ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ICC Test Rankings: ಜಸ್‌ಪ್ರೀತ್‌ ಬುಮ್ರಾ ಜೀವನಶ್ರೇಷ್ಠ ಸಾಧನೆ

ICC Test Rankings: ನೂತನ ಬೌಲಿಂಗ್‌ ಶ್ರೇಯಾಂಕದಲ್ಲಿ ರವೀಂದ್ರ ಜಡೇಜಾ 4 ಸ್ಥಾನ ಕುಸಿತ ಕಂಡು 10ನೇ ಸ್ಥಾನ ಪಡೆದಿದ್ದಾರೆ. ಮೂರನೇ ಟೆಸ್ಟ್‌ನಲ್ಲಿ ಜಡೇಜಾ ಅರ್ಧಶತಕ ಬಾರಿಸಿ ಮಿಂಚಿದ್ದರೂ ಬೌಲಿಂಗ್‌ನಲ್ಲಿ ವಿಕೆಟ್‌ ಲೆಸ್‌ ಎನಿಸಿಕೊಂಡಿದ್ದರು. ಇದು ಅವರ ಶ್ರೇಯಾಂಕ ಕುಸಿತಕ್ಕೆ ಕಾರಣ.

ದುಬೈ: ಐಸಿಸಿ ನೂತನ ಟೆಸ್ಟ್‌ ಬ್ಯಾಟಿಂಗ್‌ ಶ್ರೇಯಾಂಕದಲ್ಲಿ ಟೀಮ್‌ ಇಂಡಿಯಾದ ಬ್ಯಾಟರ್‌ಗಳು ಪಾತಾಳಕ್ಕೆ ಕುಸಿದಿದ್ದಾರೆ. ಆದರೆ, ಬೌಲಿಂಗ್‌ ಶ್ರೇಯಾಂಕದಲ್ಲಿ(ICC Test Rankings) ವೇಗಿ ಜಸ್‌ಪ್ರೀತ್‌ ಬುಮ್ರಾ(Jasprit Bumrah) ಅವರು ಅಗ್ರಸ್ಥಾನ ಉಳಿಸಿಕೊಳ್ಳುವ ಜತೆಗೆ ತನ್ನ ಜೀವನಶ್ರೇಷ್ಠ ರೇಟಿಂಗ್‌ ಅಂಕ ಪಡೆಯುವ ಮೂಕಲ ಮಾಜಿ ಆಟಗಾರ ಆರ್‌.ಅಶ್ವಿನ್‌ ದಾಖಲೆಯನ್ನು ಸರಿಗಟ್ಟಿದ್ದಾರೆ. ಆಸೀಸ್‌ ವಿರುದ್ಧ ಆಡಿದ ಮೂರು ಟೆಸ್ಟ್ ಪಂದ್ಯಗಳಲ್ಲಿಯೂ ಬುಮ್ರಾ ಶ್ರೇಷ್ಠ ಬೌಲಿಂಗ್‌ ನಡೆಸಿದ್ದರು.
ದ್ವಿತೀಯ ಮತ್ತು ಮೂರನೇ ಪಂದ್ಯದಲ್ಲಿ ಘೋರ ಬ್ಯಾಟಿಂಗ್‌ ವೈಫಲ್ಯ ಕಂಡಿದ್ದ ಟೀಮ್‌ ಇಂಡಿಯಾದ ಬ್ಯಾಟರ್‌ಗಳಾದ ಯಶಸ್ವಿ ಜೈಸ್ವಾಲ್‌, ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ರಿಷಭ್‌ ಪಂತ್‌ ಮತ್ತು ರೋಹಿತ್‌ ಶರ್ಮ ತಮ್ಮ ಬ್ಯಾಟಿಂಗ್‌ ಶ್ರೇಯಾಂಕದಲ್ಲಿ ಭಾರೀ ನಷ್ಟ ಎದುರಿಸಿದ್ದಾರೆ. ಜೈಸ್ವಾಲ್‌ ಒಂದು ಸ್ಥಾನದ ಕುಸಿತ, ಪಂತ್‌ 2 ಸ್ಥಾನಗಳ ಕುಸಿತದೊಂದಿಗೆ ಕ್ರಮವಾಗಿ 5 ಮತ್ತು 11ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
ಶುಭಮನ್‌ ಗಿಲ್‌ 4 ಸ್ಥಾನಗಳ ಕುಸಿತ ಕಂಡು 20ನೇ ಸ್ಥಾನದಲ್ಲಿದ್ದರೆ, ವಿರಾಟ್‌ ಕೊಹ್ಲಿ 21ನೇ, ರೋಹಿತ್‌ ಶರ್ಮ 5 ಸ್ಥಾನಗಳ ನಷ್ಟದೊಂದಿಗೆ 35ನೇ ಸ್ಥಾನದ ಪಡೆದಿದ್ದಾರೆ. ಕನ್ನಡಿಗ ರಾಹುಲ್‌ ಬರೋಬ್ಬರಿ 10 ಸ್ಥಾನಗಳ ಜಿಗಿತದೊಂದಿಗೆ 40ನೇ ಸ್ಥಾನ ಪಡೆದಿದ್ದಾರೆ.
ಅಶ್ವಿನ್‌ ದಾಖಲೆ ಸರಿಗಟ್ಟಿದ ಬುಮ್ರಾ
ಜಸ್‌ಪ್ರೀತ್‌ ಬುಮ್ರಾ ಬೌಲಿಂಗ್‌ ಶ್ರೇಯಾಂಕದಲ್ಲಿ 904 ರೇಟಿಂಗ್‌ ಅಂಕ ಪಡೆಯುವ ಮೂಲಕ ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಆರ್‌.ಅಶ್ವಿನ್‌ ಅವರ ದಾಖಲೆಯನ್ನು ಸರಿಗಟ್ಟಿದರು. ಅಶ್ವಿನ್‌ 2016ರಲ್ಲಿ 904 ರೇಟಿಂಗ್‌ ಅಂಕ ಪಡೆದಿದ್ದರು. ಬುಮ್ರಾ ನಾಳೆಯಿಂದ(ಗುರುವಾರ, ಡಿ.26) ಆರಂಭಗೊಳ್ಳುವ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದಲ್ಲಿ ಉತ್ತಮ ಬೌಲಿಂಗ್‌ ಪ್ರದರ್ಶನ ತೋರಿದರೆ ರೇಟಿಂಗ್‌ ಅಂಕ ಹೆಚ್ಚಳದೊಂದಿಗೆ ಅಶ್ವಿನ್‌ ದಾಖಲೆ ಹಿಂದಿಕ್ಕಬಹುದು. ಇದುವರೆಗಿನ ಬೌಲಿಂಗ್‌ ಶ್ರೇಯಾಂಕದಲ್ಲಿ ಗರಿಷ್ಠ ರೇಟಿಂಗ್‌ ಅಂಕ ಗಳಿಸಿದ ದಾಳೆ ಆಸೀಸ್‌ ನಾಯಕ ಪ್ಯಾಟ್‌ ಕಮಿನ್ಸ್‌ ಹೆಸರಿನಲ್ಲಿದೆ. 2019ರಲ್ಲಿ ಕಮಿನ್ಸ್‌ 914 ರೇಟಿಂಗ್‌ ಅಂಕ ಪಡೆದಿದ್ದರು.
ಇದನ್ನೂ ಓದಿ AUS vs IND: 4ನೇ ಟೆಸ್ಟ್‌ನಲ್ಲಿ ರೋಹಿತ್‌ ಆರಂಭಿಕ?
ನೂತನ ಬೌಲಿಂಗ್‌ ಶ್ರೇಯಾಂಕದಲ್ಲಿ ರವೀಂದ್ರ ಜಡೇಜಾ 4 ಸ್ಥಾನ ಕುಸಿತ ಕಂಡು 10ನೇ ಸ್ಥಾನ ಪಡೆದಿದ್ದಾರೆ. ಮೂರನೇ ಟೆಸ್ಟ್‌ನಲ್ಲಿ ಜಡೇಜಾ ಅರ್ಧಶತಕ ಬಾರಿಸಿ ಮಿಂಚಿದ್ದರೂ ಬೌಲಿಂಗ್‌ನಲ್ಲಿ ವಿಕೆಟ್‌ ಲೆಸ್‌ ಎನಿಸಿಕೊಂಡಿದ್ದರು. ಇದು ಅವರ ಶ್ರೇಯಾಂಕ ಕುಸಿತಕ್ಕೆ ಕಾರಣ.
ಅಗ್ರ-5 ಬೌಲರ್ಸ್‌
1. ಜಸ್‌ಪ್ರೀತ್‌ ಬುಮ್ರಾ-904 ರೇಟಿಂಗ್‌
2. ಕಗಿಸೊ ರಬಾಡ-856 ರೇಟಿಂಗ್‌
3. ಜೋಶ್‌ ಹ್ಯಾಜಲ್‌ವುಡ್‌-852 ರೇಟಿಂಗ್‌
4. ಪ್ಯಾಟ್‌ ಕಮಿನ್ಸ್‌-822 ರೇಟಿಂಗ್‌
5. ಆರ್‌.ಅಶ್ವಿನ್‌-789 ರೇಟಿಂಗ್‌