Chikkaballapur News: ಅನೈತಿಕ ಸಂಬಂಧ ಭಾವನನ್ನೇ ಕೊಂದ ಭಾಮೈದ : ಸಿನಿಮೀಯ ಶೈಲಿಯಲ್ಲಿ ಕೊಲೆ
ತಾಲೂಕಿನ ಮೋಟ್ಲೂರು ಗ್ರಾಮದ ಕಾಲುವೆ ನೀರಿನಲ್ಲಿ ಹೆಣವಾಗಿ ಬಿದ್ದಿರುವ ವ್ಯಕ್ತಿಯ ಹೆಸರು ಸುಭಾ ಷ್. ಚಿಕ್ಕಬಳ್ಳಾಪುರ ತಾಲ್ಲೂಕು ಗೌಚೇನಹಳ್ಳಿ ಗ್ರಾಮದ ಸುಭಾಷ್ ಒಂದೂ ವರೆ ವರ್ಷದ ಹಿಂದೆ ಆಚಾ ರ್ಲಹಳ್ಳಿ ಗ್ರಾಮದ ಇಂಧುಶ್ರೀ ಎಂಬುವ ರನ್ನು ಜಾತಿ ಮೀರಿ ಪ್ರೀತಿಸಿ ಮದುವೆ ಯಾಗಿದ್ದರು. ಇದಾದ ಬಳಿಕ ಪತ್ನಿಯಿಂದ ದೂರವಾಗಿ ಮತ್ತೊಬ್ಬರ ಜೊತೆಗೆ ಅನೈತಿಕ ಸಂಬಂಧ ವಿಟ್ಟುಕೊಂಡಿದ್ದ ಎನ್ನಲಾಗಿದೆ
ಪತಿ ಕೊಲೆಗೆ ಪ್ರಿಯಕರನ ಜೊತೆಗೆ ಪತ್ನಿಯ ಕೈವಾಡದ ಆರೋಪ : ಕೆಲವೇ ಗಂಟೆಗಳಲ್ಲಿ ಆರೋಪಿಗಳ ಬಂಧನ
ಚಿಕ್ಕಬಳ್ಳಾಪುರ : ಗೌಚೇನಹಳ್ಳಿ ಗ್ರಾಮದ ೨೪ ವರ್ಷದ ಸುಭಾಷ್ ಎಂಬುವರನ್ನು ಪತ್ನಿಯೇ ಪ್ರಿಯಕರನ ಜತೆಗೂಡಿ ಕೊಲೆ ಮಾಡಿಸಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ನಡೆದಿದೆ.
ಅವರಿಬ್ಬರೂ ಪ್ರೀತಿಸಿ ಜಾತಿ ಮೀರಿ ಮಧುವೆಯಾಗಿದ್ದರು. ಅವರ ಪ್ರೀತಿಗೆ ಮೂರು ತಿಂಗಳ ಮಗು ಕೂಡ ಇತ್ತು. ಮದುವೆಯಾದ ಕೆಲವೇ ದಿನಗಳಲ್ಲಿ ಗಂಡ-ಹೆಂಡತಿ ನಡುವೆ ಮೂಡಿದ ಮನಸ್ತಾಪ ಪತಿಯ ಕೊಲೆಯಲ್ಲಿ ಅಂತ್ಯವಾಗಿದೆ. ಹತ್ಯೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಹಂತಕರ ಎಡೆಮುರಿ ಕಟ್ಟಿದ್ದಾರೆ.
ಇದನ್ನೂ ಓದಿ: Chikkaballapur News: ಜನಸಾಗರದ ನಡುವೆ ನಡೆದ ಚಿತ್ರಾವತಿ ಶ್ರೀಸುಬ್ರಹ್ಮಣ್ಯೇಶ್ವರಸ್ವಾಮಿ ಬ್ರಹ್ಮರಥೋತ್ಸವ
ತಾಲೂಕಿನ ಮೋಟ್ಲೂರು ಗ್ರಾಮದ ಕಾಲುವೆ ನೀರಿನಲ್ಲಿ ಹೆಣವಾಗಿ ಬಿದ್ದಿರುವ ವ್ಯಕ್ತಿಯ ಹೆಸರು ಸುಭಾಷ್. ಚಿಕ್ಕಬಳ್ಳಾಪುರ ತಾಲ್ಲೂಕು ಗೌಚೇನಹಳ್ಳಿ ಗ್ರಾಮದ ಸುಭಾಷ್ ಒಂದೂ ವರೆ ವರ್ಷದ ಹಿಂದೆ ಆಚಾರ್ಲಹಳ್ಳಿ ಗ್ರಾಮದ ಇಂಧುಶ್ರೀ ಎಂಬುವ ರನ್ನು ಜಾತಿ ಮೀರಿ ಪ್ರೀತಿಸಿ ಮದುವೆ ಯಾಗಿದ್ದರು. ಇದಾದ ಬಳಿಕ ಪತ್ನಿಯಿಂದ ದೂರವಾಗಿ ಮತ್ತೊಬ್ಬರ ಜೊತೆಗೆ ಅನೈತಿಕ ಸಂಬಂಧ ವಿಟ್ಟುಕೊಂಡಿದ್ದ ಎನ್ನಲಾಗಿದೆ. ಇತ್ತ ಸುಭಾಷ್ ಪತ್ನಿ ಇಂದುಶ್ರೀ ಕೂಡ ಆರೋಪಿ ಪ್ರವೀಣ್ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದು, ಇದರ ಹಿನ್ನೆಲೆ ಯಲ್ಲೇ ಕೊಲೆಯಾಗಿದೆ ಎಂಬ ಅನು ಮಾನವಿದ್ದು ಪೊಲೀಸರು 10 ಮಂದಿಯನ್ನು ಬಂಧಿಸಲಾಗಿದೆ.
ಚಿಕ್ಕಬಳ್ಳಾಪುರದ ಪ್ರಶಾಂತ್ ನಗರದಲ್ಲಿ ವಾಸವಾಗಿದ್ದ ಸುಭಾಷ್, ಇ-ಕಾರ್ಟ್ನಲ್ಲಿ ಕೆಲಸ ಮಾಡಿ ಕೊಂಡಿದ್ದ. ಹೀಗಿರಬೇಕಾದರೆ ಭಾಮೈದ ಮನೋಜ್ ಮತ್ತವರ ಸಹಚರರು ಸೋಮವಾರ ರಾತ್ರಿ ಚಿಕ್ಕಬಳ್ಳಾಪುರ ತಾಲ್ಲೂಕು ಮೊಟ್ಲೂರು ಗ್ರಾಮದ ಬಳಿಗೆ ಸುಭಾಷ್ ನನ್ನ ಕರೆಸಿಕೊಂಡು ಸಿನಿ ಮೀಯ ಶೈಲಿಯಲ್ಲಿ ಮಾರಕಾಸ್ತ್ರಗಳಿಂದ ಸುಭಾಷ್ ನನ್ನ ಕೊಚ್ಚಿ ಕೊಲೆ ಮಾಡಿದ್ದಾರೆ.
ಘಟನೆ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತನ ಬಾಮೈದ ಅಚಾರ್ಲಹಳ್ಳಿ ಮನೋಜ್, ಕಳವಾರ ಗ್ರಾಮದ ಪ್ರವೀಣ್ ಚಿಕ್ಕಬ ಳ್ಳಾಪುರ ನಗರದ ಗಿರೀಶ್, ಅನಿಲ್, ಪ್ರಸಾದ್, ವಿಘ್ನೇಶ್, ನಂದ, ಬಾದಗಾನಹಳ್ಳಿ ಮೋಹನ್, ಕಾರ್ತಿಕ್, ನಂದ ಎಂಬುವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ವಿಚಾರಣೆಯಲ್ಲಿ ಆರೋಪಿಗಳು ಇನ್ನೂ ಹೆಚ್ಚಿನ ವಿಚಾರಗಳನ್ನು ಬಾಯಿ ಬಿಟ್ಟಿದ್ದು, ತನಿಖೆಯ ಬಳಿಕ ಮೃತನ ಪತ್ನಿಯನ್ನು ಸಹ ವಶಕ್ಕೆ ಪಡೆಯುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಹಿಂದೆಯೂ ಸುಭಾಷ್ ಹಾಗೂ ಪತ್ನಿಯ ಕುಟುಂಬಸ್ಥರ ನಡುವೆ ಗಲಾಟೆಯಾಗಿ ರಾಜಿ ಪಂಚಾ ಯತಿ ಆಗಿತ್ತು. ಆದರೆ ಇದು ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿರೋದು ವಿಪರ್ಯಾಸವೇ ಸರಿ.