IPL 2025: ಮಹಿಳಾ ಭದ್ರತಾ ಅಧಿಕಾರಿಯ ತೊಡೆಗೆ ಬಡಿದ ಸಿಕ್ಸರ್ ಚೆಂಡು; ವಿಡಿಯೊ ವೈರಲ್
ಮೊಹಮ್ಮದ್ ಸಿರಾಜ್ ಅವರ ಬ್ಯಾಕ್-ಆಫ್-ಎ-ಲೆಂಗ್ತ್ ಎಸೆತವನ್ನು ಸ್ಟೋಯಿನಿಸ್ ಡೀಪ್ ಮಿಡ್-ವಿಕೆಟ್ ಮೇಲೆ ಬಾರಿಸಿದರು. ಸಿಕ್ಸರ್ ಗೆರೆ ದಾಟಿದ ಚೆಂಡು ಬೌಂಡರಿ ಲೈನ್ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳಾ ಭದ್ರತಾ ಅಧಿಕಾರಿಯೊಬ್ಬರಿಗೆ ತಗುಲಿತು. ಅದೃಷ್ಟವಶಾತ್, ದೊಡ್ಡ ಪ್ರಮಾಣದ ಗಾಯದಿಂದ ಪಾರಾದರು.


ಅಹಮದಾಬಾದ್: ಗುಜರಾತ್ ಟೈಟಾನ್ಸ್(GT vs PBKS) ವಿರುದ್ಧ ಮಂಗಳವಾರ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿದ್ದ ಐಪಿಎಲ್(IPL 2025)ನ 5ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 11 ಅಂತರದ ಗೆಲುವು ಸಾಧಿಸಿತು. ಇದೇ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆಲ್‌ರೌಂಡರ್, ಪಂಜಾಬ್ ತಂಡ ಮಾರ್ಕಸ್ ಸ್ಟೋಯಿನಿಸ್ (Marcus Stoinis) ಸಿಕ್ಸರ್ಗಟ್ಟಿದ ಚೆಂಡೊಂದು ನೇರವಾಗಿ ಹೋಗಿ ಮಹಿಳಾ ಪೊಲೀಸ್ ಸಿಬ್ಬಂದಿಯ ತೊಡೆಗೆ ಬಡಿದು ಗಾಯಗೊಂಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್(viral videos) ಆಗಿದೆ.
ಮೊಹಮ್ಮದ್ ಸಿರಾಜ್ ಅವರ ಬ್ಯಾಕ್-ಆಫ್-ಎ-ಲೆಂಗ್ತ್ ಎಸೆತವನ್ನು ಸ್ಟೋಯಿನಿಸ್ ಡೀಪ್ ಮಿಡ್-ವಿಕೆಟ್ ಮೇಲೆ ಬಾರಿಸಿದರು. ಸಿಕ್ಸರ್ ಗೆರೆ ದಾಟಿದ ಚೆಂಡು ಬೌಂಡರಿ ಲೈನ್ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳಾ ಭದ್ರತಾ ಅಧಿಕಾರಿಯೊಬ್ಬರಿಗೆ ತಗುಲಿತು. ಅದೃಷ್ಟವಶಾತ್, ದೊಡ್ಡ ಪ್ರಮಾಣದ ಗಾಯದಿಂದ ಪಾರಾದರು.
6ನೇ ಕ್ರಮಾಂಕದಲ್ಲಿ ಆಡಲಿಳಿದ ಸ್ಟೋಯಿನಿಸ್ 15 ಎಸೆತಗಳಿಂದ 2 ಸಿಕ್ಸರ್ ಮತ್ತು ಒಂದು ಬೌಂಡರಿ ನೆರವಿನಿಂದ 20 ರನ್ ಬಾರಿಸಿದರು. ಆದರೆ ಬೌಲಿಂಗ್‌ನಲ್ಲಿ ದುಬಾರಿ ಎನಿಸಿಕೊಂಡರು. 2 ಓವರ್ ಬೌಲಿಂಗ್ ನಡೆಸಿ ಬರೋಬ್ಬರಿ 30 ರನ್ ಬಿಟ್ಟುಕೊಟ್ಟರು. ಈ ಪಂದ್ಯದಲ್ಲಿ ಶೂನ್ಯ ಸುತ್ತಿದ ಗ್ಲೆನ್ ಮ್ಯಾಕ್ಸ್‌ವೆಲ್(Glenn Maxwell) ಐಪಿಎಲ್‌ನಲ್ಲಿ ಕೆಟ್ಟ ದಾಖಲೆಯೊಂದಕ್ಕೆ ಕೊರಳೊಡ್ಡಿದರು. ಐಪಿಎಲ್‌ನಲ್ಲಿ ಅತ್ಯಧಿಕ 19 ಬಾರಿ ಶೂನ್ಯ ಸುತ್ತುವ ಮೂಲಕ ಅಗ್ರಸ್ಥಾನಕ್ಕೇರಿದರು.
ಪಂಜಾಬ್ ಕಿಂಗ್ಸ್ ಪರ ನಾಯಕ ಶ್ರೇಯಸ್ ಅಯ್ಯರ್ 230.95ರ ಸ್ಟ್ರೈಕ್ ರೇಟ್‌ನಲ್ಲಿ ಆಡುವ ಮೂಲಕ ಎಲ್ಲರ ಗಮನವನ್ನು ಸೆಳೆದರು. ಅವರು ಕೇವಲ 42 ಎಸೆತಗಳಲ್ಲಿ ಬರೋಬ್ಬರಿ 9 ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ ಅಜೇಯ 97 ರನ್‌ಗಳನ್ನು ಸಿಡಿಸಿದರು. ಡೆತ್ ಓವರ್‌ಗಳಲ್ಲಿ ಸ್ಪೋಟಕ ಬ್ಯಾಟ್ ಮಾಡಿದ್ದ ಶಶಾಂಕ್ ಸಿಂಗ್ ಕೇವಲ 16 ಎಸೆತಗಳಲ್ಲಿ ಅಜೇಯ 44 ರನ್‌ಗಳನ್ನು ಸಿಡಿಸಿದರು. ಇವರಿಬ್ಬರ ಜೊತೆಗೆ ಆರಂಭಿಕ ಬ್ಯಾಟರ್ ಪ್ರಿಯಾಂಶ್ ಆರ್ಯ 23 ಎಸೆತಗಳಲ್ಲಿ 47 ರನ್ ಸಿಡಿಸಿದರು.