ಕೋಲ್ಕತಾ: ಭಾರತ(IND vs ENG) ವಿರುದ್ಧ ನಾಳೆ(ಬುಧವಾರ) ಈಡನ್ ಗಾರ್ಡನ್ಸ್‌ನಲ್ಲಿ ನಡೆಯುವ ಮೊದಲ ಟಿ20 ಪಂದ್ಯಕ್ಕೆ ಪ್ರವಾಸಿ ಇಂಗ್ಲೆಂಡ್ ಒಂದು ದಿನ ಮೊದಲೇ ತನ್ನ ಆಡುವ ಬಳಗವನ್ನು ಪ್ರಕಟಿಸಿದೆ. ವೇಗದ ಬೌಲರ್ ಗಸ್ ಅಟ್ಕಿನ್ಸನ್(Gus Atkinson) ಒಂದು ವರ್ಷದ ಬಳಿಕ ತಂಡಕ್ಕೆ ಮರಳಿದ್ದಾರೆ.
27 ವರ್ಷದ ವೇಗಿ ಗಸ್ ಅಟ್ಕಿನ್ಸನ್ 2023ರ ಡಿಸೆಂಬರ್‌ನಲ್ಲಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಇಂಗ್ಲೆಂಡ್ ಪರ ಕೊನೆಯದಾಗಿ ಆಡಿದ್ದರು. ಇದುವರೆಗೆ ಮೂರು ಟಿ20 ಪಂದ್ಯ ಆಡಿರುವ ಅಟ್ಕಿನ್ಸನ್ 9.50 ರ ಸರಾಸರಿಯಲ್ಲಿ ಆರು ವಿಕೆಟ್ ಪಡೆದಿದ್ದಾರೆ. ಜೋಫ್ರಾ ಆರ್ಚರ್, ಜೇಮೀ ಓವರ್ಟನ್ ಮತ್ತು ಮಾರ್ಕ್ ವುಡ್ ಕೂಡ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಏಕೈಕ ಸ್ಪಿನ್ನರ್ ಆಗಿ ಆದೀಲ್ ರಶೀದ್ ಸ್ಥಾನ ಪಡೆದಿದ್ದಾರೆ.
ಬೆನ್ ಡಕೆಟ್, ಫಿಲ್ ಸಾಲ್ಟ್, ನಾಯಕ ಜಾಸ್ ಬಟ್ಲರ್, ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನೊಳಗೊಂಡ ಬ್ಯಾಟಿಂಗ್ ಸರದಿ ಅತ್ಯಂತ ಬಲಿಷ್ಠವಾಗಿ ಗೋಚರಿಸಿದೆ.
ಇಂಗ್ಲೆಂಡ್ ಆಡುವ ಬಳಗ
ಬೆನ್ ಡಕೆಟ್, ಫಿಲ್ ಸಾಲ್ಟ್ (ವೀ.ಕಿ), ಜೋಸ್ ಬಟ್ಲರ್ (ನಾಯಕ), ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್‌ಸ್ಟೋನ್, ಜಾಕೋಬ್ ಬೆಥೆಲ್, ಜೇಮಿ ಓವರ್ಟನ್, ಗಸ್ ಅಟ್ಕಿನ್ಸನ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ಮಾರ್ಕ್ ವುಡ್.
ಭಾರತ ತಂಡ ಟಾಸ್ ವೇಳೆಯೇ ತಂಡವನ್ನು ಪ್ರಕಟಿಸಲಿದೆ. ಆದರೂ ಸಂಭಾವ್ಯ ತಂಡ ಹೇಗಿರಬಹುದೆಂಬ ಮಾಹಿತಿ ಇಲ್ಲಿದೆ.
ಭಾರತ ಸಂಭಾವ್ಯ ತಂಡ: ಸಂಜು ಸ್ಯಾಮ್ಸನ್ (ವಿ.ಕೀ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ನಿತೀಶ್ ರೆಡ್ಡಿ, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ.
ಇದನ್ನೂ ಓದಿ IND vs ENG 1st T20: ಪಂದ್ಯದ ಪಿಚ್ ರಿಪೋರ್ಟ್, ಮುಖಾಮುಖಿ ದಾಖಲೆ ಹೀಗಿದೆ
ಪಿಚ್ ರಿಪೋರ್ಟ್
ಈಡನ್ ಗಾರ್ಡನ್ಸ್ ಸಾಮಾನ್ಯವಾಗಿ ಬ್ಯಾಟಿಂಗ್ ಸ್ನೇಹಿ ಪಿಚ್. ಹೆಚ್ಚಾಗಿ ಇಲ್ಲಿ ಚೇಸಿಂಗ್ ನಡೆಸುವ ತಂಡಗಳೇ ಗೆದ್ದಿದೆ. ಇದಕ್ಕೆ ಕಾರಣ ಇಬ್ಬನಿ ಕಾಟ. ಹೀಗಾಗಿ ಟಾಸ್ ಗೆದ್ದ ತಂಡ ಬೌಲಿಂಗ್ ಆಯ್ದಕೊಳ್ಳುವ ಸಾಧ್ಯತೆ ಅಧಿಕ. ಈ ಮೈದಾನದಲ್ಲಿ ಅತ್ಯಧಿಕ ರನ್ ಬಾರಿಸಿದ ದಾಖಲೆ ಪಾಕಿಸ್ತಾನ ತಂಡದ ಹೆಸರಿನಲ್ಲಿದೆ. 2016ರ ಟಿ20 ವಿಶ್ವಕಪ್ ಟೂರ್ನಿಯ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಪಾಕ್ 5ಕ್ಕೆ 201 ರನ್ ಬಾರಿಸಿತ್ತು. ಭಾರತ ತಂಡದ ಗರಿಷ್ಠ ದಾಖಲೆ 5 ಕ್ಕೆ186 ರನ್.