ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭಾರತದ ಎದುರು ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಇಂಗ್ಲೆಂಡ್‌ ಪ್ಲೇಯಿಂಗ್‌ XI ಪ್ರಕಟ!

England Playing XI for 3rd T20I: ಭಾರತದ ವಿರುದ್ಧ ಮೂರನೇ ಹಾಗೂ ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಇಂಗ್ಲೆಂಡ್‌ ತಂಡ ತನ್ನ ಪ್ಲೇಯಿಂಗ್‌ XI ಅನ್ನು ಪ್ರಕಟಿಸಿದೆ. ಎರಡನೇ ಪಂದ್ಯವನ್ನು ಆಡಿದ್ದ ಅದೇ ಆಡುವ ಬಳಗವನ್ನು ಇಂಗ್ಲೆಂಡ್‌ ಉಳಿಸಿಕೊಂಡಿದೆ.

IND vs ENG: ಭಾರತದ ಎದುರು ಮೂರನೇ ಟಿ20ಐಗೆ ಇಂಗ್ಲೆಂಡ್‌ ಪ್ಲೇಯಿಂಗ್‌ XI ವಿವರ!

England Playing XI for 3rd T20I

Profile Ramesh Kote Jan 27, 2025 7:29 PM

ರಾಜ್‌ಕೋಟ್‌: ಭಾರತ ಮತ್ತು ಇಂಗ್ಲೆಂಡ್ (IND vs ENG 3rd T20I) ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಮೂರನೇ ಪಂದ್ಯ ರಾಜ್‌ಕೋಟ್‌ನಲ್ಲಿ ಮಂಗಳವಾರ ನಡೆಯಲಿದೆ. ಪ್ರವಾಸಿ ಇಂಗ್ಲೆಂಡ್ ತಂಡ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿದೆ. ಆ ಮೂಲಕ ಇಂಗ್ಲೆಂಡ್ ತಂಡ 2-0 ಅಂತರದಲ್ಲಿ ಹಿನ್ನಡೆ ಅನುಭವಿಸಿದೆ. ಈ ಸರಣಿಯ ಮೂರನೇ ಪಂದ್ಯದಲ್ಲಿ ಜೋಸ್‌ ಬಟ್ಲರ್‌ ಪಡೆಗೆ ಮಾಡು ಇಲ್ಲವೇ ಮಡಿ ಪರಿಸ್ಥಿತಿ ಉಂಟಾಗಿದೆ. ರಾಜ್‌ಕೋಟ್‌ನಲ್ಲಿ ನಡೆಯಲಿರುವ ಈ ಪಂದ್ಯವನ್ನು ಗೆಲ್ಲಲು ಇಂಗ್ಲೆಂಡ್ ತಂಡಕ್ಕೆ ಸಾಧ್ಯವಾಗದಿದ್ದರೆ, ಸರಣಿಯನ್ನು ಕಳೆದುಕೊಳ್ಳಲಿದೆ. ಇದನ್ನು ಗಮನದಲ್ಲಿಟ್ಟುಕೊಂಡಿರುವ ಇಂಗ್ಲೆಂಡ್ ತಂಡ ಮೂರನೇ ಪಂದ್ಯಕ್ಕೆ ತನ್ನ ಪ್ಲೇಯಿಂಗ್‌ XI ಅನ್ನು ಪ್ರಕಟಿಸಿದೆ.

ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲನೇ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್‌ಗಳಿಂದ ಗೆಲುವು ಪಡೆದಿತ್ತು. ನಂತರ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಇಂಗ್ಲೆಂಡ್‌ ತಂಡ ಕಮ್‌ಬ್ಯಾಕ್‌ ಮಾಡಲು ಎದುರು ನೋಡುತ್ತಿತ್ತು. ಈ ಪಂದ್ಯದಲ್ಲಿ ಭಾರತಕ್ಕೆ 166 ರನ್‌ಗಳನ್ನು ಗುರಿಯನ್ನು ನೀಡಿದ್ದ ಇಂಗ್ಲೆಂಡ್‌, ಸ್ಟಾರ್‌ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಿದ್ದರೂ ತಿಲಕ್‌ ವರ್ಮಾ ಎದುರು ರೂಪಿಸಿದ್ದ ರಣತಂತ್ರ ವಿಫಲವಾಯಿತು. 55 ಎಸೆತಗಳಲ್ಲಿ ಅಜೇಯ 72 ರನ್‌ ಸಿಡಿಸಿದ್ದ ತಿಲಕ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

IND vs ENG 3rd T20: ಮೂರನೇ ಟಿ20 ಪಂದ್ಯದ ಪಿಚ್‌ ರಿಪೋರ್ಟ್‌, ಹವಾಮಾನ ವರದಿ, ಸಂಭಾವ್ಯ ತಂಡ ಹೀಗಿದೆ

ಇಂಗ್ಲೆಂಡ್‌ ಪ್ಲೇಯಿಂಗ್‌ XIನಲ್ಲಿ ಬದಲಾವಣೆ ಇಲ್ಲ

ಭಾರತ ವಿರುದ್ಧದ ಮೂರನೇ ಟಿ20 ಪಂದ್ಯಕ್ಕೆ ಇಂಗ್ಲೆಂಡ್ ಪ್ಲೇಯಿಂಗ್‌ XIನಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಾಗಿಲ್ಲ. ಎರಡನೇ ಟಿ20ಐ ಪಂದ್ಯವನ್ನು ಆಡಿದ್ದ ಅದೇ ಆಡುವ ಬಳಗವನ್ನು ರಾಜ್‌ಕೋಟ್‌ ಪಂದ್ಯಕ್ಕೂ ಉಳಿಸಿಕೊಳ್ಳಲಾಗಿದೆ. ಮೂರನೇ ಪಂದ್ಯವನ್ನು ಗೆದ್ದು ಟಿ20ಐ ಸರಣಿಯನ್ನು ಜೀವಂತವಾಗಿರಿಸಿಕೊಳ್ಳಲು ಪ್ರವಾಸಿ ತಂಡ ಎದುರು ನೋಡುತ್ತಿದೆ. ಆದರೆ, ಇನ್‌ಫಾರ್ಮ್‌ ಭಾರತ ತಂಡವನ್ನು ಸೋಲಿಸಲು ಆಂಗ್ಲರಿಗೆ ಸುಲಭವಲ್ಲ.

ಇಂಗ್ಲೆಂಡ್‌ ಬ್ಯಾಟಿಂಗ್‌ ವೈಫಲ್ಯ

ಭಾರತ ವಿರುದ್ಧದ ಈ ಟಿ20ಐ ಸರಣಿಯಲ್ಲಿ ಇಂಗ್ಲೆಂಡ್‌ನ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದ್ದಾರೆ. ನಾಯಕ ಜೋಸ್ ಬಟ್ಲರ್ ಬಿಟ್ಟರೆ ಇತರೆ ಬ್ಯಾಟ್ಸ್‌ಮನ್‌ಗಳು ಭಾರತದ ಬೌಲರ್‌ಗಳ ಎದುರು ಪುಟಿದೇಳುವಲ್ಲಿ ವಿಫಲರಾಗಿದ್ದಾರೆ. ಇಂಥಾ ಸನ್ನಿವೇಶದಲ್ಲಿ ಮೂರನೇ ಟಿ20ಐನಲ್ಲೂ ಇಂಗ್ಲೆಂಡ್‌ಗೆ ಬ್ಯಾಟಿಂಗ್ ದೊಡ್ಡ ಸವಾಲಾಗಿ ಪರಿಗಣಿಸಿದೆ. ಚೆನ್ನೈನಲ್ಲಿ ನಡೆದಿದ್ದ ಎರಡನೇ ಟಿ20ಐ ಪಂದ್ಯದಲ್ಲಿಯೂ ಜೋಸ್ ಬಟ್ಲರ್ 45 ರನ್‌ ಗಳಿಸಿ ಏಕಾಂಗಿ ಹೋರಾಟ ನಡೆಸಿದ್ದರು.



ಮೂರನೇ ಟಿ20ಐ ಇಂಗ್ಲೆಂಡ್‌ ತಂಡದ ಪ್ಲೇಯಿಂಗ್‌ XI

  1. ಫಿಲ್‌ ಸಾಲ್ಟ್‌ (ಓಪನರ್‌)
  2. ಬೆನ್‌ ಎಕೆಟ್‌ (ಓಪನರ್‌)
  3. ಜೋಸ್‌ ಬಟ್ಲರ್‌ (ನಾಯಕ, ಬ್ಯಾಟ್ಸ್‌ಮನ್‌)
  4. ಹ್ಯಾರಿ ಬ್ರೂಕ್‌ (ಬ್ಯಾಟ್ಸ್‌ಮನ್‌)
  5. ಲಿಯಾಮ್‌ ಲಿವಿಂಗ್‌ಸ್ಟೋನ್‌ (ಆಲ್‌ರೌಂಡರ್‌)
  6. ಜೇಮಿ ಸ್ಮಿತ್‌ (ಬ್ಯಾಟ್ಸ್‌ಮನ್‌)

7 ಜೇಮಿ ಓವರ್ಟನ್‌ (ಆಲ್‌ರೌಂಡರ್)

8.ಬ್ರೈಡನ್‌ ಕಾರ್ಸ್‌ (ಆಲ್‌ರೌಂಡರ್‌)

9.ಜೋಫ್ರಾ ಆರ್ಚರ್‌ (ವೇಗದ ಬೌಲರ್‌)

10.ಆದಿಲ್‌ ರಶೀದ್‌ (ಲೆಗ್‌ ಸ್ಪಿನ್ನರ್‌)

11.ಮಾರ್ಕ್‌ ವುಡ್‌ (ವೇಗದ ಬೌಲರ್‌)