ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mysterious Disease: ತೆಲಂಗಾಣದಲ್ಲಿ ನಿಗೂಢ ಕಾಯಿಲೆ ; 3 ದಿನಗಳಲ್ಲಿ 2,500 ಕೋಳಿಗಳು ಸಾವು!

ತೆಲಂಗಾಣದ ವನಪರ್ತಿ ಜಿಲ್ಲೆಯ ಮದನಪುರಂ ಮಂಡಲದ ಕೊಣ್ಣೂರಿನ ಕೋಳಿ ಸಾಕಣೆ ಕೇಂದ್ರಗಳಲ್ಲಿ ನಿಗೂಢ ರೋಗ ಕಾಣಿಸಿಕೊಂಡಿದ್ದು ಮೂರು ದಿನಗಳ ಅವಧಿಯಲ್ಲಿ ಸುಮಾರು 2,500 ಕೋಳಿಗಳು ಮೃತಪಟ್ಟಿವೆ ಎಂದು ತಿಳಿದು ಬಂದಿದೆ. ಶಿವಕೆಹಾವುಲು ಎಂಬುವವರ ಒಡೆತನದ ಕೋಳಿ ಸಾಕಣೆ ಕೇಂದ್ರಗಳಲ್ಲಿ ಕೋಳಿಗಳು ಮೃತಪಟ್ಟಿವೆ.

ನಿಗೂಢ ಕಾಯಿಲೆಗೆ ಸಾವಿರಾರು ಕೋಳಿಗಳು ಬಲಿ !

ಸಾಂದರ್ಭಿಕ ಚಿತ್ರ

Profile Vishakha Bhat Feb 22, 2025 11:27 AM

ಹೈದರಾಬಾದ್‌: ತೆಲಂಗಾಣದ ವನಪರ್ತಿ ಜಿಲ್ಲೆಯ ಮದನಪುರಂ ಮಂಡಲದ ಕೊಣ್ಣೂರಿನ ಕೋಳಿ ಸಾಕಣೆ ಕೇಂದ್ರಗಳಲ್ಲಿ ನಿಗೂಢ ರೋಗ (Mysterious Disease) ಕಾಣಿಸಿಕೊಂಡಿದ್ದು ಮೂರು ದಿನಗಳ ಅವಧಿಯಲ್ಲಿ ಸುಮಾರು 2,500 ಕೋಳಿಗಳು ಮೃತಪಟ್ಟಿವೆ ಎಂದು ತಿಳಿದು ಬಂದಿದೆ. ವನಪರ್ತಿಯ ಜಿಲ್ಲಾ ಪಶುವೈದ್ಯಕೀಯ ಮತ್ತು ಪಶುಸಂಗೋಪನಾ ಅಧಿಕಾರಿ ಕೆ ವೆಂಕಟೇಶ್ವರ್ ಅವರು ಈ ಸೋಂಕು ಹರಡುವಿಕೆಯನ್ನು ದೃಢಪಡಿಸಿದ್ದು, ರೋಗದ ಕಾರಣವನ್ನು ತನಿಖೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಶಿವಕೆಹಾವುಲು ಒಡೆತನದ ಎಂಬುವವರ ಕೋಳಿ ಸಾಕಣೆ ಕೇಂದ್ರಗಳಲ್ಲಿ ಕೋಳಿಗಳು ಮೃತಪಟ್ಟಿವೆ.

ಪಶುಸಂಗೋಪನಾ ಅಧಿಕಾರಿ ಕೆ ವೆಂಕಟೇಶ್ವರ್ ಮಾತನಾಡಿ, ವನಪರ್ತಿ ಜಿಲ್ಲೆಯ ಮದನಪುರಂ ಮಂಡಲದ ಕೊಣ್ಣೂರಿನಲ್ಲಿರುವ ಕೋಳಿ ಸಾಕಣೆ ಕೇಂದ್ರಗಳಿಗೆ ನಿಗೂಢ ರೋಗವೊಂದು ತಗುಲಿದ್ದು, ಕೇವಲ ಮೂರು ದಿನಗಳ ಅವಧಿಯಲ್ಲಿ ಸುಮಾರು 2,500 ಕೋಳಿಗಳು ಸಾವನ್ನಪ್ಪಿವೆ. ಕೋಳಿಗಳು ಸತ್ತ ನಂತರ ನಾವು ಸ್ಥಳವನ್ನು ಪರಿಶೀಲಿಸಿದ್ದೇವೆ. ಮಾದರಿಗಳನ್ನು ತೆಗೆದುಕೊಂಡಿದ್ದೇವೆ, ಅವುಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮೂರು ದಿನಗಳಲ್ಲಿ ಇಷ್ಟು ಕೋಳಿಗಳು ಮೃತಪಟ್ಟಿವೆ. ಫೆಬ್ರವರಿ 16 ರಂದು 117, 17 ರಂದು 300, ಮತ್ತು ಉಳಿದವು 18 ರಂದು, ನಂತರ ನಮಗೆ ಮಾಹಿತಿ ನೀಡಲಾಯಿತು ಮತ್ತು 19 ರಂದು ಪ್ರಯೋಗಾಲಯಕ್ಕೆ ಮಾದರಿಗಳನ್ನು ಕಳುಹಿಸಲಾಗಿದೆ. ವರದಿ ಬಂದ ನಂತರ ನಿಖರ ಕಾರಣ ತಿಳಿಯಲಿದೆ ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:ನವದೆಹಲಿಯಲ್ಲಿ ಹಕ್ಕಿ ಜ್ವರಕ್ಕೆ ಮೊದಲ ಬಲಿ, ಏಮ್ಸ್​ನಲ್ಲಿ ಬಾಲಕನ ಸಾವು

ಆಂಧ್ರಪ್ರದೇಶದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಕಳೆದ ವಾರದ ಆರಂಭದಲ್ಲಿ, ಆಂಧ್ರಪ್ರದೇಶ ಸರ್ಕಾರವು ಹಕ್ಕಿ ಜ್ವರ ಹರಡುವುದನ್ನು ತಡೆಯಲು ಮೂರು ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ನಿಯಂತ್ರಣ ಕ್ರಮಗಳನ್ನು ಜಾರಿಗೆ ತಂದಿದೆ. ಕರ್ನೂಲ್‌ನಲ್ಲಿರುವ ದೇಶೀಯ ಬಾತುಕೋಳಿ ಸಾಕಣೆ ಕೇಂದ್ರ, ಪೂರ್ವ ಗೋದಾವರಿ ಜಿಲ್ಲೆಯ ಕಾನೂರಿನಲ್ಲಿರುವ ಮೂರು ಕೋಳಿ ಸಾಕಣೆ ಕೇಂದ್ರಗಳು, ಎನ್‌ಟಿಆರ್ ಜಿಲ್ಲೆಯ ಗ್ಯಾಂಪಲಗುಡೆಮ್‌ನಲ್ಲಿರುವ ಒಂದು ಫಾರ್ಮ್, ಪಶ್ಚಿಮ ಗೋದಾವರಿ ಜಿಲ್ಲೆಯ ವೇಲ್ಪುರುವಿನಲ್ಲಿರುವ ಕೋಳಿ ಸಾಕಣೆ ಕೇಂದ್ರ ಮತ್ತು ಎಲೂರು ಜಿಲ್ಲೆಯ ಬಾದಂಪುಡಿಯಲ್ಲಿರುವ ಒಂದು ಫಾರ್ಮ್‌ನಲ್ಲಿ ಹಕ್ಕಿ ಜ್ವರ ವೈರಸ್ ಪತ್ತೆಯಾಗಿತ್ತು.