#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

IND vs ENG: ರೋಹಿತ್‌,ಕೊಹ್ಲಿಯಿಂದ ಸಾಧ್ಯವಾಗದ ಅಪರೂಪದ ದಾಖಲೆ ಬರೆದ ಶುಭಮನ್‌ ಗಿಲ್‌!

Shubman Gill completes 3-peat in Ahmedabad: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬುಧವಾರ (ಫೆ.12) ಇಂಗ್ಲೆಂಡ್ ವಿರುದ್ಧ ನಡೆದಿದ್ದ ಮೂರನೇ ಏಕದಿನ ಪಂದ್ಯದಲ್ಲಿ ಭಾರತದ ಉಪನಾಯಕ ಶುಭಮನ್ ಗಿಲ್ ಆಕರ್ಷಕ ಶತಕ(112 ರನ್) ಸಿಡಿಸಿದ್ದಾರೆ. ಆ ಮೂಲಕ ಏಕೈಕ ಮೈದಾನದಲ್ಲಿ ಎಲ್ಲಾ ಸ್ವರೂಪದ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಮೊದಲ ಭಾರತದ ಬ್ಯಾಟರ್ ಎಂಬ‌ ದಾಖಲೆಯನ್ನು ಬರೆದಿದ್ದಾರೆ.

ಅಹಮದಾಬಾದ್‌ ಕ್ರೀಡಾಂಗಣದಲ್ಲಿ ಅಪರೂಪದ ದಾಖಲೆ ಬರೆದ ಶುಭಮನ್‌ ಗಿಲ್‌!

Shubman Gill Record

Profile Ramesh Kote Feb 12, 2025 6:36 PM

ಅಹಮದಾಬಾದ್: ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯಲ್ಲಿ ಶುಭಮನ್ ಗಿಲ್ ಶತಕವನ್ನು ಸಿಡಿಸಿದ್ದಾರೆ. ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಮೂರನೇ ಏಕದಿನ ಪಂದ್ಯದಲ್ಲಿ 102 ಎಸೆತಗಳಲ್ಲಿ 112 ರನ್ ಗಳಿಸಿ ಗಿಲ್ ವಿಕೆಟ್ ಒಪ್ಪಿಸಿದರು. ಆ ಮೂಲಕ ಏಕೈಕ ಕ್ರೀಡಾಂಗಣದಲ್ಲಿ ಮೂರು ಸ್ವರೂಪದ ಕ್ರಿಕೆಟ್‌ನಲ್ಲಿ ಸೆಂಚುರಿ ಬಾರಿಸಿದ ವಿಶ್ವದ ಐದನೇ ಹಾಗೂ ಭಾರತದ ಮೊದಲ ಬ್ಯಾಟರ್ ಎಂಬ ಅಪರೂಪದ ದಾಖಲೆಯನ್ನು ಶುಭಮನ್‌ ಗಿಲ್‌ ಬರೆದಿದ್ದಾರೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶುಭಮನ್ ಗಿಲ್ ಆಡಿರುವ 7 ಪಂದ್ಯಗಳಲ್ಲಿ 412 ರನ್ ಬಾರಿಸಿದ್ದಾರೆ. 2023ರಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದಿದ್ದ ಟಿ20ಐ ಪಂದ್ಯದಲ್ಲಿ 125 ರನ್ ಸಿಡಿಸಿದ್ದ ಗಿಲ್, ನಂತರ ಇದೇ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಶತಕ (128 ರನ್ ) ಸಿಡಿಸಿ ಸಂಭ್ರಮಿಸಿದ್ದರು. ಇದೀಗ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿ ಹೊಸ ಮೈಲುಗಲ್ಲು ಸ್ಥಾಪಿಸಿದ್ದಾರೆ.

IND vs ENG: ತಮ್ಮ 7ನೇ ಶತಕದ ಮೂಲಕ ವಿಶೇಷ ದಾಖಲೆ ಬರೆದ ಶುಭಮನ್‌ ಗಿಲ್‌!

ಏಕೈಕ ಕ್ರೀಡಾಂಗಣದಲ್ಲಿ ಮೂರೂ ಸ್ವರೂಪದಲ್ಲಿ ಶತಕ ಸಿಡಿಸಿದ ಬ್ಯಾಟರ್ಸ್‌

  • ಫಾಫ್ ಡು ಪ್ಲೆಸಿಸ್ - ದಕ್ಷಿಣ ಆಫ್ರಿಕಾ - ವಾಂಡರರ್ಸ್, ಜೋಹಾನ್ಸ್ ಬರ್ಗ್
  • ಡೇವಿಡ್ ವಾರ್ನರ್ - ಆಸ್ಟ್ರೇಲಿಯಾ - ಅಡಿಲೇಡ್ , ಓವಲ್
  • ಬಾಬರ್ ಆಝಮ್ - ಪಾಕಿಸ್ತಾನ - ನ್ಯಾಷನಲ್ ಸ್ಟೇಡಿಯಂ, ಕರಾಚಿ
  • ಕ್ವಿಂಟನ್ ಡಿ ಕಾಕ್ - ದಕ್ಷಿಣ ಆಫ್ರಿಕಾ - ಸೂಪರ್ ಸ್ಪೋರ್ಟ್ಸ್ ಪಾರ್ಕ್, ಸೆಂಚುರಿಯನ್
  • ಶುಭಮನ್ ಗಿಲ್ - ಭಾರತ- ನರೇಂದ್ರ ಮೋದಿ ಕ್ರೀಡಾಂಗಣ, ಅಹಮದಾಬಾದ್



259 ರನ್ ಗಳಿಸಿದ ಗಿಲ್

ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಭಾರತದ ಉಪನಾಯಕ ಶುಭಮನ್‌ ಗಿಲ್‌, ಒಂದು ಅರ್ಧಶತಕ ಹಾಗೂ ಎರಡು ಶತಕಗಳ ಬಲದಿಂದ 86.33ರ ಸರಾಸರಿಯಲ್ಲಿ 259 ರನ್ ಗಳಿಸಿದ್ದಾರೆ. ಈ ದ್ವಿಪಕ್ಷೀಯ ಏಕದಿನ ಸರಣಿಯಲ್ಲಿ ಟಾಪ್ ಸ್ಕೋರರ್ ಆಗಿರುವ ಗಿಲ್, ಮುಂಬರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಅಬ್ಬರಿಸುವ ಸೂಚನೆ ನೀಡಿದ್ದಾರೆ.

IND vs ENG 3rd ODI: ಟಾಸ್‌ ಸೋತ ಭಾರತ ಮೊದಲು ಬ್ಯಾಟಿಂಗ್‌!

ಎರಡು ಶತಕದ ಜೊತೆಯಾಟವಾಡಿದ ಗಿಲ್

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಶುಭಮನ್ ಗಿಲ್, ಅಹಮದಾಬಾದ್‌ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಎರಡು ಶತಕಗಳ ಜೊತೆಯಾಟವಾಡಿದ ಗಿಲ್, ಭಾರತ ತಂಡ 356 ರನ್ ಗಳಿಸುವ ನೆರವು ನೀಡಿದ್ದರು. ಆ ಮೂಲಕ ಅಹಮದಾಬಾದ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ತಂಡ ಎಂಬ ತಮ್ಮದೇ ಹಿಂದಿನ ದಾಖಲೆ ಮುರಿಯಲು ಭಾರತಕ್ಕೆ ನೆರವಾಗಿದ್ದರು. 2002ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಗಳಿಸಿದ್ದ 325 ರನ್ ಇದುವರೆಗಿನ ಗರಿಷ್ಠ ಸ್ಕೋರ್ ಆಗಿತ್ತು. ಇಂದಿನ ಪಂದ್ಯದಲ್ಲಿ ಗಿಲ್ ಎರಡನೇ ವಿಕೆಟ್‌ಗೆ ವಿರಾಟ್ ಕೊಹ್ಲಿ (52 ರನ್) ಜೊತೆಗೆ 116 ರನ್ ಹಾಗೂ ಶ್ರೇಯಸ್ ಅಯ್ಯರ್ (78 ರನ್) ರೊಂದಿಗೆ ಮೂರನೇ ವಿಕೆಟ್‌ಗೆ 104 ರನ್ ಕಲೆ ಹಾಕಿದ್ದಾರೆ.