IND vs ENG: ಫಾರ್ಮ್ ಕಂಡುಕೊಳ್ಳಲು ರಿಷಭ್ ಪಂತ್‌ಗೆ ಸುರೇಶ್ ರೈನಾ ಮಹತ್ವದ ಸಲಹೆ!
ಟೆಸ್ಟ್ ಕ್ರಿಕೆಟ್‌ನಂತೆ 50 ಓವರ್‌ಗಳ ಸ್ವರೂಪದಲ್ಲಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಮಿಂಚಬೇಕಾದರೆ ಅವರು ಆರಂಭದಲ್ಲಿ 40 ಅಥವಾ 50 ಎಸೆತಗಳನ್ನು ಜವಾಬ್ದಾರಿಯುತವಾಗಿ ಆಡಬೇಕೆಂದು ಮಾಜಿ ಆಲ್‌ರೌಂಡರ್ ಸುರೇಶ್ ರೈನಾ ಸಲಹೆ ನೀಡಿದ್ದಾರೆ. ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಭಾರತ ತಂಡದಲ್ಲಿ ಅವಕಾಶವನ್ನು ನೀಡಲಾಗಿದೆ.
ನವದೆಹಲಿ: ಭಾರತ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರು ಮುಂಬರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಹೆಚ್ಚಿನ ಜವಾಬ್ದಾರಿಯುತ ಆಡಿದರೆ ಅವರು 50 ಓವರ್‌ಗಳ ಸ್ವರೂಪದಲ್ಲಿಯೂ ಮಿಂಚಬಹುದು ಎಂದು ಮಾಜಿ ಆಲ್‌ರೌಂಡರ್ ಸುರೇಶ್ ರೈನಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಭಾರತ ತಂಡದಲ್ಲಿ ಸಂಜು ಸ್ಯಾಮ್ಸನ್, ಇಶಾನ್ ಕಿಶನ್ ಹಾಗೂ ಧ್ರುವ್ ಜುರೆಲ್ ಅವರನ್ನು ಕೈ ಬಿಟ್ಟು ರಿಷಭ್ ಪಂತ್ ಅವರನ್ನು ಆಯ್ಕೆ ಮಾಡಲಾಗಿದೆ.
ಕಳೆದ ಕೆಲ ವರ್ಷಗಳಿಂದ ಭಾರತ ಏಕದಿನ ತಂಡದಲ್ಲಿ ಕೆಎಲ್ ರಾಹುಲ್ ಅವರು ವಿಕೆಟ್ ಕೀಪರ್ ಆಗಿ ಆಡುತ್ತಿದ್ದಾರೆ. ಆ ಮೂಲಕ ರಿಷಭ್ ಪಂತ್ ಅವರನ್ನು ಏಕದಿನ ತಂಡದಿಂದ ಕಡೆಗಣಿಸಲಾಗಿತ್ತು. ಆದರೆ, ಇಂಗ್ಲೆಂಡ್ ವಿರುದ್ದದ ಏಕದಿನ ಸರಣಿ ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ರಿಷಭ್ ಪಂತ್ ಅವರನ್ನು ಆಯ್ಕೆ ಮಾಡಲಾಗಿದೆ. ಆದರೆ, ಇವರಿಗೆ ತಂಡದ ಪ್ಲೇಯಿಂಗ್ XIನಲ್ಲಿ ನಿಯಮಿತವಾಗಿ ಅವಕಾಶ ಸಿಗಲಿದೆಯಾ ಎಂದು ಯಾರಿಗೂ ತಿಳಿದಿಲ್ಲ.
ಈ ಬಗ್ಗೆ ಸ್ಟಾರ್ ಸ್ಪೋರ್ಟ್ಸ್ ಜತೆ ಮಾತನಾಡಿದ ಸುರೇಶ್ ರೈನಾ, "ರಿಷಭ್ ಪಂತ್ ವಿಕೆಟ್ ಕೀಪಿಂಗ್‌ನಲ್ಲಿ ಸಾಕಷ್ಟು ಸುಧಾರಣೆಯನ್ನು ಕಂಡಿದ್ದಾರೆ. ರಿಷಭ್ ಪಂತ್ ಅವರು ಸಾಕಷ್ಟು ಜವಾಬ್ದಾರಿಯುತವಾಗಿ ಬ್ಯಾಟ್ ಮಾಡಬೇಕು, ಏಕೆಂದರೆ ಇದು 50 ಓವರ್‌ಗಳ ಟೂರ್ನಿಯಾಗಿದೆ. ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳಲ್ಲಿ ಪಂತ್‌ಗೆ ಉತ್ತಮ ಅವಕಾಶ ಸಿಗಲಿದೆ," ಎಂದು ಹೇಳಿದ್ದಾರೆ.
Champions Trophy Squad: ತಂಡದ ಆಯ್ಕೆ ಬಗ್ಗೆ ಕೋಚ್ ಗಂಭೀರ್ ಅಸಮಾಧಾನ
ರಿಷಭ್ ಪಂತ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯುತ್ತಮ ದಾಖಲೆಯನ್ನು ಹೊಂದಿದ್ದಾರೆ. ಆದರೆ, ಅವರು 50 ಓವರ್‌ಗಳ ಸ್ವರೂಪದಲ್ಲಿ ಇನ್ನಷ್ಟು ಸುಧಾರಣೆ ಕಾಣಬೇಕಾದ ಅಗತ್ಯವಿದೆ. ಇಲ್ಲಿಯ ತನಕ ಆಡಿದ 31 ಏಕದಿನ ಪಂದ್ಯಗಳಲ್ಲಿ ಅವರು 33.31ರ ಸರಾಸರಿಯಲ್ಲಿ 871 ರನ್‌ಗಳನ್ನು ಗಳಿಸಿದ್ದಾರೆ.
"ನೀವು ಹೇಗೆ ಆಡುತ್ತೀರಿ ಎಂಬುದನ್ನು ಇದು ಅವಲಂಬಿಸಿದೆ. ಒಂದು ವೇಳೆ ಯಶಸ್ವಿ ಜೈಸ್ವಾಲ್ ಅವರು ರಿಷಭ್ ಪಂತ್ ಅವರಿಗಿಂತಲೂ ಮೇಲಿನ ಕ್ರಮಾಂಕದಲ್ಲಿ ಆಡಿಲ್ಲವಾದರೆ, ಹಾರ್ದಿಕ್ ಪಾಂಡ್ಯಗಿಂತ ಮೇಲೆ ಅಂದರೆ ನಾಲ್ಕನೇ ಕ್ರಮಾಂಕದಲ್ಲಿ ರಿಷಭ್ ಪಂತ್ ಬ್ಯಾಟ್ ಮಾಡಬಹುದು. ಒಂದು ವೇಳೆ ಪಂತ್ 40-50 ಎಸೆತಗಳನ್ನು ಆಡಿದರೆ, ಅವರೇ ಒಬ್ಬರೇ ಭಾರತ ತಂಡವನ್ನು ಗೆಲ್ಲಿಸಬಲ್ಲರು," ಎಂದು ಹೇಳಿದ್ದಾರೆ.
IND vs ENG: ಇಂಗ್ಲೆಂಡ್ ಏಕದಿನ ಸರಣಿಗೆ ಭಾರತ ತಂಡ ಹೀಗಿದೆ
ಕ್ರೀಸ್‌ನಲ್ಲಿ ಸ್ವಲ್ಪ ಸಮಯವನ್ನು ಕಳೆಯಬೇಕು
"ತಾನು ಅರ್ಧಶತಕ ಸಿಡಿಸಿದರೆ, 80 ರಿಂದ 100 ರನ್‌ಗಳನ್ನು ಗಳಿಸಬಹುದೆಂದು ತನಗೆ ತಾನೇ ರಿಷಭ್ ಪಂತ್ ಅವರು ಹೇಳಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಅವರು ಆರಂಭದಲ್ಲಿ ಸ್ವಲ್ಪ ಸಮಯವನ್ನು ಕ್ರೀಸ್‌ನಲ್ಲಿ ಕಳೆಯುವುದು ತುಂಬಾ ಮುಖ್ಯ. ಅವರು ಪ್ರತಿಭಾವಂತ ಬ್ಯಾಟ್ಸ್‌ಮನ್ ಹಾಗೂ ಉತ್ತಮ ಸಾಮರ್ಥ್ಯವನ್ನು ಹೊಂದಿದ್ದಾರೆ. ಹಾಗಾಗಿ ಏನಾದರೂ ತಪ್ಪು ಮಾಡಿದರೆ ಅವರಿಗೆ ತುಂಬಾ ನಷ್ಟವಾಗಲಿದೆ. ಏಕೆಂದರೆ ಅವರು ಭಾರತ ತಂಡಕ್ಕೆ ಎಕ್ಸ್ ಫ್ಯಾಕ್ಟರ್ ಆಟಗಾರ," ಎಂದು ಸುರೇಶ್ ರೈನಾ ಶ್ಲಾಘಿಸಿದ್ದಾರೆ.
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್‌ದೀಪ್ ಯಾದವ್, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬುಮ್ರಾ (ಫಿಟ್‌ನೆಸ್ ಮೇಲೆ ಅವಲಂಬನೆ), ಅರ್ಷ್‌ದೀಪ್ ಸಿಂಗ್, ಯಶಸ್ವಿ ಜೈಸ್ವಾಲ್, ರಿಷಭ್ ಪಂತ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್.