IND vs BAN: 200ನೇ ಒಡಿಐ ವಿಕೆಟ್ ಕಿತ್ತು ವಿಶೇಷ ದಾಖಲೆ ಬರೆದ ಮೊಹಮ್ಮದ್ ಶಮಿ!
mohammed shami Reach 200 ODI Wickets: ಭಾರತ ತಂಡದ ಹಿರಿಯ ವೇಗಿ ಮೊಹಮ್ಮದ್ ಶಮಿ ಅವರು ಬಾಂಗ್ಲಾದೇಶ ವಿರುದ್ದ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ 5 ವಿಕೆಟ್‌ಗಳನ್ನು ಪಡೆಯುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ 200 ವಿಕೆಟ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 200 ವಿಕೆಟ್‌ಗಳನ್ನು ಪೂರ್ಣಗೊಳಿಸಿದ ಭಾರತದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ.

200 ಒಡಿಐ ವಿಕೆಟ್ ಪೂರ್ಣಗೊಳಿಸಿದ ಮೊಹಮ್ಮದ್ ಶಮಿ.

ದುಬೈ: ಭಾರತ ತಂಡದ ಹಿರಿಯ ವೇಗಿ ಮೊಹಮ್ಮದ್ ಶಮಿ ಅವರು ಏಕದಿನ ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಬಾಂಗ್ಲಾದೇಶ ವಿರುದ್ಧ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಅವರು ಐದು ವಿಕೆಟ್ ಸಾಧನೆ ಮಾಡಿದರು. ಆ ಮೂಲಕ ಒಡಿಐ ಕ್ರಿಕೆಟ್‌ನಲ್ಲಿ ವೇಗವಾಗಿ 200 ವಿಕೆಟ್‌ಗಳನ್ನು ಪೂರ್ಣಗೊಳಿಸಿದ ಮೊದಲ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ. ಈ ಪಂದ್ಯದಲ್ಲಿ ಶಿಸ್ತುಬದ್ದ ಬೌಲಿಂಗ್ ದಾಳಿ ನಡೆಸಿದ್ದ ಶಮಿ 10 ಓವರ್‌ಗಳಿಗೆ 53 ರನ್ ನೀಡಿ 5 ವಿಕೆಟ್ ಸಾಧನೆ ಮಾಡಿದರು.
2013ರಲ್ಲಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಮೊಹಮ್ಮದ್ ಶಮಿ, 200 ವಿಕೆಟ್‌ಗಳನ್ನು ಪೂರ್ಣಗೊಳಿಸಲು ಇಲ್ಲಿಯತನಕ 103 ಪಂದ್ಯಗಳನ್ನು ತೆಗೆದುಕೊಂಡಿದ್ದಾರೆ. ಈ ಹಿಂದೆ 133 ಪಂದ್ಯಗಳಿಂದ ಈ ಸಾಧನೆ ಮಾಡಿದ್ದ ಮಾಜಿ ವೇಗಿ ಅಜಿತ್ ಅಗರ್ಕರ್ ಅವರನ್ನು ಇದೀಗ ಶಮಿ ಹಿಂದಿಕ್ಕಿದ್ದಾರೆ. ಇತ್ತೀಚೆಗೆ ಗಾಯದಿಂದ ಗುಣಮುಖರಾಗಿ ಭಾರತ ತಂಡಕ್ಕೆ ಬಂದಿರುವ ಶಮಿ ಸ್ಥಿರ ಪ್ರದರ್ಶನವನ್ನು ತೋರುತ್ತಿದ್ದಾರೆ. ಕಳೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿಯೂ ಶಮಿ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ್ದರು. ಸೀಮ್‌ನಲ್ಲಿ ಚೆಂಡನ್ನು ಬೌಲ್ ಮಾಡುವ ಮೊಹಮ್ಮದ್ ಶಮಿ ಎರಡೂ ಹಾದಿಯಲ್ಲಿ ಸ್ವಿಂಗ್ ಮಾಡುತ್ತಾರೆ. ತಮ್ಮ ಮಾರಕ ಬೌಲಿಂಗ್ ದಾಳಿಯ ಮೂಲಕ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿರುವ ಮೊಹಮ್ಮದ್ ಶಮಿ ಟೀಮ್ ಇಂಡಿಯಾಗೆ ಕೀ ಬೌಲರ್ ಆಗಿದ್ದಾರೆ.
IND vs BAN: ʻಅಕ್ಷರ್ ಪಟೇಲ್‌ಗೆ ಹ್ಯಾಟ್ರಿಕ್ ಮಿಸ್ʼ-ಸುಲಭ ಕ್ಯಾಚ್ ಕೈಚೆಲ್ಲಿ ಕ್ಷಮೆ ಕೇಳಿದ ರೋಹಿತ್ ಶರ್ಮಾ!
ಭಾರತೀಯ ಏಳನೇ ಬೌಲರ್ ಶಮಿ
ಏಕದಿನ ಕ್ರಿಕೆಟ್‌ನಲ್ಲಿ 200 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ಭಾರತದ ಏಳನೇ ಮೊಹಮ್ಮದ್ ಶಮಿ. 334 ವಿಕೆಟ್‌ಗಳ ಮೂಲಕ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ಮತ್ತೊರ್ವ ಕನ್ನಡಿಗ ಜಾವಗಲ್ 315 ವಿಕೆಟ್‌ಗಳ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ ಅಜಿತ್ ಅಗರ್ಕರ್ (288) ಇದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 200 ವಿಕೆಟ್‌ಗಳನ್ನು ಪೂರ್ಣಗೊಳಿಸಿದ ವಿಶ್ವದ ಎರಡನೇ ಬೌಲರ್ ಎಂಬ ಕೀರ್ತಿಗೂ ಶಮಿ ಭಾಜನರಾಗಿದ್ದಾರೆ. ಆಸ್ಟ್ರೇಲಿಯಾದ ವೇಗಿ ಮಿಚೆಲ್ ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.
2⃣0⃣0⃣ wickets and counting!
— BCCI (@BCCI) February 20, 2025
Mohd. Shami becomes the fastest bowler for India to scalp 200 ODI wickets! 🫡
Follow the Match ▶️ https://t.co/ggnxmdG0VK#TeamIndia | #BANvIND | #ChampionsTrophy | @MdShami11 pic.twitter.com/CqLyuQPh3X
ಅತ್ಯಂತ ಕಡಿಮೆ ಪಂದ್ಯಗಳಲ್ಲಿ 200 ಒಡಿಐ ವಿಕೆಟ್ ಪಡೆದ ಬೌಲರ್‌ಗಳು
ಮಿಚೆಲ್ ಸ್ಟಾರ್ಕ್: 102 ಪಂದ್ಯಗಳು
ಮೊಹಮ್ಮದ್ ಶಮಿ/ಸಕ್ಲೈನ್ ಮುಷ್ತಾಕ್: 104 ಪಂದ್ಯಗಳು
ಟ್ರೆಂಟ್ ಬೌಲ್ಟ್: 107 ಪಂದ್ಯಗಳು
ಬ್ರೆಟ್ ಲೀ: 112 ಪಂದ್ಯಗಳು
ಅಲಾನ್ ಬಾರ್ಡರ್: 117 ಪಂದ್ಯಗಳು
He is BACK and HOW 🤩
— BCCI (@BCCI) February 20, 2025
𝗙𝗜𝗙𝗘𝗥 for Mohd. Shami against Bangladesh!
Follow the Match ▶️ https://t.co/ggnxmdG0VK#TeamIndia | #BANvIND | #ChampionsTrophy | @MdShami11 pic.twitter.com/sX0dT9cCbp
ಕಡಿಮೆ ಎಸೆತಗಳಲ್ಲಿ 200 ಒಡಿಯ ವಿಕೆಟ್ ಕಿತ್ತ ಬೌಲರ್‌ಗಳು
ಮೊಹಮ್ಮದ್ ಶಮಿ: 5126 ಎಸೆತಗಳು
ಮಿಚೆಲ್ ಸ್ಟಾರ್ಕ್: 5240 ಎಸೆತಗಳು
ಸಕ್ಲೈನ್ ಮುಷ್ತಾಕ್: 5451 ಎಸೆತಗಳು
ಬ್ರೆಟ್ ಲೀ: 5640 ಎಸೆತಗಳು
ಟ್ರೆಂಟ್ ಬೌಲ್ಟ್: 5783 ಎಸೆತಗಳು
ವಖಾರ್ ಯೂನಿಸ್: 5883 ಎಸೆತಗಳು