IND vs ENG: ಮೊಹಮ್ಮದ್ ಶಮಿ ಏಕೆ ಆಡುತ್ತಿಲ್ಲ? ಟೀಮ್ ಮ್ಯಾನೇಜ್‌ಮೆಂಟ್‌ಗೆ ಆಕಾಶ ಚೋಪ್ರಾ ಪ್ರಶ್ನೆ!
Aakash Chopra on Mohammed Shami: ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಹಿರಿಯ ವೇಗಿ ಮೊಹಮ್ಮದ್ ಶಮಿ ಯಾವುದಾದರೂ ಪಂದ್ಯದಲ್ಲಿ ಆಡಬೇಕೆಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಆಗ್ರಹಿಸಿದ್ದಾರೆ. ಒಂದು ವೇಳೆ ಅವರನ್ನು ಆಡಿಸಿಲ್ಲವಾದರೆ, ಶಮಿಯ ಗಾಯದ ಸ್ಥಿತಿಯ ವಾಸ್ತವ ಬಹಿರಂಗವಾಗಬೇಕೆಂದು ಹೇಳಿದ್ದಾರೆ.


ರಾಜ್‌ಕೋಟ್: ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ (IND vs ENG) ಹಿರಿಯ ವೇಗಿ ಮೊಹಮ್ಮದ್ ಶಮಿ (Mohammed Shami) ಆಡಬೇಕೆಂದು ಭಾರತ ಟೆಸ್ಟ್ ತಂಡದ ಮಾಜಿ ಆರಂಭಿಕ ಆಕಾಶ ಚೋಪ್ರಾ ಆಗ್ರಹಿಸಿದ್ದಾರೆ. ಈಗಾಗಲೇ ಎರಡು ಪಂದ್ಯಗಳು ಅಂತ್ಯವಾಗಿದ್ದು, ಮೂರನೇ ಪಂದ್ಯ ಮಂಗಳವಾರ ಇಲ್ಲಿನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿಯೂ ಶಮಿ ಆಡಿಲ್ಲವಾದರೆ, ಟೀಮ್ ಮ್ಯಾನೇಜ್‌ಮೆಂಟ್ ಹಿರಿಯ ವೇಗಿಯ ಫಿಟ್‌ನೆಸ್ ಬಗ್ಗೆ ಸ್ಪಷ್ಟಪಡಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಟಿ20ಐ ಪಂದ್ಯ ಇಂದು ಸಂಜೆ 7 ಗಂಟೆಗೆ ಆರಂಭವಾಗಲಿದೆ. ಆದರೆ, ಈ ಪಂದ್ಯದಲ್ಲಿಯೂ ಶಮಿ ಆಡುವ ಬಗ್ಗೆ ಯಾವುದೇ ಖಚಿತತೆ ಇಲ್ಲ. ಆದರೆ, ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿರುವ ವಿಡಿಯೊದಲ್ಲಿ ಮಾತನಾಡಿದ ಆಕಾಶ್ ಚೋಪ್ರಾ, ಮೊಹಮ್ಮದ್ ಶಮಿ ಫಿಟ್‌ನೆಸ್ ಬಗ್ಗೆ ಪ್ರಶ್ನೆ ಮಾಡಿದ್ದಾರೆ.
ಜೈಸ್ವಾಲ್, ಗಿಲ್ ಅಲ್ಲವೇ ಅಲ್ಲ! ಭಾರತದ ಮುಂದಿನ ಸೂಪರ್ ಸ್ಟಾರ್ ಹೆಸರಿಸಿದ ಆಕಾಶ್ ಚೋಪ್ರಾ!
"ಮೊಹಮ್ಮದ್ ಶಮಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲಿದ್ದಾರಾ? ಇದು ದೊಡ್ಡ ಆಲೋಚನೆಯಾಗಿದೆ. ಟಿ20ಐ ಸರಣಿಯ ಯಾವುದಾದರೂ ಒಂದು ಹಂತದಲ್ಲಿ ಅವರು ಆಡಬೇಕು. ಈ ತಿಂಗಳಲ್ಲಿ ಅವರು ಆಡಬೇಕು. 28 ರಂದು ಪಂದ್ಯವಿದೆ. ಈ ಪಂದ್ಯದ ಬಳಿಕ ಈ ತಿಂಗಳಲ್ಲಿ ಇನ್ನೊಂದು ಪಂದ್ಯವಿದೆ. ಅದಹಾಗೆ ಮಂಗಳವಾರ ಸಂಜೆ ಮೊಹಮ್ಮದ್ ಶಮಿ ಬಗ್ಗೆ ಮಾಹಿತಿ ಹೊರಬೀಳಲಿದೆ," ಎಂದು ಆಕಾಶ್ ಚೋಪ್ರಾ ತಿಳಿಸಿದ್ದಾರೆ.
"ಮೊಹಮ್ಮದ್ ಶಮಿ ಈಗಲೂ ಆಡಿಲ್ಲವಾದರೆ, ಅವರ ಫಿಟ್‌ನೆಸ್ ಪರಿಸ್ಥಿತಿ ಹೇಗಿದೆ? ಶಮಿ ಆಡುವ ಅಗತ್ಯವಿದೆ ಎಂಬುದು ಇಲ್ಲಿ ಸತ್ಯಾಂಶವಾಗಿದೆ. ಒಂದು ಶಮಿ ಆಡಿಲ್ಲವಾದರೆ, ಇದು ನನಗೆ ವೈಯಕ್ತಿಕವಾಗಿ ಬೇಸರವಾಗಲಿದೆ. ನಾಳೆಯಿಂದ ಆರಂಭವಾಗುವ ಚಾಂಪಿಯನ್ಸ್ ಟ್ರೋಫಿ ಇದಲ್ಲ. ಆದರೆ, ಅವರು 15 ತಿಂಗಳುಗಳಿಂದ ಭಾರತದ ಪರ ಆಡಿಲ್ಲ," ಎಂದು ಮಾಜಿ ಬ್ಯಾಟ್ಸ್‌ಮನ್ ಹೇಳಿದ್ದಾರೆ.
IND vs Eng: ಟಿ20ಐ ಸರಣಿಯಲ್ಲಿ ಭಾರತಕ್ಕೆ ಕೀ ಆಟಗಾರನನ್ನು ಆರಿಸಿದ ಆಕಾಶ್ ಚೋಪ್ರಾ!
ಆರಂಭಿಕ ಎರಡು ಪಂದ್ಯಗಳಲ್ಲಿ ಹಾರ್ದಿಕ್ ಪಾಂಡ್ಯ ಅವರ ಜೊತೆ ವಿಶೇಷ ವೇಗಿಯಾಗಿ ಮೊಹಮ್ಮದ್ ಶಮಿ ಬದಲು ಅರ್ಷದೀಪ್ ಸಿಂಗ್ ಆಡಿದ್ದರು. ಎರಡನೇ ಟಿ20ಐ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ವರುಣ್ ಚಕ್ರವರ್ತಿ ಹಾಗೂ ಅಭಿಷೇಕ್ ಶರ್ಮಾ ಸೇರಿ ಐವರು ಸ್ಪಿನ್ನರ್‌ಗಳು ಆಡಿದ್ದರು.
"ನಾವು ದಾಖಲೆಯನ್ನು ಮುರಿದಿದ್ದೇವೆ. ಮುಂದಿನ ಪಂದ್ಯದಲ್ಲಿಯೂ ಇದು ನಡೆದರೆ ನಮಗೆ ಇದರಿಂದ ಯಾವುದೇ ಸಮಸ್ಯೆ ಇಲ್ಲ ಎಂದು ನಾವು ಪದೇ-ಪದೆ ಹೇಳುತ್ತೇವೆ. ಆದರೆ, ಅಂತಾರಾಷ್ಟ್ರೀಯ ಪಂದ್ಯಕ್ಕೆ ಆಡಬೇಕೆಂದರೆ ಅವರು (ಶಮಿ) ಸಿದ್ದರಾಗಿರಬೇಕು. ನೀವು ಹೇಳಿದಂತೆ ಚಿನ್ನವನ್ನು ಬಿಸಿ ಮಾಡುವ ಮೂಲಕ ಚಿನ್ನವನ್ನು ತೆಗೆಯಬೇಕಾಗುತ್ತದೆ. ಒಂದು ವೇಳೆ ಶಮಿ ಆಡಿಲ್ಲವಾದರೆ, ಅವರ ಫಿಟ್‌ನೆಸ್ ಪರಿಸ್ಥಿತಿ ಏನೆಂದು ಎಲ್ಲರಿಗೂ ತಿಳಿಯಬೇಕು," ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.