ಕೆಎಲ್ ರಾಹುಲ್ or ಅಕ್ಷರ್ ಪಟೇಲ್? ಡೆಲ್ಲಿ ಕ್ಯಾಪಿಟಲ್ಸ್‌ಗೆ ನಾಯಕನನ್ನು ಆರಿಸಿದ ಆಕಾಶ್ ಚೋಪ್ರಾ!
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವದ ರೇಸ್‌ನಲ್ಲಿ ಕೆಎಲ್ ರಾಹುಲ್ ಮತ್ತು ಅಕ್ಷರ್ ಪಟೇಲ್ ಇದ್ದಾರೆಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಈ ಇಬ್ಬರ ಪೈಕಿ ನಾಯಕತ್ವಕ್ಕೆ ಅಕ್ಷರ್ ಪಟೇಲ್ ಅವರನ್ನು ನೇಮಿಸಬಹುದೆಂದು ಅವರು ಭವಿಷ್ಯ ನುಡಿದಿದ್ದಾರೆ.
ನವದೆಹಲಿ: ಮುಂಬರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ನಾಯಕ ಯಾರಾಗಬಹುದೆಂಬ ಬಗ್ಗೆ ಭಾರತ ಟೆಸ್ಟ್ ತಂಡದ ಮಾಜಿ ಆರಂಭಿಕ ಹಾಗೂ ಕ್ರಿಕೆಟ್ ನಿರೂಪಕ ಆಕಾಶ್ ಚೋಪ್ರಾ ಭವಿಷ್ಯ ನುಡಿದಿದ್ದಾರೆ. ರಿಷಭ್ ಪಂತ್ ಅವರು ಮೆಗಾ ಹರಾಜಿನಲ್ಲಿ ಲಖನೌ ಸೂಪರ್ ಜಯಂಟ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದರು. ಇದರಿಂದ ಡೆಲ್ಲಿ ತಂಡದಲ್ಲಿ ನಾಯಕನ ಸ್ಥಾನವನ್ನು ಯಾರೂ ತುಂಬಿಲ್ಲ. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನ ರೇಸ್‌ನಲ್ಲಿ ಕೆಎಲ್ ರಾಹುಲ್ ಮತ್ತು ಅಕ್ಷರ್ ಪಟೇಲ್ ಇದ್ದಾರೆ.
ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿರುವ ವಿಡಿಯೊದಲ್ಲಿ ಮಾತನಾಡಿದ ಆಕಾಶ್ ಚೋಪ್ರಾ, ಇಬ್ಬರೂ ಅಭ್ಯರ್ಥಿಗಳ ಅರ್ಹತೆಯನ್ನು ಪರಿಶೀಲಿಸಿದರು. ನಾಯಕನಾಗಿ ಕೆಎಲ್ ರಾಹುಲ್ ನೇಮಕವು ಡೆಲ್ಲಿ ಫ್ರಾಂಚೈಸಿ ಬ್ರ್ಯಾಂಡ್ ಮೌಲ್ಯವನ್ನು ಗಮನಾರ್ಹವಾಗಿ ಹೆಚ್ಚಿಸಬಹುದು ಎಂದು ಚೋಪ್ರಾ ಹೇಳಿದರು. ಲಖನೌ ಸೂಪರ್ ಜಯಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳನ್ನು ಮುನ್ನಡೆಸಿರುವ ಅನುಭವನ್ನು ಕೆಎಲ್ ರೆಆಹುಲ್ ಹೊಂದಿದ್ದಾರೆ ಎಂದು ಹೇಳಿದ್ದಾರೆ.
IPL 2025:ʻಯಾವುದೇ ಸಂವಹನ ಇರಲಿಲ್ಲʼ-ಕೆಕೆಆರ್ ವಿರುದ್ದ ಶ್ರೇಯಸ್ ಅಯ್ಯರ್ ಬೇಸರ!
"2025ರ ಐಪಿಎಲ್ ಟೂರ್ನಿಯ ನಿಮಿತ್ತ ಇನ್ನೂ ಮೂರು ತಂಡಗಳು ತನ್ನ ನಾಯಕರನ್ನು ಪ್ರಕಟಿಸಿಲ್ಲ ಹಾಗೂ ಇಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಸಾಕಷ್ಟು ಕುತೂಹಲವಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಯಾರಾಗಬಹುದೆಂಬ ಬಗ್ಗೆ ನೀವು ಯೋಚಿಸುತ್ತಿರಬಹುದು. ಅಕ್ಷರ್ ಪಟೇಲ್ ಡೆಲ್ಲಿಗೆ ನಾಯಕರಾಗಬಹುದೆಂದು ವರದಿಗಳು ಹೇಳುತ್ತಿವೆ. ಏಕೆಂದರೆ ಇವರು ಭಾರತ ಟಿ20 ತಂಡಕ್ಕೆ ಉಪ ನಾಯಕನಾಗಿ ನೇಮಕಗೊಂಡಿದ್ದಾರೆ. ಹಾಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಇವರನ್ನೇ ನಾಯಕರನ್ನಾಗಿ ನೇಮಕ ಮಾಡಬಹುದು," ಎಂದು ಆಕಾಶ ಚೋಪ್ರಾ ತಿಳಿಸಿದ್ದಾರೆ.
"ಇದು ಸಾಧ್ಯವಾಗಬಹುದು. ಅವರು (ಅಕ್ಷರ್ ಪಟೇಲ್) ಸಿದ್ದರಾಗಿದ್ದಾರೆ. ಕೆಎಲ್ ರಾಹುಲ್ ಅವರನ್ನು ನೀವು ತೆಗೆದುಕೊಂಡಿದ್ದೀರಿ ಆದರೆ, ಅವರನ್ನೇ ನಾಯಕರನ್ನಾಗಿ ನೇಮಿಸಬೇಕೆಂದು ಕಡ್ಡಾಯವಿಲ್ಲ. ನಾಯಕತ್ವಕ್ಕೆ ಮತ್ತೊಬ್ಬ ಭಾರತೀಯನ ಆಯ್ಕೆ ನಿಮಗೆ ಸಿಗಬಹುದು. ಆದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡ ಯಾರನ್ನು ನಾಯಕನನ್ನಾಗಿ ನೇಮಿಸಲಿದೆ ಎಂಬುದು ನಿಜಕ್ಕೂ ಆಸಕ್ತಿದಾಯಕ ಸಂಗತಿಯಾಗಿದೆ. ಕೆಎಲ್ ರಾಹುಲ್ ಅವರು ನಿಮಗೆ ಸಾಕಷ್ಟು ಆಯ್ಕೆಗಳನ್ನು ತಂದುಕೊಡುತ್ತಾರೆ. ಅಲ್ಲದೆ ತಂಡಕ್ಕೆ ಬ್ರ್ಯಾಂಡ್ ಮೌಲ್ಯವನ್ನು ಕೂಡ ಅವರು ತಂದುಕೊಡುತ್ತಾರೆ. ತಂಡಕ್ಕೆ ಯಾವುದು ಸೂಕ್ತ ಎಂಬುದನ್ನು ಕೂಡ ಫ್ರಾಂಚೈಸಿ ಕೆಲವೊಮ್ಮೆ ಚಿಂತಿಸುತ್ತಿರಬಹುದು," ಎಂದು ಮಾಜಿ ಕ್ರಿಕೆಟಿಗ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
IPL 2025: ಕೆಕೆಆರ್‌ಗೆ ರಹಾನೆ ಅಲ್ಲ ರಿಂಕು ಸಿಂಗ್ ನಾಯಕ?
ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದಿದ್ದ ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ರಿಷಭ್ ಪಂತ್ ಲಖನೌ ಸೂಪರ್ ಜಯಂಟ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದರು. ಕೆಎಲ್ ರಾಹುಲ್ ಲಖನೌ ಸೂಪರ್ ಜಯಂಟ್ಸ್ ತಂಡವನ್ನು ಬಿಟ್ಟು ಡೆಲ್ಲಿ ಕ್ಯಾಪಿಟಲ್ಸ್‌ಗೆ ಬಂದಿದ್ದಾರೆ. ಇದೀಗ ಎಲ್‌ಎಸ್‌ಜಿ ತಂಡಕ್ಕೆ ರಿಷಭ್ ಪಂತ್ ಅವರನ್ನು ನಾಯಕನ್ನಾಗಿ ನೇಮಿಸಲಾಗಿದೆ. ಆದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಯಾರನ್ನು ನಾಯಕನನ್ನಾಗಿ ನೇಮಿಸಬಹುದೆಂದು ಎಂಬ ವಿಷಯ ತೀವ್ರ ಕುತೂಹಲವನ್ನು ಕೆರಳಿಸಿದೆ. ಆದರೆ, ಡೆಲ್ಲಿ ನಾಯಕತ್ವದ ರೇಸ್‌ನಲ್ಲಿ ಅಕ್ಷರ್ ಪಟೇಲ್ ಮುಂಚೂಣಿಯಲ್ಲಿದ್ದಾರೆಂದು ಆಕಾಶ್ ಚೋಪ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.