ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

IND vs BAN: ʻಅಕ್ಷರ್‌ ಪಟೇಲ್‌ಗೆ ಹ್ಯಾಟ್ರಿಕ್‌ ಮಿಸ್‌ʼ-ಸುಲಭ ಕ್ಯಾಚ್‌ ಕೈಚೆಲ್ಲಿ ಕ್ಷಮೆ ಕೇಳಿದ ರೋಹಿತ್‌ ಶರ್ಮಾ!

Rohit Sharma drops Catch: ಬಾಂಗ್ಲಾದೇಶ ವಿರುದ್ಧದ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಸ್ಲಿಪ್‌ನಲ್ಲಿ ಸುಲಭವಾದ ಕ್ಯಾಚ್‌ ಅನ್ನು ಕೈ ಚೆಲ್ಲಿದ್ದರು. ಆ ಮೂಲಕ ಅಕ್ಷರ್‌ ಪಟೇಲ್‌ಗೆ ಹ್ಯಾಟ್ರಿಕ್‌ ವಿಕೆಟ್‌ ಪಡೆಯಬಹುದಾದ ಅವಕಾಶವನ್ನು ತಪ್ಪಿಸಿದರು.

ಅಕ್ಷರ್‌ ಪಟೇಲ್‌ಗೆ ಹ್ಯಾಟ್ರಿಕ್‌ ವಿಕೆಟ್‌ ತಪ್ಪಿಸಿದ ರೋಹಿತ್‌ ಶರ್ಮಾ!

ಜಾಕರ್‌ ಅಲಿ ಕ್ಯಾಚ್‌ ಡ್ರಾಪ್‌ ಮಾಡಿದ ರೋಹಿತ್‌ ಶರ್ಮಾ

Profile Ramesh Kote Feb 20, 2025 6:05 PM

ದುಬೈ: ಇಲ್ಲಿನ ದುಬೈ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಸ್ಲಿಪ್‌ನಲ್ಲಿ ಸುಲಭವಾದ ಕ್ಯಾಚ್‌ ಅನ್ನು ಚೆಲ್ಲಿದರು ಮತ್ತು ಅಕ್ಷರ್‌ ಪಟೇಲ್‌ ಅವರು ಹ್ಯಾಟ್ರಿಕ್‌ ವಿಕೆಟ್‌ ಸಾಧನೆಯನ್ನು ಕಳೆದುಕೊಳ್ಳುವಂತಾಗಿತ್ತು. ಇದರಿಂದ ತೀವ್ರ ಹತಾಶರಾದ ರೋಹಿತ್‌ ಶರ್ಮಾ ತಮ್ಮ ಎರಡೂ ಕೈಗಳಿಂದ ನೆಲಕ್ಕೆ ಗುದ್ದಿದರು. ಈ ವೇಳೆ ಕ್ಯಾಚ್‌ ಕೈ ಚೆಲ್ಲಿದ್ದಕ್ಕಾಗಿ ತಮ್ಮ ಸಹ ಆಟಗಾರ ಅಕ್ಷರ್‌ ಪಟೇಲ್‌ ಬಳಿ ಕ್ಷಮೆ ಕೇಳಿದರು. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಬಾಂಗ್ಲಾದೇಶ ವಿರುದ್ಧದ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ತನ್ನ ಮೊದಲನೇ ಪಂದ್ಯದಲ್ಲಿ ಟಾಸ್‌ ಸೋತ ಭಾರತ ತಂಡ ಮೊದಲು ಬೌಲ್‌ ಮಾಡುವಂತಾಗಿತ್ತು. ಅದರಂತೆ ಆರಂಭಿಕ 10 ಓವರ್‌ಗಳಲ್ಲಿ ಟೀಮ್‌ ಇಂಡಿಯಾ ಮೇಲುಗೈ ಸಾಧಿಸಿತ್ತು. ಮೊಹಮ್ಮದ್‌ ಶಮಿ ಮತ್ತು ಹರ್ಷಿತ್‌ ರಾಣಾ ಹೊಸ ಚೆಂಡಿನಲ್ಲಿ ವಿಕೆಟ್‌ಗಳನ್ನು ಕಬಳಿಸಿದರು. ಬಳಿಕ ಬೌಲಿಂಗ್‌ಗೆ ಬಂದಿದ್ದ ಅಕ್ಷರ್‌ ಪಟೇಲ್‌ ತಮ್ಮ ಮೊದಲ ಸ್ಪೆಲ್‌ನಲ್ಲಿ ಸ್ಪಿನ್‌ ಮೋಡಿ ಮಾಡಿದ್ದರು.

IND vs BAN: ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಬಾಂಗ್ಲಾದೇಶ!

9ನೇ ಓವರ್‌ ಎರಡನೇ ಎಸೆತದಲ್ಲಿ ತಂಝಿದ್‌ ಹಸನ್‌ ಅವರನ್ನು ಔಟ್‌ ಮಾಡಿದ್ದ ಅಕ್ಷರ್‌ ಪಟೇಲ್‌, ನಂತರ ಮೂರನೇ ಎಸೆತದಲ್ಲಿ ಹೊಸ ಬ್ಯಾಟ್ಸ್‌ಮನ್‌ ಮುಷ್ಫಿಕರ್‌ ರಹಿಮ್‌ ಅವರ ವಿಕೆಟ್‌ ಅನ್ನು ಪಡೆದಿದ್ದರು. ಆ ಮೂಲಕ ಅಕ್ಷರ್‌ ಪಟೇಲ್‌ಗೆ ನಾಲ್ಕನೇ ಎಸೆತದಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಪಡೆಯುವ ಅವಕಾಶವಿತ್ತು. ಈ ವೇಳೆ ನಾಯಕ ರೋಹಿತ್‌ ಶರ್ಮಾ, ಎರಡು ಸ್ಲಿಪ್‌ ಮತ್ತು ಒಬ್ಬರನ್ನು ಲೆಗ್‌ ಸ್ಲಿಪ್‌ನಲ್ಲಿ ನಿಲ್ಲಿಸಿದ್ದರು. ಈ ವೇಳೆ ಆಫ್‌ ಸ್ಪಂಪ್‌ ಮೇಲೆ ಹಾಕಿದ ಚೆಂಡು ಜಕರ್‌ ಅಲಿ ಬ್ಯಾಟ್‌ಗೆ ತಾಗಿ ಮೊದಲನೇ ಸ್ಲಿಪ್‌ನಲ್ಲಿದ್ದ ರೋಹಿತ್‌ ಶರ್ಮಾ ಕಡೆ ಹೋಗಿತ್ತು. ರೋಹಿತ್‌ ಶರ್ಮಾ ಸುಲಭವಾಗಿ ಕ್ಯಾಚ್‌ ಪಡೆಯಬಹುದೆಂದು ಎಲ್ಲರೂ ನಂಬಿದ್ದರು. ಆದರೆ, ಅಚ್ಚರಿ ರೀತಿಯಲ್ಲಿ ರೋಹಿತ್‌ ಶರ್ಮಾ ಕ್ಯಾಚ್‌ ಕೈ ಚೆಲ್ಲಿದ್ದರು.



ಸುಲಭವಾಗಿ ಪಡೆಯಬಹುದಿದ್ದ ಕ್ಯಾಚ್‌ ಅನ್ನು ಕೈಚೆಲ್ಲಿದ್ದಕ್ಕಾಗಿ ರೋಹಿತ್‌ ಶರ್ಮಾ ತೀವ್ರ ಹತಾಶೆಗೆ ಒಳಗಾದರು ಹಾಗೂ ತಮ್ಮ ಎರಡೂ ಕೈಗಳಿಂದ ನೆಲಕ್ಕೆ ತಟ್ಟುವ ಮೂಲಕ ಬೇಸರ ವ್ಯಕ್ತಪಡಿಸಿದರು. ಈ ವೇಳೆ ಅಕ್ಷರ್‌ ಪಟೇಲ್‌ಗೆ ಹ್ಯಾಟ್ರಿಕ್‌ ವಿಕೆಟ್‌ ಕೈ ತಪ್ಪಿದ್ದಕ್ಕಾಗಿ ರೋಹಿತ್‌ ಶರ್ಮಾ ಅವರು ಕ್ಷಮೆ ಕೇಳಿದರು. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.



ಜೀವದಾನವನ್ನು ಸದುಪಯೋಗಪಡಿಸಿಕೊಂಡ ಜಾಕರ್‌ ಅಲಿ

ತಮಗೆ ಸಿಕ್ಕ ಒಂದು ಜೀವದಾನವನ್ನು ಜಾಕರ್‌ ಅಲಿ ಸಂಪೂರ್ಣವಾಗಿ ಸದುಪಯೋಗಪಡಿಸಿಕೊಂಡಿದ್ದಾರೆ. ತೌಹಿದ್‌ ಹೃದಯ್‌ ಜೊತೆ ಮುರಿಯದ ಆರನೇ ವಿಕೆಟ್‌ಗೆ ಜಾಕರ್‌ ಅಲಿ 154 ರನ್‌ಗಳ ಜೊತಯಾಟವನ್ನು ಆಡಿದರು. ಆ ಮೂಲಕ ಬಾಂಗ್ಲಾದೇಶ ತಂಡದ ಮೊತ್ತವನ್ನು 200ರ ಸನಿಹ ತಂದರು. ಸನ್ನಿವೇಶಕ್ಕೆ ತಕ್ಕಂತೆ ಭಾರತದ ಬಲಿಷ್ಠ ಬೌಲಿಂಗ್‌ ವಿಭಾಗವನ್ನು ಎದುರಿಸಿದ ಜಾಕರ್‌ ಅಲಿ, 114 ಎಸೆತಗಳಲ್ಲಿ 68 ರನ್‌ಗಳನ್ನು ಕಲೆ ಹಾಕಿದರು. ಇನ್ನು ಇವರ ಜೊತೆ ಮತ್ತೊಂದು ತುದಿಯಲ್ಲಿ ದೀರ್ಘಾವಧಿ ಬ್ಯಾಟ್‌ ಮಾಡಿದ ತೌಹಿದ್‌ ಹೃದಯ್ 118 ಎಸೆತಗಳಲ್ಲಿ 100 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಶತಕವನ್ನು ಪೂರ್ಣಗೊಳಿಸಿದರು. ಅಂತಿಮವಾಗಿ ಬಾಂಗ್ಲಾದೇಶ ತಂಡ, ತನ್ನ ಪಾಲಿನ 49.4 ಓವರ್‌ಗಳಲ್ಲಿ 228 ರನ್‌ಗಳಿಗೆ ಆಲ್‌ಔಟ್‌ ಆಯಿತು.