ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

IND vs PAK: ಗರಿಷ್ಠ ಕ್ಯಾಚ್‌ ದಾಖಲೆ ಬರೆದ ಕಿಂಗ್‌ ಕೊಹ್ಲಿ

ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಮೂರು ಕ್ಯಾಚ್‌ ಹಿಡಿದಿದ್ದ ವಿರಾಟ್‌ ಕೊಹ್ಲಿ, ಅಜರುದ್ದೀನ್‌ ದಾಖಲೆ ಸರಿಗಟ್ಟಿದ್ದರು. ಇದೀಗ ಪಾಕ್‌ ವಿರುದ್ಧ ಒಟ್ಟು 2 ಕ್ಯಾಚ್‌ ಪಡೆದು ಅಜರುದ್ದೀನ್‌ ಅವರನ್ನು ಹಿಂದಿಕ್ಕಿದ್ದಾರೆ. ಸದ್ಯ ಕೊಹ್ಲಿ 158* ಕ್ಯಾಚ್‌ ಹಿಡಿದಿದ್ದಾರೆ. ವಿಶ್ವ ದಾಖಲೆ ಶ್ರೀಲಂಕಾದ ಮಾಜಿ ಆಟಗಾರ ಮಹೇಲಾ ಜಯವರ್ಧನೆ ಹೆಸರಿನಲ್ಲಿದೆ. ಅವರು 218 ಕ್ಯಾಚ್‌ ಹಿಡಿದಿದ್ದಾರೆ.

Virat Kohli: ಗರಿಷ್ಠ ಕ್ಯಾಚ್‌ ದಾಖಲೆ ಬರೆದ ಕಿಂಗ್‌ ಕೊಹ್ಲಿ

Profile Abhilash BC Feb 23, 2025 8:10 PM

ದುಬೈ: ಟೀಮ್‌ ಇಂಡಿಯಾದ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ ಪಾಕಿಸ್ತಾನ ವಿರುದ್ಧದ ಚಾಂಪಿಯನ್ಸ್‌ ಟ್ರೋಫಿ ಪಂದ್ಯದಲ್ಲಿ ನಸೀಮ್ ಶಾ ಅವರ ಕ್ಯಾಚ್‌ ಪಡೆಯುತ್ತಿದ್ದಂತೆ, ವಿಕೆಟ್‌ ಕೀಪರ್‌ ಹೊರತುಪಡಿಸಿ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ಕ್ಯಾಚ್‌ ಪಡೆದ ಮೊದಲ ಭಾರತೀಯ ಹಾಗೂ ವಿಶ್ವದ ಮೂರನೇ ಫೀಲ್ಡರ್‌ ಎನಿಸಿಕೊಂಡರು. ಇದೇ ವೇಳೆ ಮಾಜಿ ನಾಯಕ ಹಾಗೂ ಆಟಗಾರ ಮೊಹಮ್ಮದ್‌ ಅಜರುದ್ದೀನ್‌(156) ದಾಖಲೆ ಪತನಗೊಂಡಿತು.

ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಮೂರು ಕ್ಯಾಚ್‌ ಹಿಡಿದಿದ್ದ ವಿರಾಟ್‌ ಕೊಹ್ಲಿ, ಅಜರುದ್ದೀನ್‌ ದಾಖಲೆ ಸರಿಗಟ್ಟಿದ್ದರು. ಇದೀಗ ಪಾಕ್‌ ವಿರುದ್ಧ ಒಟ್ಟು 2 ಕ್ಯಾಚ್‌ ಪಡೆದು ಅಜರುದ್ದೀನ್‌ ಅವರನ್ನು ಹಿಂದಿಕ್ಕಿದ್ದಾರೆ. ಸದ್ಯ ಕೊಹ್ಲಿ 158* ಕ್ಯಾಚ್‌ ಹಿಡಿದಿದ್ದಾರೆ. ವಿಶ್ವ ದಾಖಲೆ ಶ್ರೀಲಂಕಾದ ಮಾಜಿ ಆಟಗಾರ ಮಹೇಲಾ ಜಯವರ್ಧನೆ ಹೆಸರಿನಲ್ಲಿದೆ. ಅವರು 218 ಕ್ಯಾಚ್‌ ಹಿಡಿದಿದ್ದಾರೆ. ದ್ವಿತೀಯ ಸ್ಥಾನದಲ್ಲಿ ಆಸೀಸ್‌ನ ರಿಕಿ ಪಾಂಟಿಂಗ್‌(160) ಕಾಣಿಸಿಕೊಂಡಿದ್ದಾರೆ. ಪಾಂಟಿಂಗ್‌ ದಾಖಲೆ ಮುರಿಯಲು ಕೊಹ್ಲಿಗೆ ಮೂರು ಕ್ಯಾಚ್‌ಗಳ ಅಗತ್ಯವಿದೆ.

ಏಕದಿನದಲ್ಲಿ ಅತ್ಯಧಿಕ ಕ್ಯಾಚ್‌ ಹಿಡಿದವರು

ಮಹೇಲಾ ಜಯವರ್ಧನೆ-448 ಪಂದ್ಯ, 218 ಕ್ಯಾಚ್‌

ರಿಕಿ ಪಾಂಟಿಂಗ್‌- 375 ಪಂದ್ಯ, 160 ಕ್ಯಾಚ್‌

ವಿರಾಟ್‌ ಕೊಹ್ಲಿ- 299 ಪಂದ್ಯ, 158* ಕ್ಯಾಚ್‌

ಮೊಹಮ್ಮದ್‌ ಅಜರುದ್ದೀನ್‌- 334 ಪಂದ್ಯ, 156 ಕ್ಯಾಚ್‌

ರಾಸ್‌ ಟೇಲರ್‌- 236 ಪಂದ್ಯ,142 ಕ್ಯಾಚ್‌



ಈ ಪಂದ್ಯದಲ್ಲಿ ಟಾಸ್‌ ಸೋಲುವ ಮೂಲಕ ಭಾರತ ತಂಡ ಕೆಟ್ಟ ದಾಖಲೆಯೊಂದನ್ನು ತನ್ನ ಹೆಸರಿಗೆ ಸೇರಿಸಿಕೊಂಡಿದೆ. ಏಕದಿನ ಕ್ರಿಕೆಟ್‌ನಲ್ಲಿ ಸತತವಾಗಿ ಅತಿ ಹೆಚ್ಚು ಬಾರಿ ಟಾಸ್‌ ಸೋತ ತಂಡ ಎಂಬ ಹಣೆಪಟ್ಟಿ ತನ್ನದಾಗಿಸಿಕೊಂಡಿದೆ. ಇದು ಸತತವಾಗಿ 12ನೇ ಬಾರಿ ಭಾರತ ಟಾಸ್‌ ಸೋತ ನಿದರ್ಶನವಾಗಿದೆ. ಇದನ್ನೂ ಮುನ್ನ ಈ ಕೆಟ್ಟ ದಾಖಲೆ ನೆದರ್ಲೆಂಡ್ಸ್‌ ಹೆಸರಿನಲ್ಲಿತ್ತು. ನೆದರ್ಲೆಂಡ್ಸ್‌ 11 ಬಾರಿ ಟಾಸ್‌ ಸೋತ್ತಿತ್ತು.

ಏಕದಿನದಲ್ಲಿ ಸತತ ಹೆಚ್ಚು ಬಾರಿ ಟಾಸ್‌ ಸೋತ ತಂಡ

ಭಾರತ-12 ಬಾರಿ(2023-2025)

ನೆದರ್ಲೆಂಡ್ಸ್‌ -11 ಬಾರಿ(2011-2013)

ಇಂಗ್ಲೆಂಡ್‌-9 ಬಾರಿ (2023)

ಇದೇ ಪಂದ್ಯದಲ್ಲಿ ಪಾಕಿಸ್ತಾನ(IND vs PAK)ದ ಮಾಜಿ ನಾಯಕ ಬಾಬರ್‌ ಅಜಂ(Babar Azam) ನೂತನ ದಾಖಲೆಯೊಂದನ್ನು ನಿರ್ಮಿಸಿದರು. ಪಾಕಿಸ್ತಾನ ಪರ ಐಸಿಸಿ ಟೂರ್ನಿಯಲ್ಲಿ ಸಾವಿರ ರನ್‌ ಪೂರ್ತಿಗೊಳಿಸಿದ ಮೂರನೇ ಹಾಗೂ ಅತಿ ವೇಗವಾಗಿ ಈ ಸಾಧನೆಗೈದ ಮೊದಲ ಬ್ಯಾಟರ್‌ ಎನಿಸಿಕೊಂಡರು. ಆದರೆ ಪಂದ್ಯದಲ್ಲಿ ಬಾಬರ್‌ ನಿರೀಕ್ಷಿತ ಬ್ಯಾಟಿಂಗ್‌ ನಡೆಸುವಲ್ಲಿ ವಿಫಲರಾದರು. 26 ಎಸೆತಗಳಿಂದ 23 ರನ್‌ ಗಳಿಸಿದರು.

ಇದನ್ನೂ ಓದಿ IND vs PAK: ಟಾಸ್‌ ಸೋತು ಕೆಟ್ಟ ದಾಖಲೆ ಬರೆದ ಭಾರತ

ಐಸಿಸಿ ಏಕದಿನ ಟೂರ್ನಿಯಲ್ಲಿ ಪಾಕ್‌ ಪರ ಅತಿ ಹೆಚ್ಚು ರನ್‌ ಬಾರಿಸಿದ ಬ್ಯಾಟರ್‌

ಸಯೀದ್ ಅನ್ವರ್ - 25 ಇನ್ನಿಂಗ್ಸ್‌ಗಳಲ್ಲಿ 1204 ರನ್

ಜಾವೇದ್ ಮಿಯಾಂದಾದ್ - 30 ಇನ್ನಿಂಗ್ಸ್‌ಗಳಲ್ಲಿ 1083 ರನ್

ಬಾಬರ್ ಅಜಮ್ - 24 ಇನ್ನಿಂಗ್ಸ್‌ಗಳಲ್ಲಿ 1005 ರನ್