Under-19 Women's World Cup: ಇಂಗ್ಲೆಂಡ್ ವಿರುದ್ಧ ಗೆದ್ದು ಫೈನಲ್‌ಗೇರಿದ ಭಾರತ!
Under-19 Women's World Cup: ಭಾರತ ಮಹಿಳಾ ತಂಡ ಅಂಡರ್ 19 ಟಿ20 ವಿಶ್ವಕಪ್ ಟೂರ್ನಿಯ ಫೈನಲ್‌ಗೆ ಪ್ರವೇಶ ಮಾಡಿದೆ. ಶುಕ್ರವಾರ ನಡೆದಿದ್ದ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡ ಸತತ ಎರಡನೇ ಬಾರಿ ಫೈನಲ್‌ಗೆ ಪ್ರವೇಶ ಮಾಡಿದೆ.

India womens Team

ಕೌಲಾಲಂಪುರ: ಮಹಿಳೆಯರ 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಫೈನಲ್ ತಲುಪಿದೆ. ಈ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ಇಂಗ್ಲೆಂಡ್ ತಂಡವನ್ನು 9 ವಿಕೆಟ್‌ಗಳಿಂದ ಸುಲಭವಾಗಿ ಸೋಲಿಸಿತು. ಇದರೊಂದಿಗೆ ಕಳೆದ ಚಾಂಪಿಯನ್ ಭಾರತ ತಂಡ ಸತತ ಎರಡನೇ ಬಾರಿಗೆ ಫೈನಲ್‌ಗೆ ಲಗ್ಗೆ ಇಟ್ಟಿದೆ. ಭಾರತ ತಂಡ ಈಗ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಮೊದಲು ಬ್ಯಾಟಿಂಗ್ ಆರಿಸಿಕೊಂಡಿತ್ತು. ಆದರೆ ಇಂಗ್ಲೆಂಡ್ ತಂಡದ ಈ ನಿರ್ಧಾರವನ್ನು ಭಾರತದ ಬೌಲರ್‌ಗಳು ತಲೆ ಕೆಳಗಾಗುವಂತೆ ಮಾಡಿದರು. ಇಂಗ್ಲೆಂಡ್ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 8 ವಿಕೆಟ್ ಕಳೆದುಕೊಂಡು 113 ರನ್ ಗಳಿಸಿತ್ತು. ಭಾರತ ತಂಡದ ಪರ ವೈಷ್ಣವಿ ಶರ್ಮಾ ಮತ್ತು ಪರುಣಿಕಾ ಸಿಸೋಡಿಯಾ ತಲಾ ಮೂರು ವಿಕೆಟ್ ಪಡೆದರು. ಇವರ ಜೊತೆಗೆ ಆಯುಷಿ ಶುಕ್ಲಾ ಎರಡು ವಿಕೆಟ್ ಪಡೆದರು. ಡೇವಿನಾ ಪೆರಿನ್ ಇಂಗ್ಲೆಂಡ್ ಪರ ವೈಯಕ್ತಿಕ ಗರಿಷ್ಠ 45 ರನ್ ಗಳಿಸಿದರು.
Ranji Trophy: ವಿರಾಟ್ ಕೊಹ್ಲಿಯನ್ನು ಕ್ಲೀನ್ ಬೌಲ್ಡ್ ಮಾಡಿದ ಹಿಮಾಂಶು ಸಂಗ್ವಾನ್ ಯಾರು?
ಇಂಗ್ಲೆಂಡ್ ನೀಡಿದ್ದ 114 ರನ್ ಗಳ ಗುರಿಯನ್ನು ಟೀಂ ಇಂಡಿಯಾ 15 ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್ ಕಳೆದುಕೊಂಡು ಚೇಸ್ ಮಾಡಿತು. ಈ ಪಂದ್ಯದಲ್ಲಿ ಜಿ ಕಾಮಿನಿ ಭಾರತದ ಪರ 56 ರನ್‌ಗಳ ಅಮೋಘ ಇನಿಂಗ್ಸ್ ಆಡಿದ್ದರು. ಆದರೆ, ಸಾನಿಕಾ 11 ರನ್ ಗಳಿಸಿ ಅಜೇಯರಾಗಿ ಉಳಿದರು. ಇದಲ್ಲದೇ ಜಿ ತ್ರಿಶಾ 29 ಎಸೆತಗಳಲ್ಲಿ 35 ರನ್‌ಗಳ ಇನಿಂಗ್ಸ್ ಆಡಿದರು. ಇದೀಗ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ವಿರುದ್ಧ ಫೈನಲ್ ಪಂದ್ಯವನ್ನಾಡಲಿದೆ. ಈ ಪಂದ್ಯ ಫೆಬ್ರವರಿ 2 ರಂದು ನಡೆಯಲಿದೆ.
📸 📸
— BCCI Women (@BCCIWomen) January 31, 2025
𝗜𝗻 𝗣𝗶𝗰𝘀: Summing up #TeamIndia's dominating performance in the #U19WorldCup Semi-Final 👍 👍
Scorecard ▶️ https://t.co/rk4eoCA1B0 #INDvENG pic.twitter.com/ZOLzTy6tWF
ಒಂದೇ ಒಂದು ಪಂದ್ಯವನ್ನೂ ಸೋಲದ ಭಾರತ
ಪ್ರಸಕ್ತ ವರ್ಷದ ಅಂಡರ್ 19 ಟಿ20 ವಿಶ್ವದಲ್ಲಿ ಭಾರತ ತಂಡ ಒಂದೇ ಒಂದು ಪಂದ್ಯವನ್ನೂ ಸೋತಿಲ್ಲ. ಮೊದಲ ಗುಂಪು ಹಂತದ ಪಂದ್ಯಗಳಲ್ಲಿ ಭಾರತ, ವೆಸ್ಟ್ ಇಂಡೀಸ್, ಮಲೇಷ್ಯಾ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಸ್ಕಾಟ್ಲೆಂಡ್ ತಂಡಗಳನ್ನು ಸೋಲಿಸಿತು. ಇದಾದ ಬಳಿಕ ಭಾರತ ತಂಡ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧವೂ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.