸ್‌ ಠಾಣೆಯಲ್ಲಿ ಮೃತ ಯುವತಿಯ ತಾಯಿ ಭಾಗುಬಾಯಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ಹಣ ಪೋಲು ಮಾಡದಿರೆಂದು ಬುದ್ಧಿ ಹೇಳಿದ ಪತ್ನಿಯನ್ನೇ ಕೊಂದ ಪತಿ

ಚಿತ್ರದುರ್ಗ: ಹಣ, ಆಸ್ತಿಯನ್ನು ದುಂದು ವೆಚ್ಚ ಮಾಡಿ ಹಾಳು ಮಾಡಬೇಡ ಎಂದು ಪತ್ನಿ ಬುದ್ಧಿ ಹೇಳಿದ್ದಕ್ಕೆ ಕುಪಿತಗೊಂಡ ಪತಿಯೊಬ್ಬ ಪತ್ನಿಯ ಕತ್ತು ಹಿಸುಕಿ ಹತ್ಯೆಗೈದಿರುವ ಘಟನೆ ಚಿತ್ರದುರ್ಗ ತಾಲ್ಲೂಕಿನ ಮೆದೇಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕೊಲೆಯಾದ ಮಹಿಳೆಯನ್ನು ಶ್ರೀದೇವಿ (48) ಎಂದು ಗುರುತಿಸಲಾಗಿದೆ. ಹತ್ಯೆಗೈದ ಪತಿ, ಉಮಾಪತಿ ಎಂಬ ಹೆಸರಿನವನು. ಉಮಾಪತಿ ತನ್ನ ಜಮೀನು ಮಾರಾಟ ಮಾಡಿ ಬಂದ ಹಣವನ್ನೆಲ್ಲಾ ಮನಬಂದಂತೆ ಖರ್ಚು ಮಾಡುತ್ತಿದ್ದ. ಈ ಹಿನ್ನೆಲೆಯಲ್ಲಿ ಪತ್ನಿ ಶ್ರೀದೇವಿ ಆಗಾಗ್ಗೆ ಎಚ್ಚರಿಸುತಿದ್ದಳು. ಈ ವಿಚಾರಕ್ಕೆ ಇಬ್ಬರ ಮಧ್ಯೆ ಆಗಾಗ ಕಲಹ ನಡೆಯುತ್ತಿತ್ತು.

ಇದರಿಂದ ಬೇಸತ್ತ ಪತ್ನಿ ಉಳಿದ ಜಮೀನು ಆದರೂ ನನ್ನ ಹಾಗೂ ಮಕ್ಕಳ ಹೆಸರಲ್ಲಿ ಮಾಡಿ ಎಂದು ಗಲಾಟೆ ಮಾಡುತ್ತಿದ್ದರು. ಇದರಿಂದ ಆಕ್ರೋಶಗೊಂಡ ಉಮಾಪತಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಸ್ಕೆಚ್ ಹಾಕಿ, ಫೆಬ್ರವರಿ 7ರಂದು ಬೆಳಗ್ಗೆ ಶ್ರೀದೇವಿ ಮನೆಯಲ್ಲಿ ಪೂಜೆ ಮಾಡುತ್ತಿದ್ದಾಗ, ಆಕೆಯ ಸೀರೆಯಿಂದ ಕೊರಳಿಗೆ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.

ಕೂಡಲೇ ಅಕ್ಕಪಕ್ಕದ ಮನೆಯವರನ್ನೆಲ್ಲಾ ಮನೆಗೆ ಕರೆದು, ನನ್ನ ಪತ್ನಿ ಪೂಜೆ ಮಾಡುವಾಗ ನೆಲಕ್ಕೆ ಬಿದ್ದಿದ್ದಾಳೆಂದು ನಂಬಿಸಿ ಆಸ್ಪತ್ರೆಗೆ ದಾಖಲಿಸಿದ್ದ. ಆದರೆ ಅಷ್ಟರಲ್ಲಾಗಲೇ ಶ್ರೀದೇವಿ ಸಾವನ್ನಪ್ಪಿದ್ದರು. ಘಟನೆ ಕುರಿತು ಚಿತ್ರದುರ್ಗದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ರಾಮಾಂತರ ಠಾಣೆ ಪೊಲೀಸರು ಆರೋಪಿ ಉಮಾಪತಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.

ಇದನ್ನೂ ಓದಿ: Chikkaballapur News: ಅನೈತಿಕ ಸಂಬಂಧ ಭಾವನನ್ನೇ ಕೊಂದ ಭಾಮೈದ : ಸಿನಿಮೀಯ ಶೈಲಿಯಲ್ಲಿ ಕೊಲೆ

ಹರೀಶ್‌ ಕೇರ

View all posts by this author