IND vs NZ: ಭಾರತ-ಕಿವೀಸ್ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ ಹೇಗಿದೆ?
ಎರಡು ಸೆಮಿ ಫೈನಲ್ ಪಂದ್ಯಗಳ ನಡುವೆ ಕೇವಲ ಒಂದು ದಿನದ ಅಂತರವಿರುವುದರಿಂದ, ಭಾರತ ಮತ್ತು ನ್ಯೂಜಿಲೆಂಡ್ ತಂಡದ ಕೆಲವು ಆಟಗಾರರು ವಿಶ್ರಾಂತಿ ಪಡೆಯುವ ಸಾಧ್ಯತೆಯಿದೆ. ರಿಷಭ್ ಪಂತ್‌ಗೆ ಅವಕಾಶ ಕಲ್ಪಿಸಲು ನಾಯಕ ರೋಹಿತ್ ವಿರಾಮ ತೆಗೆದುಕೊಳ್ಳಬಹುದು.


ದುಬೈ: ಚಾಂಪಿಯನ್ಸ್ ಟ್ರೋಫಿಯ ಲೀಗ್ ಪಂದ್ಯಗಳಿಗೆ ಭಾನುವಾರ ತೆರೆ ಬೀಳಲಿದೆ. ಅಂತಿಮ ಲೀಗ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್(IND vs NZ) ಕಾದಾಟ ನಡೆಸಲಿದೆ. ಈಗಾಗಲೇ ಉಭಯ ತಂಡಗಳು ಸೆಮಿ ಫೈನಲ್ ಪ್ರವೇಶಿಸಿರುವ ಕಾರಣ ಸೆಮಿಗೂ ಮುನ್ನ ಉತ್ತಮ ಸಿದ್ಧತೆ ಮಾಡಿಕೊಳ್ಳಲು ಈ ಪಂದ್ಯ ಸಹಕಾರಿ. ಪಂದ್ಯದ ಫಲಿತಾಂಶವೇನೇ ಬಂದರೂ ಭಾರತ ತಂಡ ಮಾರ್ಚ್ 4 ರಂದು ದುಬೈನಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್ಲೇ ಆಡಲಿದೆ. ನ್ಯೂಜಿಲ್ಯಾಂಡ್ ಮಾರ್ಚ್ 5 ರಂದು ಲಾಹೋರ್‌ನಲ್ಲಿ ನಡೆಯುವ 2ನೇ ಸೆಮಿಫೈನಲ್‌ನಲ್ಲಿ ಆಡಲಿದೆ. ನಾಳಿನ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡದ ಮಾಹಿತಿ ಹೀಗಿದೆ.
ಎರಡು ಸೆಮಿ ಫೈನಲ್ ಪಂದ್ಯಗಳ ನಡುವೆ ಕೇವಲ ಒಂದು ದಿನದ ಅಂತರವಿರುವುದರಿಂದ, ಭಾರತ ಮತ್ತು ನ್ಯೂಜಿಲೆಂಡ್ ತಂಡದ ಕೆಲವು ಆಟಗಾರರು ವಿಶ್ರಾಂತಿ ಪಡೆಯುವ ಸಾಧ್ಯತೆಯಿದೆ. ರಿಷಭ್ ಪಂತ್‌ಗೆ ಅವಕಾಶ ಕಲ್ಪಿಸಲು ನಾಯಕ ರೋಹಿತ್ ವಿರಾಮ ತೆಗೆದುಕೊಳ್ಳಬಹುದು, ಮೊಹಮ್ಮದ್ ಶಮಿ ಬದಲಿಗೆ ಅರ್ಷ್‌ದೀಪ್ ಸಿಂಗ್ ಆಡಬಹುದು. ಅತ್ತ ಡೇರಿಯಲ್ ಮಿಚೆಲ್ ಮತ್ತು ಮಾರ್ಕ್ ಚಾಪ್‌ಮನ್ ಈ ಪಂದ್ಯದಲ್ಲಿ ಆಡಬಹುದು. ಇವರಿಗಾಗಿ ಕೇನ್ ವಿಲಿಯಮ್ಸನ್ ಮತ್ತು ಮೈಕೆಲ್ ಬ್ರೇಸ್‌ವೆಲ್ ಜಾಗ ಬಿಡಬಹುದು.
ಪಿಚ್ ರಿಪೋರ್ಟ್
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನ ಮೇಲ್ಮೈ ಸ್ಪಿನ್ನರ್‌ಗಳಿಗೆ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಇದು ಕಡಿಮೆ ಸ್ಕೋರಿಂಗ್ ಪಿಚ್ ಆಗಿರಬಹುದು. ಇಲ್ಲಿ ಇದುವರೆಗೆ ಒಟ್ಟು 60 ಪಂದ್ಯಗಳು ನಡೆದಿದ್ದು, ಮೊದಲು ಬ್ಯಾಟಿಂಗ್ ನಡೆಸಿದ ತಂಡ 22 ಪಂದ್ಯ ಗೆದ್ದರೆ, ಚೇಸಿಂಗ್ ನಡೆಸಿದ ತಂಡಗಳು 36 ಪಂದ್ಯಗಳನ್ನು ಗೆದ್ದಿದೆ.
ಇದನ್ನೂ ಓದಿ IND vs NZ: ನ್ಯೂಜಿಲ್ಯಾಂಡ್ ಪಂದ್ಯಕ್ಕೆ ಗಿಲ್ ನಾಯಕ!
ಬಲಾಬಲ
ಭಾರತ ಮತ್ತು ನ್ಯೂಜಿಲ್ಯಾಂಡ್ ಇದುವರೆಗೆ 118 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ನ್ಯೂಜಿಲ್ಯಾಂಡ್ 60 ಪಂದ್ಯಗಳನ್ನು ಗೆದ್ದಿದೆ, ಭಾರತ 50 ಪಂದ್ಯಗಳಲ್ಲಿ ಜಯಿಸಿದೆ. 7 ಪಂದ್ಯ ಫಲಿತಾಂಶ ಕಂಡಿಲ್ಲ. ಒಂದು ಪಂದ್ಯ ಟೈಗೊಂಡಿದೆ.
ಸಂಭಾವ್ಯ ತಂಡಗಳು
ಭಾರತ: ಶುಭಮನ್ ಗಿಲ್, ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಹರ್ಷಿತ್ ರಾಣಾ, ಅರ್ಶ್‌ದೀಪ್ ಸಿಂಗ್, ಕುಲದೀಪ್ ಯಾದವ್.
ನ್ಯೂಜಿಲ್ಯಾಂಡ್: ವಿಲ್ ಯಂಗ್, ಡೆವೊನ್ ಕಾನ್ವೇ, ಡೇರಿಯಲ್ ಮಿಚೆಲ್, ರಚಿನ್ ರವೀಂದ್ರ, ಟಾಮ್ ಲ್ಯಾಥಮ್ (ವಿ.ಕೀ), ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್‌ಮನ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್, ವಿಲಿಯಂ ಒರೂರ್ಕೆ.