IPL 2025: ಎಂಎಸ್ ಧೋನಿ ಅಲ್ಲ! ತಮ್ಮ ನೆಚ್ಚಿನ ನಾಯಕನನ್ನು ಹೆಸರಿಸಿದ ಶಶಾಂಕ್ ಸಿಂಗ್!
Shashank Singh on Rohit Sharma: ಮುಂಬರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಆರಂಭಕ್ಕೆ ಇನ್ನು ದಿನಗಣನೆ ಶುರುವಾಗಿದೆ. ಐಪಿಎಲ್ ಟೂರ್ನಿಯ ಸಾರ್ವಕಾಲಿಕ ಶ್ರೇಷ್ಠ ನಾಯಕರ ಸಾಲಿನಲ್ಲಿ ಎಂಎಸ್ ಧೋನಿ ಹಾಗೂ ರೋಹಿತ್ ಶರ್ಮಾ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಪಂಜಾಬ್ ಕಿಂಗ್ಸ್ ಬ್ಯಾಟ್ಸ್‌ಮನ್ ಶಶಾಂಕ್ ಸಿಂಗ್, ರೋಹಿತ್ ಶರ್ಮಾ ನಾಯಕತ್ವದ ಅಡಿಯಲ್ಲಿ ಆಡಬೇಕೆಂದು ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

ಶಶಾಂಕ್ ಸಿಂಗ್

ನವದೆಹಲಿ: ಭಾರತ ತಂಡದ ಸ್ಟಾರ್ ಆಟಗಾರ ರೋಹಿತ್ ಶರ್ಮಾ (Rohit Sharma) ತಮ್ಮ ಕನಸಿನ ನಾಯಕ ಹಾಗೂ ಅವರ ನಾಯಕತ್ವದ ಅಡಿಯಲ್ಲಿ ಒಮ್ಮೆಯಾದರೂ ಆಡುತ್ತೇನೆಂಬ ವಿಶ್ವಾಸ ನನಗಿದೆ ಎಂದು ಪಂಜಾಬ್ ಕಿಂಗ್ಸ್ ಬ್ಯಾಟ್ಸ್‌ಮನ್ ಶಶಾಂಕ್ ಸಿಂಗ್ (Shashank Singh) ತಿಳಿಸಿದ್ದಾರೆ. ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಐದು ಬಾರಿ ಐಪಿಎಲ್ (IPL 2025) ಟೂರ್ನಿಯಲ್ಲಿ ಚಾಂಪಿಯನ್ ಆಗಿದೆ. ಎಂಎಸ್ ಧೋನಿ ನಾಯಕತ್ವದಲ್ಲಿಯೂ ಚೆನ್ನೈ ಸೂಪರ್ ಕಿಂಗ್ಸ್ ಐದು ಬಾರಿ ಐಪಿಎಲ್ ಚಾಂಪಿಯನ್ ಆಗಿದೆ. ಐಪಿಎಲ್ ಇತಿಹಾಸದ ಅತ್ಯಂತ ಯಶಸ್ವಿ ನಾಯಕರ ಸಾಲಿನಲ್ಲಿ ಎಂಎಸ್ ಧೋನಿ ಮತ್ತು ರೋಹಿತ್ ಶರ್ಮಾ ಸೇರ್ಪಡೆಯಾಗಲಿದ್ದಾರೆ.
ಕಳೆದ 2024ರ ಐಪಿಎಲ್ ಟೂರ್ನಿಗೂ ಮುನ್ನ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ನಾಯಕತ್ವವನ್ನು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಗೆ ಹಸ್ತಾಂತರಿಸಿದ್ದರು. ಆ ಮೂಲಕ ಹಿರಿಯ ಬ್ಯಾಟ್ಸ್‌ಮನ್ ಆಗಿ ಅವರು ಮುಂದುವಚರಿದಿದ್ದರು. ಶುಭಾಂಕರ್ ಮಿಶ್ರಾ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಶಶಾಂಕ್ ಸಿಂಗ್, ಮುಂಬೈ ಇಂಡಿಯನ್ಸ್ ಮಾಜಿ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಮುಕ್ತಕಂಠೆದಿಂದ ಗುಣಗಾನ ಮಾಡಿದ್ದಾರೆ. ರೋಹಿತ್ ಶರ್ಮಾ ಅವರ ಬಗ್ಗೆ ಪ್ರತಿಯೊಬ್ಬರ ಅಭಿಪ್ರಾಯವನ್ನು ನಾನು ಕೇಳಿದ್ದೇನೆ ಎಂದು ತಿಳಿಸಿದ್ದಾರೆ.
IPL 2025: ಉಮ್ರಾನ್ ಮಲಿಕ್ ಸ್ಥಾನಕ್ಕೆ ಚೇತನ್ ಸಕಾರಿಯ ಬದಲಿ ಆಟಗಾರ
ತಮ್ಮ ನಾಯಕತ್ವದ ಅಡಿಯಲ್ಲಿ ರೋಹಿತ್ ಶರ್ಮಾ ಆಟಗಾರರಿಗೆ ಉತ್ತಮ ಪ್ರದರ್ಶನವನ್ನು ತೋರಲು ಸಾಕಷ್ಟು ಅವಕಾಶಗಳನ್ನು ನೀಡಲಿದ್ದಾರೆ. ಅಲ್ಲದೆ ರೋಹಿತ್ ಶರ್ಮಾ ಬುದ್ದಿವಂತಿಕೆಯ ನಾಯಕ. 38ನೇ ವಯಸ್ಸಿನ ರೋಹಿತ್ ಶರ್ಮಾ ಅವರಿಗೆ ನಾನು ದೊಡ್ಡ ಅಭಿಮಾನಿ ಹಾಗೂ ಅವರ ನಾಯಕತ್ವದ ಅಡಿಯಲ್ಲಿ ಒಮ್ಮೆ ಆಡಬೇಕೆಂದು ಪಂಜಾಬ್ ಕಿಂಗ್ಸ್ ಬ್ಯಾಟ್ಸ್‌ಮನ್ ಹೇಳಿಕೊಂಡಿದ್ದಾರೆ.
"ರೋಹಿತ್ ಶರ್ಮಾ ಹೆಚ್ಚಿನ ಅವಕಾಶಗಳನ್ನು ನೀಡುವ ಮೂಲಕ ಆಟಗಾರರನ್ನು ಬೆಂಬಲಿಸುತ್ತಾರೆಂದು ಎಲ್ಲರೂ ಹೇಳಿಕೊಳ್ಳುತ್ತಾರೆ. ಅವರು ತುಂಬಾ ಬುದ್ದಿವಂತಿಕೆಯ ನಾಯಕ. ಮೈದಾನದಲ್ಲಿ ಅವರು ಮೋಜಿನಿಂದ ಕೂಡಿರುತ್ತಾರೆ. ನೀವು ಒಬ್ಬ ನಾಯಕನನ್ನು ಕೇಳುವುದಾದರೆ, ರೋಹಿತ್ ಶರ್ಮಾ ನಾಯಕತ್ವದ ಅಡಿಯಲ್ಲಿ ಆಡಲು ಬಯಸುತ್ತೇನೆ. ರೋಹಿತ್ ಶರ್ಮಾ ಮುಂಬೈನವರು. ಒಮ್ಮೆ ಇವರ ಜೊತೆ ಬ್ಯಾಟಿಂಗ್ ಕೂಡ ನಡೆಸಿದ್ದೇನೆ. ನಾನು ಇವರ ಜೊತೆ ಬ್ಯಾಟ್ ಮಾಡುವಾಗ ನಾಯಕನಾಗಿರಲಿಲ್ಲ. ಅಂದ ಹಾಗೆ ರೋಹಿತ್ ಶರ್ಮಾ ನಾಯಕತ್ವದ ಅಡಿಯಲ್ಲಿ ಆಡಬೇಕೆಂಬುದು ನನ್ನ ಬಯಕೆ," ಎಂದು ರೋಹಿತ್ ಶರ್ಮಾ ತಿಳಿಸಿದ್ದಾರೆ.
Shashank Singh - "Rohit Sharma Is My Favourite Ipl Captain." pic.twitter.com/TIkxLShuMJ
— 𝐉𝐨𝐝 𝐈𝐧𝐬𝐚𝐧𝐞 (@jod_insane) March 16, 2025
2025ರ ಐಪಿಎಲ್ ಟೂರ್ನಿಗೆ ರೋಹಿತ್ ಶರ್ಮಾ, ಶಶಾಂಕ್ ಸಿಂಗ್ ಸಜ್ಜು
ಶಶಾಂಕ್ ಸಿಂಗ್ ಹಾಗೂ ರೋಹಿತ್ ಶರ್ಮಾ ಅವರು 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆಡಲು ಎದುರು ನೋಡುತ್ತಿದ್ದಾರೆ. ಮಾರ್ಚ್ 22 ರಂದು ಹದಿನೇಂಟನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭವಾಗಲಿದೆ. ಅಂದ ಹಾಗೆ ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಶಶಾಂಕ್ ಸಿಂಗ್ ಪಂಜಾಬ್ ಕಿಂಗ್ಸ್ ಪರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದರು. ಪ್ರಸಕ್ತ ಆವೃತ್ತಿಯಲ್ಲಿಯೂ ಅವರು ಇದೇ ತಂಡದ ಪರ ಕಣಕ್ಕೆ ಇಳಿಯಲಿದ್ದಾರೆ. ರೋಹಿತ್ ಶರ್ಮಾ ಹಿರಿಯ ಬ್ಯಾಟ್ಸ್‌ಮನ್ ಆಗಿ ಮುಂಬೈ ಇಂಡಿಯನ್ಸ್ ಪರ ಆಡಲಿದ್ದಾರೆ.