ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಐದನೇ ಟೆಸ್ಟ್ ಪಂದ್ಯಕ್ಕೆ ಎಕ್ಸ್ ಫ್ಯಾಕ್ಟರ್ ಆಟಗಾರನನ್ನು ಆರಿಸಿದ ಪಾರ್ಥಿವ್ ಪಟೇಲ್!

ಲಂಡನ್‌ನ ಓವಲ್ ಕ್ರೀಡಾಂಗಣ ಸ್ಪಿನ್‌ ಸ್ನೇಹಿಯಾಗಿದೆ. ಹಾಗಾಗಿ ವಾಷಿಂಗ್ಟನ್ ಸುಂದರ್ ಅಥವಾ ರವೀಂದ್ರ ಜಡೇಜಾ ಭಾರತ ತಂಡಕ್ಕೆ ಎಕ್ಸ್‌ ಫ್ಯಾಕ್ಟರ್‌ ಆಟಗಾರ ಆಗಲಿದ್ದಾರೆಂದು ಎಂದು ಟೀಮ್‌ ಇಂಡಿಯಾ ಮಾಜಿ ವಿಕೆಟ್‌ ಕೀಪರ್‌ ಪಾರ್ಥಿವ್‌ ಪಟೇಲ್‌ ಭವಿಷ್ಯ ನುಡಿದಿದ್ದಾರೆ. ಕಳೆದ ಪಂದ್ಯದಲ್ಲಿ ಈ ಇಬ್ಬರೂ ಆಟಗಾರರು ಶತಕಗಳನ್ನು ಬಾರಿಸಿದ್ದರು.

ಭಾರತ ತಂಡಕ್ಕೆ ಎಕ್ಸ್‌ ಫ್ಯಾಕ್ಟರ್‌ ಆಟಗಾರನನ್ನು ಆರಿಸಿದ ಪಾರ್ಥಿವ್‌ ಪಟೇಲ್‌!

ಲಂಡನ್‌: ಆಂಡರ್ಸನ್-ತೆಂಡೂಲ್ಕರ್ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಭಾರತ ಹಾಗೂ ಇಂಗ್ಲೆಂಡ್ (IND vs ENG) ನಡುವಣ ನಾಲ್ಕು ಪಂದ್ಯಗಳು ಮುಗಿದಿವೆ. ಇನ್ನು ಐದನೇ ಪಂದ್ಯ ಜುಲೈ 31 ರಂದು ಇಲ್ಲಿನ ಕೆನಿಂಗ್ಸನ್‌ ಓವಲ್ ಮೈದಾನದಲ್ಲಿ ಆರಂಭವಾಗಲಿದೆ. ಈ ಪಂದ್ಯದಲ್ಲಿ ಭಾರತ (India) ಗೆದ್ದರೆ ಸರಣಿಯನ್ನು 2-2 ಅಂತರದಲ್ಲಿ ಸರಣಿಯನ್ನು ಸಮಬಲ ಮಾಡಿಕೊಳ್ಳಲಿದೆ. ಒಂದು ವೇಳೆ ಡ್ರಾ ಅಥವಾ ಸೋತರೆ ಆತಿಥೇಯ ಇಂಗ್ಲೆಂಡ್‌ (England) ಹೀಗಾಗಿ ಈ ಪಂದ್ಯ ಉಭಯ ತಂಡಗಳಿಗೆ ನಿರ್ಣಾಯಕ ಪಂದ್ಯವಾಗಿದೆ. ಹಾಗಾಗಿ ಈ ಪಂದ್ಯ ಅತ್ಯಂತ ರೋಚಕತೆಯಿಂದ ಕೂಡಿರುತ್ತದೆ.

ಇದರ ನಡುವೆ ಭಾರತ ತಂಡದ ಮಾಜಿ ವಿಕೆಟ್ ಕೀಪರ್ ಹಾಗೂ ಆರ್‌ಸಿಬಿ ತಂಡದ ಮಾಜಿ ಆರಂಭಿಕ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಭಾರತದ ಎಕ್ಸ್-ಫ್ಯಾಕ್ಚರ್ ಆಟಗಾರರನ್ನು ಆಯ್ಕೆ ಮಾಡಿ ಐದನೇ ಟೆಸ್ಟ್ ವಿಜೇತ ತಂಡದ ಬಗ್ಗೆ ಭವಿಷ್ಯವನ್ನು ನುಡಿದಿದ್ದಾರೆ. ಇಂಗ್ಲೆಂಡ್ ಪ್ರಸ್ತುತ ಸರಣಿಯಲ್ಲಿ 2-1ಅಂತರದಲ್ಲಿ ಮುನ್ನಡೆ ಪಡೆದಿದೆ. ಈ ಹಿನ್ನಲೆ ಪಾರ್ಥಿವ್‌ ಪಟೇಲ್ ಇಬ್ಬರು ಆಲ್‌ರೌಂಡರ್‌ಗಳಲ್ಲಿ ಒಬ್ಬರನ್ನು ಪ್ರವಾಸಿ ತಂಡಕ್ಕೆ ಎಕ್ಸ್ ಫ್ಯಾಕ್ಚರ್ ಆಗಿ ಆಯ್ಕೆ ಮಾಡಿದ್ದಾರೆ. ಓವಲ್ ಸ್ಪಿನ್‌ ಸ್ನೇಹಿ ಮೈದಾನವಾಗಿದ್ದು, ಡ್ರಿಫ್ಟ್ ಬೌಲಿಂಗ್‌ನಲ್ಲಿ ಹೆಚ್ಚು ಸಹಾಯವಾಗಲಿದೆ. ಹಾಗಾಗಿ ವಾಷಿಂಗ್ಟನ್ ಸುಂದರ್ ಅಥವಾ ರವೀಂದ್ರ ಜಡೇಜಾ ಭಾರತದ ಎಕ್ಸ್-ಫ್ಯಾಕ್ಟರ್ ಆಗಿರುತ್ತಾರೆ ಎಂದು ಮಾಜಿ ಕ್ರಿಕೆಟಿಗ ಭಾವಿಸಿದ್ದಾರೆ.

ನಾಲ್ಕನೇ ಟೆಸ್ಟ್‌ನಲ್ಲಿ ಇಬ್ಬರೂ ಆಲ್‌ರೌಂಡರ್‌ಗಳು ಶತಕಗಳನ್ನು ಗಳಿಸಿದ್ದರು. ಇದು ಅತಿಥೇಯರ ವಿರುದ್ಧ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ನೆರವು ನೀಡಿದ್ದರು. ನಾಯಕ ಶುಭಮನ್ ಗಿಲ್ ಅವರೂ ಕೂಡ ಉತ್ತಮ ಲಯದಲ್ಲಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ. ಹಾಗಾಗಿ ಭಾರತ ತಂಡ ಸರಣಿಯನ್ನು 2-2 ಅಂತರದಲ್ಲಿ ಸಮಬಲಗೊಳಿಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

IND vs ENG: ಈ ಒಂದೇ ಒಂದು ಕಾರಣಕ್ಕೆ ರವೀಂದ್ರ ಜಡೇಜಾ, ವಾಷಿಂಗ್ಟನ್‌ ಸುಂದರ್‌ ವಿರುದ್ದ ಡೇಲ್‌ ಸ್ಟೇನ್‌ ಆಕ್ರೋಶ!

"ಐದನೇ ಟೆಸ್ಟ್‌ ಪಂದ್ಯದಲ್ಲಿ ಶುಭಮನ್‌ ಗಿಲ್‌ ಆಕರ್ಷಣೆಯಾಗಲಿದ್ದಾರೆ. ಏಕೆಂದರೆ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಅವರು ತೋರಿದ್ದ ಪ್ರದರ್ಶನ ಆ ರೀತಿ ಇತ್ತು ಹಾಗೂ ಅವರು ತಮ್ಮನ್ನು ತಾವು ಅನ್ವಯಿಸಿಕೊಂಡಿದ್ದರು. ಭಾರತ ತಂಡಕ್ಕೆ ವಾಷಿಂಗ್ಟನ್‌ ಸುಂದರ್‌ ಅಥವಾ ರವೀಂದ್ರ ಜಡೇಜಾ ಎಕ್ಸ್‌ ಫ್ಯಾಕ್ಟರ್‌ ಆಟಗಾರರಾಗಬಹುದು. ಓವಲ್‌ ಪಿಚ್‌ ಸ್ಪಿನ್‌ ಸ್ನೇಹಿಯಾಗಿದ್ದು, ಇಲ್ಲಿ ಡ್ರಿಫ್ಟ್‌ ಹಾಗೂ ಬೌನ್ಸ್‌ ಇರಲಿದೆ. ಸ್ಪಿನ್ನರ್‌ಗಳು ಇಲ್ಲಿ ಉತ್ತಮವಾಗಿ ಬೌಲ್‌ ಮಾಡಿದರೆ, ಭಾರತ ತಂಡ ಪಂದ್ಯವನ್ನು ಗೆಲ್ಲಬಹುದು. ಈ ಪಂದ್ಯವನ್ನು ಗೆಲ್ಲುನ ನೆಚ್ಚಿನ ತಂಡದ ಬಗ್ಗೆ ಹೇಳುವುದಾದರೆ, ಭಾರತವನ್ನು ಆಯ್ಕೆ ಮಾಡುತ್ತೇನೆ ಹಾಗೂ ಈ ಸರಣಿಯಲ್ಲಿ ಟೀಮ್‌ ಇಂಡಿಯಾ 2-2 ಸಮಬಲ ಕಾಯ್ದುಕೊಳ್ಳಲಿದೆ," ಎಂದು ಪಾರ್ಥಿವ್‌ ಪಟೇಲ್‌ ಭವ್ಯ ನುಡಿದಿದ್ದಾರೆ.

ಈ ಸರಣಿಗೂ ಮುನ್ನ ಹಿರಿಯ ವೇಗಿ ಜಸ್‌ಪ್ರೀತ್‌ ಬುಮ್ರಾ ಕೇವಲ ಮೂರು ಪಂದ್ಯಗಳನ್ನು ಆಡಲಿದ್ದಾರೆಂದು ಹೇಳಲಾಗಿತ್ತು. ಅವರು ಈ ಒಪಂದ್ಯಕ್ಕೆ ಫಿಟ್‌ ಆಗಲಿದ್ದಾರೆಯೇ ಅಥವಾ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ. ಆದರೆ ಈ ಪರಿಸ್ಥಿತಿಯಲ್ಲಿ ಬುಮ್ರಾರವರು ಈ ಸಮಯದಲ್ಲಿ ಖಂಡಿತಾ ತಂಡದಲ್ಲಿ ಆಡಬೇಕೆಂದು ಬಯಸುತ್ತೇನೆ. ಆದಷ್ಟು ಬೇಗ ಫಿಟ್ ಆಗಿ ತಂಡಕ್ಕೆ ಹಿಂತಿರುಗಬೇಕು ಎಂದು ಆಶಿಸುತ್ತೇನೆಂದು ಹೇಳಿದ್ದಾರೆ.

IND Vs ENG 5th Test: ಓವಲ್‌ ಟೆಸ್ಟ್‌ಗೆ ಶಾರ್ದೂಲ್‌, ಅಂಶುಲ್‌ ಮುಂದುವರಿಕೆ ಅನುಮಾನ

"ದುರದೃಷ್ಟವಶಾತ್, ಜಸ್‌ಪ್ರೀತ್‌ ಬುಮ್ರಾ ಅವರ ದೇಹ ಹೇಗೆ ಚೇತರಿಸಿಕೊಳ್ಳುತ್ತದೆ ಅಥವಾ ಇಲ್ಲವೋ ಎಂಬುದನ್ನು ನಾವು ನೋಡಬೇಕಾಗಿದೆ. ಇದರ ಬಗ್ಗೆ ಹಲವು ಪ್ರಶ್ನೆಗಳಿವೆ. ಆದರೆ ಪರಿಸ್ಥಿತಿ ಹೀಗಿದ್ದರೆ, ನಾನು ಖಂಡಿತವಾಗಿಯೂ ಅವರು ಆಡಬೇಕೆಂದು ಬಯಸುತ್ತೇನೆ. ಸಹಾಯಕ ಸಿಬ್ಬಂದಿ ಅವರ ಮರಳುವಿಕೆ ಮೇಲೆ ಶ್ರಮಿಸುತ್ತಾರೆ ಮತ್ತು ಅವರನ್ನು ಸಂಪೂರ್ಣ ಫಿಟ್ ಆಗಿ ಮಾಡುತ್ತಾರೆ ಎಂದು ಆಶಿಸುತ್ತೇವೆ" ಎಂದು ತಿಳಿಸಿದ್ದಾರೆ.

ಜಸ್‌ಪ್ರೀತ್‌ ಬುಮ್ರಾಗೆ ವಿಶ್ರಾಂತಿ ಏಕೆ?

ಜಸ್‌ಪ್ರಿತ್ ಬುಮ್ರಾ ಕಳೆದ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್‌ ಗವಾಸ್ಕರ್‌ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಬೆನ್ನು ನೋವಿನ ಸಮಸ್ಯೆಗೆ ತುತ್ತಾಗಿದ್ದರು. ಈ ಸಮಸ್ಯೆಯ ಕಾರಣ ಅವರು ಚಾಂಪಿಯನ್‌ ಟ್ರೋಫಿಯಲ್ಲಿ ಕಣಕ್ಕಿಳಿದಿರಲಿಲ್ಲ. ಇದಾದ ಬಳಿಕ ಐಪಿಎಲ್‌ನಲ್ಲಿ ಪೂರ್ಣ ಫಿಟ್‌ ಆಗಿ ತಂಡದ ಪರ ಕಣಕ್ಕಿಳಿದಿದ್ದರು. ಈ ಕಾರಣ ಇಂಗ್ಲೆಂಡ್ ಸರಣಿಗೆ ಆಯ್ಕೆ ಮಾಡಲಾಗಿತ್ತು. ಆದರೆ ಅವರ ಮೇಲಿರುವ ಒತ್ತಡವನ್ನು ಕಡಿಮೆ ಮಾಡುವ ಸಲುವಾಗಿ ಇಂಗ್ಲೆಂಡ್ ವಿರುದ್ಧದ ಸರಣಿ ನಡುವೆ ಬುಮ್ರಾಗೆ ವಿಶ್ರಾಂತಿ ನೀಡಲು ಬಿಸಿಸಿಐ ನಿರ್ಧರಿಸಿದೆ.