ಜೈಸ್ವಾಲ್, ಗಿಲ್ ಅಲ್ಲವೇ ಅಲ್ಲ! ಭಾರತದ ಮುಂದಿನ ಸೂಪರ್ ಸ್ಟಾರ್ ಹೆಸರಿಸಿದ ಆಕಾಶ್ ಚೋಪ್ರಾ!
Aakash chopra Praised Tilak Verma: ಇಂಗ್ಲೆಂಡ್ ವಿರುದ್ದ ಎರಡನೇ ಟಿ20ಐ ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ತೋರಿದ್ದ ಭಾರತ ತಂಡದ ಯುವ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ಅವರನ್ನು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ತಿಲಕ್ ವರ್ಮಾ ಭವಿಷ್ಯದ ಸೂಪರ್ ಸ್ಟಾರ್ ಆಟಗಾರ ಎಂದು ಕ್ರಿಕೆಟ್ ನಿರೂಪಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Aakash chopra Praised on Tilak Verma

ನವದೆಹಲಿ: ಇಂಗ್ಲೆಂಡ್ ವಿರುದ್ಧ ಎರಡನೇ ಟಿ20ಐ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ತೋರಿ ಭಾರತ ತಂಡವನ್ನು ಗೆಲ್ಲಿಸಿದ್ದ ಯುವ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ಅವರನ್ನು ಟೆಸ್ಟ್ ಮಾಜಿ ಆರಂಭಿಕ ಆಕಾಶ್ ಚೋಪ್ರಾ ಶ್ಲಾಘಿಸಿದ್ದಾರೆ. ತಿಲಕ್ ವರ್ಮಾ ಭಾರತೀಯ ಕ್ರಿಕೆಟ್‌ನ ಭವಿಷ್ಯದ ಸೂಪರ್ ಸ್ಟಾರ್ ಎಂದು ಕ್ರಿಕೆಟ್ ನಿರೂಪಕ ಬಣ್ಣಿಸಿದ್ದಾರೆ.
ಪ್ರಸ್ತುತ ಭಾರತೀಯ ಕ್ರಿಕೆಟ್‌ನಲ್ಲಿ ಎಡಗೈ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಅವರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. 2024ರ ವರ್ಷದ ಐಸಿಸಿ ಟೆಸ್ಟ್ ಕ್ರಿಕೆಟಿಗ ಎಂಬ ಪ್ರಶಸ್ತಿಗೂ ಕೂಡ ಜೈಸ್ವಾಲ್ ಇತ್ತೀಚೆಗೆ ಭಾಜನರಾಗಿದ್ದರು. ಕಳೆದ ವರ್ಷ ಅವರು 1478 ಟೆಸ್ಟ್ ರನ್‌ಗಳನ್ನು ಸಿಡಿಸಿದ್ದರು. ಇದರ ಫಲವಾಗಿ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಭಾರತ ತಂಡದಲ್ಲಿಯೂ ಕೂಡ ಅವರಿಗೆ ಅವಕಾಶವನ್ನು ಕಲ್ಪಿಸಲಾಗಿದೆ. ಇದೀಗ ಎಡಗೈ ಬ್ಯಾಟ್ಸ್‌ಮನ್ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಎದುರು ನೋಡುತ್ತಿದ್ದಾರೆ.
IND vs ENG 3rd T20: ಮೂರನೇ ಟಿ20 ಪಂದ್ಯದ ಪಿಚ್ ರಿಪೋರ್ಟ್, ಹವಾಮಾನ ವರದಿ, ಸಂಭಾವ್ಯ ತಂಡ ಹೀಗಿದೆ
ತಿಲಕ್ ವರ್ಮಾ ಭವಿಷ್ಯದ ಸೂಪರ್ ಸ್ಟಾರ್
ಆದರೆ, ಭಾರತ ಟೆಸ್ಟ್ ತಂಡದ ಮಾಜಿ ಆರಂಭಿಕ ಆಕಾಶ್ ಚೋಪ್ರಾ, ಯಶಸ್ವಿ ಜೈಸ್ವಾಲ್ ಅವರನ್ನು ಕಡೆಗಣಿಸಿ, ಭಾರತೀಯ ಕ್ರಿಕೆಟ್‌ನ ಭವಿಷ್ಯದ ಸೂಪರ್ ಸ್ಟಾರ್ ಆಟಗಾರರನ್ನು ಆರಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ಎರಡನೇ ಟಿ20ಐ ಪಂದ್ಯದಲ್ಲಿ ಕೇವಲ 44 ಎಸೆತಗಳಲ್ಲಿ ಅಜೇಯ 72 ರನ್ ಸಿಡಿಸಿ ಭಾರತ ತಂಡವನ್ನು ಗೆಲ್ಲಿಸಿದ್ದ ತಿಲಕ್ ವರ್ಮಾ ಭವಿಷ್ಯದ ಸೂಪರ್ ಸ್ಟಾರ್ ಆಟಗಾರ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿರುವ ವಿಡಿಯೊದಲ್ಲಿ ಮಾತನಾಡಿದ ಆಕಾಶ ಚೋಪ್ರಾ, "ತಿಲಕ್ ವರ್ಮಾ ಸೂಪರ್ ಸ್ಟಾರ್. ನಾವು ಕೆಲವೊಮ್ಮೆ ಯಾರಾನ್ನಾದರೂ ಬಹುಬೇಗ ಸೂಪರ್ ಸ್ಟಾರ್ ಎಂದು ಕರೆಯುತ್ತೇವೆ. ಅಲ್ಲದೆ ನಾವೆಲ್ಲರೂ ಯಾರಾದರೂ ಒಬ್ಬರನ್ನು ಆರಂಭಿಕ ದಿನಗಳಲ್ಲಿ ಶ್ರೇಷ್ಠ ಅಥವಾ ದಂತಕತೆ ಎಂದು ಕರೆಯುತ್ತೇವೆ. ತಿಲಕ್ ವರ್ಮಾ ಈಗಾಗಲೇ ಸೂಪರ್ ಸ್ಟಾರ್ ಎಂದು ನಾನು ಕರೆಯುವುದಿಲ್ಲ. ಆದರೆ, ಅವರು ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ," ಎಂದು ಹೇಳಿದ್ದಾರೆ.
IND vs ENG: ಗೌತಮ್ ಗಂಭೀರ್ ದಾಖಲೆ ಮುರಿಯುವ ಸನಿಹದಲ್ಲಿ ಸಂಜು ಸ್ಯಾಮ್ಸನ್!
ಕೊನೆಯವರೆಗೂ ತಿಲಕ್ ವರ್ಮಾ ಶಾಂತವಾಗಿದ್ದರು: ಚೋಪ್ರಾ
ತಿಲಕ್ ವರ್ಮಾ ಅವರು ತಮ್ಮ ವಿಕೆಟ್ ಅನ್ನು ಕೈ ಚೆಲ್ಲದೆ ಕೊನೆಯವರೆಗೂ ಕ್ರೀಸ್‌ನಲ್ಲಿ ನಿಂತು ಬ್ಯಾಟ್ ಮಾಡಿದ್ದಾರೆ. ಚೆಪಾಕ್‌ನಲ್ಲಿ ಚೇಸಿಂಗ್ ವೇಳೆ ಶಾಂತ ಸ್ವಭಾವವನ್ನು ಉಳಿಸಿಕೊಂಡಿದ್ದ ಅವರು ಪಂದ್ಯವನ್ನು ಕೊನೆಯವರೆಗೂ ತೆಗೆದುಕೊಂಡು ಹೋಗಿದ್ದರು ಎಂದು ಕ್ರಿಕೆಟ್ ನಿರೂಪಕ ತಿಳಿಸಿದ್ದಾರೆ.
"ತನ್ನ ವಿಕೆಟ್ ಅನ್ನು ಕೈ ಚೆಲ್ಲದೆ ಕೊನೆಯವರೆಗೂ ಅವರು ಅಜೇಯರಾಗಿ ಉಳಿದಿದ್ದಾರೆ. ಕೊನೆಯ ಹಂತದಲ್ಲಿ ಭಾರತ ತಂಡ 8 ವಿಕೆಟ್ ಅನ್ನು ಕಳೆದುಕೊಂಡಿತ್ತು ಹಾಗೂ 18 ರನ್‌ಗಳ ಅಗತ್ಯವಿತ್ತು. ಈ ವೇಳೆ ಅವರು ಆಗಲೇ 5 ಸಿಕ್ಸರ್‌ಗಳನ್ನು ಬಾರಿಸಿದ್ದರು. ಇನ್ನೂ ಮೂರು ಸಿಕ್ಸರ್‌ಗಳನ್ನು ಅವರು ಸಿಡಿಸಬಹುದಿತ್ತು. ಆದರೆ, ಅವರು ಪಂದ್ಯವನ್ನು ಕೊನೆಯವರೆಗೂ ತೆಗೆದುಕೊಂಡು ಹೋಗಬೇಕೆಂದು ಅಂದುಕೊಂಡಿದ್ದರು. ಚೆಪಾಕ್‌ನಲ್ಲಿ ಪಂದ್ಯ ನಡೆದಿತ್ತು ಹಾಗೂ ಇದು ಎಂಎಸ್ ಧೋನಿಯ ತವರು ಕ್ರೀಡಾಂಗಣ. ಹಾಗಾಗಿ ಯುವ ಬ್ಯಾಟ್ಸ್‌ಮನ್ ಕೊನೆಯವರೆಗೂ ಚೇಸ್ ಮಾಡಲು ಬಯಸಿದ್ದರು," ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.