IND vs NZ: ನ್ಯೂಜಿಲೆಂಡ್ ಪಂದ್ಯಕ್ಕೆ ಮೊಹಮ್ಮದ್ ಶಮಿ ಬದಲು ಯುವ ವೇಗಿಗೆ ಅವಕಾಶ!
India vs New Zealand: ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಣ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಕೊನೆಯ ಲೀಗ್ ಪಂದ್ಯ ಭಾನುವಾರ ದುಬೈ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಕನಿಷ್ಠ ಒಂದು ಬದಲಾವಣೆಯನ್ನು ನಿರೀಕ್ಷೆ ಮಾಡಬಹುದಾಗಿದೆ.

ಭಾರತ vs ನ್ಯೂಜಿಲೆಂಡ್ ಪಂದ್ಯ

ನವದೆಹಲಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್‌ಗೆ ಅರ್ಹತೆ ಪಡೆದಿರುವ ಭಾರತ ತಂಡ, ಲೀಗ್ ಹಂತದ ತನ್ನ ಕೊನೆಯ ಪಂದ್ಯದಲ್ಲಿ ಬಲಿಷ್ಠ ನ್ಯೂಜಿಲೆಂಡ್ ಎದುರು ಕಾದಾಟ ನಡೆಸಲಿದೆ. ಈ ಪಂದ್ಯ ಭಾನುವಾರ ದುಬೈ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಎರಡೂ ತಂಡಗಳು ಸಜ್ಜಾಗುತ್ತಿವೆ. ಅಂದ ಹಾಗೆ ಈ ಪಂದ್ಯದ ನಿಮಿತ್ತ ಭಾರತ ತಂಡಕ್ಕೆ ಗಾಯಾಳುಗಳ ಸಮಸ್ಯೆ ಎದುರಾಗಿದೆ. ಪಾಕಿಸ್ತಾನ ವಿರುದ್ದದ ಪಂದ್ಯದ ವೇಳೆ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಕಾಲಿನಲ್ಲಿ ನೋವು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಕಿವೀಸ್ ಎದುರಿನ ಪಂದ್ಯಕ್ಕೆ ವಿಶ್ರಾಂತಿ ಪಡೆಯುವ ಸಾಧ್ಯತೆ ಇದೆ. ಒಂದು ವೇಳೆ ಇವರು ವಿಶ್ರಾಂತಿ ಪಡೆದರೆ, ಅವರ ಸ್ಥಾನಕ್ಕೆ ಎಡಗೈ ವೇಗಿ ಅರ್ಷದೀಪ್ ಸಿಂಗ್ ಆಡಬಹುದು.
ಶುಕ್ರವಾರ ನೆಡಿದಿದ್ದ ಭಾರತ ತಂಡದ ಅಭ್ಯಾಸದಲ್ಲಿ ಪಂಜಾಬ್ ಮೂಲದ ವೇಗಿ, ಹಿರಿಯ ವೇಗಿಯ ಸ್ಥಾನವನ್ನು ತುಂಬಲಿದ್ದಾರೆಂಬ ಮುನ್ಸೂಚನೆ ಸಿಕ್ಕಿದೆ. ಗಾಯದಿಂದ ಗುಣಮುಖರಾಗಿ ಶಮಿ ಇತ್ತೀಚೆಗೆ ಟೀಮ್ ಇಂಡಿಯಾಗೆ ಮರಳಿದ್ದರು. ತರಬೇತಿಯ ವೇಳೆ ಅರ್ಷದೀಪ್ ಸಿಂಗ್, ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಅವರ ಕಣ್ಗಾವಲಿನಲ್ಲಿ 13 ಓವರ್‌ಗಳನ್ನು ಬೌಲ್ ಮಾಡಿದ್ದರು. ಆದೆರೆ, ಮೊಹಮ್ಮದ್ ಶಮಿ ಕೇವಲ 6-7 ಓವರ್‌ಗಳನ್ನು ಬೌಲ್ ಮಾಡಿದ್ದರು ಹಾಗೂ ಅವರು ಪೂರ್ಣ ಪ್ರಮಾಣದಲ್ಲಿ ಬೌಲ್ ಮಾಡಿರಲಿಲ್ಲ. ಇದನ್ನು ಗಮನಿಸಿದರೆ, ಶಮಿ ಕಿವೀಸ್ ಪಂದ್ಯದಲ್ಲಿ ಬೆಂಚ್ ಕಾಯುವುದು ಬಹುತೇಕ ಖಚಿತ.
IND vs NZ: ಭಾರತ-ಕಿವೀಸ್ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ ಹೇಗಿದೆ?
ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆ ಮೊಹಮ್ಮದ್ ಶಮಿ ತಮ್ಮ ಮೂರನೇ ಓವರ್ ಬೌಲಿಂಗ್ ವೇಳೆ ಅವರ ಕಾಲಿನಲ್ಲಿ ನೋವು ಕಾಣಿಸಿಕೊಂಡಿತ್ತು ಹಾಗೂ ಈ ವೇಳೆ ಮೈದಾನಕ್ಕೆ ಆಗಮಿಸಿದ್ದ ತಂಡದ ಫಿಸಿಯೊ ಅವರ ಕಾಲಿಗೆ ಚಿಕಿತ್ಸೆ ನೀಡಿದ್ದರು. ಶುಕ್ರವಾರ ಟ್ರೈನಿಂಗ್ ಸೆಷನ್‌ನಲ್ಲಿಯೂ ಶಮಿ ಅವರ ಬಾಡಿ ಲಾಂಗ್ವೇಜ್ ಕೂಡ ಅಷ್ಟೊಂದು ಉತ್ತಮವಾಗಿರಲಿಲ್ಲ. ಇದನ್ನು ನೋಡಿದರೆ, ಅವರುಸೆಮಿಪೈನಲ್‌ಗೂ ಮುನ್ನ ಅವರಿಗೆ ಹೆಚ್ಚಿನ ವಿಶ್ರಾಂತಿ ಅಗತ್ಯವಿದೆ ಎಂದು ತಿಳಿದುಬಂದಿದೆ. ಶುಕ್ರವಾರ ಶಮಿ ತರಬೇತಿ ಪಡೆದಿದ್ದರು, ಆದರೆ ಅವರು ಪೂರ್ಣ ಪ್ರಮಾಣದಲ್ಲಿ ಬೌಲ್ ಮಾಡಿರಲಿಲ್ಲ.
ಮಾಧ್ಯಮಗಳ ಜೊತೆ ಮಾತನಾಡಿದ್ದ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಕೆಎಲ್ ರಾಹುಲ್ ಕೂಡ, ಗೆಲುವಿನ ಸಂಯೋಜನೆಯನ್ನು ಮುಂದುವರಿಸುವುದು ಅನುಮಾನ ಎಂದು ಹೇಳಿದ್ದರು. ಸಹಾಯಕ ಕೋಚ್ ರಯಾನ್ ಡಿಶೆಟ್ ಅವರು ಕೂಡ ಭಾರತ ತಂಡದ ಪ್ಲೇಯಿಂಗ್ XIನ ಬೌಲಿಂಗ್ ವಿಭಾಗದಲ್ಲಿ ಕಲೆ ಬದಲಾವಣೆಯನ್ನು ತರಬಹುದು ಎಂದು ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ವೇಗದ ಬೌಲಿಂಗ್ ವಿಭಾಗದಲ್ಲಿ ಶಮಿ ಬದಲು ಅರ್ಷದೀಪ್ ಸಿಂಗ್ ಆಡುವುದು ದಟ್ಟವಾಗಿದೆ.
IND vs NZ: ನೆಟ್ ಬೌಲರ್‌ಗೆ ವಿಶೇಷ ಉಡುಗೊರೆ ನೀಡಿ ಹೃದಯವಂತಿಕೆ ಮೆರೆದ ಶ್ರೇಯಸ್ ಅಯ್ಯರ್!
ನ್ಯೂಜಿಲೆಂಡ್ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್ XI
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ಕೆಎಲ್ ರಾಹುಲ್ (ವಿ.ಕೀ), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್
ಪಂದ್ಯದ ವಿವರ
ಐಸಿಸಿ ಚಾಂಪಿಯನ್ಸ್ ಟ್ರೋಫಿ 2025
ಭಾರತ vs ನ್ಯೂಜಿಲೆಂಡ್
ದಿನಾಂಕ: ಮಾರ್ಚ್ 2, 2025
ಸಮಯ: ಮಧ್ಯಾಹ್ನ 02: 30ಕ್ಕೆ
ಸ್ಥಳ: ದುಬೈ ಇಂಟರ್‌ನ್ಯಾಷನಲ್ ಕ್ರೀಡಾಂಗಣ, ದುಬೈ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್
ಲೈವ್ ಸ್ಟ್ರೀಮಿಂಗ್: ಡಿಸ್ನಿ ಹಾಟ್‌ಸ್ಟಾರ್