ಹೈದರಾಬಾದ್: ಐಪಿಎಲ್(IPL 2025) ಕ್ರಿಕೆಟ್ ಅಭಿಮಾನಿಗಳಿಗೆ ಇಂದು ಸೂಪರ್ ಸಂಡೆ. ಹೌದು ಇಂದು ಎರಡು ಪಂದ್ಯಗಳು ನಡೆಯಲಿದೆ. ದಿನ ಮೊದಲ ಪಂದ್ಯದಲ್ಲಿ ಪಂದ್ಯದಲ್ಲಿ ಹಾಲಿ ರನ್ನರ್ ಅಪ್, ಬಲಿಷ್ಠ ಸನ್‌ರೈಸರ್ಸ್ ಹೈದರಾಬಾದ್ ತಂಡ ರಾಜಸ್ಥಾನ್ ರಾಯಲ್ಸ್(SRH vs RR) ಸವಾಲು ಎದುರಿಸಿದರೆ, ರಾತ್ರಿಯ ಹೈವೋಲ್ಟೇಜ್ ಪಂದ್ಯದಲ್ಲಿ 5 ಬಾರಿಯ ಚಾಂಪಿಯನ್, ಬದ್ಧ ಎದುರಾಳಿಗಳಾದ ಚೆನ್ನೈ ಸೂಪರ್ ಕಿಂಗ್ಸ್(CSK vs MI) ಮತ್ತು ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಲಿವೆ. ಈ ಪಂದ್ಯಗಳನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಹೈದರಾಬಾದ್ vs ರಾಜಸ್ಥಾನ್
ಹಗಲು ಪಂದ್ಯದಲ್ಲಿ ಹೈದರಾಬಾದ್ ಮತ್ತು ರಾಜಸ್ಥಾನ್ ಕಣಕ್ಕಿಳಿಯಲಿದೆ. ಕಳೆದ ಬಾರಿ ಐಪಿಎಲ್‌ನಲ್ಲಿ ತನ್ನ ಆಕ್ರಮಣಕಾರಿ ಆಟದ ಮೂಲಕ ರನ್ ಮಳೆಯನ್ನೇ ಹರಿಸಿದ್ದ ಹೈದರಾಬಾದ್ ತಂಡ ಈ ಬಾರಿ ಇನ್ನಷ್ಟು ಬಲಿಷ್ಠವಾಗಿದ್ದು 300 ರನ್ ಬಾರಿಸುವ ನಿರೀಕ್ಷೆಯಲ್ಲಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಅನುಭವಿ ಆಟಗಾರರನ್ನು ಒಳಗೊಂಡಿದೆ. ಬೌಲರ್‌ಗಳ ಎದೆಯಲ್ಲಿ ನಡುಕ ಹುಟ್ಟಿಸುವ ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಹೆನ್ರಿಚ್ ಕ್ಲಾಸೆನ್, ಇಶಾನ್ ಕಿಶನ್, ನಿತೀಶ್ ಕುಮಾರ್ ರೆಡ್ಡಿ, ಅಭಿನವ್ ಮನೋಹರ್, ತಂಡದೊಳಗಿನ ಅಭ್ಯಾಸ ಪಂದ್ಯದಲ್ಲಿ 16 ಎಸೆತಗಳಲ್ಲಿ 46 ರನ್ ಸಿಡಿಸಿದ್ದ ಅನಿಕೇತ್ ವರ್ಮಾ ಬ್ಯಾಟಿಂಗ್ ಬಲವಾದರೆ, ಮೊಹಮ್ಮದ್ ಶಮಿ ಬೌಲಿಂಗ್ ಪ್ಯಾಟ್ ಕಮಿನ್ಸ್, ಹರ್ಷಲ್ ಪಟೇಲ್ ಹಾಗೂ ರಾಹುಲ್ ಚಹರ್ ಜೊತೆ ಆಸ್ಟ್ರೇಲಿಯಾ ಸ್ಪಿನ್ನರ್ ಆ್ಯಡಂ ಝಂಪಾ ಬೌಲಿಂಗ್ ಸ್ಟಾರ್‌ಗಳಾಗಿದ್ದಾರೆ.
ಇದನ್ನೂ ಓದಿ IPL 2025: ಲಖನೌ ಸೂಪರ್ ಜಯಂಟ್ಸ್ ತಂಡಕ್ಕೆ ಬಾಂಗ್ಲಾ ವೇಗಿ ಟಾಸ್ಕಿನ್ ಅಹ್ಮದ್?
ಕಳೆದ ಮೆಗಾ ಹರಾಜಿನಲ್ಲಿ ಅನೇಕ ಅನುಭವಿಗಳನ್ನು ಕೈಬಿಟ್ಟು ಬಹುತೇಕ ಯುವ ಆಟಗಾರನ್ನು ಉಳಿಸಿಕೊಂಡಿರುವ ರಾಜಸ್ಥಾನ್‌ಗೆ ದಿಗ್ಗಜ ರಾಹುಲ್ ದ್ರಾವಿಡ್ ಮಾರ್ಗದರ್ಶನವಿದೆ. 13ರ ವೈಭವ್ ಸೂರ್ಯವಂಶಿ ಮೇಲೆ ಎಲ್ಲರೂ ಕಣ್ಣಿಡಲಿದ್ದಾರೆ. ಸಂಪೂರ್ಣ ಫಿಟ್‌ನೆಸ್ ಹೊಂದರ ಕಾರಣ ಮೊದಲ ಮೂರು ಪಂದ್ಯಗಳಲ್ಲಿ ರಿಯಾನ್ ಪರಾಗ್ ಮುನ್ನಡೆಸಲಿದ್ದಾರೆ. ಖಾಯಂ ನಾಯಕ ಸಂಜು ಸ್ಯಾಮ್ಸನ್ ಕೇವಲ ಇಂಪ್ಯಾಕ್ಟ್ ಆಟಗಾರನಾಗಿ ಬ್ಯಾಟ್ ಬೀಸಲಿದ್ದಾರೆ.
ಸಂಭಾವ್ಯ ತಂಡಗಳು
ಸನ್‌ರೈಸರ್ಸ್ ಹೈದರಾಬಾದ್: ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮ, ಇಶಾನ್ ಕಿಶನ್, ಹೆನ್ರಿಚ್ ಕ್ಲಾಸೆನ್, ಅನಿಕೇತ್ ವರ್ಮಾ, ಅಭಿನವ್, ನಿತೀಶ್, ಕಮಿನ್ಸ್ (ನಾಯಕ), ಹರ್ಷಲ್ /ಉನಾಟ್, ರಾಹುಲ್ ಚಹರ್, ಶಮಿ, ಝಂಪಾ.
ರಾಜಸ್ಥಾನ ರಾಯಲ್ಸ್: ಯಶಸ್ವಿ ಜೈಸ್ವಾಲ್, ಸ್ಯಾಟ್ಸನ್, ನಿತೀಶ್, ರಿಯಾನ್ (ನಾಯಕ), ಧ್ರುವ್‌ಜುರೆಲ್, ಹೆಟ್ಟೇಯರ್, ಹಸರಂಗ, ಶುಭಂ/ಆಕಾಶ್, ಆರ್ಚರ್, ತೀಕ್ಷಣ/ಫಾರೂಖಿ, ಸಂದೀಪ್, ತುಷಾರ್.
ಮುಂಬೈ vs ಚೆನ್ನೈ
2024ರ ಆವೃತ್ತಿಯಲ್ಲಿ ಮೂರು ಬಾರಿ ನಿಧಾನಗತಿ ಓವರ್ ಬೌಲಿಂಗ್ ಮಾಡಿದ್ದ ಕಾರಣ, ಹಾರ್ದಿಕ್ ಪಾಂಡ್ಯ 2025ರ ಆವೃತ್ತಿಯಲ್ಲಿ ಮುಂಬೈ ಆಡಲಿರುವ ಮೊದಲ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಹೀಗಾಗಿ ಅವರ ಬದಲು ಸೂರ್ಯಕುಮಾರ್ ಯಾದವ್ ತಂಡ ಮುನ್ನಡೆಸಲಿದ್ದಾರೆ. ಮುಂಬೈ ಇಂಡಿಯನ್ಸ್ ಈ ಬಾರಿಯೂ ಭಾರತೀಯರ ಮೇಲೆ ಹೆಚ್ಚಿನ ವಿಶ್ವಾಸ ಇರಿಸಿ ಟೂರ್ನಿಗೆ ಕಾಲಿಡಲಿದೆ. ಕಳೆದ ಬಾರಿ ತಂಡದ ಪ್ರದರ್ಶನ ತೀರಾ ಕಳಪೆಯಾಗಿತ್ತು. ಅಂಕಪಟ್ಟಿಯಲ್ಲಿ ಕೊನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಪ್ರಧಾನ ಬೌಲರ್ ಜಸ್‌ಪ್ರೀತ್ ಬುಮ್ರಾ ಕೂಡ ಕೆಲವು ಪಂದ್ಯಗಳಿಗೆ ಅಲಭ್ಯರಾಗಿರುವುದು ಕೂಡ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ.
ಚೆನ್ನೈ ತಂಡ ಎಂದಿನಂತೆ ಈ ಬಾರಿಯೂ ಅನುಭವಿಗಳ ತಂಡವಾಗಿಯೇ ಗೋಚರಿಸಿದೆ. ಸ್ಪಿನ್ ಪ್ರಮುಖ ಅಸ್ತ್ರವಾಗಿ ಮಾಡಿಕೊಂಡಿರುವ ಚೆನ್ನೈ ಪಾಳಯದಲ್ಲಿ ಆರ್.ಅಶ್ವಿನ್, ರವೀಂದ್ರ ಜಡೇಜಾ ಮತ್ತು ಅಫ್ಘಾನಿಸ್ತಾನದ ನೂರ್ ಅಹ್ಮದ್ ಇರುವುದು ತಂಡಕ್ಕೆ ಹೆಚ್ಚಿನ ಬಲ ಬಂದಂತಾಗಿದೆ. ಬ್ಯಾಟಿಂಗ್ ಕೂಡ ಬಲಿಷ್ಠವಾಗಿದೆ. ನಾಯಕ ಋತುರಾಜ್ ಗಾಯಕ್ವಾಡ್ ಮತ್ತು ಡೆವೊನ್ ಕಾನ್ವೆ 2023ರ ಆವೃತ್ತಿಯ ಅತ್ಯಂತ ಯಶಸ್ವಿ ಆರಂಭಿಕ ಜೋಡಿಯಾಗಿತ್ತು. ಈ ಬಾರಿಯೂ ಈ ಜೋಡಿ ಕಮಾಲ್ ಮಾಡುವ ವಿಶ್ವಾಸದಲ್ಲಿದ್ದಾರೆ. ಆಲ್‌ರೌಂಡರ್ ರಚಿನ್ ರವೀಂದ್ರ, ಶಿವಂ ದುಬೆ, ಧೋನಿ ಹೀಗೆ ಬ್ಯಾಟಿಂಗ್ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ. ಒಟ್ಟಾರೆ ಚೆನ್ನೈ ಅನುಭವಿ ಮತ್ತು ಯುವ ಆಟಗಾರರೊಂದಿಗೆ ಅತ್ಯಂತ ಸಮರ್ಥವಾಗಿ ಕಂಡುಬಂದಿದೆ.
ಸಂಭಾವ್ಯ ತಂಡಗಳು
ಚೆನ್ನೈ: ಋತುರಾಜ್ (ನಾಯಕ), ಕಾನ್ ವೇ, ತ್ರಿಪಾಠಿ, ದುಬೆ, ಕಕ್ರನ್, ವಿಜಯ್, ಜಡೇಜಾ, ಧೋನಿ, ಅಶ್ವಿನ್, ನೂರ್, ಖಲೀಲ್ / ಗುರ್‌ಜಪ್‌ನೀತ್, ಪತಿರನ.
ಮುಂಬೈ: ರೋಹಿತ್, ರಿಕೆಲ್ಸನ್, ತಿಲಕ್, ಸೂರ್ಯಕುಮಾರ್ (ನಾಯಕ), ಜ್ಯಾಕ್ಸ್, ನಮನ್ ಧೀರ್, ರಾಬಿನ್, ಮುಜೀಬ್ / ಸ್ಯಾಂಟ್ಸರ್, ಕರ್ಣ್, ದೀಪಕ್, ಬೌಲ್ಡ್, ಅರ್ಜುನ್.